Baghel Sits on Dharna: ಸಿಎಂ ಬಘೇಲ್​ರನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ತಡೆದ ಅಧಿಕಾರಿಗಳು; ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮಾಡಿದ ಮುಖ್ಯಮಂತ್ರಿ

"ಲಖಿಂಪುರದಲ್ಲಿ ಸೆಕ್ಷನ್ 144 (ಸಿಆರ್‌ಪಿಸಿ) ಜಾರಿಯಲ್ಲಿರುವಾಗ, ಲಕ್ನೋದಲ್ಲಿ ಇಳಿಯಲು ಏಕೆ ಅವಕಾಶ ನೀಡುತ್ತಿಲ್ಲ" ಎಂದು ಅವರು ಕೇಳಿದರು. "ಉತ್ತರ ಪ್ರದೇಶದಲ್ಲಿ ನಾಗರಿಕ ಹಕ್ಕುಗಳನ್ನು ರದ್ದುಪಡಿಸಲಾಗಿದೆಯೇ? ಯುಪಿಗೆ ಹೋಗಲು ಪ್ರತ್ಯೇಕ ವೀಸಾ ಅಗತ್ಯವಿದೆಯೇ? ಜನರನ್ನು ಏಕೆ ತಡೆಯಲಾಗುತ್ತಿದೆ? ಇದು ಅತ್ಯಂತ ದುರದೃಷ್ಟಕರ ಎಂದು ಸಿಎಂ ಬಘೇಲ್ ಅವರು ಹೇಳಿದರು.

ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಸಿಎಂ ಭೂಪೇಶ್ ಬಘೇಲ್

ಲಕ್ನೋ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಸಿಎಂ ಭೂಪೇಶ್ ಬಘೇಲ್

  • Share this:
    ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ (Uttar Pradesh  Lakhimpur Kheri Incident) ಭಾನುವಾರ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ನಾಲ್ವರು ರೈತರಿಗೆ ಸಾಂತ್ವನ ಹೇಳಲು ಲಕ್ನೋಗೆ ಬಂದ ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Chhattisgarh Chief Minister Bhupesh Baghel) ಅವರನ್ನು ಲಕ್ನೋ ವಿಮಾನ ನಿಲ್ದಾಣದಲ್ಲೇ ತಡೆದ ಘಟನೆ ನಡೆದಿದೆ. ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ತಮ್ಮನ್ನು ತಡೆದ ಪೊಲೀಸ್ ಅಧಿಕಾರಿಗಳ ನಡೆ ವಿರೋಧಿಸಿ ಮುಖ್ಯಮಂತ್ರಿ ಬಘೇಲ್ ಅವರು ಸ್ಥಳದಲ್ಲಿಯೇ ಕುಳಿತ ಪ್ರತಿಭಟನೆ ಸಹ ನಡೆಸಿದರು.

    ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಲಖಿಂಪುರ್ ಖೇರಿಯಲ್ಲಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ. ಬಘೇಲ್ ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ಲಖಿಂಪುರ್ ಖೇರಿಗೆ ಯಾವ ಉದ್ದೇಶವೂ ಇಲ್ಲದೇ ಭೇಟಿ ನೀಡುತ್ತಿದ್ದೇನೆ. ಆದರೆ ವಿಮಾನ ನಿಲ್ದಾಣದಿಂದ ಹೊರಹೋಗುವುದನ್ನು ಏಕೆ ತಡೆಯುತ್ತಿದ್ದಾರೆ ಎಂದು ಅವರು ಪೊಲೀಸ್ ಅಧಿಕಾರಿಗಳನ್ನು ಕೇಳುತ್ತಿದ್ದಾರೆ.

    ಲಖ್ನೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡದ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರವನ್ನು ಬಾಘೆಲ್ ಅವರು ಸೋಮವಾರ ತರಾಟೆಗೆ ತೆಗೆದುಕೊಂಡರು ಮತ್ತು ಉತ್ತರ ಪ್ರದೇಶ ರಾಜ್ಯದಲ್ಲಿ ನಾಗರಿಕ ಹಕ್ಕುಗಳನ್ನು ರದ್ದುಪಡಿಸಲಾಗಿದೆಯೇ ಎಂದು ಪ್ರಶ್ನೆ ಮಾಡಿದರು.



    ಲಿಖಿಂಪುರ್ ಖೇರಿಗೆ ಬರುವುದಾಗಿ ಘೋಷಣೆ ಮಾಡಿದ್ದ ಛತ್ತೀಸ್‌ಗಢದ ಮುಖ್ಯಮಂತ್ರಿ ಬಘೇಲ್ ಮತ್ತು ಪಂಜಾಬ್‌ನ ಉಪಮುಖ್ಯಮಂತ್ರಿ ಸುಖಜಿಂದರ್ ಎಸ್ ರಾಂಧವಾ ಅವರ ಆಗಮನಕ್ಕೆ ಅವಕಾಶ ನೀಡದಂತೆ ಉತ್ತರ ಪ್ರದೇಶ ಸರ್ಕಾರವು ಲಕ್ನೋ ವಿಮಾನ ನಿಲ್ದಾಣದ ಪ್ರಾಧಿಕಾರವನ್ನು ವಿನಂತಿಸಿತ್ತು. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಹಿರಿಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿರುವ ಬಘೇಲ್ ಅವರು, ಲಖಿಂಪುರ್ ಘಟನೆಯು ಬಿಜೆಪಿ ವಿರುದ್ಧ ಧ್ವನಿ ಎತ್ತುವವರನ್ನು ತುಳಿಯಲಾಗುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

    "ಭಾನುವಾರ ರಾತ್ರಿ, ಲಖಿಂಪುರಕ್ಕೆ ಹೋಗುತ್ತಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಸೀತಾಪುರದಲ್ಲಿ ಬಂಧಿಸಲಾಯಿತು. ನಾನು (ಸೋಮವಾರ ಬೆಳಿಗ್ಗೆ) ಅಲ್ಲಿಗೆ ಹೋಗಲು ನಿರ್ಧರಿಸಿದ್ದೆ ಮತ್ತು ನನ್ನ ವಿಮಾನ ಸಿದ್ಧವಾಗಿತ್ತು. ಆದರೆ ಯುಪಿ ಸರ್ಕಾರವು ಲ್ಯಾಂಡಿಂಗ್ ಅನುಮತಿಯನ್ನು ನಿರಾಕರಿಸಿದೆ (ಲಕ್ನೋ ವಿಮಾನ ನಿಲ್ದಾಣದಲ್ಲಿ) "ಎಂದು ಸಿಎಂ ಬಘೇಲ ಅವರು ಸುದ್ದಿಗಾರರಿಗೆ ತಿಳಿಸಿದರು.

    "ಲಖಿಂಪುರದಲ್ಲಿ ಸೆಕ್ಷನ್ 144 (ಸಿಆರ್‌ಪಿಸಿ) ಜಾರಿಯಲ್ಲಿರುವಾಗ, ಲಕ್ನೋದಲ್ಲಿ ಇಳಿಯಲು ಏಕೆ ಅವಕಾಶ ನೀಡುತ್ತಿಲ್ಲ" ಎಂದು ಅವರು ಕೇಳಿದರು. "ಉತ್ತರ ಪ್ರದೇಶದಲ್ಲಿ ನಾಗರಿಕ ಹಕ್ಕುಗಳನ್ನು ರದ್ದುಪಡಿಸಲಾಗಿದೆಯೇ? ಯುಪಿಗೆ ಹೋಗಲು ಪ್ರತ್ಯೇಕ ವೀಸಾ ಅಗತ್ಯವಿದೆಯೇ? ಜನರನ್ನು ಏಕೆ ತಡೆಯಲಾಗುತ್ತಿದೆ? ಇದು ಅತ್ಯಂತ ದುರದೃಷ್ಟಕರ. ಏಕೆಂದರೆ ಇದು ನಾಗರಿಕ ಹಕ್ಕುಗಳ ಪ್ರಶ್ನೆಯಾಗಿದೆ. ಜನರು ತಮ್ಮ ಸಂತಾಪವನ್ನು ವ್ಯಕ್ತಪಡಿಸಲು ಮತ್ತು ಘಟನೆಯಸ್ಥಳಕ್ಕೆ ಹೋಗಲು ಸಾಧ್ಯವಿಲ್ಲ. ಅವರು (ಬಿಜೆಪಿ ಸರ್ಕಾರ) ನಿಲ್ಲಿಸುತ್ತಿದ್ದರೆ, ಅವರ ಮನಸ್ಥಿತಿ ಏನು? "ಎಂದು ಅವರು ಪ್ರಶ್ನೆ ಮಾಡಿದ್ದಾರೆ.

    (ಭಾನುವಾರ ಲಖಿಂಪುರ್ ಖೇರಿಯಲ್ಲಿ) ರೈತರನ್ನು ಕೆಣಕಿದ ರೀತಿ, ಅವರ ವಿರುದ್ಧ ಧ್ವನಿ ಎತ್ತುವವರನ್ನು ತುಳಿದು ತುಳಿದುಬಿಡುತ್ತೇವೆ ಎಂಬ ಬಿಜೆಪಿ ಸರ್ಕಾರದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. "ಈ ಮನಸ್ಥಿತಿ ತುಂಬಾ ಅಪಾಯಕಾರಿ ಮತ್ತು ಇಡೀ ದೇಶವು ಕ್ಷೋಭೆಗೊಳಗಾಗಿದೆ ಮತ್ತು ಎಲ್ಲರೂ ಲಖಿಂಪುರಕ್ಕೆ ಹೋಗಲು ಬಯಸುತ್ತಾರೆ" ಎಂದು ಅವರು ಹೇಳಿದರು, ಈ ಘಟನೆಯು "ಬಿಜೆಪಿಯ ನಿಜವಾದ ಮುಖವನ್ನು ಬಹಿರಂಗಪಡಿಸಿದೆ" ಎಂದು ಸಿಎಂ ಬಘೇಲ್ ಅವರು ಹೇಳಿದರು.

    ಇದನ್ನು ಓದಿ: Siddaramaiah: ಅಸತ್ಯ, ಹಿಂಸೆಯಲ್ಲಿ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿರುವುದು ದುರಾದೃಷ್ಟ; ಸೋನಿಯಾ ಗಾಂಧಿ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿಕೆ

    ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘಟನೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಗಾರರು ಹೇಳಿದಾಗ, ಬಘೇಲ್, "ಅವರು ಪ್ರತಿ ಘಟನೆಯ ನಂತರ ಇದನ್ನು ಹೇಳುತ್ತಾರೆ. ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ ಅವರು ಅಧಿಕಾರಕ್ಕೆ ಆಯ್ಕೆಯಾದರು ಮತ್ತು ಈಗ ಇಡೀ ದೇಶವು ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗೆ ಉಲ್ಲಂಘನೆಯಾಗಿದೆ ಎಂದು ನೋಡುತ್ತಿದೆ. ಯೋಗಿ ಆದಿತ್ಯನಾಥ್ ನಿಯಂತ್ರಣದಲ್ಲಿ ಏನೂ ಉಳಿದಿಲ್ಲ, ಮತ್ತು ಅವರದೇ ಜನರು ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    Published by:HR Ramesh
    First published: