ನವದೆಹಲಿ(ಜ.24): ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಮಂಗಳವಾರ ಮಧ್ಯಾಹ್ನ ದೆಹಲಿ-ಎನ್ಸಿಆರ್ನಲ್ಲಿ (Delhi-NCR) ಭೂಕಂಪನದ ಅನುಭವವಾಗಿದೆ. ಉತ್ತರ ಪ್ರದೇಶ, ಉತ್ತರಾಖಂಡದ ಹಲವೆಡೆ ಭೂಕಂಪನದ (Earthquake) ಅನುಭವವಾಗಿದೆ. ಉತ್ತರಾಖಂಡದ (Uttarakhand) ರಾಜಧಾನಿ ಡೆಹ್ರಾಡೂನ್, ಪಿಥೋರಗಢ್ ಮತ್ತು ಅಲ್ಮೋರಾದಲ್ಲಿಯೂ ಭೂಕಂಪನದ ಅನುಭವವಾಗಿದೆ. ಕಂಪನವು ಎಷ್ಟು ಪ್ರಬಲವಾಗಿದೆ ಎಂದರೆ ಜನರು ಅದನ್ನು ತಮ್ಮ ಮನೆ ಮತ್ತು ಕಚೇರಿಗಳಲ್ಲಿ ಅನುಭವಿಸಿದರು. ಆದರೆ, ಇದುವರೆಗೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಸುದ್ದಿ ಬಂದಿಲ್ಲ.
Strong earthquake tremors felt in Delhi pic.twitter.com/VZkRU4uyLy
— ANI (@ANI) January 24, 2023
ಇದಕ್ಕೂ ಮುನ್ನ ಜನವರಿ 5 ರಂದು ದೆಹಲಿ-ಎನ್ಸಿಆರ್ನಲ್ಲಿ ಪ್ರಬಲ ಭೂಕಂಪನ ನಡೆದಿತ್ತು. ಜಮ್ಮು-ಕಾಶ್ಮೀರದಲ್ಲೂ ಭೂಮಿ ಕಂಪಿಸಿತ್ತು. ಅಲ್ಲಿಯೂ ಜನರು ತೀವ್ರ ಭೂಕಂಪದ ಕಂಪನವನ್ನು ಅನುಭವಿಸಿದ್ದರು. ಈ ಭೂಕಂಪದ ತೀವ್ರತೆಯನ್ನು 5.9 ಎಂದು ಅಳೆಯಲಾಗಿತ್ತು. ಇದರ ಕೇಂದ್ರವು ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶವಾಗಿತ್ತು.
ಭೂಕಂಪಗಳು ಏಕೆ ಸಂಭವಿಸುತ್ತವೆ?
ಭೂಕಂಪಗಳು ಬಹುತೇಕವಾಗಿ ಭೂವೈಜ್ಞಾನಿಕ ದೋಷಗಳ (ಭೂಸ್ತರದ ಅಖಂಡತೆಗೆ ಉಂಟಾಗಿರುವ ಊನ) ಛಿದ್ರವಾಗುವಿಕೆಯಿಂದಾಗಿ ಉಂಟಾಗುತ್ತವೆಯಾದರೂ, ಜ್ವಾಲಾಮುಖಿಯ ಚಟುವಟಿಕೆ, ಭೂಕುಸಿತಗಳು, ಗಣಿಯಲ್ಲಿನ ಸ್ಫೋಟಗಳು ಹಾಗೂ ಪರಮಾಣು ಪರೀಕ್ಷಾ ಪ್ರಯೋಗಗಳಿಂದಲೂ ಅವು ಸಂಭವಿಸಲು ಸಾಧ್ಯವಿದೆ. ಭೂಕಂಪವೊಂದರ ಆರಂಭಿಕ ಛಿದ್ರವಾಗುವಿಕೆಯ ಬಿಂದುವನ್ನು ಅದರ ಕೇಂದ್ರಸ್ಥಾನ ಅಥವಾ ಅಡಿಯ ಕೇಂದ್ರ ಎಂದು ಕರೆಯಲಾಗುತ್ತದೆ. ಅಡಿಯ ಕೇಂದ್ರಕ್ಕೆ ನೇರವಾಗಿ ಮೇಲ್ಭಾಗದಲ್ಲಿರುವ, ನೆಲದ ಮಟ್ಟದಲ್ಲಿನ ಬಿಂದುವನ್ನು ಅಧಿಕೇಂದ್ರ ಎಂದು ಕರೆಯಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ