ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ನ ತಲಾ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಎಕ್ಸಿಕ್ಯುಟಿವ್ ಕಮಿಟಿ ಆಫ್ ಸೆಂಟ್ರಲ್ ಬೊರ್ಡ್ (ಇಸಿಸಿಬಿ) ಗುರುವಾರ ಅನುಮತಿ ನೀಡಿದೆ.
ಪ್ರತಿ ಷೇರಿಗೆ 10 ರೂಪಾಯಿಯಂತೆ ಒಟ್ಟು 725 ಕೋಟಿ ಷೇರುಗಳನ್ನು ಖರೀದಿಸುವ ಮೂಲಕ ಒಟ್ಟು 7,250 ಕೋಟಿ ರೂಪಾಯಿಯನ್ನು ಯೆಸ್ ಬ್ಯಾಂಕ್ ಮೇಲೆ ಹೂಡಿಕೆ ಮಾಡಲಿದೆ.
ಯೆಸ್ ಬ್ಯಾಂಕ್ ಪುನಶ್ಚೇತನಗೊಂಡ ಬಳಿಕ ಎಸ್ಬಿಐ ಶೇ.49 ಪಾಲುದಾರಿಕೆ ಮಿತಿಯನ್ನು ಹೊಂದಿರಲಿದೆ ಎಂದು ಎಸ್ಬಿಐ ಸ್ಟಾಕ್ ಎಕ್ಸ್ಚೆಂಜ್ಗೆ ತಿಳಿಸಿದೆ. ಷೇರು ಖರೀದಿಯು ಇನ್ನೂ ನಿಯಂತ್ರಕ ಅನುಮೋದನೆಗೆ ಒಳಪಟ್ಟಿರುತ್ತದೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಆರ್ಬಿಐ ಹೊಸ ನೀತಿಯ ಕರಡನ್ನು ಜಾರಿಗೆ ತಂದ ಬಳಿಕ ಯೆಸ್ ಬ್ಯಾಂಕ್ ಪ್ರತಿ ಷೇರು 10 ರೂಪಾಯಿಯಂತೆ 2450 ಕೋಟಿ ವೆಚ್ಚದಲ್ಲಿ ಒಟ್ಟು 245 ಕೋಟಿ ಷೇರುಗಳನ್ನು ಎಸ್ಬಿಐ ಖರೀದಿ ಮಾಡಿತ್ತು. ಇದೀಗ ಮತ್ತೆ ಹೆಚ್ಚುವರಿಯಾಗಿ ಯೆಸ್ ಬ್ಯಾಂಕ್ ಷೇರುಗಳನ್ನು ಖರೀದಿ ಮಾಡಲು ಅನುಮೋದನೆ ನೀಡಲಾಗಿದೆ.
ಇದನ್ನು ಓದಿ: ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಕ್ರಮ; ಎಸ್ಬಿಐನಿಂದ ಶೇ. 49ರಷ್ಟು ಹೂಡಿಕೆ
ಕೆಟ್ಟ ಸಾಲಗಳಿಂದಾಗಿ ವಿಪರೀತ ಆರ್ಥಿಕ ನಷ್ಟದಲ್ಲಿರುವ ಯೆಸ್ ಬ್ಯಾಂಕನ್ನು ಮಾರ್ಚ್ 5ರಂದು ಆರ್ಬಿಐ ಸೂಪರ್ ಸೀಡ್ ಮಾಡಿತು. ಯೆಸ್ ಬ್ಯಾಂಕ್ನ ಗ್ರಾಹಕರು 50 ಸಾವಿರಕ್ಕಿಂತ ಹೆಚ್ಚು ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಾರದು ಎಂದು ನಿರ್ಬಂಧ ಹೇರಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ