ಪಾನಿಪೂರಿ ತಯಾರಿಸಲು ಶೌಚಾಲಯದ ನೀರು ಬಳಕೆ; ರೆಡ್​ಹ್ಯಾಂಡ್​ ಆಗಿ ಸಿಕ್ಕ ವ್ಯಾಪಾರಿ; ಅಂಗಡಿ ಧ್ವಂಸ

ಪಾನಿಪೂರಿ ಪ್ರಿಯರಿಗೆ ಸಾಕಷ್ಟು ಇಷ್ಟವಾಗಿದ್ದ ಈ ಅಂಗಡಿ ಸದಾ ಗ್ರಾಹಕರಿಂದ ಗಿಜಿಗೂಡುತ್ತಿತ್ತು. ಈತ ಪಾನಿಪೂರಿ ಮಾಡುವಾಗ ಶೌಚಾಲಯದ ನೀರನ್ನು ಪಾನಿಗೆ ಬಳಸುತ್ತಿದ್ದ ವಿಡಿಯೋವನ್ನು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊಲ್ಹಾಪುರ (ನ.7): ಬೀದಿಬದಿಯ ಆಹಾರಗಳ ಶುಚಿತ್ವ ಮತ್ತು ನೈರ್ಮಲ್ಯತೆ ಬಗ್ಗೆ ಸದಾ ಪ್ರಶ್ನೆಗಳು ಮೂಡುತ್ತವೆ. ಅದರಲ್ಲಿಯೂ ಪಾನಿಪೂರಿ ವ್ಯಾಪಾರಿಗಳು ನೀರು ಬಳಕೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತದೆ. ಇಲ್ಲೊಬ್ಬ ವ್ಯಾಪಾರಿ ಕೂಡ ಪಾನಿಪೂರಿ ತಯಾರಿಸಲು ಶೌಚಾಲಯದ ನೀರು ಬಳಕೆ ಮಾಡಿಕೊಂಡಿದ್ದಾನೆ. ಆತನ ಶೌಚಾಲಯದ ನೀರು ಬಳಕೆ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಜನರು ಆತನ ಅಂಗಡಿ ಧ್ವಂಸ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಇಲ್ಲಿ ಕೊಂಚ ಫೇಮಸ್​ ಎನ್ನುವಂತಹ ಮುಂಬೈ ಕೆ ಸ್ಪೆಷಲ್​ ಪಾನಿಪೂರಿ ವಾಲಾ ತಳ್ಳುಗಾಡಿ ಮಾಲೀಕ ಈ ಕೆಲಸ ಮಾಡಿರುವುದು.

  ಪಾನಿಪೂರಿ ಪ್ರಿಯರಿಗೆ ಸಾಕಷ್ಟು ಇಷ್ಟವಾಗಿದ್ದ ಈ ಅಂಗಡಿ ಸದಾ ಗ್ರಾಹಕರಿಂದ ಗಿಜಿಗೂಡುತ್ತಿತ್ತು. ಈತ ಪಾನಿಪೂರಿ ಮಾಡುವಾಗ ಶೌಚಾಲಯದ ನೀರನ್ನು ಪಾನಿಗೆ ಬಳಸುತ್ತಿದ್ದ ವಿಡಿಯೋವನ್ನು ಯಾರೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ನೋಡುತ್ತಿದ್ದಂತೆ ಕೆರಳಿದ ಪಾನಿಪೂರಿ ಪ್ರಿಯರು ಈತನ ಅಂಗಡಿ ಧ್ವಂಸ ಮಾಡಿದ್ದಾರೆ ಎಂದು ಜೀ ನ್ಯೂಸ್​ ವರದಿ ಮಾಡಿದೆ.

  ಇದನ್ನು ಓದಿ: ಹಸಿರು ಪಟಾಕಿ ಎಂದರೇನು? ಹೇಗೆ ಪತ್ತೆ ಮಾಡುವುದು; ಇಲ್ಲಿದೆ ಮಾಹಿತಿ

  ಕಳೆದ ವರ್ಷ ಕೂಡ ಮುಂಬೈನಲ್ಲಿ ಬೀದಿ ಬದಿ ಪಾನಿಪೂರಿ ವ್ಯಾಪಾರಿ ರೈಲ್ವೆ ನಿಲ್ದಾಣದ ಶೌಚಾಲಯದ ನೀರು ಬಳಕೆ ಮಾಡುತ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಈ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಆಹಾರ ಇಲಾಖೆ ಅಧಿಕಾರಿಗಳು ಆತನ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು.

  ಇನ್ನು 2018ರಲ್ಲಿ ಹೈದ್ರಾಬಾದ್​ನ ಸಿಕಿಂದ್ರಾಬಾದ್​ನ ರೈಲು ನಿಲ್ದಾಣದಲ್ಲಿ ಕಾಫಿ ಟೀ ತಯಾರಿಸಲು ಶೌಚಾಲಯದ ನೀರು ಬಳಕೆ ಮಾಡಿಕೊಂಡಿದ್ದ ಕಂಟ್ರಾಕ್ಟ್​ ವರ್ತಕನಿಗೆ 1 ಲಕ್ಷ ದಂಡ ವಿಧಿಸಲಾಗಿತ್ತು.
  Published by:Seema R
  First published: