• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Airlines: ವಿಮಾನಯಾನದಲ್ಲಿ ಮೈಲಿಗಲ್ಲು ಸಾಧಿಸಲಿದೆಯಾ ಭಾರತ? ಅತೀ ಹೆಚ್ಚು ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ ಗೊತ್ತಾ?

Airlines: ವಿಮಾನಯಾನದಲ್ಲಿ ಮೈಲಿಗಲ್ಲು ಸಾಧಿಸಲಿದೆಯಾ ಭಾರತ? ಅತೀ ಹೆಚ್ಚು ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ ಗೊತ್ತಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರಸ್ತುತ ನಮ್ಮ ದೇಶದಲ್ಲಿ 107 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ವಿಮಾನಯಾನ ಸಂಸ್ಥೆಗಳು ಇನ್ನೂ 100 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ದೇಶದಲ್ಲಿ ಕಾರ್ಯನಿರ್ವಹಿಸಲು ಸಿದ್ದತೆ ನಡೆಸುತ್ತಿದೆ.

  • Share this:

ಯಾವುದೇ ಹೊರದೇಶಗಳಿಗೆ (Abroad) ಹೋಗಬೇಕಂದರೂ ವಿಮಾನ ಯಾನ ಬಹಳ ಮುಖ್ಯವಾಗಿರುತ್ತದೆ. ಆದರೆ ಕೆಲವೊಂದು ರಾಜ್ಯಗಳಲ್ಲಿ ಇಂದಿಗೂ ವಿಮಾನಗಳೇ ಇಲ್ಲ. ಅಂತಹವರು ಬೇರೆ ರಾಜ್ಯಕ್ಕೆ ಹೋಗಬೇಕಾಗುತ್ತದೆ. ಕಳೆದ 3 ವರ್ಷಗಳಿಂದ ವಾಯಯಾನದಲ್ಲಿ ಕಡಿಮೆಯಾಗಿದ್ದ ಅಭಿವೃದ್ಧಿ ಮತ್ತೆ ಗರಿಗೆದರಿದೆ. ಕೋವಿಡ್ (Covid)​ ಸಾಂಕ್ರಾಮಿಕ ವರ್ಷಗಳಾದ 2020, 2021 ರಲ್ಲಿ ವಾಯುಯಾನ ಸ್ತಬ್ಧವಾಗಿತ್ತು. 2022 ರಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದರೂ ಈಗ 2023 ರಲ್ಲಿ ವಿಮಾನ ನಿಲ್ದಾಣಗಳು (Airports) ಮತ್ತೆ ಮೊದಲಿನಂತೆ ತನ್ನ ವೇಗಕ್ಕೆ ಮರಳಲು ಸಜ್ಜಾಗಿವೆ.


ಬದಲಾವಣೆಗಳಾಗಿವೆ


2019 ಏಪ್ರಿಲ್​ನಲ್ಲಿ ಜೆಟ್​​ ಏರ್​ವೇಸ್​​ ಪೀಕ್​​ ಸೀಸನ್​ಗೆ ಮೊದಲೇ ಸ್ಥಗಿತಗೊಂಡಿದ್ದರಿಂದ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ದೊಡ್ಡ ಹಿನ್ನಡೆಯುಂಟಾಯಿತು. ಇದು ಉದ್ಯಮಗಳ ಚೇತರಿಕೆಯ ಮೇಲೆ ಮತ್ತಷ್ಟು ಪರಿಣಾಮ ಬೀರಿತು. ಈ ನಿಟ್ಟಿನಲ್ಲಿ ಏಪ್ರಿಲ್​​ 2018, 2019, ಮತ್ತು 2023 ರ ಚಿತ್ರಣದಲ್ಲಿ ವಿಭಿನ್ನತೆ ಕಾಣುತ್ತಿದೆ.


ಭಾರತ ಮತ್ತೆ ಸಜ್ಜಾಗಿದೆ


ಪ್ರಸ್ತುತ ನಮ್ಮ ದೇಶದಲ್ಲಿ 107 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಇವು ವಿಮಾನ ಯಾನ ಸಂಸ್ಥೆಗಳ ಬಳಕೆಗೆ ಲಭ್ಯವಿದೆ. ಜೊತೆಗೆ 100 ಕ್ಕಿಂತಲೂ ಹೆಚ್ಚಿನ ಕಾರ್ಯಾಚರಣೆಯ ವಿಮಾನ ನಿಲ್ದಾಣವನ್ನು ಹೊಂದಲು ಭಾರತ ಮತ್ತೆ ಸಜ್ಜಾಗಿದೆ.


ಇದನ್ನೂ ಓದಿ: 1.5 ಮಿಲಿಯನ್ ಜಪಾನಿಯರನ್ನು ಪ್ರತ್ಯೇಕವಾಗಿ ವಾಸಿಸುವಂತೆ ಮಾಡಿದ ಹಿಕಿಕೊಮೊರಿ, ಅಷ್ಟಕ್ಕೂ ಹೀಗಂದ್ರೇನು?


ಫ್ಲೀಟ್​ ಗಾತ್ರದ ದೃಷ್ಟಿಯಿಂದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ IndiGo, ಈ ವಿಮಾನ ನಿಲ್ದಾಣಗಳ ಪೈಕಿ 78 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ದೇಶದ ಒಟ್ಟು ಕಾರ್ಯಾಚರಣೆಯ ವಿಮಾನ ನಿಲ್ದಾಣಗಳ ಸುಮಾರು ಮೂರನೇ ನಾಲ್ಕು ಭಾಗಕ್ಕೆ ಸಮನಾಗಿರುತ್ತದೆ.


ದೇಶದ ಸರ್ಕಾರಿ ಸ್ವಾಮ್ಯದ ವಿಮಾನ ಸಂಸ್ಥೆಯಾಗಿರುವ ಅಲಯನ್ಸ್​ ಏರ್​​ 18ATR72-600s ಮತ್ತು ಒಂದು DORNIER DO-228 ಇಂಡಿಗೋಗೆ ಹೋಲಿಸಿದರೆ ಸಣ್ಣ ಫ್ಲೀಟ್​ ಗಾತ್ರವನ್ನು ಹೊಂದಿದೆ. ಇದು 58 ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇವುಗಳಲ್ಲಿ ಹೆಚ್ಚಿನವು ಪ್ರಾದೇಶಿಕ ಸಂಪರ್ಕ-UDAN ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಮದು OAG ಏವಿಯೇಷನ್ ಸಂಸ್ಥೆ​ ಹೇಳಿದೆ.


ಏನೆಲ್ಲಾ ಸಿದ್ಧತೆಗಳಾಗಿವೆ


ಸ್ಪೈಸ್​​ಜೆಟ್​​ 39 ಸ್ಥಳಗಳಿಗೆ ಕಾರ್ಯನಿರ್ವಹಿಸುತ್ತದೆ. ಆದರೆ ವಿಸ್ತಾರ 32 ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ. GOFIRST 27 ಸ್ಥಳಗಳಿಗೆ ಸೇವೆ ಸಲ್ಲಿಸಿದರೆ, ಏರ್​ ಏಷ್ಯಾ ಇಂಡಿಯಾ 20 ಸ್ಥಳಗಳಿಗೆ ಕಾರ್ಯನಿರ್ವಹಿಸುತ್ತದೆ. ಏರ್​ ಏಷ್ಯಾ ಇಂಡಿಯಾವು ಏರ್​ ಇಂಡಿಯಾ ಎಕ್ಸ್​ಪ್ರೆಸ್​ನೊಂದಿಗೆ ವಿಲೀನಗೊಳ್ಳಲು ಸಿದ್ಧವಾಗಿದೆ.


ಇನ್ನೂ ಸ್ಟಾರ್ಟಪ್​​ ಆಕಾಶ ಏರ್​ 13 ಸ್ಥಳಗಳಿಗೆ ಸೇವೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಸೇವೆ ಒದಗಿಸಲಿದೆ. ಬಾಗ್ಡೋಗ್ರಾ, ಡೆಹ್ರಾಡೂನ್​ ಮತ್ತು ಕಲ್ಕತ್ತಾಗೆ ಸೇವೆ ಆರಂಭಿಸಿದಾಗ ಈ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ.


ಪ್ರಾದೇಶಿಕ ವಾಹಕವಾದ ಸ್ಟಾರ್​​​ ಏರ್​​ ಅಲಯನ್ಸ್​​​ ಏರ್​​ 7 ವಿಮಾನಗಳ ಫ್ಲೀಟ್​ನೊಂದಿಗೆ 18 ಸ್ಥಳಗಳಿಗೆ ಕಾರ್ಯನಿರ್ವಹಿಸುತ್ತಿದೆ. ಇವುಗಳಲ್ಲಿ ಇನ್ನೂ ಎರಡು ಕಾರ್ಯಾಚರಣೆ ಆರಂಭಿಸಿಲ್ಲ.


ಏಕಸ್ವಾಮ್ಯ ವಿಮಾನ ನಿಲ್ದಾಣಗಳು ಮತ್ತು ಗರಿಷ್ಠ ವಿಮಾನಯಾನ ಸಂಸ್ಥೆಗಳು


9 ವಿಮಾನಯಾನ ಸಂಸ್ಥೆಗಳ ಸೇವೆಯಲ್ಲಿರುವ 4 ವಿಮಾನ ನಿಲ್ದಾಣಗಳಿವೆ. ಆದರೆ ಅಚ್ಚರಿ ಎಂದರೆ ದೇಶದ ಅತಿದೊಡ್ಡ ವಿಮಾನ ನಿಲ್ದಾಣ ಇದರಲ್ಲಿ ದೆಹಲಿ ಇಲ್ಲ. ಮುಂಬೈ, ಬೆಂಗಳೂರು, ಹೈದರಾಬಾದ್​ ಮತ್ತು ಗುವಾಹಟಿ ಸೇರಿ 9 ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ.


ಇಂಡಿಗೋ, ಏರ್​ ಇಂಡಿಯಾ, ವಿಸ್ತಾರ, ಗೋ ಫಸ್ಟ್​, ಸ್ಪೈಸ್​ ಜೆಟ್​​, ಏರ್​ ಏಷ್ಯಾ ಇಂಡಿಯಾ, ಆಕಾಸ ಮತ್ತು ಅಲಯನ್ಸ್​ ಏರ್​​​ ಈ ನಾಲ್ಕು ಸಾಮಾನ್ಯ ವಿಮಾನ ನಿಲ್ದಾಣಗಳಿವೆ.


ಸಾಂಕೇತಿಕ ಚಿತ್ರ


ಸ್ಟಾರ್​ ಏರ್​ ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್​​ಗೆ ಕಾರ್ಯನಿರ್ವಹಿಸುತ್ತಿದೆ. ಆದರೆ ಫ್ಲೈಬಿಗ್​​ ಇವುಗಳಲ್ಲಿ ಗೌಹಾಟಿಯಿಂದ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. 4 ವಿಮಾನನಿಲ್ದಾಣಗಳಲ್ಲಿ 9 ಏರ್​​ಲೈನ್ಸ್​ಗಳಿವೆ. ದೆಹಲಿ ಸೇರಿ ಆರು ವಿಮಾನ ನಿಲ್ದಾಣಗಳಲ್ಲಿ 8 ವಿಮಾನಯಾನ ಸಂಸ್ಥೆಗಳಿವೆ. ಒಂದೇ ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವ 31 ವಿಮಾನ ನಿಲ್ದಾಣಗಳು ಭಾರತದಲ್ಲಿವೆ.


ಈ ನಿಲ್ದಾಣಗಳು ಟ್ರೂಜೆಟ್​ ಸ್ಥಗಿತದ ಸಮಯದಲ್ಲಿ ಏರ್ ಸಂಪರ್ಕ ಕಳೆದುಕೊಳ್ಳುವ ಅಪಾಯದಲ್ಲಿ ಸಿಲುಕಬಹುದು. ಇದರಲ್ಲಿ 13 ಅಲಯನ್ಸ್ ಏರ್​​, ಒಂದು ಫ್ಲೈ ಬಿಗ್, 6 ಸ್ಪೈಸ್​ ಜೆಟ್​​, 2 ಸ್ಟಾರ್​ ಏರ್​​, 8 ಇಂಡಿಗೋ ಮತ್ತು 1 ಇಂಡಿಯಾ ಒನ್​​ನಿಂದ ಸೇವೆಯನ್ನು ಹೊಂದಿದೆ.


ಗರಿಷ್ಠ ವಿಮಾನ ನಿಲ್ದಾಣ ಹೊಂದಿರುವ ರಾಜ್ಯಗಳು


ಗುಜರಾತ್​ 9, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ 8, ಅಸ್ಸಾಂ 7 ಕಾರ್ಯಾಚರಣೆಯ ವಿಮಾನ ನಿಲ್ದಾಣ ಹೊಂದಿದೆ. ಒಡಿಶಾ, ಛತ್ತೀಸ್​ಗಢ್​ ನಲ್ಲಿ 1 ವಿಮಾನ ನಿಲ್ದಾಣವಿದೆ.




ಏಕಸ್ವಾಮ್ಯ ಮಾರ್ಗಗಳು

top videos


    ಭಾರತದ ಅಗ್ರ 7 ಏರ್​ಲೈನ್ಸ್​​ಗಳಲ್ಲಿ 901 ನಗರ ಸೇವೆ ಹೊಂದಿದೆ. ಇದರಲ್ಲಿ 618 ಏಕಸ್ವಾಮ್ಯ ಮಾರ್ಗ, 145 ಡ್ಯುಪೋಲಿ ಮಾರ್ಗ ಹೊಂದಿವೆ. ಇಂಡಿಗೋ ಏಕಸ್ವಾಮ್ಯವಾಗಿ 815 ಕ್ಷೇತ್ರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅಗ್ರ ಸ್ಥಾನದಲ್ಲಿದ್ದರೆ, 57 ಏಕಸ್ವಾಮ್ಯ ಮಾರ್ಗಗಳೊಂದಿಗೆ ಸ್ಪೈಸ್​ಜೆಟ್​​ ಎರಡನೇ ಸ್ಥಾನದಲ್ಲಿದೆ. ಮಿಕ್ಕಂತೆ ಏರ್​ ಇಂಡಿಯಾ 12 , ವಿಸ್ತಾರ 2, ಏರ್​ ಏಷ್ಯಾ ಇಂಡಿಯಾ 4, GoFirst​​ 5 ಏಕಸ್ವಾಮ್ಯ ಮಾರ್ಗ ಹೊಂದಿದೆ.

    First published: