ಆನ್​ಲೈನ್ ಕ್ಲಾಸ್​ ವೇಳೆ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿ; ಇದೇನು ದೈಹಿಕ ತರಗತಿಯೇ? ಎಂದು ಪ್ರಶ್ನಿಸಿದ ಶಿಕ್ಷಕ

ಶಿಕ್ಷಕರ ಮಾತು ಕೇಳಿದೊಡದೆ ಬೆಡ್​ ಮೇಲೆ ಇದ್ದ ವಿದ್ಯಾರ್ಥಿ ಬಟ್ಟೆಯನ್ನು ಹುಡುಕಿಕೊಂಡು ಕ್ಯಾಮೆರಾ ಬಳಿ ಬಂದು ಆಫ್​ ಮಾಡುತ್ತಾನೆ.  ನಂತರ ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೊನಾದಿಂದಾಗಿ ಶಾಲೆ ತೆರೆಯದೆ ಆನ್​ಲೈನ್​ ಕ್ಲಾಸ್​ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತರಗತಿಯಲ್ಲಿ ಕೂತು ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡು ಪಾಠ ಕೇಳುವಂತಾಗಿದೆ. ಹಾಗಿದ್ದರು, ಮನೆಯಲ್ಲಿ ಸರಿಯಾಗಿ, ಶಿಸ್ತು ಬದ್ಧವಾಗಿ ಪಾಠ ಕೇಳಿದರೆ ಸರಿ. ಆದರೆ ಕೆಲವರು ಬೆಡ್​ ರೂಂನಲ್ಲಿ ಮಲಗಿಕೊಂಡು, ಆಹಾರ ತಿನ್ನುತ್ತಾ ಅಥವಾ ಮ್ಯೂಟ್​ ಮಾಡಿ ಶಿಕ್ಷಕರ ಕೈಗೆ ಸಿಕ್ಕಿ ಬಿದ್ದ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಅದರಂತೆ ಇದೀಗ ವಿದ್ಯಾರ್ಥಿಯೊಬ್ಬ ಆನ್​ಲೈನ್​ ತರಗತಿಯ ವೇಳೆ ತನ್ನ ಸಂಗಾತಿಯೊಂದಿಗೆ ಸೆಕ್ಸ್​ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಸದ್ಯ ವಿದ್ಯಾರ್ಥಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  ವಿಯೆಟ್ನಾಂನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಪಾಠ ಹೇಳಿಕೊಟ್ಟರೆ ಇತ್ತ ವಿದ್ಯಾರ್ಥಿ ತನ್ನ ಸಂಗಾತಿ ಜತೆಗೆ ಸೆಕ್ಸ್​​ ಮಾಡುವುದರಲ್ಲಿ ತೊಡಗಿಕೊಂಡಿದ್ದನು. ಪ್ರಾರಂಭದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿ ಈ ರೀತಿ ಮಾಡುತ್ತಿದ್ದಾನೆ ಎಂಬುದು ಗೊತ್ತಾಗಿರಲಿಲ್ಲ. ಇನ್ನು ವಿದ್ಯಾರ್ಥಿಗೆ ಕೂಡ ಕ್ಯಾಮೆರಾ ಆನ್​ ಇದೆ ಎಂಬ ವಿಚಾರ ತಿಳಿದಿರಲಿಲ್ಲ.  ಸ್ವಲ್ಪ ಹೊತ್ತಿನ ಬಳಿಕ ವಿದ್ಯಾರ್ಥಿಯ ಈ ನಡತೆಯು ದೃಶ್ಯ ರೂಪದಲ್ಲಿ ಅಧ್ಯಾಪಕರ ಕಣ್ಣಿಗೆ ಬಿದ್ದಿದೆ.

  ವಿದ್ಯಾರ್ಥಿ ಸೆಕ್ಸ್​ ಮಾಡುತ್ತಿರುವುದನ್ನು ಕಂಡ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ‘ ನೀವು ಏನು ಮಾಡುತ್ತಿದ್ದೀರಿ? ಇದೇನು ದೈಹಿಕ ತರಗತಿಯೇ?, ಇಂತಹದ್ದನ್ನು ಹೊರಗೆ ಇಟ್ಟುಕೊಂಡಿರಿ. ಈಗ ನಾವು ಆನ್​ಲೈನ್​ ತರಗತಿಯಲ್ಲಿ ಇದ್ದೇವೆ’ ಎಂದು ಹೇಳಿದ್ದಾರೆ.

  ಶಿಕ್ಷಕರ ಮಾತು ಕೇಳಿದೊಡದೆ ಬೆಡ್​ ಮೇಲೆ ಇದ್ದ ವಿದ್ಯಾರ್ಥಿ ಬಟ್ಟೆಯನ್ನು ಹುಡುಕಿಕೊಂಡು ಕ್ಯಾಮೆರಾ ಬಳಿ ಬಂದು ಆಫ್​ ಮಾಡುತ್ತಾನೆ.  ನಂತರ ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ.  ಆನ್​ಲೈನ್​ ತರಗತಿ ಅಥವಾ ಮೀಟಿಂಗ್​ ವೇಳೆ ಇಂತಹ ಹಲವಾರು ಘಟನೆಗಳು ಬೆಳಕಿಗೆ ಬಂದಿದೆ. ಭಾರತದಲ್ಲೂ ಇಂತಹ ಪ್ರಕರಣಗಳು ವರದಿಯಾಧ ಹಲವು ಉದಾಹರಣೆಗಳಿವೆ.
  First published: