Exam Cheating: ಚಪ್ಪಲಿಯಲ್ಲಿ ಬ್ಲೂಟೂತ್ ಬಳಸಿ ಚೀಟಿಂಗ್, ಕಾಪಿ ಹೊಡೆಯೋಕೆ ಲೇಟೆಸ್ಟ್ ಟೆಕ್ನಾಲಜಿ!

Hitech Cheating in Exam: ತಪಾಸಣೆ ವೇಳೆ ಮೇಲ್ನೋಟಕ್ಕೆ ಸಿಬ್ಬಂದಿಗೆ ಇವರ ಕಾಪಿ ಐಡಿಯಾ ಬಗ್ಗೆ ಗೊತ್ತಾಗಿಲ್ಲ. ಇಷ್ಟೆಲ್ಲಾ ಆದರೂ ಮೂವರು ಅಭ್ಯರ್ಥಿಗಳು ಸುಮ್ಮನೆ ನಗುತ್ತಿದ್ದನ್ನ ಕಂಡು ಸಿಬ್ಬಂದಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Copying in Exams: ಮೊದಲೆಲ್ಲ ಪರೀಕ್ಷೆಯಲ್ಲಿ ಚಿಟ್ (Chit) ತೆಗೆದುಕೊಂಡು ಹೋಗಿ ಕಾಪಿ(Copy) ಮಾಡುವುದನ್ನ ಎಲ್ಲರೂ ನೋಡಿದ್ದೇವೆ, ಕೇಳಿದ್ದೇವೆ. ಅಷ್ಟೇ ಯಾಕೆ ನೀವು ಕೂಡ ನಿಮ್ಮ ಸ್ಕೂಲ್ ಹಾಗೂ ಕಾಲೇಜು ಸಮಯದಲ್ಲಿ ಒಮ್ಮೆಯಾದರೂ ಕಾಪಿ ಮಾಡಲು ಅಥವಾ ಮಾಡಲು ಪ್ರಯತ್ನಿಸಿದವರನ್ನು ನೋಡಿರುತ್ತೀರಾ. SSLC, PUC, ಡಿಗ್ರಿ ಎಕ್ಸಾಂಗಳಲ್ಲಿ ಚಿಟ್ ತಂದು ಕಾಪಿ ಮಾಡೋದು ಸರ್ವೇಸಾಮಾನ್ಯವಾಗಿ ಹೋಗಿತ್ತು. ಎಕ್ಸಾಂಗೂ ಮುನ್ನ ತಾವು ಕೂರುವ ಬೆಂಚ್ ಮೇಲೆ ಬರೆದು, ಕಾಪಿ ಮಾಡುತ್ತಿದ್ದ ಕಾಲ ಈಗಿಲ್ಲ ಬಿಡಿ. ಮೇಷ್ಟ್ರು ಕೈಲಿ ಸಿಕ್ಕಿ ಬಿದ್ರೆ ಎರಡು ಬಿಟ್ಟು ಮುಂದೆ ಹೀಗೆ ಮಾಡಬೇಡ ಅಂತ ಬುದ್ದಿ ಹೇಳುತ್ತಿದ್ದರು. ಈಗೆಲ್ಲಾ ಕಾಪಿ ಮಾಡಿದರೆ ಡಿಬಾರ್ (debar) ಆಗೋದು ಗ್ಯಾರಂಟಿ. ಟೆಕ್ನಾಲಜಿ(Technology) ಮುಂದುವರೆದಂತೆ ಕಾಪಿ ಹೊಡೆಯುವ ಸ್ಟೈಲ್ ಗಳೂ ಕೂಡ ಚೇಂಜ್ ಆಗ್ತಾನೆ ಇದೆ. ರಾಜಸ್ಥಾನದಲ್ಲಿ ನಿನ್ನೆ ರೀಟ್(REET) ಪರೀಕ್ಷೆ ನಡೆಸಲಾಯಿತು. ಈ ವೇಳೆ ಚಪ್ಪಲಿ(Slipper)ಯಲ್ಲಿ ಬ್ಲೂಟೂತ್ ಡಿವೈಸ್ (Bluetooth Device) ಇಟ್ಟು ಇದರ ಮೂಲಕ ಕಾಪಿ ಹೊಡೆಯಲು ಯತ್ನಿಸಿದ್ದಾರೆ. ಚೀಟಿಂಗ್ ಮಾಡಲು ಮುಂದಾಗಿದ್ದ ಐವರನ್ನ ಪರೀಕ್ಷೆಗೂ ಮುನ್ನ ವಶಕ್ಕೆ ಪಡೆಯಲಾಗಿದೆ.

    ಶಿಕ್ಷಕರಾಗಲು ಕನಸು ಕಂಡಿದ್ದವರಿಂದಲೇ ದೋಖಾ!

    ನಿನ್ನೆ ರಾಜಸ್ಥಾನದಾದ್ಯಂತ REET( Rajasthan Eligibility Exam for Teachers) ಅರ್ಹತಾ ಪರೀಕ್ಷೆಯನ್ನ ನಡೆಸಲಾಯಿತು. ಬಿಕನೇರ್(Bikaner) ಜಿಲ್ಲೆಯ ಗಂಗಾಶಹರ್(Gangashahar)ನಲ್ಲಿ ಮೂವರು ಅಭ್ಯರ್ಥಿಗಳು ಎಕ್ಸಾಂನಲ್ಲಿ ಕಾಪಿ ಹೊಡೆಯಲು ಸಿದ್ದತೆಯನ್ನ ಮಾಡಿಕೊಳ್ಳುತ್ತಿದ್ದರು. ಚಪ್ಪಲಿ ಯಲ್ಲಿ ಬ್ಲೂ ಟೂತ್ ಡಿವೈಸ್ ಇಟ್ಟು, ಪರೀಕ್ಷಾ ಕೇಂದ್ರದ ಕೂಗಳತೆ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಟ್ರಯಲ್ ಮಾಡತೊಡಗಿದ್ದಾರೆ. ಮೂವರು ಅಭ್ಯರ್ಥಿಗಳಿಗೆ, ಇಬ್ಬರು ಸ್ನೇಹಿತರು ಸಹಾಯ ಮಾಡಲು ಮುಂದಾಗಿದ್ದಾರೆ. ಪಕ್ಕಾ ಪ್ಲಾನ್ ಮಾಡಿಕೊಂಡು ಎಕ್ಸಾಂಗೆ ಮೂವರು ಅಭ್ಯರ್ಥಿಗಳು ಬಂದಿದ್ದಾರೆ. ಇವರನ್ನ ಕಂಡು ಅನುಮಾನಗೊಂಡ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.

    ಹೈಟೆಕ್ ಕಾಪಿ ಹೊಡೆಯೋ ತಯಾರಿ

    ತಪಾಸಣೆ ವೇಳೆ ಮೇಲ್ನೋಟಕ್ಕೆ ಸಿಬ್ಬಂದಿಗೆ ಇವರ ಕಾಪಿ ಐಡಿಯಾ ಬಗ್ಗೆ ಗೊತ್ತಾಗಿಲ್ಲ. ಇಷ್ಟೆಲ್ಲಾ ಆದರೂ ಮೂವರು ಅಭ್ಯರ್ಥಿಗಳು ಸುಮ್ಮನೆ ನಗುತ್ತಿದ್ದನ್ನ ಕಂಡು ಸಿಬ್ಬಂದಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ. ಇವರ ಬಗ್ಗೆ ಅಲ್ಲೇ ಸ್ಥಳದಲ್ಲಿ ಇದ್ದ ಪೊಲೀಸರಿಗೆ ಮಾಹಿತಿ ಕೊಟ್ಟಿದಾರೆ. ಮೂವರು ಅಭ್ಯಥಿಗಳನ್ನ ಪೊಲೀಸರು ತೀವ್ರ ತಪಾಸಣೆ ನೆಡೆಸಿದ್ದಾರೆ. ಇದಾದ ಬಳಿಕ ಚಪ್ಪಲಿಯಲ್ಲಿ ಬಚ್ಚಿಟ್ಟಿದ್ದ ಬ್ಲೂಟೂತ್ ಡಿವೈಸ್(Bluetooth Device) ಪೊಲೀಸರ ಕೈಗೆ ಸಿಕ್ಕಿದೆ. ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಂತೆ ಎಲ್ಲವನ್ನೂ ಬಾಯಿಬಿಟ್ಟಿದ್ದಾರೆ.

    ಇದನ್ನೂ ಓದಿ: ಪಿಎಸ್ಐ ನೇಮಕಾತಿ ವೇಳೆ ಹೆಚ್ಚು ಎತ್ತರ ತೋರಿಸಲು ಐನಾತಿ ಐಡಿಯಾ; ಅಭ್ಯರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು

    ಏನು ಗೆಳೆತನ ಅಂತೀರಾ

    ಇನ್ನೂ ಇವರ ಪರೀಕ್ಷೆಗೆ ಸಹಾಯ ಮಾಡಲು ಪರೀಕ್ಷಾ ಕೇಂದ್ರದ ಕೂಗಳತೆ ಇರೋ ಬಸ್ ನಿಲ್ದಾಣದಲ್ಲಿದ್ದ ತಮ್ಮ ಸ್ನೇಹಿತರು ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಬಂಧಿತರಿಂದ ಮೊಬೈಲ್, ಸಿಮ್ ಕಾರ್ಡ್, ಬ್ಲೂಟೂತ್ ಡಿವೈಸ್ ಸೇರಿ ಹಲವು ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಕನೇರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಚಂದ್ರ ಹೇಳಿದ್ದಾರೆ. ಇನ್ನೂ ಮುಂದೆ ಒಂದಿನ ಶಿಕ್ಷಕರಾಗಿ ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತಿದ್ದಿ ಬುದ್ದಿ ಹೇಳಬೇಕಿದ್ದವರೇ ಈ ರೀತಿ ತಪ್ಪು ಮಾಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

    (ವರದಿ - ವಾಸುದೇವ್. ಎಂ)
    Published by:Soumya KN
    First published: