GST on Petrol- ಪೆಟ್ರೋಲ್ ಮತ್ತು ಡೀಸೆಲ್ GST ವ್ಯಾಪ್ತಿಗೆ ತರಲು ರಾಜ್ಯಗಳ ತೀವ್ರ ವಿರೋಧ

States Oppose- ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ಯಾವುದೇ ರಾಜ್ಯ ಸರ್ಕಾರದ ಒಂದು ಪ್ರಮುಖ ಆದಾಯ ಮೂಲಕಕ್ಕೆ ಕತ್ತರಿ ಬೀಳುತ್ತದೆ. ಹೀಗಾಗಿ, ಹಲವು ರಾಜ್ಯಗಳು ಕೇಂದ್ರದ ನಡೆಯನ್ನು ವಿರೋಧಿಸುತ್ತಿವೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವದೆಹಲಿ, ಸೆ.​ 17: ಪ್ರತಿನಿತ್ಯ ಪೆಟ್ರೋಲ್ ಮತ್ತು ಡೀಸೆಲ್‌ (Petrol and Diesel) ಬೆಲೆ ಏರಿಕೆ ಆಗುತ್ತಿದ್ದು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ (Union Government)ಗೆ ಜನ ಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ (Goods and Service Tax) ವ್ಯಾಪ್ತಿಗೆ ತರಬೇಕು, ರಾಜ್ಯಗಳು ವಿಧಿಸುವ ತೆರಿಗೆಗೆ ಬ್ರೇಕ್ ಹಾಕಬೇಕು. ಸಂಪೂರ್ಣವಾಗಿ ತಾನೇ ತೆರಿಗೆ ವಿಧಿಸಬೇಕು, ತನ್ಮೂಲಕ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಕಡಿಮೆ ಮಾಡಬೇಕು ಎಂದು ಹೊರಟಿದ್ದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಶುಕ್ರವಾರ ಉತ್ತರ ಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ನೇತೃತ್ವದಲ್ಲಿ ನಡೆದ 45ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆಯಲ್ಲಿ ಪೆಟ್ರೋಲ್​ ಮತ್ತು ಡಿಸೇಲ್​ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲು ರಾಜ್ಯಗಳು ವಿರೋದ ವ್ಯಕ್ತಪಡಿಸಿವೆ.

ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಬಯಸಿತ್ತು. ಆದರೆ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ತೆರಿಗೆ ವಿಧಿಸುವ ಹಕ್ಕನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು ರಾಜ್ಯಗಳ ಆದಾಯಕ್ಕೆ ಧಕ್ಕೆ ಉಂಟುಮಾಡಲೊರಟಿದ್ದ ಕೇಂದ್ರ ಸರ್ಕಾರದ ನಿಲುವಿಗೆ ರಾಜ್ಯಗಳು ವಿರೋಧ ವ್ಯಕ್ತಪಡಿಸಿದವು. ಪರಿಣಾಮವಾಗಿ ಈ‌ ವಿಷಯವನ್ನು ಅಜೆಂಡಾದಿಂದ ಹೊರಗಿಟ್ಟು ಸಭೆ ನಡೆಸಬೇಕಾಯಿತು.

ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಗಳು ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಕನಿಷ್ಠ 20 ರಿಂದ 30 ರೂಪಾಯಿವರೆಗೆ ಇಳಿಸಬಹುದು. ಏಕೆಂದರೆ ಆಗ ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ಗರಿಷ್ಠ ಶೇಕಡಾ 28 ರಷ್ಟು ತೆರಿಗೆಯನ್ನು ಮಾತ್ರ ವಿಧಿಸಬೇಕಾಗುತ್ತದೆ‌. ಸದ್ಯ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲೆ 32.90 ರೂಪಾಯಿ ಹಾಗೂ ಡಿಸೇಲ್ ಮೇಲೆ 32 ರೂಪಾಯಿವರೆಗೂ ತೆರಿಗೆ ವಿಧಿಸುತ್ತಿದೆ. ಇದರಿಂದ ಕೇಂದ್ರ ಸರ್ಕಾರ ಪ್ರತಿವರ್ಷ ಪೆಟ್ರೋಲ್ ಡಿಸೇಲ್ ಮೂಲಕ ಸರಿಸುಮಾರು 4 ಲಕ್ಷ ಕೋಟಿ ಆದಾಯ ಗಳಿಸುತ್ತಿದೆ. 2029-21ರಲ್ಲಿ ಈ ಆದಾಯ 3.35 ಲಕ್ಷ ಕೋಟಿ ರೂಪಾಯಿ ಇತ್ತು. ಹೀಗೆ 'ಬೆಲೆ ಇಳಿಸುವ ನೆಪದಲ್ಲಿ' ಪೆಟ್ರೋಲ್ ಮತ್ತು ಡೀಸೆಲ್‌ ಮೇಲೆ ತೆರಿಗೆ ವಿಧಿಸುವ ಹಕ್ಕನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲೆಂದೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತರಲೊರಟಿತ್ತು. ಆದರೆ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: Session Highlights- ರೇವಣ್ಣ, ಗಣೇಶ್ ಮೇಲೆ ಸ್ಪೀಕರ್ ಕೋಪ; ಕಾಗೇರಿ ಅಭಿಮಾನಿಯಾದ ರಮೇಶ್ ಕುಮಾರ್

ಪೆಟ್ರೋಲ್-ಡೀಸೆಲ್ ಬೆಲೆ ಇಂದು ಸ್ಥಿರ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ (Petrol and Diesel Prices) ಇಂದು ಯಾವುದೇ ಬದಲಾವಣೆ ಇಲ್ಲ. ಗುರುವಾರ ಬೆಂಗಳೂರಿನಲ್ಲಿ (Bengaluru City) ಒಂದು ಲೀಟರ್ ಪೆಟ್ರೋಲ್ ಅನ್ನು 104.70 ರೂ.ಗೆ ಮಾರಾಟ ಮಾಡಲಾಗಿತ್ತು ಮತ್ತು ಡೀಸೆಲ್ ಅನ್ನು ಲೀಟರ್​ಗೆ 94.04 ರೂ.ಗೆ ಮಾರಾಟ ಮಾಡಲಾಗಿತ್ತು. ಬೆಲೆ ಏರಿಕೆಯಾಗದ ಕಾರಣ ಇಂದೂ ಸಹ ಇದೇ ಬೆಲೆಗೆ ತೈಲಗಳು ಲಭ್ಯವಾಗಲಿವೆ. ಆದರೆ ಮಂಗಳವಾರ ತೆರಿಗೆ ವ್ಯತ್ಯಾಸದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಅಲ್ಪ ಕುಸಿತ ಕಂಡಿತ್ತು. ಹೀಗಾಗಿ ಇಂದೂ ಸಹ ಅದೇ ಬೆಲೆಗೆ ಪೆಟ್ರೋಲ್-ಡೀಸೆಲ್ ಮಾರಾಟ ಮಾಡಲಾಗುತ್ತಿದೆ. ಆದರೆ, ದೇಶದ ವಿವಿಧ ಮಹಾನಗರಗಳಲ್ಲಿನ ಬೆಲೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಚೆನ್ನೈ (Chennai), ಹೈದ್ರಾಬಾದ್ (Hyderabad), ಮುಂಬೈ (Mumbai), ನೋಯ್ಡಾದಲ್ಲೂ (Noida) ಸಹ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿದುಬಂದಿದೆ.

ದೇಶದ ಬೇರೆ ಬೇರೆ ರಾಜ್ಯಗಳಲ್ಲಿ...

ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 98.96 ರೂ ಇದ್ದರೆ ಡೀಸೆಲ್​ ಬೆಲೆ 93.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೈದ್ರಾಬಾದ್​ನಲ್ಲಿ ಪೆಟ್ರೋಲ್ ಬೆಲೆ 87.24 ರೂ ಆಗಿದ್ದರೆ, ಡೀಸೆಲ್​ ಅನ್ನು 80.21 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿ ಹೊರವಲಯ ನೋಡ್ಡಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 98.52 ರೂ ಆಗಿದ್ದರೆ, ದೆಹಲಿಯಲ್ಲಿ 101.62 ರೂ ಮತ್ತು ಮಹಾರಾಷ್ಟ್ರದಲ್ಲಿ 107.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ರಾಜಸ್ಥಾನದ ಜೈಪುರದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 108.56 ರೂ ಇದೆ. ಇದು ದೇಶದಲ್ಲೇ ಅತ್ಯಂತ ಹೆಚ್ಚಿನ ಬೆಲೆ ಎಂದು ಗುರುತಿಸಿಕೊಂಡಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 104.98 ರೂ.,
ಬೆಂಗಳೂರು - 104.70 ರೂ.,
ಬೆಂಗಳೂರು ಗ್ರಾಮಾಂತರ -104.77ರೂ.,
ಬೆಳಗಾವಿ - 105.39 ರೂ.,
ಬಳ್ಳಾರಿ - 106.35 ರೂ.
ಬೀದರ್ - 105.01 ರೂ.
ಬಿಜಾಪುರ - 104.91 ರೂ.
ಚಾಮರಾಜನಗರ - 105.22 ರೂ.
ಚಿಕ್ಕಬಳ್ಳಾಪುರ - 104.44 ರೂ.
ಚಿಕ್ಕಮಗಳೂರು - 107.05ರೂ.
ಚಿತ್ರದುರ್ಗ - 105.96 ರೂ.
ದಕ್ಷಣ ಕನ್ನಡ - 104.15ರೂ.
ದಾವಣಗೆರೆ - 106.55 ರೂ.
ಧಾರವಾಡ - 104.42 ರೂ.
ಗದಗ - 105 ರೂ.
ಗುಲಬರ್ಗ - 105.02 ರೂ.
ಹಾಸನ – 104.93 ರೂ.
ಹಾವೇರಿ - 105.43 ರೂ.
ಕೊಡಗು – 105.94 ರೂ.
ಕೋಲಾರ - 104.91 ರೂ.
ಕೊಪ್ಪಳ- 106.04 ರೂ.
ಮಂಡ್ಯ – 104.57 ರೂ.
ಮೈಸೂರು – 104.63 ರೂ.
ರಾಯಚೂರು – 104.52 ರೂ.
ರಾಮನಗರ – 105.06 ರೂ.
ಶಿವಮೊಗ್ಗ – 106.18 ರೂ.
ತುಮಕೂರು – 105.14 ರೂ.
ಉಡುಪಿ - 105.14 ರೂ.
ಉತ್ತರಕನ್ನಡ – 105.74 ರೂ.
ಯಾದಗಿರಿ – 105.39 ರೂ..

ಇದನ್ನೂ ಓದಿ: Narendra Modi turns 71: ಬಾಲ್ಯದಲ್ಲಿ ಸೇನೆ ಸೇರುವ ಕನಸು ಕಂಡಿದ್ದ ಮೋದಿ; ಪ್ರಧಾನಿ ಜೀವನದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಆಸಕ್ತಿ ವಿಷಯಗಳು!

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಛಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: