Dog Attack: ಬೀದಿ ನಾಯಿಗಳ ದಾಳಿಗೆ ಬಲಿಯಾಯ್ತು 4 ವರ್ಷದ ಕಂದಮ್ಮ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಹೃದಯ ವಿದ್ರಾವಕ ಘಟನೆಯು ಬೀದಿ ನಾಯಿಗಳ ಕಾಟವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ, ಅನೇಕರು ಮಗುವಿನ ಮೇಲಿನ ದಾಳಿಯ ದೃಶ್ಯಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅಧಿಕಾರಿಗಳಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • News18 Kannada
  • 3-MIN READ
  • Last Updated :
  • New Delhi, India
  • Share this:

ಹೈದರಾಬಾದ್:  ಬೀದಿ ನಾಯಿಗಳ (Stray Dog) ಗುಂಪೊಂದು ಐದು ವರ್ಷದ ಬಾಲಕನನ್ನು ಸುತ್ತುವರೆದು ಕೊಂದು ಹಾಕಿದೆ. ಬಾಲಕನ (Boy) ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.  ಅಂಬರ್‌ಪೇಟೆಯ ಆವರಣದ ಬಳಿಯಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆಯ ದೃಶ್ಯಗಳು ಸೆರೆಯಾಗಿವೆ.  ಹಲ್ಲೆಗೊಳಗಾದ ಮಗು ಪ್ರದೀಪ್ ತನ್ನ ತಂದೆಯೊಂದಿಗೆ ಕೆಲಸಕ್ಕೆ (Work) ಹೋಗಿದ್ದ ಸಂದರ್ಭದಲ್ಲಿ ಹೀಗಾಗಿದೆ. ವಿಡಿಯೋದಲ್ಲಿ ಮಗು ಏಕಾಂಗಿಯಾಗಿ ನಡೆಯುತ್ತಿರುವುದು ಕಂಡು ಬಂದಿದೆ.  ಸ್ವಲ್ಪ ಸಮಯದ ನಂತರ ಮೂರು ನಾಯಿಗಳು (Dog) ಮಗುವಿನ ಕಡೆಗೆ ಬಂದು ಸುತ್ತುವರೆದು ಕಚ್ಚುತ್ತಿರುವುದು ಕಾಣುತ್ತದೆ. 


ಭಯಭೀತನಾದ ಹುಡುಗ ಓಡಲು ಪ್ರಯತ್ನಿಸುತ್ತಾನೆ, ಆದರೆ ನಾಯಿಗಳು ಅವನನ್ನು ನೆಲಕ್ಕೆ ತಳ್ಳುತ್ತವೆ. ಮಗು ಬಿಡಿಸಿಕೊಳ್ಳಲು ಹೆಣಗಾಡುತ್ತಿರುವಾಗ ನಾಯಿಗಳು ಅವನ ಬಟ್ಟೆಗಳನ್ನು ಎಳೆಯಲು ಪ್ರಾರಂಭಿಸುತ್ತವೆ. ಮಗು ಮತ್ತೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದೆ.  ಅವನು ಎದ್ದೇಳಲು ಪ್ರಯತ್ನಿಸಿದಾಗಲೆಲ್ಲಾ ನಾಯಿಗಳು ಅವನ ಮೇಲೆ ದಾಳಿ ಮಾಡಿ ಕೆಳಗೆ ಬೀಳಿಸಿವೆ.


ಮೂರು ಚಿಕ್ಕ ನಾಯಿಗಳು ಮತ್ತು ದೊಡ್ಡ ನಾಯಿಗಳು ಮಗುವನ್ನು ಕಚ್ಚುತ್ತಲೇ ಇರುತ್ತವೆ  ಅವನನ್ನು ಒಂದು ಮೂಲೆಗೆ ಎಳೆದುಕೊಂಡು ಹೋಗುತ್ತವೆ. ಮಗು ಸ್ಥಳದಲ್ಲೇ ಮೃತಪಟ್ಟಿರುವುದು ದೃಶ್ಯಾವಳಿಗಳಿಂದ ತಿಳಿದು ಬಂದಿದೆ. ಕುಟುಂಬದಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Divorce Case: 4 ವರ್ಷ ಡಿವೋರ್ಸ್‌ ಪಡೆಯಲು, 8 ವರ್ಷ ಪ್ರಕರಣ ರದ್ದುಗೊಳಿಸಲು; ಗುಜರಾತ್‌ ದಂಪತಿಯ ಅಪರೂಪದ ಪ್ರಕರಣ!


ತೆಲಂಗಾಣದ ಪೌರಾಡಳಿತ ಸಚಿವ ಕೆಟಿ ರಾಮರಾವ್ ಅವರು ಘಟನೆಯಿಂದ "ತುಂಬಾ ನೋವುಂಟಾಗಿದೆ ಎಂದು ಹೇಳಿದ್ದಾರೆ.  ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಈ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ. ಇನ್ನು ಮುಂದೆ ಈ ರೀತಿಯಾಗದ ಹಾಗೆ ನಮ್ಮಿಂದ ಏನೆಲ್ಲಾ ಸಾಧ್ಯವೋ ಆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.


ಸಚಿವರು ಸಹ ಈ ಬಗ್ಗೆ ಮಾತನಾಡಿದ್ದಾರೆ "ನಾವು ಪ್ರಾಣಿಗಳ ಆರೈಕೆ ಕೇಂದ್ರಗಳು ಮತ್ತು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ.  ನಾವು ಪ್ರಾಣಿಗಳನ್ನು ಮಾನವೀಯವಾಗಿ ಪರಿಗಣಿಸಲು ಪ್ರಯತ್ನಿಸುತ್ತೇವೆ. ಜೈವಿಕ ತ್ಯಾಜ್ಯ ವಿಲೇವಾರಿ ಗಂಭೀರ ಸಮಸ್ಯೆಯಾಗಿದೆ. ಅದರ ಜೊತೆಗೆ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ, ಇದನ್ನು ನಿಯಂತ್ರಿಸಲು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.


ತುರ್ತು ಕ್ರಮಗಳ ಕುರಿತು ಚರ್ಚೆ


ಇಂತಹ ಭೀಕರ ದುರಂತ ಮರುಕಳಿಸದಂತೆ ತುರ್ತು ಕ್ರಮಗಳ ಕುರಿತು ಚರ್ಚಿಸಲು ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಮೇಯರ್ ವಿಜಯಲಕ್ಷ್ಮಿ ಗದ್ವಾಲ್ ಮಂಗಳವಾರ ಮಧ್ಯಾಹ್ನ ತುರ್ತು ಸಭೆ ಕರೆದಿದ್ದಾರೆ. ಹೃದಯ ವಿದ್ರಾವಕ ಘಟನೆಯು ಬೀದಿ ನಾಯಿಗಳ ಕಾಟವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ, ಅನೇಕರು ಮಗುವಿನ ಮೇಲಿನ ದಾಳಿಯಾ ದೃಶ್ಯಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅಧಿಕಾರಿಗಳಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಹೀಗೆ ಒಂದು ಪ್ರಕರಣ


ಗುಜರಾತ್‌ನ ಸೂರತ್‌ನಲ್ಲಿ ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ. ಇದಕ್ಕೂ ಮೊದಲು, ಜನವರಿಯಲ್ಲಿ, ಬಿಹಾರದ ಅರ್ರಾದಲ್ಲಿ ಬೀದಿನಾಯಿಯೊಂದು ಕಚ್ಚಿದ್ದರಿಂದ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದರು. ನಾಯಿಗಳ ದಾಳಿಯ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ದೇಶದಾದ್ಯಂತ ಒಂದಲ್ಲಾ ಒಂದು ರಾಜ್ಯದಲ್ಲಿ ಈ ರಿತು ಘಟನೆಗಳು ನಡೆಯುತ್ತಲೆ ಇರುತ್ತವೆ. ಪ್ರಾಣಿಗಳಿಗೆ ಶ್ವಾನ ಪ್ರೇಮಿಗಳು ಹೇಗೆ ಅನ್ನ, ಆಹಾರ ನೀಡುತ್ತಾರೋ ಅಷ್ಟೇ ಜನರು ನಾಯಿಗಳನ್ನು ಹೊಡೆಯುತ್ತಾರೆ ಎಂದು ಹೇಳಿದ್ದಾರೆ.
ನ್ಯಾಯಾಲಯ ಗಮನಿಸಿದ ಸಂಗತಿ 


ಈ ವಿಷಯವು ನ್ಯಾಯಾಲಯಗಳನ್ನು ತಲುಪಿದೆ, ಬಾಂಬೆ ಹೈಕೋರ್ಟ್ ಬೀದಿನಾಯಿಗಳ ಸಂತಾನಹರಣ, ಆಹಾರ, ಅಂದಗೊಳಿಸುವಿಕೆ ಮತ್ತು ಲಸಿಕೆಯ ಅಗತ್ಯವಿದೆ ಎಂದು ಒತ್ತಿಹೇಳಿತು. ಮುಂಬೈ ಅಪಾರ್ಟ್‌ಮೆಂಟ್ ನಿವಾಸಿಗಳು ಸ್ಥಳೀಯ ನಾಗರಿಕ ಸಂಸ್ಥೆಯು ಬೀದಿನಾಯಿಗಳಿಗೆ ಆಹಾರ ನೀಡುವ ಪ್ರದೇಶಗಳನ್ನು ಗುರುತಿಸಬೇಕೆಂದು ಒತ್ತಾಯಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಗಮನಕ್ಕೆ ಬಂದಿದೆ. .

First published: