I Want Refund: ಪದವಿ ಪ್ರದಾನ ಸಮಾರಂಭದಲ್ಲಿ ಈಕೆ ಧರಿಸಿದ ಬಟ್ಟೆ ನೋಡಿ ಮುಜುಗರಕ್ಕೊಳಗಾದ ಕಾಲೇಜು ಆಡಳಿತ ಮಂಡಳಿ

ಕೊರೋನಾ ಸಂದರ್ಭದಲ್ಲಿ ಹಣಕಾಸು ಎಲ್ಲರಿಗೂ ಇಕ್ಕಟ್ಟಾದ ಪರಿಸ್ಥಿತಿಯಾಗಿತ್ತು. ಇದೇ ರೀತಿಯ ಅಗ್ನಿಪರೀಕ್ಷೆಯನ್ನು ಅನುಭವಿಸುತ್ತಿರುವ ಟಿಯಾ ಒ'ಡೊನೆಲ್ ಎಂಬ ವಿದ್ಯಾರ್ಥಿನಿ ತನ್ನ ಪದವಿ ಸಮಾರಂಭದಲ್ಲಿ ತನ್ನ ಬೋಧನಾ ಶುಲ್ಕವನ್ನು ಮರುಪಾವತಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾಳೆ. ಟಿಯಾ ವಿಶೇಷವಾದ ಮಾರ್ಗದ ಮೂಲಕ ಶುಲ್ಕವನ್ನು ರೀಫಂಡ್ ಮಾಡುವಂತೆ ಕಾಲೇಜು ಆಡಳಿತ ಮಂಡಳಿಗೆ ವಿನಂತಿಸಿದ್ದಾಳೆ.

'ನನಗೆ ರಿಫಂಡ್ ಬೇಕು' ವಾಕ್ಯವಿರುವ ಬಟ್ಟೆ ಧರಿಸಿ ವೇದಿಕೆ ಏರಿದ ವಿದ್ಯಾರ್ಥಿನಿ

'ನನಗೆ ರಿಫಂಡ್ ಬೇಕು' ವಾಕ್ಯವಿರುವ ಬಟ್ಟೆ ಧರಿಸಿ ವೇದಿಕೆ ಏರಿದ ವಿದ್ಯಾರ್ಥಿನಿ

  • Share this:
ಕೋವಿಡ್ 19 ಸಾಂಕ್ರಾಮಿಕ ರೋಗ ಜಾಗತಿಕ ಆರ್ಥಿಕತೆ, ಶಿಕ್ಷಣ ಮತ್ತು ಮೂಲಸೌಕರ್ಯವನ್ನು ಬುಡಮೇಲು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಿಕ್ಷಣದಂತಹ (Education) ಕೆಲವು ಕ್ಷೇತ್ರಗಳು ದೀರ್ಘಕಾಲೀನ ಪರಿಣಾಮವನ್ನು ಕಂಡಿವೆ. ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜು ದಿನಗಳ ಜೀವನದ ಅನುಭವವನ್ನು (Experience) ಬರೋಬ್ಬರಿ ಎರಡು ವರ್ಷ ಕಳೆದುಕೊಳ್ಳುವಂತೆ ಮಾಡಿತು ಈ ಕೊರೋನಾ ಮಹಾಮಾರಿ. ಸಾಂಕ್ರಾಮಿಕ ರೋಗವು ವಿದ್ಯಾರ್ಥಿಗಳನ್ನು (Students) ಲ್ಯಾಪ್‌ಟಾಪ್, ಮೊಬೈಲ್‍ನಲ್ಲಿ ತರಗತಿಗಳನ್ನು ಆಲಿಸುವಂತೆ ಮಾಡಿತು. ಈ ಶಿಕ್ಷಣ ಪದ್ಧತಿ ಕಡಿಮೆ-ಗುಣಮಟ್ಟದ ಶಿಕ್ಷಣಕ್ಕೆ ಕಾರಣವಾಯಿತು ಎನ್ನುವುದು ಹಲವರ ಅಭಿಪ್ರಾಯ (Opinion). ಹಲವಾರು ಕಾಲೇಜು (College), ಶಾಲೆಗಳು ತರಗತಿ ಸರಿಯಾಗಿ ನಡೆದಿದ್ದರೂ ವಿದ್ಯಾರ್ಥಿಗಳ ಶುಲ್ಕವನ್ನು (Tax) ಮಾತ್ರ ಪೂರ್ತಿಯಾಗಿ ಕಟ್ಟಿಸಿಕೊಂಡಿವೆ.

ಶಿಕ್ಷಕರ ಸಂಬಳ, ವೆಚ್ಚ ಇವನ್ನೆಲ್ಲಾ ಭರಿಸುವ ಉದ್ದೇಶದಿಂದಾಗಿ ವಿದ್ಯಾರ್ಥಿಗಳ ಬಳಿ ಶುಲ್ಕವನ್ನು ವಸೂಲಿ ಮಾಡಲಾಯಿತು. ಕೊರೋನಾ ಸಂದರ್ಭದಲ್ಲಿ ಹಣಕಾಸು ಎಲ್ಲರಿಗೂ ಇಕ್ಕಟ್ಟಾದ ಪರಿಸ್ಥಿತಿಯಾಗಿತ್ತು. ಇದೇ ರೀತಿಯ ಅಗ್ನಿಪರೀಕ್ಷೆಯನ್ನು ಅನುಭವಿಸುತ್ತಿರುವ ಟಿಯಾ ಒ'ಡೊನೆಲ್ ಎಂಬ ವಿದ್ಯಾರ್ಥಿನಿ ತನ್ನ ಪದವಿ ಸಮಾರಂಭದಲ್ಲಿ ತನ್ನ ಬೋಧನಾ ಶುಲ್ಕವನ್ನು ಮರುಪಾವತಿಸುವಂತೆ ಸಾರ್ವಜನಿಕವಾಗಿ ಕೇಳಿಕೊಂಡಿದ್ದಾಳೆ. ಟಿಯಾ ವಿಶೇಷವಾದ ಮಾರ್ಗದ ಮೂಲಕ ಶುಲ್ಕವನ್ನು ರೀಫಂಡ್ ಮಾಡುವಂತೆ ಕಾಲೇಜು ಆಡಳಿತ ಮಂಡಳಿಗೆ ವಿನಂತಿಸಿದ್ದಾಳೆ.

“ನನಗೆ ರೀಫಂಡ್ ಬೇಕು”
ಲಂಡನ್‌ನ ಆರ್ಟ್ಸ್ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಸೆಂಟ್ರಲ್ ಸೇಂಟ್ ಮಾರ್ಟಿನ್ಸ್ ಕಾಲೇಜಿನಲ್ಲಿ ತನ್ನ ಲಲಿತಕಲೆ ಪದವಿಯನ್ನು ಪೂರ್ಣಗೊಳಿಸಿದ ಟಿಯಾ, "ನನಗೆ ಮರುಪಾವತಿ ಬೇಕು" ಎಂದು ಬರೆದ ಬಿಳಿ ಬಟ್ಟೆಯನ್ನು ಧರಿಸಿ ಪದವಿ ಸಮಾರಂಭಕ್ಕೆ ಬಂದಿದ್ದಳು. ಇದು ವಿಶೇಷವಾಗಿದ್ದು, ಎಲ್ಲರ ಗಮನ ಸೆಳೆದಳು ಟಿಯಾ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸರಣಿ ಪೋಸ್ಟ್ ಗಳನ್ನು ಮಾಡಿದ ಟಿಯಾ ಈ ವಿಚಾರವನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.


View this post on Instagram


A post shared by Tia O’Donnell (@tia4u)
ನನಗೆ ರೀಫಂಡ್ ಬೇಕು ಎಂಬ ವಾಕ್ಯವನ್ನು ಒಳಗೊಂಡ ಬಟ್ಟೆಯನ್ನು ಧರಿಸಿ ಪದವಿ ಸಮಾರಂಭದ ವೇದಿಕೆ ಏರುತ್ತಿದ್ದಂತೆ ಇತರೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ವ್ಯಕ್ತಪಡಿಸಿದರು. ವೇದಿಕೆ ಏರುವವರೆಗೂ ಈ ಬಟ್ಟೆಯನ್ನು ಮುಚ್ಚಿಕೊಂಡಿದ್ದ ಟಿಯಾ ಪದವಿ ಸ್ವೀಕರಿಸಲು ಹೋಗುವಾಗ ನನಗೆ ರೀಫಂಡ್ ಬೇಕು ಎಂಬ ವಾಕ್ಯವನ್ನು ಒಳಗೊಂಡ ಬಟ್ಟೆಯನ್ನು ಹಾಕಿಕೊಂಡು ವೇದಿಕೆಗೆ ಧಾವಿಸಿದ್ದಾಳೆ. ಟಿಯಾಳಳ ಈ ವಿಚಿತ್ರ ಬಟ್ಟೆ ನೋಡಿ ಕಾಲೇಜು ಆಡಳಿತ ಮಂಡಳಿ ಬೆಚ್ಚಿಬಿದ್ದರೆ, ಇತರೆ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ ಟಿಯಾಳಿಗೆ ಬೆಂಬಲ ಸೂಚಿಸಿದರು.

ಈ ಬಗ್ಗೆ ಟಿಯಾ ಅವರು ಏನು ಹೇಳಿದ್ದು ಹೀಗೆ
ಬ್ಯುಸಿನೆಸ್ ಇನ್‌ಸೈಡರ್‌ನೊಂದಿಗಿನ ಸಂಭಾಷಣೆಯಲ್ಲಿ, ವೇದಿಕೆಯ ಮೇಲೆ ಹೋಗಿ ಪದವಿ ಪ್ರಮಾಣಪತ್ರವನ್ನು ಸಂಗ್ರಹಿಸುವ ಸರದಿ ಬರುವವರೆಗೆ ತಾನು ಬಿಳಿ ಬಟ್ಟೆಯನ್ನು ನಿಲುವಂಗಿಯ ಕೆಳಗೆ ಬಚ್ಚಿಟ್ಟಿದ್ದೆ ಎಂದು ಟಿಯಾ ಬಹಿರಂಗಪಡಿಸಿದ್ದಾರೆ. "ನಾನು ಆರಂಭದಲ್ಲಿ ಸ್ವಲ್ಪ ಕಟುವಾಗಿ ಏನನ್ನಾದರೂ ಬರೆಯಲು ಬಯಸಿದ್ದೆ, ಆದರೆ ಅದು ನಿಜವಾಗಿಯೂ ಸಂದೇಶವನ್ನು ಚಿತ್ರಿಸುವ ಸರಿಯಾದ ಮಾರ್ಗವಲ್ಲ ಎಂದು ನಾನು ಅರಿತುಕೊಂಡೆ" ಎಂದು ಬ್ಯುಸಿನೆಸ್ ಇನ್ಸೈಡರ್ ಅವಳ ಹೇಳಿಕೆಯನ್ನು ಉಲ್ಲೇಖಿಸಿದೆ. ವರದಿಯ ಪ್ರಕಾರ, BAFA ಪದವೀಧರರು ಇನ್ನೂ ಸುಮಾರು $60,000 (ರೂ. 47 ಲಕ್ಷಕ್ಕೂ ಹೆಚ್ಚು) ಸಾಲ ಮತ್ತು ಬೋಧನಾ ಶುಲ್ಕವನ್ನು ಪಾವತಿಸಬೇಕಾಗಿದೆ.

ಇದನ್ನೂ ಓದಿ: Bengaluru: ವೀಕೆಂಡ್​ನಲ್ಲಿ ರ್‍ಯಾಪಿಡೋ ಓಡಿಸುವ ಎಂಜಿನಿಯರ್! ಹೀಗೇಕೆ ಮಾಡ್ತಾರೆ ಗೊತ್ತಾ?

ಮಾತು ಮುಂದುವರೆಸಿದ ಟಿಯಾ "ಇದು ಸಂಪೂರ್ಣವಾಗಿ ಅನ್ಯಾಯವಾಗಿದೆ ಎಂದು ನನಗೆ ಅನಿಸುತ್ತದೆ ಮತ್ತು ನಮ್ಮ ಮೊದಲ ವರ್ಷದ ಆರಂಭದಲ್ಲಿ ಕಾಲೇಜು ಪ್ರತಿ ವಿದ್ಯಾರ್ಥಿಗೆ ಭರವಸೆ ನೀಡಿದ ಶಿಕ್ಷಣದ ಮಟ್ಟವನ್ನು ನಾವು ಸ್ವೀಕರಿಸಿದ್ದೇನೆ ಎಂದು ನನಗೆ ಅನಿಸುತ್ತಿಲ್ಲ." ಎಂದು ಕಾಲೇಜನ್ನು ದೂಷಿಸಿದ್ದಾಳೆ.

ಟಿಯಾ ಪ್ರಶ್ನೆಗೆ ವಿಶ್ವವಿದ್ಯಾನಿಲಯದ ವಕ್ತಾರರು ಹೇಳಿದ್ದು ಹೀಗೆ
ಟಿಯಾಗೆ ಪ್ರತಿಕ್ರಿಯಿಸಿದ ವಿಶ್ವವಿದ್ಯಾನಿಲಯದ ವಕ್ತಾರರು, “ಸಾಂಕ್ರಾಮಿಕ ರೋಗದಿಂದ ಉಂಟಾದ ಸವಾಲುಗಳು ಮತ್ತು ಕ್ರಾಂತಿಯನ್ನು ನಾವು ಕಡಿಮೆ ಅಂದಾಜು ಮಾಡುವುದಿಲ್ಲ. ನಾವು ವಿದ್ಯಾರ್ಥಿಗಳು ಮತ್ತು ಪದವೀಧರರನ್ನು ನಮ್ಮೊಂದಿಗೆ ನೇರವಾಗಿ ಸಮಸ್ಯೆಗಳ ಬಗ್ಗೆ ಮಾತನಾಡಲು ಪ್ರೋತ್ಸಾಹಿಸುತ್ತೇವೆ. ಈ ರೀತಿಯಾದ ಕ್ರಮವನ್ನು ಬೆಂಬಲಿಸುವುದಿಲ್ಲ” ಎಂದು ಹೇಳಿದೆ.

ಇದನ್ನೂ ಓದಿ: Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?

ಒಟ್ಟಾರೆ ಟಿಯಾ ಅಂತರ್ಜಾಲದಲ್ಲಿ ಲಕ್ಷಾಂತರ ನೆಟಿಜನ್‌ಗಳ ಗಮನ ಸೆಳೆದಿದ್ದಾಳೆ. ರೀಫಂಡ್ ಬಯಸುವ ವಿದ್ಯಾರ್ಥಿಗಳಿಗೆ ಟಿಯಾ ಧ್ವನಿಯಾಗಿದ್ದಾಳೆ ಎಂದು ಅವಳ ಧೈರ್ಯವನ್ನು ಎಲ್ಲರೂ ಪ್ರಶಂಸಿದ್ದಾರೆ.
Published by:Ashwini Prabhu
First published: