Lok Sabha Election: ಒಂದು ಕುಟುಂಬ, ಒಂದು ಟಿಕೆಟ್; ಮುಂಬರುವ ಚುನಾವಣೆ ಗೆಲ್ಲಲು ಭರ್ಜರಿ ಕಾರ್ಯತಂತ್ರ ಹೆಣೆದ ಕಾಂಗ್ರೆಸ್

ಒಂದು ಕುಟುಂಬ-ಒಂದು ಟಿಕೆಟ್ ನಿಯಮವು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ಸಿನ ಮಹತ್ವದ ಅಧಿವೇಶನದಲ್ಲಿ ಚರ್ಚೆಯ ಬಿಂದುವಾಗುವ ಸಾಧ್ಯತೆ ಇದೆ. ಪಕ್ಷವು ತನ್ನ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಸಮಾಲೋಚಿಸಲು ಪಕ್ಷದ ಗಣ್ಯರು ಈ ವಾರಾಂತ್ಯದಲ್ಲಿ ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ಮತ್ತು ರಾಹುಲ್ ಗಾಂಧಿ

ರಾಹುಲ್ ಗಾಂಧಿ ಮತ್ತು ರಾಹುಲ್ ಗಾಂಧಿ

 • Share this:
  ಸತತವಾಗಿ ಎರಡು ಲೋಕಸಭಾ ಚುನಾವಣೆಯಲ್ಲಿ (Lok Sabha Elections) ಮಕಾಡೆ ಮಲಗಿರುವ ಕಾಂಗ್ರೆಸ್ ಪಕ್ಷ (Congress Party) ಮುಂಬರುವ 2024ರ ಚುನಾವಣೆಯಲ್ಲಿ ಭರ್ಜರಿ ಗೆಲುವು (Victory) ಸಾಧಿಸಲು ಸಿದ್ಧತೆಯನ್ನು ಈಗಾಗ್ಲೇ ಆರಂಭಿಸಿದೆ. ಅಧಿವೇಶನ, ಉನ್ನತ ಮಟ್ಟದ ಸಭೆ (High level meeting) ಅಂತಾ ಹಲವಾರು ಕಾರ್ಯತಂತ್ರಗಳನ್ನು (Strategy) ರೂಪಿಸುತ್ತಿದೆ. ಪ್ರಸ್ತುತ ಒಂದು ಕುಟುಂಬ-ಒಂದು ಟಿಕೆಟ್ (One family- one ticket) ನಿಯಮವು ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆಯಲಿರುವ ಕಾಂಗ್ರೆಸ್ಸಿನ (Congress) ಮಹತ್ವದ ಅಧಿವೇಶನದಲ್ಲಿ ಚರ್ಚೆಯ ಬಿಂದುವಾಗುವ ಸಾಧ್ಯತೆ ಇದೆ. ಪಕ್ಷವು ತನ್ನ ಚುನಾವಣಾ ಭವಿಷ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯತಂತ್ರಗಳನ್ನು ರೂಪಿಸಲು ಮತ್ತು ಸಮಾಲೋಚಿಸಲು ಪಕ್ಷದ ಗಣ್ಯರು ಈ ವಾರಾಂತ್ಯದಲ್ಲಿ ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  ಶುಕ್ರವಾರದಿಂದ ಪ್ರಾರಂಭವಾಗುವ ಮೂರು ದಿನಗಳ 'ಚಿಂತನ ಶಿಬಿರ'ಕ್ಕೆ ಮುಂಚಿತವಾಗಿ ಸೋಮವಾರ ದೆಹಲಿಯಲ್ಲಿ ಮುಖ್ಯಸ್ಥೆ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಕುಟುಂಬಕ್ಕೆ ಒಂದೇ ಟಿಕೆಟ್ ಸೇರಿದಂತೆ ಹಲವು ಪ್ರಸ್ತಾಪಗಳನ್ನು ಮಾಡಲಾಯಿತು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

  ಒಂದು ಕುಟುಂಬ ಒಂದು ಟಿಕೆಟ್
  'ಒಂದು ಕುಟುಂಬ ಒಂದು ಟಿಕೆಟ್' ಬಗ್ಗೆ ಭಾನುವಾರ ನಡೆಯಲಿರುವ ಮೆಗಾ ಕೂಟದಲ್ಲಿ ಮತ್ತು ಸಿಡಬ್ಲ್ಯೂಸಿ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್ ಯಾವಾಗಲೂ ಕುಟುಂಬ ರಾಜಕಾರಣ ಮಾಡುತ್ತದೆ ಎಂಬ ಬಿಜೆಪಿಯ ಆರೋಪಗಳಿಗೆ ಇದು ತಕ್ಕ ಉತ್ತರವಾಗಲಿದೆ, ಇದರಿಂದ ಬಿಜೆಪಿಯ ದಾಳಿಯನ್ನು ಹಿಮ್ಮೆಟ್ಟಿಸುವ ಭರವಸೆ ನಾಯಕರಲ್ಲಿ ಮೂಡಲಿದೆ ಎನ್ನಲಾಗಿದೆ.

  ಪಕ್ಷವು ಸಾಮೂಹಿಕ ನಿರ್ಧಾರ ಕೈಗೊಳ್ಳಲು ಸಂಸದೀಯ ಮಂಡಳಿಯ ಪುನರುಜ್ಜೀವನಕ್ಕೆ ಪಕ್ಷ ಒತ್ತು ನೀಡುತ್ತದೆ ಎಂದು ನಾಯಕರೊಬ್ಬರು ಹೇಳಿದ್ದಾರೆ. ಜೊತೆಗೆ 2024ರ ಚುನಾವಣೆಗೆ ತಯಾರಿ ನಡೆಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯನ್ನು ಎದುರಿಸಲು ಮತ್ತು ದ್ವೇಷದ ರಾಜಕೀಯವನ್ನು ಎದುರಿಸಲು ಎಲ್ಲಾ ವಿರೋಧ ಪಕ್ಷಗಳ ಹೊಂದಾಣಿಕೆಗೆ ಸಹ ಕರೆಯನ್ನು ಸಭೆಯಲ್ಲಿ ನೀಡಲಿದ್ದಾರೆ.

  ನಿರುದ್ಯೋಗ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಲು ಶ್ರಮ
  ಕಾಂಗ್ರೆಸ್ ನಿರುದ್ಯೋಗ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸಲು ಶ್ರಮಿಸುತ್ತದೆ ಮತ್ತು ಕಳೆದ ಕೆಲವು ಚುನಾವಣೆಗಳಲ್ಲಿ ಗಮನಿಸಿದಂತೆ ವಿಭಜಕ ಮತ್ತು ಕೋಮುವಾದಿ ಪ್ರಚಾರಗಳನ್ನು ತೆಗೆದುಕೊಳ್ಳಲು ಬಿಡುವುದಿಲ್ಲ, ಬದಲಾಗಿ ಅವುಗಳ ನಿಯಂತ್ರಣಕ್ಕೆ ಗಮನ ಹರಿಸಲು ನಿರ್ಧರಿಸಿದೆ.

  ಇದನ್ನೂ ಓದಿ: Sedition Law: ದೇಶದ್ರೋಹ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ, ಜಾಮೀನು ಕೋರಲು ಆರೋಪಿಗಳಿಗೆ ಅವಕಾಶ

  ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡುವ ಸಲುವಾಗಿ ಸಂಸ್ಥೆಯೊಂದಿಗೆ ಪ್ರಧಾನ ಕಾರ್ಯದರ್ಶಿ ನೇತೃತ್ವದ ಚುನಾವಣಾ ಪ್ರಚಾರಗಳನ್ನು ನಿರ್ವಹಿಸಲು ಮತ್ತು ಸಂಯೋಜಿಸಲು ಪ್ರತ್ಯೇಕ ಚುನಾವಣಾ ಘಟಕ ಸ್ಥಾಪನೆಗೆ ಚಿಂತಿಸಲಾಗಿದೆ. ಸಭೆಯು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಚ್ಚಿನ ಯುವ ನಾಯಕರನ್ನು ಸೆಳೆಯುವ ಬಗ್ಗೆ ಚರ್ಚಿಸುತ್ತದೆ ಮತ್ತು ಅವರಿಗೆ ಕನಿಷ್ಠ ಅರ್ಧದಷ್ಟು ಆಂತರಿಕ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ.

  ಚಿಂತನ-ಮಂಥನ ಅಧಿವೇಶನದಲ್ಲಿ ಚರ್ಚೆ
  ಪಕ್ಷದ ನಾಯಕರ ಪ್ರಕಾರ, ಈ ಪ್ರಸ್ತಾಪಗಳನ್ನು ಮುಕ್ತವಾಗಿ ಬಿಡಲಾಗಿದೆ ಮತ್ತು ಉದಯಪುರದಲ್ಲಿ ನಡೆಯುವ ಚಿಂತನ-ಮಂಥನ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಈ ಎಲ್ಲಾ ಪ್ರಸ್ತಾವನೆಗಳ ಕುರಿತು ಸೋನಿಯಾ ಗಾಂಧಿ ಗುಂಪು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

  ಮೇ 13 ರಿಂದ 15ರವರೆಗೆ ಉದಯಪುರದಲ್ಲಿ ನಡೆಯಲಿರುವ ಚಿಂತನ ಶಿಬಿರವನ್ನು ನಿಭಾಯಿಸುವ ತಂಡವನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಸೋನಿಯಾ ಗಾಂಧಿ ತೆಗೆದುಕೊಂಡಿರುವ ಇನ್ನೊಂದು ಮಹತ್ವದ ಹೆಜ್ಜೆಯಾಗಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವ 400 ಪ್ರತಿನಿಧಿಗಳ ಪೈಕಿ 23ರ ಭಿನ್ನಮತೀಯ ಗುಂಪಿನ ಕೆಲ ಸದಸ್ಯರನ್ನು ಸೇರಿಸುವ ಕುರಿತು ಚಿಂತನೆ ನಡೆದಿದೆ. 'ಚಿಂತನ ಶಿಬಿರ' ಗುಂಪು ಚರ್ಚೆಗಳನ್ನು ಮತ್ತು 400ಕ್ಕೂ ಹೆಚ್ಚು ನಾಯಕರ ಭಾಗವಹಿಸುವಿಕೆಯನ್ನು ಎದುರು ನೊಡುತ್ತಿದೆ. ಇಲ್ಲಿ ವಿವಿಧ ಕಾರ್ಯತಂತ್ರದ ಪತ್ರಿಕೆಗಳು ಮತ್ತು ಸಲಹೆಗಳನ್ನು ಚರ್ಚಿಸಲಾಗುತ್ತದೆ.

  ನಕಾರಾತ್ಮಕ ಪರಿಣಾಮ ಬೀರಿದ ಕುಟುಂಬ-ಒಂದು-ಟಿಕೆಟ್ ನಿಯಮ
  ಸಭೆಯಲ್ಲಿ ಕೆಲವು ಹಳೇ ಪ್ರಸ್ತಾವನೆಗಳನ್ನೇ ಚರ್ಚಿಸಲಾಗುತ್ತಿದೆ. 2008 ರಲ್ಲಿ ಕರ್ನಾಟಕದಲ್ಲಿ ಒಂದು ಕುಟುಂಬ-ಒಂದು-ಟಿಕೆಟ್ ನಿಯಮವನ್ನು ಪರಿಚಯಿಸಲಾಯಿತು ಮತ್ತು ಇದು ಭಾರಿ ನಕಾರಾತ್ಮಕ ಪರಿಣಾಮ ಬೀರಿತು ಎಂದು ಕಾಂಗ್ರೆಸ್ ನವರೇ ಹೇಳಿದ್ದಾರೆ.

  ಇದನ್ನೂ ಓದಿ: White House: ಯಾರಿಗುಂಟು, ಯಾರಿಗಿಲ್ಲ! ವೈಟ್ ಹೌಸ್ ಒಳಗೆ ಬಿಡೆನ್ ಶ್ವಾನದ ಜಾಲಿ ಸುತ್ತಾಟ!

  ಇನ್ನೂ ಈ ನಿಯಮದನುಸಾರ 2024ರಲ್ಲಿ ಪ್ರಿಯಾಂಕಾ ಗಾಂಧಿಯವರ ಚುನಾವಣಾ ಪ್ರಚಾರಕ್ಕೆ ಏನಾಗುತ್ತದೆ? ಸೋನಿಯಾ ಗಾಂಧಿ ಆಯ್ಕೆಯಿಂದ ಹೊರಗುಳಿಯುತ್ತಾರಾ? ಅಥವಾ ಗಾಂಧಿ ಕುಟುಂಬಕ್ಕೆ ಅಪವಾದ ಬರಬಹುದೇ? ಎಂಬ ಎಲ್ಲಾ ಪ್ರಶ್ನೆಗಳು ಸದ್ಯ ಹುಟ್ಟಿಕೊಂಡಿವೆ.
  Published by:Ashwini Prabhu
  First published: