ಪ್ರೇಮಿಗಳ ದಿನದ ಹುಟ್ಟಿನ ಹಿಂದಿನ ರೋಚಕ ಕಥೆ​

news18
Updated:February 14, 2018, 6:18 PM IST
ಪ್ರೇಮಿಗಳ ದಿನದ ಹುಟ್ಟಿನ ಹಿಂದಿನ ರೋಚಕ ಕಥೆ​
news18
Updated: February 14, 2018, 6:18 PM IST
ನ್ಯೂಸ್​ 18 ಕನ್ನಡ

ಪ್ರೇಮಿಗಳ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಇದು ಪಾಶ್ಚಾತ್ಯ ದೇಶದ ಆಚರಣೆಯಾದರೂ ಪ್ರತಿಯೊಬ್ಬ ಜನಾಂಗದವರೂ ಮಾಡುವಂತಹ ಆಚರಣೆ ಇದು. ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಇದನ್ನು ಆಚರಿಸುತ್ತಾರೆ. ಭಾರತದಲ್ಲೂ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಸಂಗಾತಿಗೆ ಅಂದು ಸರ್ಪ್ರೈಸ್ ಗಿಫ್ಟ್ ಇರಬಹುದು, ಹೂವಿರಬಹುದು, ಚಾಕೋಲೇಟ್​ಗಳಿರಬಹುದು ಹೀಗೆ ತಮ್ಮ ಆರ್ಥಿಕ ಶಕ್ತಿಗನುಸಾರವಾಗಿ ಉಡುಗೊರೆಗಳನ್ನು ನೀಡಲಾಗುತ್ತದೆ. ಅಂದು ಕೆಂಪು ಬಣ್ಣದ ಉಡುಗೆಗಳನ್ನ ತೊಟ್ಟು ಸಂಭ್ರಮಿಸ್ತಾರೆ. ಹಾಗಾದ್ರೆ ಈ ವ್ಯಾಲೆಂಟೈನ್ಸ್ ಡೇ ವಾಸ್ತವದಲ್ಲಿ ಶುರುವಾಗಿದ್ದಾದರು ಹೇಗೆ? ಈ ಆಚರಣೆಯ ಹಿಂದಿರುವ ಆ ಕಥೆ ಏನು? ತಿಳ್ಕೋಬೇಕಾ ಈ ಸ್ಟೋರಿ ಓದಿ.

ಸಂತ ವಾಲೆಂಟೈನ್ !!! ಇವರ ಮರಣದ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ. ಹಾಗಾದರೆ ಸಂತ ವ್ಯಾಲೆಂಟೈನ್​ಗೆ ಸಂಬಂಧಿಸಿದಂತೆ ಯಾವುದಾದರೂ ಪ್ರೇಮಕಥೆ ಇದೆಯಾ? ರೋಮಿಯೊ ಜೂಲಿಯೇಟ್ ಕಥೆಯನ್ನೂ ಮೀರಿಸುವಂತಹ ಕಥೆ ಅವರದ್ದಾಗಿತ್ತಾ? ಹಾಗಾಗಿಯೇ ವ್ಯಾಲೆಂಟೈನ್ಸ್ ಡೇ ಆಚರಣೆಯನ್ನು ಆತನ ಹೆಸರಿನಲ್ಲಿ ಮಾಡಲಾಗುತ್ತದೆಯೇ? ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಹುಟ್ಟುವುದು ಸಹಜ. ಪ್ರೇಮಿಗಳ ದಿನವನ್ನು ಹಿಂದೆ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದರು. ಆದರೆ ಇಂದು ನಾವು ಮಾತಾನಾಡುತ್ತಿರುವ ಪ್ರೇಮಿಗಳ ದಿನಾಚರಣೆಯು ಕ್ರಿ.ಶ 270ರಲ್ಲಿ ಎರಡನೇ ಕ್ಲಾಡಿಯಸ್​ನ ಅವಧಿಯಲ್ಲಿ ಜಾರಿಗೆ ಬಂದಿತು.

ಆದರೆ ಇಲ್ಲಿ ಸಂತ ವ್ಯಾಲೆಂಟೈನ್ ಅಂದಿನ ಮೋಸ್ಟ್ ಆ್ಯಂಬೀಷಿಯಸ್ ರೂಲರ್ ಎನಿಸಿಕೊಂಡಿದ್ದ ಕ್ಲಾಡಿಯಸ್ ಎನ್ನುವಂತಹ ರಾಜನ ಆಸ್ಥಾನದಲ್ಲಿ ಸಂತನಾಗಿದ್ದವರು. ಆತನ ಕಾಲದಲ್ಲಿ ಕ್ಲಾಡಿಯಸ್ ತನ್ನ ಸೇನೆಯವರನ್ನು ಮದುವೆಯಾಗಲು ಬಿಡುವುದಿಲ್ಲ. ಕ್ಲಾಡಿಯಸ್​ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೆ ಒಬ್ಬಂಟಿಯಾಗಿದ್ದಷ್ಟು ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂದು. ಆತನ ಸೈನ್ಯದಲ್ಲಿ ಬಹಳಷ್ಟು ಮಂದಿ ಕೀಳರಿಮೆಗೆ ಒಳಗಾಗಿದ್ದರು ಎನ್ನುವ ಸತ್ಯ ಆತನಿಗೆ ಗೊತ್ತಿರಲಿಲ್ಲ.

ಕ್ಲಾಡಿಯಸ್ನ ಈ ನಿರ್ಧಾರದ ಬಗ್ಗೆ ಬಿಷಪ್ ವ್ಯಾಲೇಂಟಿನ್ ಅವರಿಗೆ ಅಸಮಾಧಾನ ಇತ್ತು. ಅವರೊಬ್ಬರೇ ಕ್ಲಾಡಿಯಸ್​ನ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು. ಜತೆಗೆ ಪ್ರೀತಿಸುತ್ತಿದ್ದ ಸೈನಿಕರನ್ನು ಅವರ ಪ್ರೇಮಿಗಳ ಜತೆ ಒಂದುಗೂಡಿಸುತ್ತಿದ್ದರಂತೆ. ಮದುವೆಯಾಗಲು ಇಚ್ಛಿಸುತ್ತಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದರಂತೆ. ಪ್ರೀತಿಯಿಂದ ಸೈನಿಕರನ್ನು ಇನ್ನಷ್ಟು ಹುರಿದುಂಬಿಸಬಹುದು ಎಂಬುದು ಅವರ ನಂಬಿಕೆಯಾಗಿತ್ತೋ ಏನೋ ಗೊತ್ತಿಲ್ಲ? ಆದರೆ ಸೈನ್ಯದಲ್ಲಿ ಕೀಳರಿಮೆಯಿಂದ ಬಳಲುತ್ತಿದ್ದ ಬಹಳಷ್ಟು ಸೈನಿಕರಿಗೆ ಕಂಕಣ ಭಾಗ್ಯ ಕರುಣಿಸಿಕೊಟ್ಟ ಆ ಮಹಾತ್ಮನನ್ನು ಆ ಜನಾಂಗ ಎಂದಿಗೂ ಮರೆಯೋದಿಲ್ಲ.

ಆದರೆ  ಈ ವಿಚಾರ ಹೇಗೋ ಕ್ಲಾಡಿಯಸ್ ಕಿವಿಗೆ ಬೀಳುತ್ತದೆ. ಇದೊಂದು ಅಪರಾಧ ಅಂತ ಸಂತ ವ್ಯಾಲೆಂಟೀನ್​ ಅವರನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ. ಈ ಅಪರಾಧಕ್ಕಾಗಿ ಅವರನ್ನು ಫೆಬ್ರವರಿ 14ರಂದು ಸೆರೆಮನೆಗೆ ತಳ್ಳಲಾಯಿತು. ಇಲ್ಲೊಂದು ಆಸಕ್ತಿಕರ ವಿಚಾರ ಎಂದರೆ ಆತ ಸೆರೆಮನೆಯಲ್ಲಿದ್ದಾಗಲೂ ಸೆರೆಮನೆಯ ಅಧಿಕಾರಿಯ ಮಗಳಿಗೆ ದೃಷ್ಟಿಯನ್ನು ಕರುಣಿಸುತ್ತಾರೆ. ಸಂತ ವ್ಯಾಲೆಂಟೈನ ಕಥೆ ಇಲ್ಲಿಗೆ ಮುಗಿಯಲಿಲ್ಲ. ಆತ ಸೆರೆಮನೆ ವಾಸದಲ್ಲಿದ್ದಾಗಲು , ಸಹಾಯ ಪಡೆದ ಬಹಳಷ್ಟು ಪ್ರೇಮಿಗಳು ಅವರನ್ನು ನೋಡಲು ಬರುತ್ತಿದ್ದರಂತೆ. ಇನ್ನು ಅಲ್ಲಿಯ ಜೈಲರ್ ಅವರ ಮಗಳನ್ನು ಸಂತ ವ್ಯಾಲೆಂಟೈನ್ ಮೆಚ್ಚಿ, ಆಕೆಗೆ ಪತ್ರವನ್ನು ಬರೆಯುತ್ತಾರೆ.

ಅವರನ್ನು ನೋಡಲು ಜೈಲರ್ ಅವರ ಮಗಳು ಆಗಾಗ ಬರುತ್ತಿರುತ್ತಾಳೆ. ಆತನಿಗೆ ಅವಳ ಮೇಲೆ ಪ್ರೇಮವಾಗುತ್ತದೆ. ಈ ಬಿಷಪ್ ತನ್ನ ಸಾವಿಗೆ ಮೊದಲು " ಇಂತಿ ನಿಮ್ಮ ವ್ಯಾಲೆಂಟೀನ್ " ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಸಯುತ್ತಾರಂತೆ. ಇದೇ ಭವಿಷ್ಯದಲ್ಲಿ ವ್ಯಾಲೆಂಟೈನ್ಸ್​ ಡೇ (ಪ್ರೇಮಿಗಳ ದಿನ) ಎಂದು ಕರೆಯಲ್ಪಡುತ್ತದೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ