HOME » NEWS » National-international » STRONG EARTHQUAKE IN TAJIKISTAN CAUSES TREMORS IN MANY PARTS OF NORTH INDIA SNVS

Earthquake - ತಜಿಕಿಸ್ತಾನ್​ನಲ್ಲಿ ಭಾರೀ ಭೂಕಂಪ; ದೆಹಲಿ ಮತ್ತಿತರರೆಡೆಯೂ ಕಂಪಿಸಿದ ಭೂಮಿ

ತಜಿಕಿಸ್ತಾನ ಮತ್ತು ಚೀನಾ ಕ್ಸಿನ್​ಜಿಯಾಂಗ್ ಗಡಿಭಾಗದ ಪ್ರದೇಶವೊಂದರಲ್ಲಿ ಶುಕ್ರವಾರ ರಾತ್ರಿ 10:31ಕ್ಕೆ 6.3 ತೀವ್ರತೆಯ ಪ್ರಬಲ ಭೂಕಂಪವಾಗಿದೆ. ದೆಹಲಿ, ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮೊದಲಾದ ಕಡೆಯೂ ಭೂಮಿ ಕಂಪಿಸಿದೆ.

news18
Updated:February 13, 2021, 7:11 AM IST
Earthquake - ತಜಿಕಿಸ್ತಾನ್​ನಲ್ಲಿ ಭಾರೀ ಭೂಕಂಪ; ದೆಹಲಿ ಮತ್ತಿತರರೆಡೆಯೂ ಕಂಪಿಸಿದ ಭೂಮಿ
ಸಾಂದರ್ಭಿಕ ಚಿತ್ರ
  • News18
  • Last Updated: February 13, 2021, 7:11 AM IST
  • Share this:
ನವದೆಹಲಿ(ಫೆ. 13): ಮಧ್ಯ ಏಷ್ಯಾ ಭಾಗದಲ್ಲಿರುವ ತಜಿಕಿಸ್ತಾನ್ ದೇಶದಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಪಾಕಿಸ್ತಾನದಲ್ಲೂ ಪ್ರಬಲ ಭೂಕಂಪವಾಗಿದೆ. ತತ್​​ಪರಿಣಾಮವಾಗಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಭೂಮಿ ಪ್ರಬಲವಾಗಿ ನಡುಗಿದ ಅನುಭವವಾಗಿದೆ. ನಿನ್ನೆ ರಾತ್ರಿ 10:31ಕ್ಕೆ ಸಂಭವಿಸಿದ ಭೂಕಂಪದ ಕೇಂದ್ರ ಬಿಂದು ತಜಿಕಿಸ್ತಾನ ಮತ್ತು ಚೀನಾದ ಗಡಿಭಾಗದ ಪ್ರದೇಶದಲ್ಲಿದ್ದು, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ. ಭೂಮಿಯಿಂದ 86 ಕಿಮೀ ಆಳದಲ್ಲಿ ಭೂಕಂಪ ಆಗಿರುವುದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯಲ್ಲಿದ್ದುದು ದಾಖಲಾಗಿದೆ ಎಂಬ ವರದಿಗಳೂ ಬಂದಿವೆ.

ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಶ್ರೀನಗರ, ದೆಹಲಿಯಲ್ಲಿ ಹಲವು ಕ್ಷಣಗಳವರೆಗೆ ಭೂಮಿ ಕಂಪಿಸಿದೆ. ಉತ್ತರಾಖಂಡ್, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ಹಲವೆಡೆ ಭೂಮಿ ನಡುಗಿರುವುದು ತಿಳಿದುಬಂದಿದೆ. ಅದೃಷ್ಟವಶಾತ್, ಎಲ್ಲಿಯೂ ಆಸ್ತಿಪಾಸ್ತಿ, ಪ್ರಾಣ ನಷ್ಟ ಆಗಿರುವ ಬಗ್ಗೆ ವರದಿಯಾಗಿಲ್ಲ. ಭೂಕಂಪನದಿಂದ ಕಟ್ಟಡಗಳು ನಡುಗಿದ್ದು, ಮನೆಯೊಳಗಿನ ವಸ್ತುಗಳು ಅಲುಗಾಡಿದ ದೃಶ್ಯಗಳಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ನಿನ್ನೆ ರಾತ್ರಿಯೇ ಟ್ರೆಂಡ್ ಆದವು. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜನರು ಭೀತಿಯಿಂದ ಮನೆಯಿಂದ ಹೊರಗೋಡಿ ಬರುತ್ತಿದ್ದ ವಿಡಿಯೋಗಳು ಕಾಣಸಿಕ್ಕವು.

ಇದನ್ನೂ ಓದಿ: Vizag Accident: 100 ಅಡಿ ಕಂದಕಕ್ಕೆ ಉರುಳಿದ ಬಸ್​; 8 ಮಂದಿ ಸಾವು

ಆರಂಭದಲ್ಲಿ ಬಂದ ವರದಿಗಳು ಪಂಜಾಬ್​ನ ಅಮೃತಸರದ ಬಳಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಹೇಳಿದ್ದವು. ಆದರೆ, ಅದು ನಿಜ ಅಲ್ಲ ಎಂಬುದು ನಂತರ ತಿಳಿದುಬಂದಿತು. ಪಾಕಿಸ್ತಾನದ ಖೈಬರ್-ಪಖ್ತುಂಖ್ವ ಮತ್ತು ಪಂಜಾಬ್ ಪ್ರಾಂತ್ಯಗಳಲ್ಲೂ ಪ್ರಬಲ ಕಂಪನಗಳಾಗಿವೆ.
Published by: Vijayasarthy SN
First published: February 13, 2021, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories