Shocking News: ಎಂಥಾ ಕಾಲ ಬಂತಪ್ಪ, ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನೇ ಹೊಡೆದ ವಿದ್ಯಾರ್ಥಿಗಳು!

ಹಿಂದೆಲ್ಲ “ಗುರುವೇ ನಮಃ” ಅಂತಿದ್ರೆ, ಇಂದು “ಗುರವೇನ್ ಮಹಾ” ಅಂತ ಪ್ರಶ್ನಿಸುವ ಜಮಾನ. ಇದೀಗ ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೆದರೋದು ಹಾಗಿರಲಿ, ಶಿಕ್ಷಕರೇ ವಿದ್ಯಾರ್ಥಿಗಳಿಗೆ ಹೆದರುವ ಪರಿಸ್ಥಿತಿ ಬಂದಿದೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದುಮ್ಕಾ, ಜಾರ್ಖಂಡ್: “ಗುರು ದೇವೋ ಭವ” ಅಂತಾರೆ. ಅಂದರೆ ನಮ್ಮನ್ನು ತಿದ್ದಿ, ತೀಡಿ, ಶಿಕ್ಷಿಸಿ, ಬುದ್ಧಿ ಹೇಳುವ ಶಿಕ್ಷಕರು (Teachers) ದೇವರ (God) ಸಮಾನ ಅಂತ. ಹಿಂದೆಲ್ಲಾ ಶಿಕ್ಷಕರು ಅಂತ ವಿದ್ಯಾರ್ಥಿಗಳು (Students) ಭಯ ಪಡುತ್ತಿದ್ದರು. ಆದ್ರೆ ಈಗ ಅಂತಹ ವಾತಾವರಣವೇ ಇಲ್ಲ. ಆಗ “ಗುರುವೇ ನಮಃ” ಅಂತಿದ್ರೆ, ಇಂದು “ಗುರವೇನ್ ಮಹಾ” ಅಂತ ಪ್ರಶ್ನಿಸುವ ಜಮಾನ. ಇದೀಗ ಜಾರ್ಖಂಡ್‌ನಲ್ಲಿ (Jharkhand) ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಅಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೆದರೋದು ಹಾಗಿರಲಿ, ಶಿಕ್ಷಕರೇ ವಿದ್ಯಾರ್ಥಿಗಳಿಗೆ ಹೆದರುವ ಪರಿಸ್ಥಿತಿ ಬಂದಿದೆ. ಅದಕ್ಕೆ ಕಾರಣ ಆ ಒಂದು ಶಾಲೆಯಲ್ಲಿ (School) ನಡೆದ ಘಟನೆ. ಅಲ್ಲಿ ಕಡಿಮೆ ಮಾರ್ಕ್ (Marks) ಕೊಟ್ಟಿದ್ದಾರೆ ಅಂತ ಶಿಕ್ಷಕರನ್ನೇ ವಿದ್ಯಾರ್ಥಿಗಳು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಶಿಕ್ಷಕರಿಗೆ ಥಳಿಸಿದ ವಿದ್ಯಾರ್ಥಿಗಳು

ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಗೋಪಿಕಂದರ್ ಪೊಲೀಸ್ ಠಾಣೆ
ವ್ಯಾಪ್ತಿಯ ಸರ್ಕಾರಿ ಪರಿಶಿಷ್ಟ ಪಂಗಡದ ವಸತಿ ಶಾಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದ ಬಗ್ಗೆ ವರದಿಯಾಗಿದೆ. ಅಲ್ಲಿನ ಒಂಬತ್ತನೇ ತರಗತಿಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಳಪೆ ಅಂಕ ನೀಡಿದ ಕಾರಣಕ್ಕೆ ವಸತಿ ಶಾಲೆಯ ಗಣಿತ ಶಿಕ್ಷಕ ಹಾಗೂ ಗುಮಾಸ್ತರನ್ನು ಮರಕ್ಕೆ ಕಟ್ಟಿ ವಿದ್ಯಾರ್ಥಿಗಳು ಥಳಿಸಿದ್ದಾರೆ.

ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಹಲ್ಲೆ

ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ( ಜೆಎಸಿ ) ಶನಿವಾರದಂದು ಪ್ರಕಟಿಸಿದ 9ನೇ ತರಗತಿ ಪರೀಕ್ಷೆಯಲ್ಲಿ 32 ರಲ್ಲಿ 11 ವಿದ್ಯಾರ್ಥಿಗಳು ಗ್ರೇಡ್-ಡಿಡಿ (ಡಬಲ್ ಡಿ) ಅಂಕ ಪಡೆದಿದ್ದಾರೆ, ಇದು ಅನುತ್ತೀರ್ಣಕ್ಕೆ ಸಮಾನವೆಂದು ಪರಿಗಣಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಿಟ್ಟಿಗೆದ್ದು, ಶಿಕ್ಷಕರ ಮೇಲೆ ದಾಳಿ ಮಾಡಿದ್ದಾರೆ..

ಇದನ್ನೂ ಓದಿ: Tumakuru: ಚಡ್ಡಿಯಲ್ಲಿ ಮೂತ್ರ ಮಾಡಿಕೊಂಡಿದ್ದಕ್ಕೆ ಬಾಲಕನ ಖಾಸಗಿ ಅಂಗಕ್ಕೆ ಬೆಂಕಿ ಇಟ್ಟ ಶಿಕ್ಷಕಿ!

ಹೊಡೆತ ತಿಂದರೂ ದೂರು ದಾಖಲಿಸದ ಶಿಕ್ಷಕ

ಶಾಲಾ ಶಿಕ್ಷಕ  ಸುಮನ್ ಕುಮಾರ್ ಹಾಗೂ ಶಾಲೆಯ ಗುಮಾಸ್ತ ಸೋನೆರಾಮ್ ಚೌರೆ ಎಂಬುವರ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಆದರೆ ಅವರಿಬ್ಬರು ಯಾವುದೇ ದೂರು ನೀಡಿಲ್ಲ. ಅಲ್ಲದೇ ಶಾಲಾ ಆಡಳಿತ ಮಂಡಳಿ ಕೂಡ ಈ ಬಗ್ಗೆ ದೂರು ದಾಖಲಿಸಿಲ್ಲ ಎಂದು ಗೋಪಿಕಂದರ್ ಪೊಲೀಸ್ ಠಾಣೆಯ ಪ್ರಭಾರಿ ನಿತ್ಯಾನಂದ ಭೋಕ್ತಾ ಹೇಳಿದ್ದಾರೆ.

ವಿದ್ಯಾರ್ಥಿಗಳ ಜೀವನ ಹಾಳಾಗಬಾರದು ಎಂದ ಶಿಕ್ಷಕ

ಇನ್ನು ಶಾಲಾ ಆಡಳಿತವು ಲಿಖಿತ ದೂರು ನೀಡದ ಕಾರಣ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಘಟನೆಯ ಪರಿಶೀಲನೆಯ ನಂತರ, ನಾನು ದೂರು ದಾಖಲಿಸಲು ಶಾಲೆಯ ಅಧಿಕಾರಿಯನ್ನು ಕೇಳಿದೆ ಆದರೆ ಅದಕ್ಕೆ ಅವರು ನಿರಾಕರಿಸಿದ್ದಾರೆ. ಈಗ ನಾವು ದೂರು ನೀಡಿದರೆ ಅದರಿಂದ ಮುಂದೆ ವಿದ್ಯಾರ್ಥಿಗಳ ಶಾಲಾ ಶೈಕ್ಷಣಿಕ ಜೀವನವನ್ನು ಹಾಳುಮಾಡುತ್ತದೆ. ಹೀಗಾಗಿ ದೂರು ನೀಡುವುದಿಲ್ಲ ಅಂತ ಶಿಕ್ಷಕರು ಹೇಳಿದ್ದಾರೆ ಅಂತ ಎಂದು ಗೋಪಿಕಂದರ್ ಪೊಲೀಸ್ ಠಾಣೆಯ ಪ್ರಭಾರಿ ನಿತ್ಯಾನಂದ ಭೋಕ್ತಾ ಹೇಳಿದ್ದಾರೆ.

ಇದನ್ನೂ ಓದಿ: Drunk Teacher: ಕಂಠಪೂರ್ತಿ ಕುಡಿದು, ಕ್ಲಾಸಿಗೆ ಬಂದು ಮಲಗಿದ್ಲು! ಶಿಕ್ಷಕಿ ವರ್ತನೆಗೆ ಮಕ್ಕಳು ಕಂಗಾಲು

ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ ಆಡಳಿತ ಮಂಡಳಿ

ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ವಸತಿ ಶಾಲೆಯಲ್ಲಿ 200 ವಿದ್ಯಾರ್ಥಿಗಳಿದ್ದು, ಅವರಲ್ಲಿ ಹೆಚ್ಚಿನವರು ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಶಿಕ್ಷಕ ಈ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ನಂತರ ಯಾವುದೋ ಒಂದು ಕಾರಣಗಳಿಗಾಗಿ ಅವರನ್ನು ತೆಗೆದುಹಾಕಲಾಯಿತು. ಇದೀಗ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಜೊತೆಗೆ ಎರಡೂ ತರಗಳಿಗಳನ್ನು ಸದ್ಯಕ್ಕೆ ರದ್ದು ಮಾಡಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ.
Published by:Annappa Achari
First published: