• Home
  • »
  • News
  • »
  • national-international
  • »
  • Kidney Stone: ಹೊಟ್ಟೆ ನೋವೆಂದು ಖಾಸಗಿ ಆಸ್ಪತ್ರೆಗೆ ಹೋದ ವ್ಯಕ್ತಿಯ ಕಿಡ್ನಿಯನ್ನೇ ಎಗರಿಸಿದ ಸಿಬ್ಬಂದಿ!

Kidney Stone: ಹೊಟ್ಟೆ ನೋವೆಂದು ಖಾಸಗಿ ಆಸ್ಪತ್ರೆಗೆ ಹೋದ ವ್ಯಕ್ತಿಯ ಕಿಡ್ನಿಯನ್ನೇ ಎಗರಿಸಿದ ಸಿಬ್ಬಂದಿ!

ಕಿಡ್ನಿ ಕಳೆದುಕೊಂಡಿರುವ ಸುರೇಶ್ ಚಂದ್ರ

ಕಿಡ್ನಿ ಕಳೆದುಕೊಂಡಿರುವ ಸುರೇಶ್ ಚಂದ್ರ

ಕಸ್ಗಂಜ್‌ ಮುಖ್ಯ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಸುರೇಶ್ ಚಂದ್ರ ಅವರಿಗೆ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಎಡಭಾಗದ ಮೂತ್ರಪಿಂಡ ನಾಪತ್ತೆಯಾಗಿದೆ ಎಂದು ವರದಿ ಬಂದಿದೆ.

  • News18 Kannada
  • Last Updated :
  • Uttar Pradesh, India
  • Share this:

    ಅಲಿಗಢ: ಉತ್ತರ ಪ್ರದೇಶದ (Uttar Pradesh) ಅಲಿಗಢದಲ್ಲಿ (Aligarh) ವ್ಯಕ್ತಿಯೊಬ್ಬರ ಕಿಡ್ನಿ ಸ್ಟೋನ್ (Kidney Stone) ಜೊತೆಗೆ ಕಿಡ್ನಿಯನ್ನೇ ತೆಗೆದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತರು ಮೂತ್ರಪಿಂಡ ಸಮಸ್ಯೆಯಿಂದ (Kidney Problem) ಖಾಸಗಿ ಆಸ್ಪತ್ರೆಗೆ (Hospital) ಹೋದ್ರೆ ಕೇವಲ ಸಮಸ್ಯೆ ನಿವಾರಿಸಬೇಕಿದ್ದ ವೈದ್ಯರು ಕಿಡ್ನಿಯನ್ನೇ ತೆಗೆದು ದೊಡ್ಡ ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಅಂದ ಹಾಗೇ ಇತ್ತೀಚಿನ ದಿನಗಳಲ್ಲಿ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ದೈಹಿಕ ಚಟುವಟಿಕೆ ಕೊರತೆ ಹೆಚ್ಚು ನೀರು ಸೇವನೆ ಮಾಡದೇ ಇರುವುದು, ಕಿಡ್ನಿಯಲ್ಲಿ ಕಲ್ಲು ಸಮಸ್ಯೆ ಉಂಟಾಗಲು ಕಾರಣವಾಗಿದೆ. ಆದಷ್ಟು ಆರೋಗ್ಯ ಕಾಪಾಡಿಕೊಳ್ಳುವುದು ಪ್ರತೀ ವ್ಯಕ್ತಿಯ ಆದ್ಯ ಕರ್ತವ್ಯ ಆಗಿದೆ.


    ಕಿಡ್ನಿ ಸ್ಟೋನ್ ತೆಗೆಯುವ ಬದಲು ಕಿಡ್ನಿಯನ್ನೇ ಹೊರ ತೆಗೆದ ಸಿಬ್ಬಂದಿ


    ಉತ್ತರ ಪ್ರದೇಶದ ಅಲಿಗಢದಲ್ಲಿ ವ್ಯಕ್ತಿಯೊಬ್ಬರು ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ಹೋದ್ರೆ ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಕಸ್ಗಂಜ್‌ ನಲ್ಲಿರುವ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಚೇರಿಯಲ್ಲಿ ನಿಯೋಜಿಸಲ್ಪಟ್ಟಿರುವ ಗೃಹ ರಕ್ಷಕ ಸುರೇಶ್ ಚಂದ್ರ ಎಂಬುವವರು ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿದ್ದರಿಂದ ಆಸ್ಪತ್ರೆಗೆ ಹೋಗಿದ್ದರು.


    ಆಗ ಕಿಡ್ನಿಯಲ್ಲಿ ಕಲ್ಲು ಇರುವುದು ಕಂಡು ಬಂದಿತ್ತು. ಹೀಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆಗ ವ್ಯಕ್ತಿಯ ಕಿಡ್ನಿಯನ್ನೇ ತೆಗೆದಿರುವುದು ಗೊತ್ತಾಗಿದೆ.


    ಮೂತ್ರಪಿಂಡದಲ್ಲಿ ಕಲ್ಲು ಸಮಸ್ಯೆಯಾಗಿದೆ. ಕಿಡ್ನಿ ಕಲ್ಲನ್ನು ಹೊರಗೆ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸುವುದಾಗಿ 53 ವರ್ಷದ ಹೋಮ್ ಗಾರ್ಡ್ ಸುರೇಶ್ ಚಂದ್ರ ಅವರನ್ನು ಅಲಿಗಢದ ಖಾಸಗಿ ಆಸ್ಪತ್ರೆ ದಾಖಲು ಮಾಡಿಕೊಂಡಿತ್ತು. ಆದರೆ ಶಸ್ತ್ರ ಚಿಕಿತ್ಸೆ ನಂತರ ಸುರೇಶ್ ಅವರಿಗೆ ತಮ್ಮ ಎಡ ಭಾಗದ ಕಿಡ್ನಿ ತೆಗೆದಿರುವುದು ತಿಳಿದಿದೆ.


    ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ ಕಿಡ್ನಿ ಇಲ್ಲದಿರುವುದು ಪತ್ತೆ


    ಕಸ್ಗಂಜ್‌ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಕಚೇರಿಯಲ್ಲಿ ಕೆಲಸ ಮಾಡುವ ಸುರೇಶ್ ಚಂದ್ರ ಅವರಿಗೆ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿತ್ತು. ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿದಾಗ, ಎಡಭಾಗದ ಮೂತ್ರಪಿಂಡ ನಾಪತ್ತೆಯಾಗಿದೆ ಎಂದು ವರದಿ ಬಂದಿದೆ. ಇದು ಕಸ್ಗಂಜ್ ಜಿಲ್ಲೆಯ ನಗ್ಲಾ ತಾಲ್ ಗ್ರಾಮದ ನಿವಾಸಿ ಸುರೇಶ್ ಚಂದ್ರ ಅವರಿಗೆ ದೊಡ್ಡ ಆಘಾತ ನೀಡಿದೆ. ಈ ಬಗ್ಗೆ ಸಿಡಿಒ ತನಿಖೆಗೆ ಆದೇಶಿಸಿದೆ.


    ಖಾಸಗಿ ಆಸ್ಪತ್ರೆ ಮಂಡಳಿ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ


    ಕಸ್ಗಂಜ್ ಸಿಡಿಒ ಸಚಿನ್ ಮಾತನಾಡಿ, ಈ ಬಗ್ಗೆ ತನಿಖೆ ನಡೆಸುವಂತೆ ಮತ್ತು ವರದಿ ನೀಡುವಂತೆ ಮುಖ್ಯ ವೈದ್ಯಕೀಯ ಅಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸುರೇಶ್ ಚಂದ್ರ ಅವರಿಗೆ ಆಪರೇಷನ್ ನಡೆಸಿದ ಖಾಸಗಿ ಆಸ್ಪತ್ರೆ ಮಂಡಳಿ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


    ಏಪ್ರಿಲ್ 14ರಂದು ಆಪರೇಷನ್ ಗೂ ಮೊದಲು ಅಲ್ಟ್ರಾಸೌಂಡ್ ಮಾಡಲಾಗಿತ್ತು. ಆಗ ಎಡಭಾಗದ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿತ್ತು. ಆಗ ಖಾಸಗಿ ಡಯಾಗ್ನಸ್ಟಿಕ್ ಕೇಂದ್ರದ ಬಿಲ್ಲಿಂಗ್ ಕೌಂಟರ್‌ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು, ಸುರೇಶ್ ಅವರಿಗೆ ಅಲಿಗಢದ ಖುಯಾರ್ಸಿ ಬೈಪಾಸ್ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದರು.


    ಅದರಂತೆ ಸುರೇಶ್ ಏ. 14ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಆಪರೇಷನ್ ಕೂಡ ಮಾಡಲಾಗಿತ್ತು. ಕಿಡ್ನಿ ಕಲ್ಲು ಹೊರಕ್ಕೆ ತೆಗೆಯಲಾಗಿದೆ ಎಂದು ಹೇಳಿ, ಸುರೇಶ್ ಅವರಿಗೆ ಕೆಲವು ಔಷಧ ನೀಡಿ, ಏ. 17ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು ಎಂದು ಕಿಡ್ನಿ ಕಳೆದುಕೊಂಡಿರುವ ಸಂತ್ರಸ್ತ ಸುರೇಶ್ ಹೇಳಿದ್ದಾರೆ.


    ಇದನ್ನೂ ಓದಿ: ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸಿನ ಬಲಿಗೆ ಯತ್ನಿಸಿದ ಮಹಿಳೆ


    ಅಲಿಗಢದ ಖಾಸಗಿ ಆಸ್ಪತ್ರೆಗೆ ಕರೆ ಮಾಡಿ ಕಿಡ್ನಿ ಕದ್ದಿರುವ ಬಗ್ಗೆ ಸುರೇಶ್ ಕೇಳಿದರೆ, ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯೆ ನೀಡಲ್ಲ. ಇನ್ನು ಸಂತ್ರಸ್ರ ಸುರೇಶ್, ಶಸ್ತ್ರ ಚಿಕಿತ್ಸೆಗೆ 28,000 ರೂ. ಬಿಲ್ ಪಾವತಿಸಿದ್ದಾರೆ.

    Published by:renukadariyannavar
    First published: