Stock Market: ಇಂದಿನಿಂದ ಸತತ 3 ದಿನ BSE ಮತ್ತು NSE ವಹಿವಾಟು ಸ್ಥಗಿತ : ಕಾರಣ ಇಲ್ಲಿದೆ..

BSE-NSE: 2021ರ ಆಗಸ್ಟ್ 19ರಂದು ಮೊಹರಂ ಹಿನ್ನೆಲೆ ಸ್ಟಾಕ್‌ ಮಾರ್ಕೆಟ್‌ಗೆ ರಜೆ ಇತ್ತು. ಈಗ ಒಂದು ತಿಂಗಳಿಗಿಂತ ಕಡಿಮೆ ಅಂತರದ ನಂತರ ಮತ್ತೆ, ಇಂದು NSE ಮತ್ತು BSE ಎರಡರಲ್ಲೂ ವಹಿವಾಟು ಸ್ಥಗಿತಗೊಳ್ಳಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇಶದ ಹಲವರು ಪ್ರತಿದಿನ ಷೇರು ಮಾರುಕಟ್ಟೆಯ ಏರುಪೇರಿನತ್ತ ಕಣ್ಣಿಟ್ಟಿರುತ್ತಾರೆ. ಹಾಗೂ ತಾವು ಹೂಡಿಕೆ ಮಾಡಿರುವ ಷೇರುಗಳ ಮೌಲ್ಯ ಎಷ್ಟಿದೆ..? ಇಳಿಕೆಯಾಗುತ್ತಿದೆಯಾ..? ಏರಿಕೆಯಾಗುತ್ತಿದೆಯಾ..? ಎಂಬ ಬಗ್ಗೆಯೂ ಪರಿಶೀಲಿಸುತ್ತಿರುತ್ತಾರೆ. ಕೆಲವರಿಗೆ ಇದು ಹವ್ಯಾಸವಾದರೆ, ಇನ್ನು ಕೆಲವರು ಇದನ್ನೇ ತಮ್ಮ ವೃತ್ತಿಯಷ್ಟು ಗಂಭೀರವಾಗಿ ತೆಗೆದುಕೊಂಡಿರುತ್ತಾರೆ. ಸಾಮಾನ್ಯವಾಗಿ ವಾರದಲ್ಲಿ ಐದು ದಿನ ಬಿಎಸ್‌ಇ( BSE), ಎನ್‌ಎಸ್‌ಇ(NSE ) ವಹಿವಾಟು ನಡೆಯುತ್ತಿರುತ್ತದೆ. ಆದರೆ, ಇಂದು ಶುಕ್ರವಾರವಾದರೂ, ಷೇರು ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಗಳ ಷೇರು ಮೌಲ್ಯದಲ್ಲಿ ಏರಿಕೆ - ಇಳಿಕೆ ಕಾಣುವುದಿಲ್ಲ. ಬಿಎಸ್‌ಇ, ಎನ್‌ಎಸ್‌ಇ ಸೂಚ್ಯಂಕಗಳಲ್ಲಿ ನಿನ್ನೆಯ ಪ್ರಮಾಣಕ್ಕಿಂತ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಇದಕ್ಕೆ ಕಾರಣ ಇವತ್ತು ಅಂದರೆ ಸೆಪ್ಟೆಂಬರ್ 10, 2021ರಂದು ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಿರುವ ಕಾರಣ, ಬಿಎಸ್‌ಇ (ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್) ಮತ್ತು ಎನ್‌ಎಸ್‌ಇ (ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್) ವಹಿವಾಟು ಮುಚ್ಚಿರುತ್ತದೆ.



ಅಧಿಕೃತ ಬಿಎಸ್‌ಇ ವೆಬ್‌ಸೈಟ್ - bseindia.com ನಲ್ಲಿ ಲಭ್ಯವಿರುವ 2021ರ ಸ್ಟಾಕ್ ಮಾರ್ಕೆಟ್ ರಜಾದಿನಗಳ ಪಟ್ಟಿಯ ಪ್ರಕಾರ - ಈಕ್ವಿಟಿ, ಡೆರಿವೇಟಿವ್ ಮತ್ತು ಎಸ್‌ಎಲ್‌ಬಿ ವಿಭಾಗದಲ್ಲಿ ಯಾವುದೇ ಕ್ರಮವಿರುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಶನಿವಾರ ಮತ್ತು ಭಾನುವಾರ ಷೇರು ಮಾರುಕಟ್ಟೆ ಮುಚ್ಚಿರುತ್ತದೆ. ಆದರೆ, ಈ ವಾರ ಅವರಿಗೆ ಶುಕ್ರವಾರದಿಂದಲೇ ಸತತ 3 ದಿನ ರಜೆ. ಅಥವಾ ವಾರಾಂತ್ಯದ ವಿಸ್ತರಣೆ ಎನ್ನಬಹುದು.


ಇನ್ನು, ಸರಕು ವಿಭಾಗದಲ್ಲಿ ಬೆಳಗ್ಗೆ 9:00 ರಿಂದ ಸಂಜೆ 5:00ರವರೆಗೆ ವಹಿವಾಟು ಸ್ಥಗಿತಗೊಳ್ಳುತ್ತದೆ. ಆದರೆ ಸಂಜೆ ಸೆಷನ್‌ ಹಿನ್ನೆಲೆ ಸಂಜೆ 5:00 ರಿಂದ ತೆರೆದಿರುತ್ತದೆ.


ಗಣೇಶ ಚತುರ್ಥಿಯು ಸೆಪ್ಟೆಂಬರ್ ತಿಂಗಳಲ್ಲಿ ಬರುವ ಏಕೈಕ ಷೇರು ಮಾರುಕಟ್ಟೆಯ ರಜಾದಿನವಾಗಿದೆ. ಏಕೆಂದರೆ ಮುಂದಿನ ರಜಾದಿನವು 15ನೇ ಅಕ್ಟೋಬರ್ 2021ರಂದು, ದಸರಾ ಹಬ್ಬದ ದಿನ. ಬಳಿಕ ನವೆಂಬರ್ 4ರಂದು ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆಯ ದಿನ ಕೆಲ ಕಾಲ ಮುಹೂರ್ತದ ವಹಿವಾಟು ಕೆಲ ಕಾಲ ನಡೆಯುತ್ತದಾದರೂ, ಬಳಿಕ ರಜೆ ಇರುತ್ತದೆ. ಹಾಗೆ, ನವೆಂಬರ್ 5 ರಂದೂ ದೀಪಾವಳಿಯ ರಜೆ ಇದೆ. ನಂತರ ವರ್ಷದ ಕೊನೆಯ ರಜೆ ಅಂದರೆ ಗುರುನಾನಕ್‌ ಜಯಂತಿ - ನವೆಂಬರ್ 19ರಂದು ಬಿಎಸ್‌ಇ, ಎನ್‌ಎಸ್‌ಇ ಷೇರು ವಹಿವಾಟು ಮುಚ್ಚಿರುತ್ತದೆ.


ಇದನ್ನೂ ಓದಿ: ಜಾಸ್ತಿಯಾಗಿಲ್ಲ ಚಿನ್ನದ ಬೆಲೆ .. ಹಬ್ಬದ ದಿನ ಚಿನ್ನ- ಬೆಳ್ಳಿ ದರ ಹೀಗಿದೆ

2021ರ ಆಗಸ್ಟ್ 19ರಂದು ಮೊಹರಂ ಹಿನ್ನೆಲೆ ಸ್ಟಾಕ್‌ ಮಾರ್ಕೆಟ್‌ಗೆ ರಜೆ ಇತ್ತು. ಈಗ ಒಂದು ತಿಂಗಳಿಗಿಂತ ಕಡಿಮೆ ಅಂತರದ ನಂತರ ಮತ್ತೆ, ಇಂದು NSE ಮತ್ತು BSE ಎರಡರಲ್ಲೂ ವಹಿವಾಟು ಸ್ಥಗಿತಗೊಳ್ಳಲಿದೆ.


ಈ ವರ್ಷದ ಏಪ್ರಿಲ್‌ ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯು ಗರಿಷ್ಠ ದಿನಗಳವರೆಗೆ ಮುಚ್ಚಲ್ಪಟ್ಟಿತ್ತು. ಏಪ್ರಿಲ್ 2 ರಂದು ಗುಡ್ ಫ್ರೈಡೆ, 14 ಏಪ್ರಿಲ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು 21 ಏಪ್ರಿಲ್ ರಾಮ ನವಮಿ ಆಚರಣೆಗೆ ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ವಹಿವಾಟು ಸ್ಥಗಿತಗೊಂಡಿತ್ತು.



First published: