ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು 500ರಿಂದ 5 ಸಾವಿರದವರೆಗೂ ಬದಲಿಸಿಕೊಳ್ಳಬಹುದು; ಕೇಂದ್ರ ಸಚಿವ ನಿತಿನ್ ಗಡ್ಕರಿ

ಇದೇ ತಿಂಗಳ 1ನೇ ತಾರೀಖಿನಂದು ಕೇಂದ್ರ ಸರ್ಕಾರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಿದ ಬಳಿಕ ಸಂಚಾರಿ ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ತೆರುತ್ತಿದ್ದಾರೆ. ಕಾಯ್ದೆ ಪ್ರಕಾರ ಒಂದಕ್ಕೆ ಹತ್ತು ಪಟ್ಟು ಹೆಚ್ಚಿಗೆ ದಂಡದ ಪ್ರಮಾಣವನ್ನು ಹೆಚ್ಚು ಮಾಡಿರುವುದು ವಾಹನ ಸವಾರರನ್ನು ಹೈರಾಣು ಮಾಡಿತ್ತು.

HR Ramesh | news18-kannada
Updated:September 17, 2019, 7:41 PM IST
ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು 500ರಿಂದ 5 ಸಾವಿರದವರೆಗೂ ಬದಲಿಸಿಕೊಳ್ಳಬಹುದು; ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ
  • Share this:
ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಗೆ ಜನರಿಂದ ಬೆಂಬಲ ಸಿಕ್ಕಿದೆ. ಮತ್ತು ಪಕ್ಷಾತೀತವಾಗಿ ಜನರು ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೇ, ಅಧಿಕ ದಂಡ ಯಾರೆಲ್ಲ ಅಸಮಾಧಾನಗೊಂಡಿದ್ದರೂ ಅವರೂ ಕೂಡ ಹೊಸ ಸಂಚಾರಿ ಕಾನೂನನ್ನು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ದಂಡವನ್ನು ಸಂಗ್ರಹಿಸುವುದು ರಾಜ್ಯ ಸರ್ಕಾರಗಳು. ಆದಾಯ ಸಂಗ್ರಹದ ವಿಚಾರವಾಗಿ ಕೇಂದ್ರಕ್ಕೆ ಯಾವುದೇ ಸಮಸ್ಯೆಯಿಲ್ಲ. ದಂಡ ಸಂಗ್ರಹ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಸ್ವತಂತ್ರ. ದಂಡದ ಪ್ರಮಾಣವನ್ನು ರಾಜ್ಯ ಸರ್ಕಾರಗಳು 500 ರೂ.ಯಿಂದ 5000 ದವರೆಗೆ ಬದಲಿಸಬಹುದು ಎಂದು ತ್ತೊಮ್ಮೆ ಸ್ಪಷ್ಟಪಡಿಸಿದ್ದರು.ಇದೇ ತಿಂಗಳ 1ನೇ ತಾರೀಖಿನಂದು ಕೇಂದ್ರ ಸರ್ಕಾರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸಿದ ಬಳಿಕ ಸಂಚಾರಿ ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ತೆರುತ್ತಿದ್ದಾರೆ. ಕಾಯ್ದೆ ಪ್ರಕಾರ ಒಂದಕ್ಕೆ ಹತ್ತು ಪಟ್ಟು ಹೆಚ್ಚಿಗೆ ದಂಡದ ಪ್ರಮಾಣವನ್ನು ಹೆಚ್ಚು ಮಾಡಿರುವುದು ವಾಹನ ಸವಾರರನ್ನು ಹೈರಾಣು ಮಾಡಿತ್ತು. ಕೇಂದ್ರದ ನಿರ್ಧಾರದ ವಿರುದ್ಧ ದೇಶವ್ಯಾಪಿ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಣ್ಣ-ಪುಟ್ಟ ತಪ್ಪಿಗೂ ಇಷ್ಟೊಂದು ದುಬಾರಿ ದಂಡ ಕಟ್ಟಿಸಿಕೊಳ್ಳುವುದು ಸರಿಯೇ, ಹಾಗಿದ್ದರೆ, ಸರ್ಕಾರ ರಸ್ತೆಗಳನ್ನು ಸರಿಯಾಗಿ ನಿರ್ಮಿಸಿದೆಯೇ ಎಂಬ ಪ್ರಶ್ನೆಗಳನ್ನು ಕೇಳಿದ್ದರು. ಜನರ ಕೂಗಿಗೆ ಸ್ಪಂದಿಸಿದ ಗುಜರಾತ್​ ರಾಜ್ಯ ಸರ್ಕಾರ ದಂಡದ ಪ್ರಮಾಣವನ್ನು ಇಳಿಕೆ ಮಾಡಿತ್ತು. ಆ ಬಳಿಕ ಕರ್ನಾಟಕ ಸರ್ಕಾರ ಕೂಡ ಗುಜರಾತ್ ಮಾದರಿಯಲ್ಲಿ ದಂಡದ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದೆ.ಇದನ್ನು ಓದಿ: ಹೆಲ್ಮೆಟ್ ರಹಿತ ಚಾಲನೆ; ಸೈಕಲ್ ಸವಾರನಿಗೂ 2 ಸಾವಿರ ದಂಡ ವಿಧಿಸಿದ ತಮಿಳುನಾಡು ಪೊಲೀಸರು?; ನಗೆಪಾಟಲಿಗೀಡಾದ ಕ್ರಮ

ಇದೇ ವಿಚಾರವಾಗಿ ಈ ಹಿಂದೆ ಮಾತನಾಡಿದ್ದ ನಿತಿನ್ ಗಡ್ಕರಿ ಅವರು, ಕಾಯ್ದೆಯಲ್ಲಿ ಹೇಳಲಾಗಿರುವ ದಂಡದ ಪ್ರಮಾಣವನ್ನು ರಾಜ್ಯ ಸರ್ಕಾರ ಬದಲಿಸಿಕೊಳ್ಳಬಹುದು. ಅದು  ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದು, ಇದಕ್ಕೆ ಕೇಂದ್ರದ ಯಾವ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.

First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ