ಚಂಡಮಾರುತಕ್ಕೆ ಸಿಲುಕಿದ್ದ ನೂರಾರು ಆಮೆಗಳ ರಕ್ಷಣೆ; ಅಮೆರಿಕದ ಸ್ವಯಂ ಸೇವಕರಿಂದ ಪುನರ್ಜನ್ಮ ಭಾಗ್ಯ!

ಸ್ಥಳೀಯ ಸ್ವಯಂಸೇವಕರು ಆಮೆ ಮರಿಗಳನ್ನು ರಕ್ಷಿಸಿ ನ್ಯೂಜೆರ್ಸಿಯ ಗ್ಯಾಲೋವೇನಲ್ಲಿರುವ ವಿಶ್ವವಿದ್ಯಾಲಯಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪ್ರಕೃತಿ ವಿಕೋಪದ ಸಮಯದಲ್ಲಿ ಪರಿಸರದಲ್ಲಿ ಅಪಾರ ಹಾನಿ ಸಂಭವವಿರುತ್ತದೆ. ಈ ಪರಿಸ್ಥಿತಿಯಲ್ಲಿ ಮರ ಗಿಡಗಳು ಮತ್ತು ಪ್ರಾಣಿಗಳು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಾಣಿಗಳ ಸಂರಕ್ಷಣೆಗೆ ಮುಂದಾಗುವ ಸ್ವಯಂ ಸೇವಕರು ಮತ್ತು ಪ್ರಾಣಿ ಪ್ರಿಯರಿಂದ ಪುನರ್ ಜನ್ಮ ಪಡೆಯುತ್ತವೆ.

  ಇತ್ತೀಚೆಗೆ, ಅಮೆರಿಕದ ನ್ಯೂಜೆರ್ಸಿಯ ವಿವಿಧ ಕಡೆಗಳಲ್ಲಿ ಚಂಡಮಾರುತದ ಪರಿಣಾಮ ಚರಂಡಿಗಳಲ್ಲಿ ಸಿಲುಕಿದ್ದ 800 ಕ್ಕೂ ಹೆಚ್ಚು ಡೈಮಂಡ್‌ಬ್ಯಾಕ್ ಟೆರ್ರಾಪಿನ್ ಆಮೆ ಮರಿಗಳನ್ನು ರಕ್ಷಿಸಿ ಸ್ಟಾಕ್‌ಟನ್ ವಿಶ್ವವಿದ್ಯಾಲಯದ ವೈವೇರಿಯಂಗೆ ತರಲಾಗಿದೆ. ಸಣ್ಣ ಆಮೆಗಳು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಂತೆ, ಚಂಡಮಾರುತಕ್ಕೆ ಚರಂಡಿಗೆ ಸಿಲುಕಿಕೊಂಡವು. ಸ್ಥಳೀಯ ಸ್ವಯಂಸೇವಕರು ಆಮೆ ಮರಿಗಳನ್ನು ರಕ್ಷಿಸಿ ನ್ಯೂಜೆರ್ಸಿಯ ಗ್ಯಾಲೋವೇನಲ್ಲಿರುವ ವಿಶ್ವವಿದ್ಯಾಲಯಕ್ಕೆ ಕರೆತರುತ್ತಿದ್ದಾರೆ ಎಂದು ತಿಳಿಸಲಾಗಿದೆ.

  ಸ್ವಯಂಸೇವಕರಾದ ಮರ್ಲೀನ್ ಗಾಲ್ಡಿ ಮತ್ತು ಜೊವಾನ್ನೆ ಫ್ರೀಯಾಸ್‌ರವರು ತಮ್ಮ ಬಿಡುವಿನ ವೇಳೆಯಲ್ಲಿ ಆಮೆಗಳನ್ನು ರಸ್ತೆ ದಾಟಲು ಸಹಾಯ ಮಾಡುತ್ತಿರುತ್ತಾರೆ. ಇತ್ತೀಚೆಗೆ, ಮರ್ಲೀನ್ ಅವರು ಕೆಲವು ಆಮೆಗಳನ್ನು ಬಿರುಗಾಳಿಯ ಒಳಚರಂಡಿಯಲ್ಲಿ ಸಿಲುಕಿಕೊಂಡು ಈಜುತ್ತಿರುವುದನ್ನು ಕಂಡರು. ಅವರು ಈ ಆಮೆಗಳನ್ನು ರಕ್ಷಿಸಲು ನಿರ್ಧರಿಸಿದರು. ಸ್ವಯಂಸೇವಕರ ಸಹಾಯದಿಂದ ಆಮೆ ಮರಿಗಳನ್ನು ರಕ್ಷಿಸಲಾಯಿತು.

  Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಅಬ್ಬರ; ಮೂರೂವರೆ ಲಕ್ಷದಷ್ಟು ಪ್ರಕರಣಗಳು ಪತ್ತೆ

  ರಸ್ತೆಯನ್ನು ದಾಟುವಾಗ ಸಾವಿಗೀಡಾಗುವ ಹೆಣ್ಣು ಆಮೆಯ ಹೊಟ್ಟೆಯಿಂದ ಮೊಟ್ಟೆಗಳನ್ನು ಹೊರತೆಗೆದು ಕಾವುಕೊಡುವ ಸ್ಟೋನ್ ಹಾರ್ಬರ್‌ನ ದಿ ವೆಟ್‌ಲ್ಯಾಂಡ್ಸ್ ಇನ್‌ಸ್ಟಿಟ್ಯೂಟ್‌ನೊಂದಿಗಿನ ‘ಸಂರಕ್ಷಣಾ ಸಹಭಾಗಿತ್ವ’ದಿಂದ ಮುಂಬರುವ ವಾರಗಳಲ್ಲಿ ಹೆಚ್ಚಿನ ಟೆರ್ರಾಪಿನ್‌ಗಳು ವಿವೇರಿಯಂಗೆ ಬರಲಿವೆ ಎಂದು ಸ್ಟಾಕ್‌ಟನ್ ವಿಶ್ವವಿದ್ಯಾಲಯದ ಎಫ್‌ಬಿ ಪೋಸ್ಟ್ ಹೇಳುತ್ತದೆ. ಈ ಹ್ಯಾಚ್‌ಲಿಂಗ್‌ಗಳು ಅಂತಿಮವಾಗಿ ಕಾಡಿಗೆ ಬಿಡುವ ಮೊದಲು ಒಂದು ವರ್ಷವನ್ನು ವಿವೇರಿಯಂನಲ್ಲಿ ಸಾಕಲಾಗುತ್ತದೆ.

  ಉತ್ತರ ಡೈಮಂಡ್‌ಬ್ಯಾಕ್ ಟೆರ್ರಾಪಿನ್ ಮಧ್ಯಮ ಗಾತ್ರದ ಆಮೆಯಾಗಿದೆ. ಗಂಡು ಆಮೆ 4 ರಿಂದ 5.5 ಇಂಚುಗಳಷ್ಟು ಮತ್ತು ಹೆಣ್ಣು ಆಮೆ 6 ರಿಂದ 9 ಇಂಚುಗಳವರೆಗೆ ದೇಹ ರಚನೆಯನ್ನು ಹೊಂದಿರುತ್ತವೆ ಎಂದು ನ್ಯೂಜೆರ್ಸಿಯ ಕನ್ಸರ್ವ್ ವೈಲ್ಡ್ ಲೈಫ್ ಫೌಂಡೇಶನ್ ತಿಳಿಸಿದೆ. ಇವು ಮೇರಿಲ್ಯಾಂಡ್‌ನ ಕೇಪ್ ಕೋಡ್‌ನಿಂದ ಉತ್ತರ ಕೆರೊಲಿನಾದ ಕೇಪ್ ಹ್ಯಾಟೆರಾಸ್ ವರೆಗೆ ವ್ಯಾಪ್ತಿಯಲ್ಲಿ ಕಂಡುಬರುತ್ತವೆ ಎಂದು ಹೇಳಲಾಗಿದೆ. ಆರೈಕೆ ಪಡೆಯುತ್ತಿರುವ 1,108 ಟೆರಾಪಿನ್‌ಗಳನ್ನು ರಕ್ಷಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

  ಪ್ರಕೃತಿ ವಿಕೋಪದ ಸಮಯದಲ್ಲಿ ಪ್ರಾಣಿಗಳಿಗೆ ಜೀವ ಭಯ ಕಾಡುತ್ತದೆ. ಅವುಗಳ ರಕ್ಷಣೆನೆಗೆ ಸರ್ಕಾರಗಳು ಹೆಚ್ಚಿನ ಕಾಳಜಿಯನ್ನು ವಹಿಸುವ ಅಗತ್ಯವಿದೆ. ಈಗಾಗಲೇ ನಗರೀಕರಣ ಮತ್ತು ಕಾಡಿನ ನಾಶದಿಂದಾಗಿ ಹಲವಾರು ಪ್ರಾಣಿ ಪ್ರಭೇದಗಳು ಸಂಪೂರ್ಣವಾಗಿ ನಶಸಿಹೋಗಿವೆ. ಇಂತಹ ಪರಿಸ್ಥಿತಿಯಲ್ಲಿ ಚಂಡಮಾರುತದಂತಹ ಪ್ರಕೃತಿ ವಿಕೋಪಗಳಿಂದ ಪ್ರಾಣಿಗಳ ಕಷ್ಟ ಹೇಳತೀರದು. ಆಮೆಗಳ ರಕ್ಷಣೆಗೆ ಕೈಗೊಂಡ ನ್ಯೂಜೆರ್ಸಿಯ ಸ್ವಯಂ ಸೇವಕರ ಸೇವೆ ಮೆಚ್ಚುವಂತಹದ್ದು. ಇವರ ಅವಿರತ ಸೇವೆಯಿಂದ 800 ಕ್ಕೂ ಹೆಚ್ಚು ಡೈಮಂಡ್‌ಬ್ಯಾಕ್ ಟೆರ್ರಾಪಿನ್ ಆಮೆ ಮರಿಗಳಿಗೆ ಪುನರ್ ಜನ್ಮ ಪಡೆದಿವೆ.
  Published by:Latha CG
  First published: