• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಜಾಗತಿಕ ಷೇರು ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಭಾರತೀಯ ಮಾರುಕಟ್ಟೆ; ಇಂದು ಗಮನಹರಿಸಬಹುದಾದ ಕೆಲವು ಸ್ಟಾಕ್‌ಗಳು ಇಲ್ಲಿವೆ..!

ಜಾಗತಿಕ ಷೇರು ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಭಾರತೀಯ ಮಾರುಕಟ್ಟೆ; ಇಂದು ಗಮನಹರಿಸಬಹುದಾದ ಕೆಲವು ಸ್ಟಾಕ್‌ಗಳು ಇಲ್ಲಿವೆ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Sensex and Nifty Today: ಐಡಿಬಿಐ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ತನ್ನ ಷೇರುಗಳನ್ನು 2.1% ದಿಂದ 0.07% ಕ್ಕೆ ಇಳಿಸಿಕೊಂಡು 1.96 ಕೋಟಿಗಿಂತಲೂ ಹೆಚ್ಚಿನ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದೆ.

  • Share this:

ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಸಂಕೇತವು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಯುಎಸ್ ಫೆಡ್ ಚೇರ್ ಜೆರೋಮ್ ತಿಳಿಸಿದ್ದಾರೆ. ನಿಫ್ಟಿಯು ಸಿಂಗಾಪುರ್ ಸ್ಟಾಕ್ ವಿನಿಮಯದಲ್ಲಿ 5.25 ಪಾಯಿಂಟ್‌ಗಳ ಇಳಿಕೆಯಲ್ಲಿ 16,929ಕ್ಕೆ ವಹಿವಾಟು ನಡೆಸುತ್ತಿರುವುದು ಭಾರತೀಯ ಷೇರು ಮಾರುಕಟ್ಟೆಗೆ ಉತ್ತಮ ಆರಂಭವನ್ನು ನೀಡಲಿದೆ. ಜಾಗತಿಕ ಷೇರು ಮಾರುಕಟ್ಟೆಗಳ ಕಾರ್ಯನಿರ್ವಹಣೆಯತ್ತ ಗಮನ ಹರಿಸಿದಾಗ ಜಪಾನ್‌ನ ನಿಕ್ಕಿ 0.67% ಇಳಿಕೆಯೊಂದಿಗೆ 27,603.92ಕ್ಕೆ ವಹಿವಾಟು ನಡೆಸುತ್ತಿದ್ದರೆ, ಶಾಂಘೈ ಕಾಂಪೋಸಿಟ್ 0.26%ನೊಂದಿಗೆ 3,519.02ಕ್ಕೆ ಕುಸಿದಿದೆ. MSCIನ ಬೆಂಚ್‌ಮಾರ್ಕ್ ಜಾಗತಿಕ ಈಕ್ವಿಟಿ ಮಾರುಕಟ್ಟೆಗಳಲ್ಲಿ ದಾಖಲೆ ಸೃಷ್ಟಿಸಿದೆ.


ಸೆನ್ಸೆಕ್ಸ್ 1.36% ಏರಿಕೆಯೊಂದಿಗೆ 56,889.76ಕ್ಕೆ ವಹಿವಾಟು ನಡೆಸಿದ್ದರೆ ನಿಫ್ಟಿ 1.35%ನಲ್ಲಿ 16,931ಕ್ಕೆ ತಲುಪಿದೆ. ಷೇರುಗಳ ಲೆಕ್ಕಾಚಾರ ಗಮನಿಸಿದರೆ 2067 ಷೇರುಗಳು ಮುನ್ನಡೆಯಾಗಿದ್ದು 998 ಷೇರುಗಳ ಕುಸಿತ ಕಂಡಿವೆ. ಭಾರತಿ ಏರ್‌ಟೆಲ್, ಡಿವಿಸ್ ಲ್ಯಾಬ್ಸ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್ ಹಾಗೂ ಕೋಲ್ ಇಂಡಿಯಾ ಅತ್ಯುನ್ನತ ನಿಫ್ಟಿ ಗಳಿಸಿದ ಸಂಸ್ಥೆಗಳಾಗಿವೆ. ಟೆಕ್ ಮಹೀಂದ್ರಾ, ಐಷರ್ ಮೋಟಾರ್ಸ್, ನೆಸ್ಲೆ, ಇನ್ಫೋಸಿಸ್ ಮತ್ತು ಟಿಸಿಎಸ್ ನಿಫ್ಟಿ ಗಳಿಕೆಯಲ್ಲಿ ನಷ್ಟ ಅನುಭವಿಸಿವೆ. ಐಟಿ ಕ್ಷೇತ್ರ ಹೊರತುಪಡಿಸಿ ಇತರ ಎಲ್ಲಾ ಉದ್ಯಮ ಕ್ಷೇತ್ರಗಳು ಷೇರಿನ ಬೆಲೆಯಲ್ಲಿ ಹೆಚ್ಚಳ ಕಂಡಿವೆ.


ಇಂದು ಗಮನಹರಿಸಬಹುದಾದ ಕೆಲವು ಸ್ಟಾಕ್‌ಗಳು ಇಲ್ಲಿವೆ:


ಇದನ್ನೂ ಓದಿ:Bengaluru Car Accident: ಶಾಸಕರ ಮಗನ ವಿರುದ್ಧ ದೂರು ನೀಡಿದ ಪ್ರತ್ಯಕ್ಷದರ್ಶಿ; ಘಟನೆ ನೋಡಿದಾತ ಹೇಳಿದ್ದೇನು?

ಬ್ಯಾಂಕ್ ಆಫ್ ಇಂಡಿಯಾ:


ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಆರ್ ರಾಜ್‌ಗೋಪಾಲ್ ಅಧಿಕಾರದ ಅವಧಿಯನ್ನು 2 ವರ್ಷಗಳಾಚೆಗೆ ವಿಸ್ತರಿಸಿದೆ.


ರಾಮಕೃಷ್ಣ ಫೋರ್ಜಿಂಗ್ಸ್:


ಭಾರತದಲ್ಲಿ ಸ್ಥಾಪಿತವಾಗಿರುವ ಪ್ರಮುಖ ಆ್ಯಕ್ಸಲ್ ಉತ್ಪಾದಕರಿಂದ ವಾರ್ಷಿಕ 120 ಮಿಲಿಯನ್ ಮೌಲ್ಯದ ವ್ಯವಹಾರ ನಡೆಸಲು LoI (ಉದ್ದೇಶದ ಪತ್ರ) ಪಡೆದುಕೊಂಡಿದೆ.


ಪಯೋನಿಯರ್ ಎಂಬ್ರಾಯ್ಡರೀಸ್‌:


SPFYಗಾಗಿ ಹೆಚ್ಚುತ್ತಿರುವ ಬೇಡಿಕೆ ಪೂರೈಸುವುದಕ್ಕಾಗಿ ಕಂಪೆನಿಯು ತನ್ನ ಸಾಮರ್ಥ್ಯ ವಿಸ್ತರಿಸುವ ನಿರ್ಧಾರದಲ್ಲಿದೆ.


ಲಾರ್ಸನ್ ಏಂಡ್ ಟರ್ಬೋ:


ಕಂಪೆನಿಯು ತನ್ನ ಸಂಪೂರ್ಣ ಷೇರನ್ನು L&T ಉತ್ತರಾಂಚಲ್ ಹೈಡ್ರೋಪವರ್‌ನಿಂದ ರಿನ್ಯೂ ಪವರ್ ಸರ್ವಿಸಸ್‌ಗೆ ಮಾರಾಟ ಮಾಡಿದೆ.


ಆ್ಯಕ್ಸಿಸ್ ಬ್ಯಾಂಕ್:


ಬ್ಯಾಂಕ್‌ಗೆ B1 ರೇಟಿಂಗ್ ಅನ್ನು ನಿಗದಿಪಡಿಸಿದ ಮೂಡೀಸ್ ನಿಗದಿಪಡಿಸಿದ್ದು GIFT ನಗರ ಶಾಖೆಯ USD-ಮೌಲ್ಯದ, ದಿನಾಂಕ ಸೂಚಿಸದ ಅಧೀನಗೊಂಡ ಹೆಚ್ಚುವರಿ ಶ್ರೇಣಿ 1 (AT1) ಬಂಡವಾಳ ಭದ್ರತೆಗಳನ್ನು ಪ್ರಸ್ತಾವಿಸಿದೆ.


ಇಪ್ಕಾ ಲ್ಯಾಬೊರೇಟರೀಸ್:


CRISIL ಹೆಸರಿನ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಕಂಪೆನಿಯ ವಾಣಿಜ್ಯ ಕಾರ್ಯಕ್ರಮಕ್ಕಾಗಿ ಕ್ರೆಡಿಟ್ ದರವನ್ನು ಪುನರ್‌ದೃಢೀಕರಿಸಿದೆ.


ಅಕ್ರಿಸಿಲ್:


ಗುಜರಾತ್‌ನ ಭಾವಾನಗರದಲ್ಲಿರುವ ಗ್ರೀನ್‌ಫೀಲ್ಡ್ ಯೋಜನೆಯ ಮೂಲಕ ಹೆಚ್ಚುವರಿ 1,60,000 ಕ್ವಾರ್ಟ್ಜ್ ಸಿಂಕ್‌ಗಳ ಮೂಲಕ ವಾರ್ಷಿಕ ಉತ್ಪಾದನೆ ವಿಸ್ತರಿಸುವುದಾಗಿ ಹೇಳಿಕೊಂಡಿದೆ.


ಇದನ್ನೂ ಓದಿ:Justice Nagarathna| ಸುಪ್ರೀಂ ಕೋರ್ಟ್ ಜಸ್ಟೀಸ್ ಆಗಿ ಬಿ.ವಿ.ನಾಗರತ್ನ ಪ್ರಮಾಣವಚನ; 2027ಕ್ಕೆ ಮೊದಲ ಮಹಿಳಾ ಸಿಜೆಐ ಆಗುವ ಸಾಧ್ಯತೆ

ಆಯುಶ್ ಫುಡ್ ಹಾಗೂ ಹರ್ಬ್ಸ್:


ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ 5.77% ಪಾಲನ್ನು ಪಡೆದುಕೊಂಡಿದೆ ಎಂದು ಕಂಪೆನಿ ಘೋಷಿಸಿದೆ.


ಶ್ರೀರಾಂ ಇಪಿಸಿ:


ಐಡಿಬಿಐ ಮುಕ್ತ ಮಾರುಕಟ್ಟೆ ವಹಿವಾಟಿನ ಮೂಲಕ ತನ್ನ ಷೇರುಗಳನ್ನು 2.1% ದಿಂದ 0.07% ಕ್ಕೆ ಇಳಿಸಿಕೊಂಡು 1.96 ಕೋಟಿಗಿಂತಲೂ ಹೆಚ್ಚಿನ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಿದೆ ಎಂದು ತಿಳಿಸಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು. 

Published by:Latha CG
First published: