Sucheta Bhandare: ರಾಗಿ ಲಾಡು ತಯಾರಿಸಿ ಲಕ್ಷ ಲಕ್ಷ ಆದಾಯಗಳಿಸುತ್ತಿರುವ ರೈತನ ಮಗಳ ಯಶಸ್ಸಿನ ಗುಟ್ಟು..

Sucheta Bhandare: ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ರಾಗಿ ಬೆಳೆ ಮಣ್ಣಿಗೂ ಉತ್ತಮವಾದುದು ಎಂಬುದನ್ನು ಹೇಳುವ ಸುಚೇತಾ ತಾವು ತಯಾರಿಸುವ ಲಾಡುಗಳನ್ನು ಈ ರೈತರು ಬೆಳೆಸುವ ರಾಗಿಯಿಂದಲೇ ತಯಾರಿಸಲಾಗುತ್ತದೆ ಎಂದು ತಿಳಿಸುತ್ತಾರೆ. ನಮ್ಮೊಂದಿಗೆ ಕೈ ಜೋಡಿಸಿರುವ ಎಲ್ಲಾ ರೈತರು ಸಾವಯವ ಕೃಷಿ ವಿಧಾನಗಳನ್ನು ಅನುಸರಿಸುತ್ತಿದ್ದು ಯಾವುದೇ ರಾಸಾಯನಿಕ ಅಂಶಗಳನ್ನು ಸೇರಿಸುವುದಿಲ್ಲ

ಸುಚೇತ ಭಂಡಾರಿ

ಸುಚೇತ ಭಂಡಾರಿ

  • Share this:

ಇತ್ತೀಚೆಗೆ ಕೃಷಿ(Agriculture) ಸಂಬಂಧಿತ ಉದ್ಯಮಗಳಲ್ಲಿ ಯುವಜನಾಂಗದವರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಪೋಷಕಾಂಶಭರಿತ ಹಾಗೂ ನೈಸರ್ಗಿಕ ಅಂಶಗಳಿಂದ ಮಿಳಿತಗೊಂಡಿರುವ ಹಲವಾರು ಬಗೆಯ ಆಹಾರ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಈ ಸಾಲಿಗೆ ಪುಣೆಯ 35ರ ಹರೆಯದ ಸುಚೇತಾ ಭಂಡಾರಿ(Sucheta Bhandare) ಹೊಸ ಸೇರ್ಪಡೆಯಾಗಿದ್ದು 2019ರಲ್ಲಿ ಇವರು ಹುಟ್ಟುಹಾಕಿದ ಅರ್ಥ್ ಪೂರ್ಣ ಸಂಸ್ಥೆ ರಾಗಿ ಲಾಡು, ಇತರ ಪೋಷಕಾಂಶಭರಿತ ಹಾಗೂ ಆರೋಗ್ಯಭರಿತ ಆಹಾರ ಪದಾರ್ಥಗಳನ್ನು ಭಾರತದಾದ್ಯಂತ ಪೂರೈಕೆ ಮಾಡುತ್ತಿದೆ. ಹಾಗಾದರೆ ಸುಚೇತಾ ಅವರ ಸಾಧನೆ, ಗಳಿಸಿದ ವರಮಾನ, ಇವರು ತಯಾರಿಸುವ ಆಹಾರಗಳಲ್ಲಿ ವೈವಿಧ್ಯತೆಗಳ ಕುರಿತು ವಿವರವಾದ ಮಾಹಿತಿ ಇಲ್ಲಿದೆ


ಆರಂಭಿಕ ಹೂಡಿಕೆ 5,000ರೂ. ತಿಂಗಳ ಆದಾಯ  ಹತ್ತಿರ 1 ಲಕ್ಷ..!


ನಾನು ರೈತರ ಮಗಳು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸುಚೇತಾ ತನ್ನ ಸಂಸ್ಥೆಯ ಮೂಲಕ ಆರೋಗ್ಯಕರ ಹಾಗೂ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಾರೆ. ಬೆಟರ್ ಇಂಡಿಯಾಗೆ ತಮ್ಮ ತಿಂಡಿಗಳಲ್ಲಿ ಬಳಸುವ ಪದಾರ್ಥಗಳ ವಿವರಗಳನ್ನು ನೀಡಿರುವ ಸುಚೇತಾ ಲಾಡುಗಳನ್ನು ಹಾಗೂ ಇತರ ತಿಂಡಿಗಳನ್ನು ತಯಾರಿಸುವಾಗ ಬೆಲ್ಲ, ನೆಲಗಡಲೆ, ಹುರಿ ಅಕ್ಕಿ ಹಾಗೂ ಹುರಿದ ಧಾನ್ಯಗಳನ್ನು ಬಳಸುವುದಾಗಿ ಹೇಳಿದ್ದಾರೆ. ಆರಂಭದಲ್ಲಿ ಈ ಉತ್ಪನ್ನಗಳಿಗೆ ಅವರು ಹೂಡಿಕೆ ಮಾಡಿರುವುದು 5,000 ರೂ., ಈಗ ತಿಂಗಳಿಗೆ 1 ಲಕ್ಷದ ದುಡಿಮೆ ಗಳಿಸುತ್ತಿದ್ದಾರೆ.


ಸಂಪೂರ್ಣ ನೈಸರ್ಗಿಕ ವಿಧಾನ:


ನಾವು ಬಳಸುವ ಹೆಚ್ಚಿನ ಆಹಾರ ಪದಾರ್ಥಗಳು ಹೊಲದಲ್ಲಿಯೇ ಬೆಳೆದವುಗಳು ಎಂದು ಸುಚೇತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇನ್ನು ಕಟಾವಿನ ಸಮಯದಲ್ಲಿ ತಂದೆ ತಾಯಿಗೆ ಸಹಾಯ ಮಾಡುವುದೂ ಕೂಡ ನನಗೆ ಹೆಚ್ಚು ಖುಷಿನೀಡುವ ವಿಚಾರ ಎಂಬುದು ಸುಚೇತಾ ಮನದಾಳದ ಮಾತಾಗಿದೆ. ವಿದ್ಯಾಭ್ಯಾಸ ಮುಗಿದೊಡನೆ ಪುಣೆಯ ಕಾಲ್‌ಸೆಂಟರ್ ಒಂದರಲ್ಲಿ ಏಳು ವರ್ಷಗಳ ಕಾಲ ಸುಚೇತಾ ದುಡಿದಿದ್ದರು. ಈ ಸಮಯದಲ್ಲಿ ತಾನು ಏನಾದರೂ ಉನ್ನತವಾಗಿರುವುದನ್ನು ಸಾಧಿಸಬೇಕೆಂಬುದು ಸುಚೇತಾ ಮನಸ್ಸಿನಲ್ಲಿತ್ತು. ತಾವು ಮಾಡುತ್ತಿದ್ದ ಉದ್ಯೋಗ ತೃಪ್ತಿನೀಡಿದ್ದರೂ ಅವರನ್ನು ಏನೋ ಒಂದು ಕೊರತೆ ಕಾಡುತ್ತಿತ್ತು. ಈ ಸಮಯದಲ್ಲಿ ಊರಿಗೆ ಬಂದಿದ್ದ ಸುಚೇತಾ ತಮ್ಮದೇ ಸಂಸ್ಥೆಯನ್ನು ಹುಟ್ಟುಹಾಕುವ ನಿರ್ಧಾರದಲ್ಲಿ ಅಚಲರಾಗಿದ್ದರು ಹಾಗೂ 2019ರಲ್ಲಿ ಅರ್ಥ್ ಪೂರ್ಣ ಸ್ಥಾಪನೆಯಾಯಿತು ಎಂದು ತಿಳಿಸಿದರು. ಇನ್ನು ತಮ್ಮ ಸಂಸ್ಥೆಗೆ ಅರ್ಥ್ ಪೂರ್ಣ ಎಂಬ ಹೆಸರನ್ನು ಏಕೆ ನೀಡಲಾಯಿತು ಎಂದು ಕೇಳಿದಾಗ ಸಂಪೂರ್ಣ ಭೂಮಿ ಎಂಬ ತಾತ್ಪರ್ಯವನ್ನು ನನ್ನ ಸಂಸ್ಥೆಯ ಹೆಸರು ಹೊಂದಿದೆ. ನಾನು ಸಂಸ್ಥೆಯಲ್ಲಿ ತಯಾರಿಸುವ ಉತ್ಪನ್ನಗಳು ಭೂಮಿಯಿಂದಲೇ ಬರುತ್ತದೆ ಹಾಗೂ ಮರಳಿ ಭೂಮಿಯನ್ನೇ ಸೇರುತ್ತದೆ ಹೀಗಾಗಿ ಭೂಮಿ ಎಂಬ ಹೆಸರನ್ನು ಸಂಸ್ಥೆ ಹೊಂದಿದೆ ಎಂದು ಸುಚೇತಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಮಕ್ಕಳಿಗೆ ಆನ್​ಲೈನ್​ ಕ್ಲಾಸ್ ಸುಲಭ ಮಾಡಲು ವಿನೂತನ ಯಂತ್ರ ಅಭಿವೃದ್ಧಿಪಡಿಸಿದ ಶಿಕ್ಷಕ ..

ಕೈಗೆಟಕುವ ಆರೋಗ್ಯಪೂರ್ಣ ತಿಂಡಿ:


ಅರ್ಥ್ ಪೂರ್ಣ ಸಂಸ್ಥೆ ಹುಟ್ಟುಹಾಕಿರುವುದು ಆರೋಗ್ಯಭರಿತ ಹಾಗೂ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ದೃಷ್ಟಿಯಲ್ಲಿಟ್ಟುಕೊಂಡಾಗಿದೆ. ನಮ್ಮ ಸಂಸ್ಥೆಯಲ್ಲಿ ದೊರೆಯುವ ಉತ್ಪನ್ನಗಳು ಕೈಗೆಟಕುವ ದರದಲ್ಲಿದ್ದು ಸಂಪೂರ್ಣ ಆರೋಗ್ಯಭರಿತವಾಗಿವೆ. ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ನೀಡಲು ಸಾಧ್ಯವಾಗದ ಕಾರಣ ನಾಸಿಕ್‌ನ ರೈತರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದರು.


ಸುಚೇತಾ ಇದ್ದ ಪ್ರದೇಶದಲ್ಲಿ ಹೆಚ್ಚಿನ ರೈತರು ಟೊಮ್ಯಾಟೋ ಬೆಳೆಸುತ್ತಿದ್ದರು. ಆದರೆ ಈ ಬೆಳೆ ಮಾರುಕಟ್ಟೆ ತಲುಪುತ್ತಿದ್ದಂತೆಯೇ ತೀವ್ರ ಬೆಲೆ ಕುಸಿತ ಕಾಣುತ್ತಿತ್ತು. ಈ ಸಮಯದಲ್ಲಿ ಪರ್ಯಾಯ ಬೆಳೆ ಬೆಳೆಯುವುದೇ ರೈತರ ಮುಂದಿದ್ದ ಏಕೈಕ ಉಪಾಯವಾಗಿತ್ತು. ಈ ಸಮಯದಲ್ಲಿ ಪುಣೆಯ 25 ರೈತರನ್ನು ಭೇಟಿಯಾಗಿ ರಾಗಿ ಬೆಳೆಯುವ ಸಲಹೆ ನೀಡಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು.


ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ರಾಗಿ ಬೆಳೆ ಮಣ್ಣಿಗೂ ಉತ್ತಮವಾದುದು ಎಂಬುದನ್ನು ಹೇಳುವ ಸುಚೇತಾ ತಾವು ತಯಾರಿಸುವ ಲಾಡುಗಳನ್ನು ಈ ರೈತರು ಬೆಳೆಸುವ ರಾಗಿಯಿಂದಲೇ ತಯಾರಿಸಲಾಗುತ್ತದೆ ಎಂದು ತಿಳಿಸುತ್ತಾರೆ. ನಮ್ಮೊಂದಿಗೆ ಕೈ ಜೋಡಿಸಿರುವ ಎಲ್ಲಾ ರೈತರು ಸಾವಯವ ಕೃಷಿ ವಿಧಾನಗಳನ್ನು ಅನುಸರಿಸುತ್ತಿದ್ದು ಯಾವುದೇ ರಾಸಾಯನಿಕ ಅಂಶಗಳನ್ನು ಸೇರಿಸುವುದಿಲ್ಲ ಹಾಗೂ ನಾನು ತಯಾರಿಸುವ ಲಾಡುವಿನ ಪಾಕ ಪದ್ಧತಿಯನ್ನು ನನ್ನ ಅಜ್ಜಿ ಹಾಗೂ ತಾಯಿಯಿಂದ ತಿಳಿದುಕೊಂಡಿರುವುದು ಎಂದು ತಿಳಿಸಿದ್ದಾರೆ.


ಇನ್ನು ಲಾಡಿನಲ್ಲಿ ಯಾವೆಲ್ಲಾ ಅಗತ್ಯ ಪೌಷ್ಟಿಕಾಂಶಗಳನ್ನು ಸೇರಿಸಬಹುದು ಎಂಬುದನ್ನು ಖಾತ್ರಿಪಡಿಸಲು ಪೌಷ್ಟಿಕತಜ್ಞರನ್ನು ಸಂಪರ್ಕಿಸಿದಾಗ ಅವರು ಅಗಸೆ ಬೀಜ ಹಾಗೂ ಬೆಲ್ಲವನ್ನು ಲಾಡಿನ ತಯಾರಿಯಲ್ಲಿ ಬಳಸಲು ಸೂಚಿಸಿದ್ದಾರೆ ಎಂಬುದನ್ನು ಸುಚೇತಾ ತಿಳಿಸಿದ್ದಾರೆ.


ಆರೋಗ್ಯಪೂರ್ಣ ತಿಂಡಿಗೆ ಮಾರುಕಟ್ಟೆಯಲ್ಲಿರುವ ಹೆಚ್ಚಿನ ಬೇಡಿಕೆ:


ಸುಚೇತಾ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಗ್ಯ ಪೂರ್ಣ ತಿಂಡಿಗೆ ಎಷ್ಟು ಬೇಡಿಕೆ ಇದೆ ಎಂಬುದನ್ನು ಅರಿತುಕೊಂಡಿದ್ದರು. ಸ್ವತಃ ನಾನು ಕರಿದ ತಿಂಡಿಗಳ ಬದಲಿಗೆ ವಡಾ ಪಾವ್‌ಗೆ ಬದಲಿಸಿಕೊಂಡಿದ್ದೆ. ಅದೇ ರೀತಿ ನನ್ನ ಸ್ಹೇಹಿತರಲ್ಲಿ ಹೆಚ್ಚಿನವರು ಮಧುಮೇಹ ಕಾಯಿಲೆಗಳಂತಹ ಇತರ ಕಾಯಿಲೆಗಳಿಂದ ಬಳಲುತ್ತಿರುವುದನ್ನು ನಾನು ಗಮನಿಸಿದ್ದೆ. ವ್ಯಾಯಾಮದೊಂದಿಗೆ ಪೌಷ್ಟಿಕಭರಿತ ಆಹಾರ ಪದಾರ್ಥಗಳನ್ನು ಸೇವಿಸಿದರೆ ಮಾತ್ರವೇ ಉತ್ತಮ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯ ಎಂಬ ಅಂಶವನ್ನು ನಾನು ಕಂಡುಕೊಂಡೆ. ಹೀಗಾಗಿಯೇ ಪೋಷಕಾಂಶಭರಿತ ಆಹಾರ ಪದಾರ್ಥಗಳ ತಯಾರಿಗೆ ನಾನು ತೊಡಗಿಕೊಂಡೆ ಎಂದು ಸುಚೇತಾ ಹೇಳುತ್ತಾರೆ.


ಗ್ರಾಹಕರಿಗೆ ಈ ಬಗೆಯ ತಿಂಡಿಗಳನ್ನು ತಲುಪಿಸುವಲ್ಲಿ ನಾವು ಹೆಮ್ಮೆಪಡುತ್ತಿದ್ದು ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನಮ್ಮ ಸಂಸ್ಥೆ ಹೆಚ್ಚಿನವರಿಗೆ ಈ ಬಗೆಯ ತಿಂಡಿಗಳನ್ನು ತಲುಪಿಸುವಲ್ಲಿ ನೆರವನ್ನು ನೀಡಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.


ಇನ್ನು ಸುಚೇತಾ ಖುಷಿಗೆ ಮತ್ತೊಂದು ಕಾರಣವೆಂದರೆ ಅವರು ತಯಾರಿಸಿದ ಲಾಡುಗಳನ್ನು ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದು 30% ಆರ್ಡರ್‌ಗಳನ್ನು ಮರಳಿ ಮರಳಿ ನೀಡುತ್ತಿದ್ದಾರೆ ಎಂಬುದಾಗಿದೆ. ಒಮ್ಮೆ ಇವರಿಂದ ಲಡ್ಡುಗಳನ್ನು ಖರೀದಿಸಿದವರು ಮತ್ತೊಮ್ಮೆ ಇವರನ್ನು ಸಂಪರ್ಕಿಸಿ ಲಾಡು ಹಾಗೂ ಇತರ ತಿಂಡಿಗಳಿಗೆ ಆರ್ಡರ್ ನೀಡುತ್ತಾರೆ.


ಇದನ್ನೂ ಓದಿ: ಚೀನಾದ 600 ಬ್ರ್ಯಾಂಡ್‌ಗಳನ್ನು ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಶಾಶ್ವತವಾಗಿ ನಿಷೇಧಿಸಿದ್ದೇಕೆ?

ತಿಂಗಳಿಗೆ ಸುಚೇತಾ ಮಾರಾಟ ಮಾಡುವ ಲಾಡುಗಳು ಹತ್ತಿರ ಹತ್ತಿರ 2,500 ಆಗಿದ್ದು ಹಬ್ಬದ ಸೀಸನ್‌ನಲ್ಲಿ ಈ ಪ್ರಮಾಣ ಹೆಚ್ಚಿಸುವ ಇರಾದೆಯನ್ನು ಸುಚೇತಾ ಇರಿಸಿಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಮಾತ್ರವಲ್ಲದೆ ಹಳ್ಳಿಗಳಲ್ಲಿರುವವರಿಗೆ ಕೂಡ, ಸ್ಥಳೀಯವಾಗಿ ಉತ್ಪಾದಿಸಿದ ಆಹಾರ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿಸುತ್ತದೆ. ಇದರೊಂದಿಗೆ ಆರೋಗ್ಯದ ಕಾಳಜಿಯನ್ನು ಹೆಚ್ಚಿಸುತ್ತದೆ ಎಂದು ಸುಚೇತಾ ಹೇಳುತ್ತಾರೆ.

Published by:Sandhya M
First published: