ದೆಹಲಿ: ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಸದ್ಯ ಉಕ್ರೇನ್ ದೇಶವನ್ನು ರಷ್ಯಾ ಸೇನಾಪಡೆ (Military Force) ಅಕ್ಷರಶಃ ಬಗ್ಗು ಬಡಿಯುತ್ತಿದೆ. ಅಲ್ಲಿನ ನಾಗರಿಕರಲ್ಲದೇ (Citizens), ವಿದೇಶಿಗರೂ (Foreigners) ಸಹ ಉಕ್ರೇನ್ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಪೈಕಿ ಅನೇಕ ಭಾರತೀಯರೂ (Indians) ಅಲ್ಲಿ ಸಿಲುಕಿಕೊಂಡಿದ್ದರು. ಇದೀಗ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ಏರ್ಲಿಫ್ಟ್ (Air Lift) ಮಾಡುವ ಪ್ರಕ್ರಿಯೆ ಮುಂದುವರೆದಿದ್ದು, ನಿನ್ನೆ ಉಕ್ರೇನ್ನಿಂದ ಭಾರತಕ್ಕೆ 2ನೇ ವಿಮಾನ ಆಗಮಿಸಿತ್ತು. ಇದರಲ್ಲಿ ಸುಮಾರು 250 ವಿದ್ಯಾರ್ಥಿಗಳು (Students) ಇದ್ದರು. ಈ ಪೈಕಿ ಕರ್ನಾಟಕದ (Karnataka) 13 ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಸದ್ಯ ಅವರಿಗೆ ದೆಹಲಿಯ (Delhi) ಕರ್ನಾಟಕ ಭವನದಲ್ಲಿ (Karnataka Bhavan) ಆಶ್ರಯ ನೀಡಲಾಗಿದ್ದು, ಇದೀಗ ಬೆಂಗಳೂರಿಗೆ (Bengaluru) ವಾಪಸ್ ಆಗಲಿದ್ದಾರೆ. ಈ ನಡುವೆಯೂ ಕನ್ನಡಿಗರು ಸೇರಿದಂತೆ ಅನೇಕರು ಇನ್ನೂ ಉಕ್ರೇನ್ನಲ್ಲೇ ಸಿಲುಕಿದ್ದು, ನಮ್ಮನ್ನು ಯಾರು ಕೇಳುತ್ತಿಲ್ಲ ಅಂತ ಆತಂಕ ತೋಡಿಕೊಳ್ಳುತ್ತಿದ್ದಾರೆ.
ನಿನ್ನೆ ರಾತ್ರಿ ಆಗಮಿಸಿದ ವಿಶೇಷ ವಿಮಾನ
ಉಕ್ರೇನ್ನಿಂದ ಭಾರತೀಯರನ್ನು ಏರ್ಲಿಫ್ಟ್ ಮಾಡಿಕೊಂಡು ಬಂದ ವಿಶೇಷ ವಿಮಾನ ನಿನ್ನೆ ರಾತ್ರಿ ದೆಹಲಿ ಏರ್ಪೋರ್ಟ್ಗೆ ಬಂದಿಳಿಯಿತು. ರುಮೇನಿಯಾದಿಂದ ಸುಮಾರು 250 ಮಂದಿ ಭಾರತೀಯರನ್ನು ಏರ್ಲಿಫ್ಟ್ ಮಾಡಲಾಗಿತ್ತು.
ಬಾವುಟ ಹಿಡಿದು ಬಂದ ವಿದ್ಯಾರ್ಥಿಗಳು
ಉಕ್ರೇನ್ನಿಂದ ಭಾರತೀಯರನ್ನು ಹೊತ್ತಿದ್ದ ಬಸ್, ರುಮೇನಿಯಾವರೆಗೂ ಬಂದಿತ್ತು. ಅಲ್ಲಿಂದ ಅವರನ್ನು ದೆಹಲಿಗೆ ಏರ್ಲಿಫ್ಟ್ ಮಾಡಲಾಯಿತು. ಈ ವೇಳೆ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಿಡಿದು ಬಂದಿದ್ದು ವಿಶೇಷವಾಗಿತ್ತು. ಮುಖದಲ್ಲಿ ಆತಂಕ ಹೊತ್ತ ವಿದ್ಯಾರ್ಥಿಗಳು, ತಮ್ಮ ತಮ್ಮ ಬ್ಯಾಗ್ಗಳೊಂದಿಗೆ ಉಕ್ರೇನ್ಗೆ ವಿದಾಯ ಹೇಳಿದರು.
ಇದನ್ನೂ ಓದಿ: Explained: ಉಕ್ರೇನ್ ದೇಶ ಹುಟ್ಟಿದ್ದು ಹೇಗೆ? Russiaಗೇಕೆ ಇದರ ಮೇಲೆ ಅಷ್ಟೊಂದು ಆಸಕ್ತಿ?
ಕೇಂದ್ರ ಸಚಿವ ಪಿಯೂಷ್ ಗೋಯಲ್ರಿಂದ ಸ್ವಾಗತ
ದೆಹಲಿಗೆ ವಿಮಾನ ಬರುತ್ತಿದ್ದಂತೆ ಖುದ್ಧು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೇ ಸ್ವಾಗತ ಕೋರಲು ಬಂದಿದ್ದರು. ಎಲ್ಲಾ ವಿದ್ಯಾರ್ಥಿಗಳನ್ನು ಮಾತನಾಡಿಸಿ, ಸ್ವಾಗತ ಕೋರಿದರು. ಭಾರತ ಸರ್ಕಾರದ ಸಹಾಯಕ್ಕೆ ವಿದ್ಯಾರ್ಥಿಗಳೆಲ್ಲ ಧನ್ಯವಾದ ಅರ್ಪಿಸಿದ್ರು. ಇನ್ನು ಮಕ್ಕಳನ್ನು ಕಂಡ ಪೋಷಕರು ಆನಂದ ಭಾಷ್ಪ ಸುರಿಸಿದ್ರು.
ವಿಡಿಯೋ ನೋಡಿ:
13 ಮಂದಿ ಕನ್ನಡಿಗರ ಆಗಮನ
ಇನ್ನು ಈ ಪೈಕಿ 13 ಮಂದಿ ಕನ್ನಡಿಗ ವಿದ್ಯಾರ್ಥಿಗಳೂ ಇದ್ದರು. ಅವರೆಲ್ಲರಿಗೂ ದೆಹಲಿಯ ಕರ್ನಾಟಕ ಭವನದಲ್ಲಿ ಆಶ್ರಯ ನೀಡಲಾಯ್ತು. ಕರ್ನಾಟಕ ಸರ್ಕಾರದ ವತಿಯಿಂದ ಊಟ, ವಸತಿ ವ್ಯವಸ್ಥೆ ಮಾಡಲಾಯ್ತು.
ಉಕ್ರೇನ್ನಲ್ಲಿ ಸಿಲುಕಿ ಇನ್ನೂ ಹಲವರ ಪರದಾಟ
ಮತ್ತೊಂದೆಡೆ ಕನ್ನಡಿಗರು ಸೇರಿದಂತೆ ಅನೇಕ ಭಾರತೀಯರು ಇನ್ನೂ ಉಕ್ರೇನ್ನಲ್ಲೇ ಸಿಲುಕಿ ಕೊಂಡಿದ್ದಾರೆ. ಉಕ್ರೇನ್ನ ಕಾರ್ಕಿವ್ ಪ್ರದೇಶದಲ್ಲಿ ಕರ್ನಾಟಕದ ವಿಧ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಉಳಿದಿರೋದಾಗಿ ವಿದ್ಯಾರ್ಥಿ ನವ್ಯಶ್ರೀ ಎಂಬಾಕೆ ಬೇಸಲ ವ್ಯಕ್ತಪಡಿಸಿದ್ದಾಳೆ.
ಸಮಸ್ಯೆ ಇಲ್ಲದ ಕಡೆಯಿಂದ ಏರ್ಲಿಫ್ಟ್ ಮಾಡಲಾಗಿದೆ. ಇಲ್ಲೇ ಹತ್ತಿರದಲ್ಲಿ ಯುದ್ಧ ನಡೆಯುತ್ತಿದ್ದು, ನಾವು ಜೀವವನ್ನು ಕೈಯಲ್ಲಿ ಹಿಡಿದು ಕುಳಿತಿದ್ದೇವೆ ಅಂತ ಕಣ್ಣೀರು ಸುರಿಸಿದ್ದಾರೆ.
ಈಗ ಊಟಕ್ಕೂ ಇಲ್ಲಿ ಸಮಸ್ಯೆಯಾಗಿದೆ
ಬೇಗ ನಮ್ಮನ್ನು ರಕ್ಷಿಸುವಂತೆ ವಿದ್ಯಾರ್ಥಿನಿ ನವ್ಯಶ್ರೀ ಮನವಿ ಮಾಡಿದ್ದಾಳೆ. ನಾವು ಸರಿಸುಮಾರು 1400 ರಿಂದ 1900 ಕಿಲೋಮೀಟರ್ ವರೆಗೂ ರಸ್ತೆಯಲ್ಲಿ ಕ್ರಮಿಸಬೇಕು. ಆದ್ರೆ ಇಲ್ಲಿಂದ ಹೋಗೋದು ಹೇಗೆ ಎಂದು ಗೊತ್ತಿಲ್ಲ. ಭಾರತೀಯ ಎಂಬಸಿಗಳಿಂದ ಸೂಕ್ತ ಮಾಹಿತಿ ಸಿಗುತ್ತಿಲ್ಲ ಎಂದಿದ್ದಾಳೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ Ukraine ಅಧ್ಯಕ್ಷ.. ಭಾರತ ಸಹಾಯ ಮಾಡಿದರೆ Russia ಸುಮ್ಮನೆ ಇರುತ್ತಾ?
ಮೊದಲ ದಿನ ಊಟದ ಸಮಸ್ಯೆ ಇರಲಿಲ್ಲ, ಆದ್ರೆ ಇಲ್ಲಿಗೆ ಮೂರು ದಿನ ಆಯ್ತು, ಸೂಪರ್ ಮಾರ್ಕೆಟ್ಗಳಲ್ಲಿ ಏನು ಸಿಗುತ್ತಿಲ್ಲ,. ಏನು ಮಾಡೋದು ತಿಳಿಯುತ್ತಿಲ್ಲ ಅಂತ ಅಸಹಾಯಕತೆ ತೋಡಿಕೊಂಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ