HOME » NEWS » National-international » STRONG EARTHQUAKE OFF GREEK ISLAND SHAKES GREECE AND TURKEY SNVS

ಟರ್ಕಿ ಮತ್ತು ಗ್ರೀಸ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ; ಸಣ್ಣ ಸುನಾಮಿ ಸೃಷ್ಟಿ

ಗ್ರೀಸ್ ದೇಶದ ಸ್ಯಾಮೋಸ್ ದ್ವೀಪದ ಬಳಿಯ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪನವಾಗಿದ್ದು, ಗ್ರೀಸ್ ಮತ್ತು ಟರ್ಕಿಯ ಹಲವೆಡೆ ಭೂಮಿ ನಡುಗಿ ಅನೇಕ ಕಟ್ಟಡಗಳು ಧರೆಗುರುಳಿವೆ. ಕೆಲ ಕಡೆ ಸಣ್ಣ ಸುನಾಮಿಯೂ ಉದ್ಭವಿಸಿದೆ.

news18
Updated:October 30, 2020, 8:39 PM IST
ಟರ್ಕಿ ಮತ್ತು ಗ್ರೀಸ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ; ಸಣ್ಣ ಸುನಾಮಿ ಸೃಷ್ಟಿ
ಟರ್ಕಿಯಲ್ಲಿ ಸಂಭವಿಸಿದ ಭೂಕಂಪ
  • News18
  • Last Updated: October 30, 2020, 8:39 PM IST
  • Share this:
ಟರ್ಕಿ(ಅ. 30): ಗ್ರೀಸ್ ದೇಶದಲ್ಲಿ ಪ್ರಬಲ ಭೂಕಂಪವಾಗಿದ್ದು, ಗ್ರೀಸ್ ಮತ್ತು ಟರ್ಕಿ ದೇಶಗಳಲ್ಲಿ ಹಲವು ಕಟ್ಟಡಗಳು ನೆರಕ್ಕುರುಳಿವೆ. ಕಂಪನದ ಪರಿಣಾಮವಾಗಿ ಗ್ರೀಸ್ ದೇಶಕ್ಕೆ ಸೇರಿದ ಸ್ಯಾಮೋಸ್ ದ್ವೀಪದಲ್ಲಿ ಪುಟ್ಟ ಸುನಾಮಿ ಸೃಷ್ಟಿ ಆಗಿದೆ. ಅಮೆರಿಕದ ಜಿಯೋಲಾಜಿಕಲ್ ಸರ್ವೆ ಪ್ರಕಾರ ಸ್ಯಾಮೋಸ್ ದ್ವೀಪದ ಕಾರ್ಲೋವಸಿ ಪಟ್ಟಣದಿಂದ 14 ಕಿಮೀ ದೂರದಲ್ಲಿ ರಿಕ್ಟರ್ ಮಾಪನದಲ್ಲಿ 7.0 ತೀವ್ರತೆಯ ಕಂಪನವಾಗಿದೆ. ಗ್ರೀಸ್​ನ ಭೂಕಂಪನ ಮಾಪನ ಸಂಸ್ಥೆ ಪ್ರಕಾರ ಭೂಕಂಪ 6.7 ತೀವ್ರತೆ ಹೊಂದಿದ್ದರೆ, ಟರ್ಕಿ ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 6.6 ತೀವ್ರತೆ ಇತ್ತು. ಟರ್ಕಿಯಲ್ಲಿ ನಾಲ್ವರು ಸತ್ತಿದ್ದು, 120ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಟರ್ಕಿಯ ಇಜ್ಮಿರ್ ಪ್ರಾಂತ್ಯದ ಕೆಲವೆಡೆ ಭೂಕಂಪನದಿಂದ ಕಟ್ಟಡಗಳು ಉರುಳಿದ ಬಗ್ಗೆ ಮಾಹಿತಿ ತಿಳಿದುಬಂದಿದೆ. ಟರ್ಕಿಯ ಆಂತರಿಕ ವ್ಯವಹಾರಗಳ ಸಚಿವ ಸುಲೇಮಾನ್ ಸೋಯ್ಲು ಕೂಡ ಇದನ್ನು ಖಚಿತಪಡಿಸಿದ್ದಾರೆ. ಇಜ್ಮಿರ್ ನಗರದಲ್ಲಿ ಸಣ್ಣ ಸುನಾಮಿಯಾಗಿ ನೀರು ನುಗ್ಗಿದೆ. ಬಹಳಷ್ಟು ಕಡೆ ಕಟ್ಟಡಗಳ ಅವಶೇಷಗಳಡಿ ಜನರು ಹುದುಗಿರುವ ಶಂಕೆ ಇದೆ. ಆದರೆ, ಈವರೆಗೆ ಬಂದಿರುವ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದರೆ, 120 ಮಂದಿ ಗಾಯಗೊಂಡಿದ್ದಾರೆ. ಸಾವು ನೋವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ಮೆಡಿಟೆರೇನಿಯನ್ ಹಕ್ಕುಗಳ ವಿಚಾರಕ್ಕಾಗಿ ಶತ್ರುಗಳಂತಾಗಿರುವ ಗ್ರೀಸ್ ಮತ್ತು ಟರ್ಕಿ ದೇಶಗಳು ಈ ಸಂಕಷ್ಟದ ಸ್ಥಿತಿಯಲ್ಲಿ ಪರಸ್ಪರ ಸಹಕಾರದಿಂದ ಪರಿಹಾರ ಕಾರ್ಯ ನಡೆಸುತ್ತಿರುವುದು ವಿಶೇಷ.

ಇದನ್ನೂ ಓದಿ: ಪ್ರವಾದಿಗೆ ಅವಹೇಳನ: ಫ್ರಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ - ಇಸ್ಲಾಮೀ ರಾಷ್ಟ್ರಗಳಿಗೆ ದಾರುಲ್ ಉಲೂಮ್ ಕರೆ

ಗ್ರೀಸ್ ಮತ್ತು ಟರ್ಕಿ ದೇಶಗಳು ಅತ್ಯಂತ ಅಪಾಯಕಾರಿ ಭೂಕಂಪ ವಲಯಗಳಲ್ಲಿವೆ. 1999ರಲ್ಲಿ ಟರ್ಕಿಯಲ್ಲಿ ಸಂಭವಿಸಿದ 7.4 ತೀವ್ರತೆ ಭೂಕಂಪದಿಂದ ಆ ದೇಶದಲ್ಲಿ 17 ಸಾವಿರ ಜನರು ಮೃತಪಟ್ಟಿದ್ದರು. ಗ್ರೀಸ್​ನಲ್ಲಿ ಸ್ಯಾಮೋಸ್ ದ್ವೀಪದ ಬಳಿಯೇ 2017ರಲ್ಲಿ ಸಂಭವಿಸಿದ ಭೂಕಂಪದಿಂದ ಇಬ್ಬರು ಅಸುನೀಗಿದ್ದರು.
Published by: Vijayasarthy SN
First published: October 30, 2020, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories