ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ದಿನೇ ದಿನೇ ಬೀದಿನಾಯಿ ( Stray Dog) ಕಡಿತದಿಂದ ಬಾದಿತರಾದವ ಸಂಖ್ಯೆ ( Number) ಕೂಡ ಹೆಚ್ಚುತ್ತಿದೆ. ಈ ವರ್ಷ ಕೇರಳದಲ್ಲಿ ( Kerala ) ಒಟ್ಟು ಇಪ್ಪತ್ತೊಂದು ಜನರು ರೇಬಿಸ್ ಖಾಯಿಲೆಯಿಂದ ಮರಣ ಹೊಂದಿದ್ದಾರೆ. ಇತ್ತೀಚೆಗಷ್ಟೇ ಕೇರಳದಲ್ಲಿ ಏಳನೇ ತರಗತಿ ಬಾಲಕನಿಗೆ ಬೀದಿನಾಯಿ ಕಚ್ಚಿದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಒಂದೇ ವಾರದಲ್ಲಿ ಅನೇಕ ಪ್ರಕರಣಗಳಾಗಿದ್ದು ಜನರು ಓಡಾಡಲು ಸಹ ಭಯದ ವಾತಾವರಣ ಸೃಷ್ಟಿಯಾಗಿದೆ. ಕೇರಳದಲ್ಲಿ ದೃಶ್ಯದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮನೆಯ ಹೊರಗಡೆ ಆಟವಾಡುತ್ತಿದ್ದ ಬಾಲಕ:
ಬಾಲಕನೊಬ್ಬ ತನ್ನ ಸೈಕಲ್ ಹಿಡಿದು ಮನೆಯ ಮುಂದಿನ ರಸ್ತೆಯಲ್ಲಿ ತಿರುಗಾಡುತ್ತಿದ್ದ ಸಮಯದಲ್ಲಿ ಅದೇ ಬೀದಿಯಲ್ಲಿ ನಾಯಿಯೊಂದು ಓಡಿ ಬಂದು ಸೈಕಲ್ ಮೇಲೆ ಕೂತಿದ್ದ ಬಾಲಕನ ಮೇಲೆ ಆಕ್ರಮಣ ಮಾಡಿದೆ. ಇದೇ ಸಮಯದಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳು ಮತ್ತು ಪುಟ್ಟ ಮಗುವನ್ನು ನಾವು ಈ ದೃಶ್ಯದಲ್ಲಿ ಕಾಣಬಹುದು.
ಬೀದಿ ನಾಯಿ ದಾಳಿ:
ಸೈಕಲ್ ಮೇಲೆ ತನ್ನ ಪಾಡಿಗೆ ತಾನು ಕುಳಿತಿದ್ದ ವಿದ್ಯಾರ್ಥಿಯು ನಾಯಿಗೆ ಯಾವುದೇ ರೀತಿಯ ತೊಂದರೆಯನ್ನೂ ನೀಡಿಲ್ಲ. ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ನಾಯಿ ಒಂದೇ ಸಾರಿ ಬಾಲಕನ ಮೇಲರಗಿ ಕಚ್ಚಲು ಪ್ರಾರಂಭಿಸಿದೆ. ಗಾಬರಿಗೊಳಗಾದ ಹುಡುಗ ಚೀರಿಕೊಂಡಾಗಲೂ ನಾಯಿ ಕಚ್ಚುವುದನ್ನು ನಿಲ್ಲಿಸಿಲ್ಲ.
ಮೈತುಂಬಾ ಕಚ್ಚಿದ ಗಾಯ:
ವಿದ್ಯಾರ್ಥಿ ತನ್ನ ಸೈಕಲ್ನಿಂದ ಕೆಳಗೆ ಬಿದ್ದು ನಾಯಿಯ ಕಡಿತದಿಂದ ತಪ್ಪಿಸಿಕೊಳ್ಳು ಪ್ರಯತ್ನಿಸಿದ್ದಾನೆ. ಆದರೂ ಬಿಡದ ನಾಯಿ ಬಾಲಕನ ಕಾಲು, ಹೊಟ್ಟೆ ಮತ್ತು ಕೈಗೆ ಬಲವಾಗಿ ಕಚ್ಚಿದೆ. ಬಾಲಕ ಬಿದ್ದ ತಕ್ಷಣ ಕಾಲನ್ನು ಬಲವಾಗಿ ಕಚ್ಚಿದ ನಾಯಿ ಬಿಡದೆ ಮತ್ತೆ ಮತ್ತೆ ದಾಳಿ ನಡೆಸಿದೆ. ನಾಯಿಯ ಕೋರೆ ಹಲ್ಲಿನ ಗುರುತುಗಳು ಬಾಲಕನ ಮೈಯಲ್ಲಿ ಅಚ್ಚೊತ್ತಿದೆ. ಬಹಳ ಹಿಂಸಾತ್ಮಕವಾಗಿ ನಾಯಿ ಬಾಲಕನ ಮೇಲೆ ದಾಲಿ ಮಾಡಿದೆ.
Scary, gruesome #dogattack #video from #Kozhikode #kerala , 12yr old who was cycling is brutally attacked by a stray..ferociously attacks like a trained combat dog..
Thus far in #2022 ,Kerala has seen 1lakh+ dog attacks, 20+ deaths, rabies vaxxed also have died. Panic prevails! pic.twitter.com/RsVifs9Hm9
— Sidharth.M.P (@sdhrthmp) September 13, 2022
ಇದನ್ನೂ ಓದಿ: ಲಿಫ್ಟ್ನಲ್ಲಿದ್ದ ಬಾಲಕನ ಮೇಲೆರಗಿದ ನಾಯಿ, ಮಾನವೀಯತೆ ಮರೆತ ಮಾಲೀಕ ಪರಾರಿ!
ನಾಪತ್ತೆಯಾದ ನಾಯಿ:
ಬಾಲಕನಿಗೆ ಕಚ್ಚಿದ ಬಳಿಕ ನಾಯಿ ಅಲ್ಲಿಂದ ಓಡಿ ಹೋಗಿದೆ. ಈ ನಾಯಿ ಇದೇ ಮೊದಲಲ್ಲ ಈ ಹಿಂದೆ ಭಾನುವಾರ ಬೇಪೂರ್ ಪಟ್ಟಣದ ಬಳಿ ಮೂವರು ಮಕ್ಕಳು ಸೇರಿದಂತೆ ಇತರ ನಾಲ್ವರ ಮೇಲೆ ದಾಳಿ ಮಾಡಿತ್ತು. ಎಂಬ ವಿಷಯ ತಿಳಿದು ಬಂದಿದೆ. ಆದ್ದರಿಂದ ಈ ನಾಯಿಯನ್ನು ಹಿಡಿಯಬೇಕು ಎಂದುಕೊಂಡ ಜನರಿಂದ ಸಹ ಇದು ತಪ್ಪಿಸಿಕೊಂಡು ಪರಾರಿಯಾಗಿದೆ.
ಇದನ್ನೂ ಓದಿ: ಬೀದಿ ನಾಯಿಗೆ ಅನ್ನ ಹಾಕ್ತೀರಾ? ಹಾಗಿದ್ರೆ ಅದು ಜನರಿಗೆ ಕಚ್ಚಿದರೆ ನೀವೇ ಹೊಣೆ!
7 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ:
ಕಡಿತಕ್ಕೊಳಗಾದ ಬಾಲಕನ ಹೆಸರು ನೂರಾಸ್ ಎಂದು ಗುರುತಿಸಲಾಗಿದೆ. ಈತ 7 ನೇ ತರಗತಿಯಲ್ಲಿ ಓದುತ್ತಿದ್ದ. ಅವನು ಕೋಝಿಕ್ಕೋಡ್‌ನ ಅರಕ್ಕಿನಾರ್ ಪ್ರದೇಶದಲ್ಲಿ ತನ್ನ ಸೈಕಲ್‌ನಲ್ಲಿ ಆಟವಾಡುತ್ತಿದ್ದ. ಆರನೇ ತರಗತಿಯ ವಿದ್ಯಾರ್ಥಿನಿ ವೈಗಾ ಎಂಬಾಕೆಯೂ ಸೇರಿದ್ದು ಆಕೆಗೂ ನಾಯಿ ಕಚ್ಚಿದೆ. ಮಕ್ಕಳನ್ನು ನಾಯಿಯ ಕಡಿತದಿಂದ ರಕ್ಷಿಸಲು ಮುಂದಾದ 40 ವರ್ಷದ ಶಂಶುದ್ದೀನ್ ಅವರಿಗೂ ನಾಯಿ ದಾಳಿ ಮಾಡಿವೆ. ಕೇರಳದಲ್ಲಿ ಭಾನುವಾರ ಕನಿಷ್ಠ ಆರು ಮಂದಿ ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದಾರೆ ಎಂದು ವರದಿ ತಿಳಿಸಿದೆ.
ಹೆಚ್ಚುತ್ತಿರುವ ಪ್ರಕರಣಗಳು:
ಇತ್ತೀಚೆಗೆ ನಾಯಿಗಳ ದಾಳಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಟ್ಟಡದ ಲಿಫ್ಟ್ ಒಂದರಲ್ಲಿ ಪುಟ್ಟ ಮಗುವಿಗೆ ನಾಯಿ ಕಚ್ಚಿದ ಘಟನೆ ಗಾಜಿಯಾಬಾದ್ನಲ್ಲಿ ವರದಿಯಾಗಿದೆ. ಬರೀ ಬೀದಿನಾಯಿಗಳು ಮಾತ್ರವಲ್ಲ ಸಾಕು ನಾಯಿಗಳೂ ಸಹ ಆಕ್ರಮಣ ಮಾಡುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ