ಗರ್ಲ್​ಫ್ರೆಂಡ್​ನಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಒತ್ತಾಯಿಸಿದ ಟೀಚರ್​: ಕಟ್ಟಡದಿಂದ ಜಿಗಿದ ಹುಡುಗ!


Updated:August 29, 2018, 2:05 PM IST
ಗರ್ಲ್​ಫ್ರೆಂಡ್​ನಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಒತ್ತಾಯಿಸಿದ ಟೀಚರ್​: ಕಟ್ಟಡದಿಂದ ಜಿಗಿದ ಹುಡುಗ!

Updated: August 29, 2018, 2:05 PM IST
ನ್ಯೂಸ್​ 18 ಕನ್ನಡ

ತ್ರಿಪುರಾ(ಆ.29): ಅಗರ್​ತಲಾದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯು ಗರ್ಲ್​ಫ್ರೆಂಡ್​ನಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಒತ್ತಾಯ ಮಾಡಿದರೆಂಬ ಕಾರಣಕ್ಕಾಗಿ ಶಾಲೆಯ ಎರಡನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಹೌದು ಆ. 26ರಂದು ದೇಶದಾದ್ಯಂತ ರಾಖಿ ಹಬ್ಬವನ್ನು ಆಚರಿಸಲಾಗಿತ್ತು. ಆದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸೋಮವಾರದಂದು ಸಹಪಾಠಿಗಳ ಕೈಗೆ ರಕ್ಷಾ ಬಂಧನ ಕಟ್ಟಿದ್ದರು. ಆದರೆ ಅಗರ್​ತಲಾದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯ ಬಳಿ ಸಹಪಾಠಿಯಿಂದ ರಾಖಿ ಕಟ್ಟಿಸಿಕೊಳ್ಳುವಂತೆ ಒತ್ತಾಯ ಹೇರಿದ್ದು, ಇದರಿಂದ ಬೇಸತ್ತ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು "ಈ ಘಟನೆಯು ಖಾಸಗಿ ಶಾಲೆಯೊಂದರಲ್ಲಿ ನಡೆಸಿದ್ದು, ಸೋಮವಾರದಂದು ಅಲ್ಲಿನ ಪ್ರಾಂಶುಪಾಲರು ಹಾಗೂ ಇತರ ಶಿಕ್ಷಕರು ವಿದ್ಯಾರ್ಥಿ ಹಾಗೂ ಆತನ ಗರ್ಲ್​ಫ್ರೆಂಡ್​ನ್ನು ಕರೆಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಹೆತ್ತವರನ್ನೂ ಕರೆಸಿದ್ದಾರೆ. ಬಳಿಕ ಹುಡುಗಿಗೆ ಬಾಲಕನ ಕೈಗೆ ರಾಖಿ ಕಟ್ಟುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಇಬ್ಬರೂ ರಾಖಿ ಕಟ್ಟಲು ನಿರಾಕರಿಸಿ ಅಲ್ಲಿಂದ ತೆರಳಿದ್ದಾರೆ. ಈ ಘಟನೆಯಿಂದ ಬೇಸತ್ತ ಬಾಲಕ ಶಾಲೆ ಕಟ್ಟಡದ ಎರಡನೇ ಅಂತಸ್ತಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಾಲಕನನ್ನು ಆ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಸ್ಥಿತಿ ಗಂಭೀರವಾಗಿದೆ" ಎಂದಿದ್ದಾರೆ.

ಘಟನೆಯ ಕುರಿತಾಗಿ ವಿದ್ಯಾರ್ಥಿಯ ತಂದೆ ತಾಯಿ ಸೇರಿದಂತೆ ಹಲವಾರು ಮಂದಿ ಆಕ್ರೊಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲಾ ಶಾಲೆಯ ಶಿಕ್ಷಕರೇ ಕಾರಣವೆಂದು ಆರೋಪಿಸಿದ್ದಾರೆ. ಅಲ್ಲದೇ ಶಾಲೆಯ ಶಿಕ್ಷಕರನ್ನು ಬಂಧಿಸುವಂತೆಯೂ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ