Liquor In School: ಮನೆಯಲ್ಲೇ ತಯಾರಿಸಿದ ಮದ್ಯ ಬ್ಯಾಗ್​​ನಲ್ಲಿಟ್ಟು ಶಾಲೆಗೆ ತಂದ ವಿದ್ಯಾರ್ಥಿ! ಆಮೇಲೆ ಫಜೀತಿ

Student Brought Liquor to School: ವಿದ್ಯಾರ್ಥಿಯೊಬ್ಬ ಶಾಲೆಗೆ ಮನೆಯಲ್ಲೇ ತಯಾರಿಸಿದ ಮದ್ಯ ತೆಗೆದುಕೊಂಡುಬಂದಿದ್ದ. ಆದರೆ ಆತ ಅಂದುಕೊಳ್ಳದ ಘಟನೆಯೊಂದು ನಡೆದಿತ್ತು. ಏನಾಯ್ತು? ನಂತರದ ಫಜೀತಿ ಕೇಳಬೇಕಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಿರುವನಂತಪುರಂ(ಜು.15): ದೇಶದ ವಿವಿಧ ಭಾಗಗಳಲ್ಲಿ ನಾಟಿ ಮದ್ಯ (Liquor) ಫೇಮಸ್. ಕರ್ನಾಟಕ ಕೊಡಗಿನಲ್ಲಿ (Kodagu) ಹಣ್ಣು, ಹೂವಿನ ರುಚಿಯಾದ ವೈನ್ ತಯಾರಿಸಿದ ಹಾಗೆಯೇ ಆಯಾ ಪ್ರದೇಶಗಳಲ್ಲಿ ಲಭ್ಯವಿರುವಂತಹ ಹಣ್ಣು, ತರಕಾರಿ, ಹೂಗಳನ್ನು ಬಳಸಿ ಮನೆಯಲ್ಲಿಯೇ ಮದ್ಯ (Wine) ತಯಾರಿಸುವ ಬಹಳಷ್ಟು ಮಂದಿ ಇದ್ದಾರೆ. ಕೇರಳದ ಕೆಲವು ಭಾಗಗಳಲ್ಲಿ ದೇಸಿ ಮದ್ಯ ಫೇಮಸ್. ಆದರೆ ಇದು ಅಕ್ರಮ. ಮದ್ಯವನ್ನು ತಯಾರಿಸಿ ಮಾರಾಟ ಮಾಡುವ ಹಾಗಿಲ್ಲ. ತಯಾರಿಸುವ ಹಾಗೆಯೇ ಇಲ್ಲ. ಆದರೆ ಬಹಳಷ್ಟು ಜನರು ಸ್ವಂತ ಬಳಕೆಗಾಗಿ ಮದ್ಯ ತಯಾರಿಸುತ್ತಾರೆ. ಇದೀಗ ಕೇರಳದಲ್ಲಿ ಒಂದು ಘಟನೆ ನಡೆದಿದ್ದು ಘಟನೆ ಬಗ್ಗೆ ನಗಬೇಕೋ, ಕೋಪ ಮಾಡಬೇಕೋ ಒಂದೂ ಗೊತ್ತಾಗದಂತಿದೆ. ವಿದ್ಯಾರ್ಥಿ (Student) ಸ್ಕೂಲ್​ ಬ್ಯಾಗ್​ನಲ್ಲಿ (School Bag) ಮದ್ಯದ ಬಾಟಲಿ ತೆಗೆದುಕೊಂಡು ಬಂದಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

ಮನೆಯಲ್ಲಿ ತಯಾರಿಸಿದ ಮದ್ಯ ಅತಿಯಾದ ಘಾಟು ಹಾಗೂ ಗ್ಯಾಸ್ ಹೊಂದಿರುವ ಕಾರಣ ಇದರ ಹನಿ ಸಿಕ್ಕಿದರೂ ಸಿಕ್ಕಿಬೀಳುವುದು ಭಾರೀ ಸುಲಭ. ಹಾಗಾಗಿಯೇ ರೈಡ್​ಗಳಾದಾಗ ಯಾರಿಗೂ ತಿಳಿಯದಿರಲು ಬಹಳಷ್ಟು ಕಡೆಗಳಲ್ಲಿ ಕಳ್ಳಭಟ್ಟಿ ಮಣ್ಣಿನಡಿಗೆ ಹೂತಿಡಲಾಗುತ್ತದೆ.

ತನ್ನಷ್ಟಕ್ಕೇ ಹಾರಿತು ಮದ್ಯದ ಬಾಟಲಿಯ ಮುಚ್ಚಳ

ಆದರೆ ಈ ವಿದ್ಯಾರ್ಥಿ ಬ್ಯಾಗ್​ನಲ್ಲಿ ಮದ್ಯವನ್ನಿಟ್ಟುಕೊಂಡು ಶಾಲೆಗೆ ತಂದು ಗ್ಯಾಸ್ ತುಂಬಿದಂತಾಗಿ ಬಾಟಲಿ ಮುಚ್ಚಳ ದಿಢೀರ್ ಓಪನ್ ಆಗಿ ದೂರ ಹಾರಿಹೋಗಿ ಬಿದ್ದಿದೆ. ಬಾಟಲಿಯಲ್ಲಿದ್ದ ಮದ್ಯವೂ ಚೆಲ್ಲಿದೆ. ಈ ದಿಢೀರ್ ಬೆಳವಣಿಗೆ ನೋಡಿದ ಸಹಪಾಠಿಗಳು ಬೆಚ್ಚಿ ಬಿದ್ದಿದ್ದಾರೆ.

ಘಟನೆ ನೋಡಿ ಶಿಕ್ಷಕರೇ ಶಾಕ್

ಮಕ್ಕಳೆಲ್ಲರೂ ಈ ಬಗ್ಗೆ ಶಿಕ್ಷಕರಿಗೆ ಮಾಹಿತಿ ತಲುಪಿಸಿದ್ದಾರೆ. ಮದ್ಯ ತರಗತಿಗೆ ತಂದಿದ್ದು, ಬಾಟಲಿಯ ಮುಚ್ಚಳ ಓಪನ್ ಆಗಿದ್ದು ಸೇರಿ ಇಡೀ ಘಟನೆಯನ್ನು ನೋಡಿ ಶಿಕ್ಷಕರೇ ಶಾಕ್ ಆಗಿದ್ದಾರೆ. ಸಾವರಿಸಿಕೊಂಡ ಶಿಕ್ಷಕರು ನಂತರ ವಿದ್ಯಾರ್ಥಿಯನ್ನು ವಿಚಾರಿಸಿ ಸಮಾಲೋಚನೆಗೆ ಸಿದ್ಧತೆ ಮಾಡಿದ್ದಾರೆ.
Published by:Divya D
First published: