Vlentine's Day 2021: ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಸಿಂಗಲ್ಸ್ ಬಗ್ಗೆ ಶಾದಿ.ಕಾಮ್ ನಡೆಸಿದೆ ಮಹತ್ವದ ಸಮೀಕ್ಷೆ!

ಶಾದಿ.ಕಾಮ್ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು 1,200 ಸಿಂಗಲ್ಸ್ ಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. #TakeThePressureOff ಅಭಿಯಾನದ ಭಾಗವಾಗಿ ಪ್ರೇಮಿಗಳ ದಿನದಂದು ಸಿಂಗಲ್ಸ್ ಎದುರಿಸುತ್ತಿರುವ ಒತ್ತಡವನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ಪರಿಹಾರ ಸೂಚಿಸಲು ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಶಾದಿ.ಕಾಮ್.

ಶಾದಿ.ಕಾಮ್.

  • Share this:
    ಮತ್ತೆ ಪ್ರೀತಿಯ ಮಾಸ ಫೆಬ್ರುವರಿ ಬಂದೇ ಬಿಟ್ಟಿದೆ. ಫೆಬ್ರುವರಿ ಅಂದ ತಕ್ಷಣ ಪ್ರೇಮಿಗಳ ಮನಸ್ಸು ಹಕ್ಕಿಯ ಥರಾ ಹಾರಾಡಲು ಶುರುವಾಗುತ್ತದೆ. ಈ ತಿಂಗಳು ಲವರ್ ಗಳಿಗೆ ನೆನಪಾಗೋದು ಒಂದೇ , ಅದುವೇ ವ್ಯಾಲೆಂಟೈನ್ಸ್ ಡೇ. ಹೌದು, ಇದೇ ಫೆಬ್ರುವರಿ 14ನೇ ತಾರೀಖು ಅಂದರೆ ಭಾನುವಾರ ಪ್ರೇಮಿಗಳ ದಿನವನ್ನು ಅದ್ದೂರಿಯಾಗಿ ಆಚರಿಲು ಜೋಡಿಗಳು ತುದಿಗಾಲ ಮೇಲೆ ನಿಂತಿವೆ. ಈ ಪ್ರೇಮಿಗಳ ಹಬ್ಬದ ದಿನದಂದು ಸಂಗಾತಿಗಳ ಭಾವನೆಯನ್ನು ಅರ್ಥಮಾಡಿಕೊಳ್ಳಲು ವಿಶ್ವದ ನಂ.1 ವೈವಾಹಿಕ ಜಾಲತಾಣ ಶಾದಿ.ಕಾಮ್ ಒಂದು ಸಮೀಕ್ಷೆಯನ್ನು ನಡೆಸಿದೆ.

    ಪ್ರೇಮಿಗಳು ತಮ್ಮ ಸಂಗಾತಿಯೊಂದಿಗೆ ಈ ದಿನವನ್ನು ಹಬ್ಬದಂತೆ ಆಚರಿಸಲು ಉತ್ಸುಕರಾಗಿದ್ದರೆ, ಸಿಂಗಲ್ ಆಗಿರುವವರಿಗೆ ಪ್ರತಿದಿನದಂತೆ ಈ ದಿನವೂ ಕೂಡ ಮರೆತುಬಿಡಬಹುದಾದ ದಿನವಾಗಿದೆ. ಈ ಸಮೀಕ್ಷೆಯ ಪ್ರಕಾರ ಶೇ.46ರಷ್ಟು ಸಿಂಗಲ್ಸ್ ಗಳು ‘ಹಾಗಾದರೆ, ವ್ಯಾಲೆಂಟೈನ್ಸ್ ಡೇಗೆ ಯೋಜನೆ ಏನು?’ ಎನ್ನುವ ಪ್ರೇಮಿಗಳ ದಿನದ ಬಗೆಗಿನ ಅತ್ಯಂತ ಕಿರಿಕಿರಿಗೊಳಿಸುವ ಪ್ರಶ್ನೆಯನ್ನು ಕೇಳಲಾಗುತ್ತದೆ ಎಂದು ಭಾವಿಸುತ್ತಾರಂತೆ.

    ಇನ್ನು ವಾಸ್ತವವಾಗಿ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ 1/3ಕ್ಕಿಂತಲೂ ಹೆಚ್ಚು ಜನರು ವ್ಯಾಲೆಂಟೈನ್ಸ್ ಡೇ ದಿನದಂದು ಅನಗತ್ಯ ಒತ್ತಡವನ್ನು ಅನುಭವಿಸುತ್ತಿದ್ದೇವೆಂದು ಒಪ್ಪಿಕೊಂಡಿದ್ದಾರೆ. ಈ ದಿನದಂದು ಸ್ನೇಹಿತರೇ ಅತ್ಯಂತ ಕಿರಿಕಿರಿಗೊಳಿಸುವ ಭಾಗವಾಗಿದ್ದು, ಶೇ.64ಕ್ಕಿಂತಲೂ ಹೆಚ್ಚು ಜನರು ತಮ್ಮ ಹತ್ತಿರದ ಮತ್ತು ಆತ್ಮೀಯರಿಂದ ಕೆಲವು ರೀತಿಯ ಕೀಟಲೆ ಅನುಭವಿಸಿರುವುದಾಗಿ ಹೇಳಿದ್ದಾರೆ.

    ಪ್ರೇಮಿಗಳ ದಿನದಂದು ಈ ಸಾಮಾಜಿಕ ಒತ್ತಡದ ಆಶ್ಚರ್ಯಕರ ಮತ್ತು ನಿರೀಕ್ಷಿತ ಫಲಿತಾಂಶವೆಂದರೆ ಶೇ.40ರಷ್ಟು ಜನರು ವ್ಯಾಲೆಂಟೈನ್ಸ್ ಡೇ ಯಾರೊಂದಿಗಾದರೂ ಇರಬೇಕೆಂಬ ಒತ್ತಡವನ್ನು ಅನುಭವಿಸುತ್ತಾರೆ ಮತ್ತು ಶೇ.62 ರಷ್ಟು ಸಿಂಗಲ್ಸ್ ಗಳಿಗೆ ಪ್ರೇಮಿಗಳ ದಿನದ ಕಠಿಣ ಸಂದರ್ಭವೆಂದು ಭಾವಿಸುವ ಪ್ರಸಂಗವೆಂದರೆ ಅದು ಒಂಟಿಯಾಗಿರುವುದು.

    ಇದನ್ನೂ ಓದಿ: Amith Shah: ಜಮ್ಮು ಮತ್ತು ಕಾಶ್ಮೀರ ಸೂಕ್ತ ಸಮಯದಲ್ಲಿ ರಾಜತ್ವ ಸ್ಥಾನಮಾನ ಪಡೆಯಲಿದೆ; ಅಮಿತ್​ ಶಾ

    ಶಾದಿ.ಕಾಮ್ ನಡೆಸಿದ ಈ ಸಮೀಕ್ಷೆಯಲ್ಲಿ ಸುಮಾರು 1,200 ಸಿಂಗಲ್ಸ್ ಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. #TakeThePressureOff ಅಭಿಯಾನದ ಭಾಗವಾಗಿ ಪ್ರೇಮಿಗಳ ದಿನದಂದು ಸಿಂಗಲ್ಸ್ ಎದುರಿಸುತ್ತಿರುವ ಒತ್ತಡವನ್ನು ತಿಳಿದುಕೊಳ್ಳಲು ಮತ್ತು ಅದಕ್ಕೆ ಪರಿಹಾರ ಸೂಚಿಸಲು ಈ ಸಮೀಕ್ಷೆಯನ್ನು ನಡೆಸಲಾಗಿದೆ.

    ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿರುವ ಶಾದಿ.ಕಾಮ್ನ ಮಾರ್ಕೆಟಿಂಗ್ ಹಿರಿಯ ನಿರ್ದೇಶಕ ಆದಿಶ್ ಜಾವೇರಿ, ‘ಪ್ರೇಮಿಗಳ ದಿನದಂದು ಸಿಂಗಲ್ಸ್ ಗೆ ಸಾಮಾಜಿಕ ಒತ್ತಡ ಕಷ್ಟಕರವಾಗುತ್ತದೆ. ಈ ದಿನದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮಗಿರುವ ಒತ್ತಡವನ್ನು ತೆಗೆದುಹಾಕಿ ಮತ್ತು ಶಾದಿ.ಕಾಮ್ ನೊಂದಿಗೆ ಪ್ರೀತಿ ಮತ್ತು ಒಗ್ಗಟ್ಟಿನ ಸಂತೋಷವನ್ನು ಕಂಡುಕೊಳ್ಳಬೇಕೆಂದು ನಾವು ಅವರಲ್ಲಿ ಮನವಿ ಮಾಡುತ್ತೇವೆ’ ಎಂದಿದ್ದಾರೆ.
    Published by:MAshok Kumar
    First published: