YouTube ನೋಡಿ ಅವನ 'ಅದನ್ನೇ' ಕಟ್ ಮಾಡಿದ್ರಲ್ಲ! ಇವ್ರೇನು ವೈದ್ಯರೋ, ಪ್ರಾಣ ತೆಗೆಯೋ ರಾಕ್ಷಸರೋ?

ಈಗಿನ ಕಾಲದಲ್ಲಿ YouTube ನೋಡಿ ಏನೇನೋ ಕಲಿಯುವ ಜನರು ಇದ್ದಾರೆ. ತಮಗೆ ಗೊತ್ತಿರದ ಎಷ್ಟೋ ವಿಚಾರಗಳನ್ನು, ವಿದ್ಯೆಗಳನ್ನು ಕಲಿತವರಿದ್ದಾರೆ. ಆದರೆ ಇಲ್ಲಿ ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಯೂಟ್ಯೂಬ್ ವಿಡಿಯೋ ನೋಡಿ, ಫಜೀತಿ ಮಾಡಿಬಿಟ್ಟಿದ್ದಾರೆ. ಜೀವ ಉಳಿಸಬೇಕಿದ್ದ ಭವಿಷ್ಯದ ವೈದ್ಯರು, ಜೀವವನ್ನೇ ತೆಗೆದು ಬಿಟ್ಟಿದ್ದಾರೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಆಂಧ್ರ ಪ್ರದೇಶ: ಅವನಿಗೆ ಅದೇನಾಯ್ತೋ ಏನೋ? ಗಂಡಸು ಜನ್ಮನೇ ಬೇಡ ಅಂದು ಕೊಂಡ. ‘ನಾನು ಅವನಲ್ಲ ಅವಳಾದರೆ” ಚೆನ್ನಾಗಿರುತ್ತದೆ ಅಂತ ಕನಸು ಕಂಡ. ನನ್ನ ‘ಅದನ್ನೇ’ ಬದಲಾಯಿಸಿಕೊಂಡು, ಸಂಪೂರ್ಣವಾಗಿ ಹೆಣ್ಣಾಗಬೇಕು ಅಂತ ನಿರ್ಧಾರ ಮಾಡೇ ಬಿಟ್ಟ. ಅದೇ ಸಮಯಕ್ಕೆ ಯಮಕಿಂಕರರಂತೆ ಈ ಇಬ್ಬರು ವೈದ್ಯಕೀಯ (Medical) ವಿದ್ಯಾರ್ಥಿಗಳ (Students) ಪರಿಚಯವೂ ಆಯ್ತು. ಸ್ನೇಹವೂ (Friendship) ಬೆಳೆಯಿತು. ಅವರ ಮುಂದೆ ಆತ ತನ್ನ ಮನದ ಆಸೆಯನ್ನು ತೋಡಿಕೊಂಡಿದ್ದಾನೆ. ಆ ವಿದ್ಯಾರ್ಥಿಗಳೂ ತಾವು ವೈದ್ಯರು (Doctors) ಆಗೇ ಬಿಟ್ಟೆವೇನೋ ಎನ್ನುವಂತೆ ನಾವೇ ಆಪರೇಷನ್ (Operation) ಮಾಡಿ, ನಿನ್ನನ್ನು ಹೆಣ್ಣಾಗಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಮುಂದೆ ಆಗಿದ್ದು ಮಾತ್ರ ಭಾರೀ ದುರಂತ. ಇದೀಗ ಆತ ಪ್ರಾಣ ಬಿಟ್ಟಿದ್ದರೆ, ಆ ಭಾವಿ ವೈದ್ಯರಿಬ್ಬರು ಇಂಜೆಕ್ಷನ್ (Injection), ಮಾತ್ರೆ (Tablet) ಹಿಡಿಯೋ ಬದಲು ಜೈಲಿನ (Jail) ಕಂಬಿ ಎಣಿಸುತ್ತಿದ್ದಾರೆ.

 ಹೆಂಡತಿ ತವರಿಗೆ ಹೋದ ಬಳಿಕ ಜೀವನದಲ್ಲಿ ಜಿಗುಪ್ಸೆ

ಆತನ ಹೆಸರು ಶ್ರೀಕಾಂತ್. 28 ವರ್ಷದ ಶ್ರೀಕಾಂತ್ ಆಂಧ್ರ ಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯವರು. ಈತ ಹೈದರಾಬಾದ್‌ನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಈತನಿಗೆ ಮದುವೆಯಾಗಿದ್ದು, ಇತ್ತೀಚಿಗಷ್ಟೇ ಹೆಂಡತಿ ಆತನನ್ನು ತೊರೆದು, ತವರು ಮನೆ ಸೇರಿದ್ದಳು. ಹೀಗಾಗಿ ಆತನಿಗೆ ಜೀವನದಲ್ಲಿ ಜಿಗುಪ್ಸೆ ಬಂದಂತಾಗಿತ್ತು.

 ಗಂಡಾಗಿದ್ದವನಿಗೆ ಹೆಣ್ಣಾಗಿ ಬದುಕೋ ಆಸೆ!

ಹೆಂಡತಿ ತೊರೆದು ಹೋದ ಬಳಿಕ ಶ್ರೀಕಾಂತ್‌ಗೆ ಜೀವನವೇ ಬೇಡ ಅನಿಸಿದೆ. ಬಳಿಕ ಗಂಡಾಗಿದ್ದು ಸಾಕು, ಮುಂದೆ ಹೆಣ್ಣಿನ ತರ ಜೀವನ ನಡೆಸಬೇಕು ಎನಿಲಿದೆ. ಅದಕ್ಕಾಗಿ ಆತ ಲಿಂಗ ಪರಿವರ್ತನೆ ಮಾಡಿಕೊಂಡು, ಸಂಪೂರ್ಣವಾಗಿ ಹೆಣ್ಣಿನಂತೇ ಆಗಿ, ಜೀವನ ನಡೆಸಲು ನಿರ್ಧರಿಸಿದ್ದಾನೆ.

ಇದನ್ನೂ ಓದಿ: Shocking News: 16 ವರ್ಷದ ಮಗಳ ಮೇಲೆ ರೇಪ್ ಮಾಡು ಎಂದ ಅಮ್ಮ! ಪಾಪಿ ತಾಯಿಗೆ ಈಗ ಏನಾಯ್ತು ಗೊತ್ತಾ? 

ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸ್ನೇಹ

ಈ ಶ್ರೀಕಾಂತ್‌ಗೆ  ಮಸ್ತಾನ್ ಮತ್ತು ಜೀವ ಎಂಬ ಬಿ ಫಾರ್ಮಾ ವಿದ್ಯಾರ್ಥಿಗಳ ಪರಿಚಯವಾಗಿದೆ. ಅವರಲ್ಲಿ ಆತ ತನ್ನ ಮನಸ್ಸಿನ ಭಾವನೆ ಹೇಳಿಕೊಂಡಿದ್ದಾನೆ. ಅವರು ಮುಂಬೈಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಅಲ್ಲಿ ಲಿಂಗ ಪರಿವರ್ತನೆ ಆಪರೇಷನ್‌ಗೆ ಹೆಚ್ಚಿನ ಹಣ ಖರ್ಚಾಗುತ್ತದೆ ಅಂತ ಹೇಳಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಅನುಕೂಲವಿಲ್ಲದ ಶ್ರೀಕಾಂತ್ ಬೇರೆ ಉಪಾಯ ಹೇಳುವಂತೆ ವಿದ್ಯಾರ್ಥಿಗಳನ್ನು ಕೇಳಿದ್ದಾನೆ.

"ನಾವೇ ಆಪರೇಷನ್ ಮಾಡ್ತೀವಿ" ಎಂದ ವಿದ್ಯಾರ್ಥಿಗಳು

ನನ್ನ ಬಳಿ ಸಾಕಷ್ಟು ಹಣ ಇಲ್ಲ ಅಂತ ಶ್ರೀಕಾಂತ್ ಹೇಳಿದಾಗ ಕಡಿಮೆ ಖರ್ಚಿನಲ್ಲಿ ನಾವೇ ಆಪರೇಷನ್ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಶ್ರೀಕಾಂತ್ ಒಪ್ಪಿಕೊಂಡಿದ್ದಾನೆ. ಮೂವರೂ ಒಂದು ಲಾಡ್ಜ್ ಬುಕ್ ಮಾಡಿ, ಅಲ್ಲಿ ಉಳಿದು ಕೊಂಡಿದ್ದಾರೆ.

ಯೂಟ್ಯೂಬ್ ವಿಡಿಯೋ ನೋಡಿಕೊಂಡು ಆಪರೇಷನ್

ಈ ಬಿ ಫಾರ್ಮಾ ವಿದ್ಯಾರ್ಥಿಗಳಾದ ಮಸ್ತಾನ್ ಹಾಗೂ ಜೀವಾ ಶ್ರೀಕಾಂತ್ ಲಿಂಗ ಪರಿವರ್ತನೆ ಆಪರೇಷನ್ ಮಾಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಯೂ ಟ್ಯೂಬ್ ವಿಡಿಯೋ ನೋಡಿಕೊಂಡು ರೆಡಿಯಾಗಿದ್ದಾರೆ. ಆತನಿಗೆ ಅರವಳಿಕೆ ಔಷಧಿ ನೀಡಿ, ಆಪರೇಷನ್ ಶುರು ಮಾಡಿದ್ದಾರೆ.

ತೀವ್ರ ರಕ್ತ ಸ್ರಾವವಾಗಿ ಮೃತಪಟ್ಟ ಶ್ರೀಕಾಂತ್

ವಿದ್ಯಾರ್ಥಿಗಳು ಆಪರೇಷನ್ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಯಡವಟ್ಟು ಮಾಡಿದ್ದಾರೆ. ಹೀಗಾಗಿ ಶ್ರೀಕಾಂತ್‌ಗೆ ತೀವ್ರ ರಕ್ತ ಸ್ರಾವವಾಗಿದೆ. ಅಷ್ಟರಲ್ಲಿ ಶ್ರೀಕಾಂತ್ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Murder: ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ! ಪೀಸ್ ಎಸೆದು ಬಂದಿದ್ದು ಆಕೆಯ ಪ್ರಿಯಕರ!

ಪೊಲೀಸರಿಂದ ವಿದ್ಯಾರ್ಥಿಗಳ ಬಂಧನ

ಲಾಡ್ಜ್‌ ಸಿಬ್ದಂದಿ ಕೋಣೆಯೊಳಗೆ ಬಂದು ನೋಡಿದಾಗ ಇಲ್ಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಇದೀಗ ದೂರು ದಾಖಲಿಸಿಕೊಂಡ ಪೊಲೀಸರು, ಆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
Published by:Annappa Achari
First published: