ಹಾಲ್​ಟಿಕೆಟ್​ನಲ್ಲಿ ವಿದ್ಯಾರ್ಥಿಯ ಭಾವಚಿತ್ರದ ಬದಲಿಗೆ ಅಮಿತಾಭ್ ಬಚ್ಚನ್ ಫೋಟೋ!

news18
Updated:September 5, 2018, 9:39 AM IST
ಹಾಲ್​ಟಿಕೆಟ್​ನಲ್ಲಿ ವಿದ್ಯಾರ್ಥಿಯ ಭಾವಚಿತ್ರದ ಬದಲಿಗೆ ಅಮಿತಾಭ್ ಬಚ್ಚನ್ ಫೋಟೋ!
news18
Updated: September 5, 2018, 9:39 AM IST
ನ್ಯೂಸ್ 18 ಕನ್ನಡ

ಗೋಂಡಾ (ಉತ್ತರಪ್ರದೇಶ) ಸೆ.5 : ಈ ಹಿಂದೆ ಮತದಾರರ ಗುರುತಿನ ಚೀಟಿಯಲ್ಲಿ ಮತದಾರರ ಹೆಸರಿನ ಮುಂದೆ ಸನ್ನಿ ಲಿಯೋನ್, ಆನೆ, ಕರಡಿ ಜಿಂಕೆ ಫೋಟೋ ಪ್ರಕಟಗೊಂಡಿದ್ದ ಉತ್ತರಪ್ರದೇಶದಲ್ಲಿ ಇದೀಗ ಮತ್ತೆ ಅಂತಹದ್ದೆ ಘಟನೆ ಮರುಕಳಿಸಿದೆ.

ಆದರೆ, ಈ ಬಾರಿ ತಪ್ಪು ಮಾಡಿರುವುದು ಚುನಾವಣಾ ಆಯೋಗವಲ್ಲ ಬದಲಿಗೆ ಬಿ.ಎಡ್​ ಕಾಲೇಜು. ಹೌದು, ವಿದ್ಯಾರ್ಥಿಯೊಬ್ಬನ ಹಾಲ್​ಟಿಕೆಟ್​ನಲ್ಲಿ ಆತನ ಭಾವಚಿತ್ರದ ಬದಲಿಗೆ ಬಾಲಿವುಡ್​ನ ಬಿಗ್​ ಬಿ ಅಮಿತಾಭ್ ಬಚ್ಚನ್ ಅವರ ಫೋಟೋವನ್ನು ಡಾ.ರಾಮಮನೋಹರ ಲೋಹಿಯಾ ಅವಕ್ ವಿವಿ ಪ್ರಕಟಿಸಿ, ಎಡವಟ್ಟು ಮಾಡಿದೆ.

ಗೋಂಡಾ ಜಿಲ್ಲೆಯ ರವೀಂದ್ರ ಸಿಂಗ್ ಸಮರಕ್ ಮಹಾವಿದ್ಯಾಲಯದ ಬಿ.ಎಡ್​. ವಿದ್ಯಾರ್ಥಿ ಅಮಿತ್ ದ್ವಿವೇದಿಗೆ ಈ ವಿಲಕ್ಷಣ ಹಾಲ್​ಟಿಕೆಟ್ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿತ್, "ನಾನು ಪರೀಕ್ಷೆಗೆ ಸಮರ್ಪಕ ಮಾಹಿತಿಯೊಂದಿಗೆ ನನ್ನ ಭಾವಚಿತ್ರವನ್ನು ನೀಡಿದ್ದೆ. ಆದರೆ, ಇಲ್ಲಿ ನನ್ನ ಭಾವಚಿತ್ರದ ಬದಲಿಗೆ ಅಮಿತಾಭ್ ಬಚ್ಚನ್ ಫೋಟೋ ಇದೆ. ನನ್ನ ಅಂಕಪಟ್ಟೆಯಲ್ಲೂ ಅಮಿತಾಭ್ ಬಚ್ಚನ್ ಫೋಟೋ ಬಂದರೆ ಏನು ಮಾಡುವುದು ಎಂಬ ಆತಂಕ ಕಾಡುತ್ತಿದೆ," ಎಂದು ಹೇಳಿದ್ದಾರೆ.

"ಅಮಿತ್ ನಮ್ಮ ಕಾಲೇಜಿನ ಉತ್ತಮ ವಿದ್ಯಾರ್ಥಿ. ಪರೀಕ್ಷೆ ಅರ್ಜಿಯನ್ನು ಆನ್​ಲೈನ್​ನಲ್ಲಿ ವಿದ್ಯಾರ್ಥಿಗಳೇ ಸ್ವತಃ ತುಂಬಬೇಕು. ಹೀಗೆ ಅರ್ಜಿ ತುಂಬುವಾಗ ಇಂಟರ್​ನೆಟ್​ ಕೆಫೆಯಲ್ಲಿ ಅಮಿತ್​ ಫೋಟೋವನ್ನು ತಪ್ಪಾಗಿ ತುಂಬಿರುವ ಸಾಧ್ಯತೆ ಇದೆ. ನಮ್ಮ ಕಾಲೇಜಿನಿಂದ ಈ ತಪ್ಪು ಆಗಿರುವುದು ಬಹಳ ಕಡಿಮೆ. ಪರೀಕ್ಷೆ ಬರೆಯಲು ಅಮಿತ್​ಗೆ ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಪರೀಕ್ಷೆ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಂಕಪಟ್ಟಿಯಲ್ಲಿ ತಪ್ಪು ಭಾವಚಿತ್ರ ಬರದಂತೆ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ," ಎಂದು ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ