Airports: ಚೆಕ್-ಇನ್ ಕೌಂಟರ್​ಗಳಲ್ಲಿ ಪ್ರಯಾಣಿಕರಿಗೆ ಶುಲ್ಕ ನೀಡಬೇಕಾ? ವಿಮಾನಯಾನ ಸಂಸ್ಥೆಗಳಿಗೆ ಸರ್ಕಾರ ಹೇಳಿದ್ದೇನು?

ಹೊಸ ನಿಯಮದ ಪ್ರಕಾರ ವಿಮಾನ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಟ್ವಿಟರ್‌ನಲ್ಲಿ ಪ್ರಯಾಣಿಕರಿಂದ ಹಲವಾರು ದೂರುಗಳು ಬಂದ ನಂತರ ವಿಮಾನಯಾನ ಸಚಿವಾಲಯ ಈ ಹೊಸ ನಿಯಮವನ್ನು ಜಾರಿ ಮಾಡಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
​​ವಿಮಾನ ಪ್ರಯಾಣಿಕರಿಗೆ (air passenger) ಆಗುತ್ತಿರುವ ಕೆಲವು ಅನಾನುಕೂಲಗಳನ್ನು ಸರಿಪಡಿಸುವತ್ತ ಕೆಲವು ದಿನಗಳಿಂದ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರಿಯಾದ ಟಿಕೆಟ್ (Ticket) ಹೊಂದಿರುವ ಪ್ರಯಾಣಿಕರಿಗೆ ಬೋರ್ಡಿಂಗ್ (Boarding) ನಿರಾಕರಿಸಿದರೆ ವಿಮಾನಯಾನ ಸಂಸ್ಥೆಗಳು 10,000 ರೂ.ಪರಿಹಾರ ನೀಡಬೇಕು ಎಂಬ ಮಹತ್ವದ ಆದೇಶವನ್ನು ಕಳೆದ ತಿಂಗಳಷ್ಟೇ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಜಾರಿ ಮಾಡಿತ್ತು. ಪ್ರಸ್ತುತ ಅದರ ಬೆನ್ನಲ್ಲೇ ಮತ್ತೊಂದು ನಿಯಮವನ್ನು ಜಾರಿ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ ವಿಮಾನ ಪ್ರಯಾಣಿಕರು ಇನ್ನು ಮುಂದೆ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ಗಳಲ್ಲಿ (Check-in Counter) ಬೋರ್ಡಿಂಗ್ ಪಾಸ್‌ಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಟ್ವಿಟರ್‌ನಲ್ಲಿ ಪ್ರಯಾಣಿಕರಿಂದ ಹಲವಾರು ದೂರುಗಳು ಬಂದ ನಂತರ ವಿಮಾನಯಾನ ಸಚಿವಾಲಯ ಈ ಹೊಸ ನಿಯಮವನ್ನು ಜಾರಿ ಮಾಡಿದೆ.

ಇನ್ಮುಂದೆ ಪ್ರಯಾಣಿಕರಿಗೆ ಚೆಕ್-ಇನ್ ಕೌಂಟರ್‌ಗಳಲ್ಲಿ ಶುಲ್ಕ ಇಲ್ಲ
ಚೆಕ್-ಇನ್ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಾಗಿ ಪ್ರತಿ ಪ್ರಯಾಣಿಕರು ಸುಮಾರು 200 ರೂಪಾಯಗಳ ಶುಲ್ಕ ನೀಡುತ್ತಿದ್ದರು. ಪ್ರಯಾಣಿಕರಿಂದ ಹೆಚ್ಚುವರಿ ಹಣ ಪೀಕುತ್ತಿದ್ದ ವಿಮಾನಯಾನ ಸಂಸ್ಥೆಗಳ ಈ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಗುರುವಾರ ಸರ್ಕಾರ ಸೂಚನೆ ಹೊರಡಿಸಿದೆ.

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಪ್ರಸ್ತುತ ತನ್ನ ಚೆಕ್-ಇನ್ ಕೌಂಟರ್‌ನಲ್ಲಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಕೇಳಿದರೆ ಶುಲ್ಕವನ್ನು ವಿಧಿಸುವ ಕ್ರಮ ಹೊಂದಿದೆ. ಈ ಎಲ್ಲಾ ಬೆಳವಣಿಗೆ, ಪ್ರಯಾಣಿಕರ ದೂರುಗಳನ್ನು ಆಲಿಸಿದ ವಿಮಾನಯಾನ ಸಚಿವಾಲಯ "ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್‌ಗಳನ್ನು ನೀಡಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತವನ್ನು ವಿಧಿಸುತ್ತಿರುವುದು ಎಂಸಿಎ ಗಮನಕ್ಕೆ ಬಂದಿದೆ. ಈ ಕ್ರಮವನ್ನು ತಕ್ಷಣ ನಿಲ್ಲಿಸಬೇಕು" ಎಂದು ಸರ್ಕಾರದ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಿದೆ.

ಹೆಚ್ಚುವರಿ ಶುಲ್ಕ ಪಡೆಯಲು ವಿಮಾನಯಾನ ಸಂಸ್ಥೆಗಳು ಕೈಗೊಂಡ ಕ್ರಮಗಳು
ಏರ್‌ಕ್ರಾಫ್ಟ್ ನಿಯಮಗಳು, 1937ರ ನಿಯಮ 135ರ ಅಡಿಯಲ್ಲಿ, ಈ ಹೆಚ್ಚುವರಿ ಮೊತ್ತವು ‘ನಿಯಮಗಳಿಗೆ ಅನುಸಾರವಾಗಿಲ್ಲ’ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಸಮಸ್ಯೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಈ ಹಿಂದೆ ಹೇಳಿದ್ದರು.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಫ್ರೀ ಎಂಟರ್ಟೈನ್ಮೆಂಟ್ ಕೊಟ್ಟ ಹುಡುಗಿ! ಜನ ಖುಷಿ ಪಡಲಿಲ್ಲ

ಜೆಟ್ ಇಂಧನ, ರೂಪಾಯಿ ಮೌಲ್ಯ ಕುಸಿತ, ಕೋವಿಡ್ ಈ ಎಲ್ಲಾ ಕಾರಣಗಳಿಂದಾಗಿ ಹೆಚ್ಚುವರಿ ಶುಲ್ಕ ಪಡೆಯಲು ವಿಮಾನಯಾನ ಸಂಸ್ಥೆಗಳು ಈ ಕ್ರಮ ಕೈಗೊಂಡಿದ್ದರು. ಆದರೆ ಇದರ ಬಗ್ಗೆ ಚಕಾರವೆತ್ತಿದ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಲು ಶುರು ಮಾಡಿದರು ಮತ್ತು ದೂರುಗಳನ್ನು ಸಹ ನೀಡಿದರು.

ಚೆಕ್-ಇನ್ ಕೌಂಟರ್‌ಗಳಲ್ಲಿ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದ್ಯಾಕೆ?
ಮೇ 25, 2020 ರಿಂದ 2 ತಿಂಗಳ ಅಮಾನತ್ತಿನ ನಂತರ ಪುನರಾರಂಭಿಸಿ ನಿಯಮಿತ ದೇಶೀಯ ವಿಮಾನಗಳ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿಸಲಾದ ಪ್ರಮುಖ ಷರತ್ತುಗಳಲ್ಲಿ ಕಡ್ಡಾಯ ಆನ್‌ಲೈನ್ ಚೆಕ್-ಇನ್ ಒಂದಾಗಿತ್ತು ಮತ್ತು ಇದನ್ನು ಕೋವಿಡ್ ಅವಧಿಯಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಗೋ ಫಸ್ಟ್‌ನಂತಹ ವಿಮಾನಯಾನ ಸಂಸ್ಥೆಗಳು ಆನ್‌ಲೈನ್ ಚೆಕ್-ಇನ್ ಮಾಡಲು ವಿಫಲವಾದರೆ ಪ್ರಯಾಣಿಕರಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿದವು. ಈ ವಿಮಾನಯಾನ ಸಂಸ್ಥೆಗಳು ಬೋರ್ಡಿಂಗ್ ಪಾಸ್ ಅನ್ನು ಮುದ್ರಿಸಲು ಪ್ರಯಾಣಿಕರಿಗೆ ಸರಾಸರಿ 200 ರೂಗಳನ್ನು ವಿಧಿಸುತ್ತಿದ್ದವು.

ಇದನ್ನೂ ಓದಿ: Heart Warming: ವಿಮಾನ ಹತ್ತಿದ ಪೋಷಕರು ಪೈಲಟ್ ಮಗನ ನೋಡಿ ಭಾವುಕ! ಚಂದದ ವಿಡಿಯೋ ಈಗ ವೈರಲ್

ಪ್ರಯಾಣಿಕರು ಈ ಕ್ರಮವನ್ನು ಶ್ಲಾಘಿಸಿದರೆ, ಇದು ವೆಬ್ ಚೆಕ್-ಇನ್ ಅನ್ನು ಪ್ರೋತ್ಸಾಹಿಸುವುದನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಚೆಕ್-ಇನ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ಏರ್‌ಲೈನ್ ಅಧಿಕಾರಿಗಳು ಹೇಳಿದ್ದಾರೆ. "ಪ್ರಯಾಣಿಕರ ಮೇಲೆ ಶುಲ್ಕ ವಿಧಿಸುವುದು ವಿಮಾನಯಾನ ಸಂಸ್ಥೆಗಳ ವಾಣಿಜ್ಯ ನಿರ್ಧಾರವಾಗಿತ್ತು. ಆದರೆ ಸಚಿವಾಲಯ ಯಾವುದನ್ನು ವಿಧಿಸಬಹುದು ಅಥವಾ ವಿಧಿಸಬಾರದು ಎಂಬುದನ್ನು ನಿರ್ಧರಿಸುತ್ತದೆ. ಅವರು ದೇಶೀಯ ವಿಮಾನ ದರಗಳನ್ನು ಸಹ ತೆಗೆದುಹಾಕುತ್ತಿದ್ದಾರೆ" ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
Published by:Ashwini Prabhu
First published: