Ukraineನಲ್ಲಿ ನಾಯಿ ಬಿಟ್ಟು ಭಾರತಕ್ಕೆ ಬರಲು ಒಪ್ಪದ ವಿದ್ಯಾರ್ಥಿ! ಮೂಕಪ್ರಾಣಿ ಮೇಲೆ ಅದೆಂಥಾ ಪ್ರೀತಿ

ಉಕ್ರೇನ್‌ನಲ್ಲಿ ಜನ ಜೀವ ಉಳಿದರೆ ಸಾಕು ಅಂತಿದ್ದಾರೆ. ಆದರೆ ಈತ ಮಾತ್ರ "ನಾನೊಬ್ಬನೇ ಉಳಿಯೋದಲ್ಲ, ನನ್ನ ಪ್ರೀತಿಯ ನಾಯಿಯೂ ಉಳಿಯಬೇಕು" ಅಂತಿದ್ದಾನೆ. ನಾಯಿ ತರಲು ಅವಕಾಶ ಕೊಟ್ಟರೆ ಮಾತ್ರ ನಾನು ಬರ್ತೀನಿ ಅಂತ ಪಟ್ಟು ಹಿಡಿದಿದ್ದಾನೆ!

ತನ್ನ ನಾಯಿ ಜೊತೆಗೆ ವಿದ್ಯಾರ್ಥಿ

ತನ್ನ ನಾಯಿ ಜೊತೆಗೆ ವಿದ್ಯಾರ್ಥಿ

 • Share this:
  ಪ್ರಸ್ತುತ ಯುದ್ಧದ (War) ನಾಡಾಗಿರುವ ಉಕ್ರೇನ್‌ನಿಂದ (Ukraine) ಭಾರತೀಯರನ್ನು (Indians) ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳನ್ನು (Students) ವಾಪಸ್ ದೇಶಕ್ಕೆ ಕರೆತರುವ ಕಾರ್ಯಾಚರಣೆ ನಡೆಯುತ್ತಲೇ ಇದೆ. ಈ ಕಾರ್ಯಾಚಾರಣೆಗೆ ಕೇಂದ್ರ ಸರ್ಕಾರ (Central Government) ‘ಆಪರೇಶನ್ ಗಂಗಾ’ (Operation Ganga) ಎಂದು ಹೆಸರು ಇಟ್ಟಿದ್ದು, ಅದರಡಿಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಸೇರಿ ನಾಗರಿಕರನ್ನು ಮರಳಿ ಭಾರತಕ್ಕೆ ಕರೆ ತರಲಾಗುತ್ತಿದೆ. ಜೀವ ಭಯದಲ್ಲಿದ್ದ ವಿದ್ಯಾರ್ಥಿಗಳು ತಾಯ್ನಾಡಿಗೆ ಬಂದು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ತಮ್ಮ ಸಾಕು ನಾಯಿ (Dog) ಇಲ್ಲದೆ ನಾನು ಉಕ್ರೇನ್‌ನಿಂದ ಭಾರತಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.

  ಸಾಕು ನಾಯಿ ಬಿಟ್ಟು ಹೊರಡಲು ಒಪ್ಪದ ವಿದ್ಯಾರ್ಥಿ

  ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತದ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ, ತನ್ನ ಸಾಕು ನಾಯಿಯನ್ನು ಅಲ್ಲಿಯೇ ತೊರೆದು ಭಾರತಕ್ಕೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಪೂರ್ವ ಉಕ್ರೇನ್‌ನ ಖಾರ್ಕೀವ್ ರೇಡಿಯೋ ಎಲೆಕ್ಟ್ರಾನಿಕ್ಸ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ರಿಷಭ್‌ ಕೌಶಿಕ್ ಎಂಬಾತ, ತನ್ನನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡುವಾಗ ತನ್ನೊಂದಿಗೆ ನಾಯಿಯನ್ನೂ ಕರೆದುಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಿದ್ದಾನೆ.

  ನಾಯಿಯನ್ನು ಒಂಟಿಯಾಗಿ ಬಿಡುವುದಿಲ್ಲ ಎಂದ ವಿದ್ಯಾರ್ಥಿ

  ಭಾರತೀಯ ವಲಸಿಗರಿಗೆ, ವಿಶೇಷವಾಗಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕೇಂದ್ರ ಸರ್ಕಾರ ಭಾರತಕ್ಕೆ ಮರಳಿ ಕರೆಸಿಕೊಳ್ಳಲು ಇನ್ನಿಲ್ಲದ ಶತಪ್ರಯತ್ನ ನಡೆಸುತ್ತಿದೆ. ಅದರಂತೆ ಈಗಾಗ್ಲೇ ನೂರಾರು ವಿದ್ಯಾರ್ಥಿಗಳು, ವಲಸಿಗರು ತಾಯಿಯ ಮಡಿಲು ಸೇರಿದ್ದಾರೆ. ಆದರೆ ರಿಷಭ್‌ ಕೌಶಿಕ್ ಭಾರತಕ್ಕೆ ಬರುವ ಮನಸ್ಸಿದ್ದರೂ ತಾನು ಪ್ರೀತಿಯಿಂದ ಸಾಕಿದ ಮುದ್ದಿನ ನಾಯಿಯನ್ನು ಯುದ್ಧ ಪೀಡಿತ ಉಕ್ರೇನ್ ನೆಲದಲ್ಲಿ ಒಂಟಿಯಾಗಿ ಬಿಟ್ಟು ಬರಲು ಮನಸ್ಸಿಲ್ಲದೇ ತನ್ನ ಜೊತೆಗೆ ಅದನ್ನು ಭಾರತಕ್ಕೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾನೆ.

  ಇದನ್ನೂ ಓದಿ: Ukraineನಲ್ಲಿ ಪರದಾಡುತ್ತಿದ್ದಾರೆ ರಾಜ್ಯದ ವಿದ್ಯಾರ್ಥಿಗಳು! "Please Help Me..." ಅಂದ್ರೆ ಕೇಳೋರಾರು?

  ಅಧಿಕಾರಿಗಳಿಗೆ ದಾಖಲೆ ಸಲ್ಲಿಸಿರುವ ರಿಷಭ್

  ರಿಷಭ್‌ ಕೌಶಿಕ್, ತನ್ನೊಂದಿಗೆ ನಾಯಿಯನ್ನೂ ಭಾರತಕ್ಕೆ ಕರೆದುಕೊಂಡು ಹೋಗಲು ಅನುಮತಿ ಪಡೆಯಲು ಎಲ್ಲ ದಾಖಲೆ ಸಲ್ಲಿಕೆಗೆ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾನೆ. ಆದರೆ ಅಧಿಕಾರಿಗಳು ಕೊಟ್ಟಷ್ಟೂ ದಾಖಲೆಗಳನ್ನು ಮತ್ತೆ ಮತ್ತೆ ಕೇಳುತ್ತಲೇ ಇರುವುದರಿಂದ ತನ್ನ ಪ್ರಯತ್ನ ವಿಫಲವಾಗುತ್ತಿದೆ ಎಂದು ಆರೋಪಿಸಿದ್ದಾನೆ.

  ರಾಯಭಾರ ಕಚೇರಿ ವಿರುದ್ಧ ಆಕ್ರೋಶ

  ಅಲ್ಲದೇ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಹ ಆರೋಪ ಮಾಡಿದ್ದಾನೆ. "ಅವರು ನನಗೆ ವಿಮಾನದ ಟಿಕೆಟ್ ಕೇಳುತ್ತಿದ್ದಾರೆ. ಉಕ್ರೇನ್ ವಾಯು ಪ್ರದೇಶವನ್ನೇ ಮುಚ್ಚಿರುವಾಗ ನನಗೆ ವಿಮಾನ ಟಿಕೆಟ್ ಸಿಗುವುದು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾನೆ.

  ಪೂರ್ವ ಉಕ್ರೇನ್‌ನಲ್ಲಿರುವ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿ ವಿದ್ಯಾರ್ಥಿ ರಿಷಭ್‌ ಕೌಶಿಕ್, ಕೀವ್‌ನಲ್ಲಿ ಸದ್ಯಕ್ಕೆ ಏನೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸಹ ಹೇಳಿದ್ದಾನೆ. ಸಾಮಾನ್ಯ ಆಹಾರ ಮಳಿಗೆಗಳು ಸಹ ತೆರೆದಿಲ್ಲ ಎಂದಿದ್ದಾನೆ. ಅಲ್ಲದೇ ನೀರು ಅಥವಾ ಆಹಾರವನ್ನು ಸರಬರಾಜು ಮಾಡುವ ಸೇವೆಯು ಕೂಡ ಸ್ಥಗಿತಗೊಂಡಿದೆ ಎಂದು ಉಕ್ರೇನ್‌ನ ಭೀಕರ ಸ್ಥಿತಿಯನ್ನು ವಿವರಿಸಿದ್ದಾನೆ.

  ಬೀದಿಯಿಂದ ತಂದು ಸಾಕಿದ್ದ ನಾಯಿಮರಿ

  ರಿಷಭ್‌ ಖಾರ್ಕಿವ್‌ನಲ್ಲಿ ಬೀದಿಯಲ್ಲಿದ್ಧ ಈ ಮಾಲಿಬೂ ನಾಯಿಮರಿಯನ್ನು ರಕ್ಷಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿ ಪಾಲನೆ ಮಾಡುತ್ತಿದ್ದನು. ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿಯ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ರಿಷಭ್‌ ಕೌಶಿಕ್ ಅವರು ಫೆಬ್ರವರಿ 18 ರಿಂದ ತನ್ನ ನಾಯಿಯನ್ನು ಭಾರತಕ್ಕೆ ಕರೆದೊಯ್ಯುವ ಸಲುವಾಗಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾನೆ. ಮತ್ತು ದಿಲ್ಲಿಯಲ್ಲಿರುವ ಭಾರತ ಸರ್ಕಾರದ ಎನಿಮಲ್ ಕ್ವಾರೆಂಟೈನ್ ಆಂಡ್ ಸರ್ಟಿಫಿಕೇಷನ್ ಸರ್ವೀಸ್ (AQCS) ಹಾಗೂ ಉಕ್ರೇನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರೂ ಸಹ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾನೆ.

  ಇದನ್ನೂ ಓದಿ: Russia ಆಯ್ತು, ಈಗ ದಾಳಿಗೆ ಸಜ್ಜಾದ ಚೀನಾ! ಏನು ಮಾಡೋದಕ್ಕೆ ಹೊರಟಿದೆ ಡ್ರ್ಯಾಗನ್ ರಾಷ್ಟ್ರ?

  “ಬಾಂಬ್‌ನಿಂದಾಗಿ ನಾಯಿಯೂ ಭಯಪಡುತ್ತಿದೆ”

  ನನ್ನ ವಿಮಾನವು ಫೆ. 27ರಂದು ನಿಗದಿಯಾಗಿದೆ. ಆದರೆ, ನಾನು ಇಲ್ಲಿಯೇ ಸಿಲುಕಿಕೊಂಡಿದ್ದೇನೆ. ಈ ನಾಯಿಮರಿ ಬಾಂಬ್‌ಗಳ ಸದ್ದಿಗೆ ಹೆದರಿದ್ದು, ನೋವು ಅನುಭವಿಸುತ್ತಿದೆ ಎಂದು ಹೇಳಿದ್ದಾನೆ.

  "ನಿಮ್ಮಿಂದ ಸಾಧ್ಯವಾದರೆ ದಯವಿಟ್ಟು ನನಗೆ ಸಹಾಯ ಮಾಡಿ. ಕೀವ್‌ನಲ್ಲಿರುವ ರಾಯಭಾರ ಕಚೇರಿ ಕೂಡ ನಮಗೆ ಸಹಾಯ ಮಾಡುತ್ತಿಲ್ಲ. ನಮಗೆ ಯಾರಿಂದಲೂ ಯಾವ ಮಾಹಿತಿಯೂ ಸಿಗುತ್ತಿಲ್ಲ" ಎಂದು ರಿಷಭ್‌ ಕೌಶಿಕ್ ಮನವಿ ಮಾಡಿದ್ದಾನೆ.
  Published by:Annappa Achari
  First published: