Hijab Row: ಹಿಜಾಬ್ ಧರಿಸಿ ತರಗತಿ ಒಳಗೆ ನಮಾಜ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿ.. ವಿವಾದಕ್ಕೀಡಾದ ವಿಡಿಯೋ

'ವಿದ್ಯಾರ್ಥಿನಿ ಬಹಳ ಸಮಯದಿಂದ ಹಿಜಾಬ್‌ನಲ್ಲಿ ಬರುತ್ತಿದ್ದಳು, ಆದರೆ ಅವಳು ಶುಕ್ರವಾರ ಮಧ್ಯಾಹ್ನ ತರಗತಿಯೊಳಗೆ ನಮಾಜ್ ಮಾಡಿದ್ದಾಳೆ. ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿ ಮಾಡುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಈ ಬಗ್ಗೆ  ಉಪ ಕುಲಪತಿ ಮತ್ತು ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಲಾಗಿದೆ. '

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭೋಪಾಲ್: ಮಧ್ಯಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ (Madya Pradesh University) ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿ (hijab) ನಮಾಜ್ (Namaz) ಮಾಡುತ್ತಿರುವ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಕೇಂದ್ರೀಯ ಸಂಸ್ಥೆಯಾದ ಡಾ ಹರಿಸಿಂಗ್ ಗೌರ್ ಸಾಗರ್ ವಿಶ್ವವಿದ್ಯಾಲಯದ ( Dr Harisingh Gour Sagar University) ತರಗತಿಯೊಳಗೆ ವಿದ್ಯಾರ್ಥಿನಿ ನಮಾಜ್ ಮಾಡುತ್ತಿದ್ದಾಳೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಿಂದೂ ಜಾಗರಣ ಮಂಚ್ ಎಂಬ ಬಲಪಂಥೀಯ ಗುಂಪು ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಆಡಳಿತಕ್ಕೆ ದೂರು ನೀಡಿದೆ. ತನಿಖೆಗೆ ಆದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ವಿವಾದಕ್ಕೆ ಕಾರಣವಾದ ನಮಾಜ್​ ವಿಡಿಯೋ

ಹಿಜಾಬ್​ ಧರಿಸಿ ನಮಾಜ್​ ಮಾಡಿರುವದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಧಾರ್ಮಿಕ ಪೂಜೆಗಳನ್ನು ಇರಿಸಿಕೊಳ್ಳಬೇಕು. ವಿಶ್ವವಿದ್ಯಾಲಯ ಇರುವುದು ಅಧ್ಯಯನಕ್ಕಾಗಿ ಎಂದು ಉಪಕುಲಪತಿ ನೀಲಿಮಾ ಗುಪ್ತಾ ಹೇಳಿಕೆ ನೀಡಿದ್ದಾರೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಸಂತೋಷ್ ಸಹಗೌರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ವಿದ್ಯಾರ್ಥಿಯು ಹಿಜಾಬ್‌ನಲ್ಲಿ ತರಗತಿಯೊಳಗೆ ನಮಾಜ್ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಕ್ಲಿಪ್‌ನೊಂದಿಗೆ ನಮಗೆ ದೂರು ಬಂದಿದೆ. ಐವರು ಸದಸ್ಯರ ಸಮಿತಿಯು ಮೂರು ದಿನಗಳಲ್ಲಿ ವರದಿ ಸಲ್ಲಿಸಲಿದ್ದು, ಇದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Delhi Budget 2022: ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ: ದೆಹಲಿ ಸರ್ಕಾರದ ಗುರಿ

ವಿಶ್ವವಿದ್ಯಾನಿಲಯವು ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಡ್ರೆಸ್ ಕೋಡ್ ನಿಯಮ ಇಲ್ಲ. ಆದರೆ ಅವರು ವಿವಾದಕ್ಕೆ ಎಡೆ ಮಾಡದಂತೆ ಸಾಮಾನ್ಯವಾದ ಧಿರಿಸನ್ನು ಧರಿಸಿ ತರಗತಿಗಳಿಗೆ ಹಾಜರಾಗಬೇಕು ಎಂದು ವಿಶ್ವವಿದ್ಯಾಲಯದ ಮಾಧ್ಯಮ ಅಧಿಕಾರಿ ವಿವೇಕ್ ಜೈಸ್ವಾಲ್ ಪಿಟಿಐಗೆ ತಿಳಿಸಿದ್ದಾರೆ.

ಹಿಂದೂ ಸಂಘಟನೆ ವಿರೋಧ

ವೀಡಿಯೊದಲ್ಲಿ ಕಂಡು ಬರುವ ವಿದ್ಯಾರ್ಥಿಯು ದೀರ್ಘಕಾಲದವರೆಗೆ ಹಿಜಾಬ್ ಧರಿಸಿ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದಾರೆ ಎಂದು ಹಿಂದೂ ಜಾಗರಣ ಮಂಚ್‌ನ ಸಾಗರ್ ಘಟಕದ ಮುಖ್ಯಸ್ಥ ಉಮೇಶ್ ಸರಾಫ್  ಆರೋಪಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ವಿದ್ಯಾರ್ಥಿನಿ ಬಹಳ ಸಮಯದಿಂದ ಹಿಜಾಬ್‌ನಲ್ಲಿ ಬರುತ್ತಿದ್ದಳು, ಆದರೆ ಅವಳು ಶುಕ್ರವಾರ ಮಧ್ಯಾಹ್ನ ತರಗತಿಯೊಳಗೆ ನಮಾಜ್ ಮಾಡಿದ್ದಾಳೆ. ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿ ಮಾಡುವುದು ಆಕ್ಷೇಪಾರ್ಹವಾಗಿದೆ. ಹೀಗಾಗಿ ಈ ಬಗ್ಗೆ  ಉಪ ಕುಲಪತಿ ಮತ್ತು ರಿಜಿಸ್ಟ್ರಾರ್‌ಗೆ ದೂರು ಸಲ್ಲಿಸಲಾಗಿದೆ ಎಂದು ಸರಾಫ್ ಹೇಳಿದರು.

ಕರ್ನಾಟಕ ಹೈ ಕೋರ್ಟ್​​ ತೀರ್ಪು

ದೂರನ್ನು ಸಲ್ಲಿಸುವಾಗ ಅವರು ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನೂ ಉಲ್ಲೇಖಿಸಿದ್ದಾರೆ. ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಗಮನಿಸಿದ ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ತರಗತಿಯೊಳಗೆ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು. 2021 ರ ಡಿಸೆಂಬರ್‌ನಲ್ಲಿ ಉಡುಪಿ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದರಿಂದ ತರಗತಿಗಳಿಗೆ ಹಾಜರಾಗದಂತೆ ತಡೆದಿದ್ದಾರೆ ಎಂದು ಆರೋಪಿಸಿದ ನಂತರ ಕರ್ನಾಟಕವು ತಿಂಗಳುಗಳಿಂದ ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ಪ್ರತಿಭಟನೆಗೆ ಸಾಕ್ಷಿಯಾಗಿದೆ.

ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್‌ನ ತೀರ್ಪು ನೀಡಿದೆ.  ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದ ಕರ್ನಾಟಕ ಹೈಕೋರ್ಟ್, ತರಗತಿಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದೆ ಎಂದು ಹೇಳಿತ್ತು.  ವಿದ್ಯಾರ್ಥಿನಿಯೊಬ್ಬರು ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
Published by:Kavya V
First published: