ಎಸ್‌ಬಿಐ ಮನೆ ಸಾಲ ಪಡೆಯೋರು ಓದಲೇಬೇಕಾದ ಸುದ್ದಿ: ಯಾಕೆ ಗೊತ್ತೇ?

ಎಸ್ ಬಿ ಐ ಸಾರ್ವಜನಿಕ ಕ್ಷೇತ್ರದ ಮೊದಲ ಪ್ರಮುಖ ಬ್ಯಾಂಕ್ ಇದಾಗಿದೆ. ಆರ್​​ಬಿಐ ಮೂಲ ದರ ಕಡಿಮೆ ಮಾಡಿದ ಬಳಿಕ ಎಸ್​ಬಿಐ ತನ್ನ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿತ್ತು. ವಿತ್ತೀಯ ನೀತಿಯ ಈ ಉಪಕ್ರಮವು ಮಧ್ಯ ತ್ರೈಮಾಸಿಕ ಸಮೀಕ್ಷೆಯ ಒಂದು ದಿನ ಮೊದಲೇ ಹೇಳಲಾಗಿದೆ.

news18
Updated:October 11, 2019, 5:33 PM IST
ಎಸ್‌ಬಿಐ ಮನೆ ಸಾಲ ಪಡೆಯೋರು ಓದಲೇಬೇಕಾದ ಸುದ್ದಿ: ಯಾಕೆ ಗೊತ್ತೇ?
ಸಾಂದರ್ಭಿಕ ಚಿತ್ರ
  • News18
  • Last Updated: October 11, 2019, 5:33 PM IST
  • Share this:
ಬೆಂಗಳೂರು(ಅ.11): ದೇಶದ ಅತೀದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಮನೆ ಸಾಲದ ಪ್ರೊಸೆಸಿಂಗ್​​ ಶುಲ್ಕ ವಿಧಿಸಲು ತೀರ್ಮಾನಿಸಿದೆ. ಹಾಗಾಗಿಯೇ ಎಸ್​​ಬಿಐ ಬ್ಯಾಂಕ್​​ನಿಂದ ಮನೆ ಸಾಲ ಪಡೆಯುವುದು ಇನ್ಮುಂದೆ ದುಬಾರಿಯಾಗಲಿದೆ.

ಈ ಹಿಂದೆ ದೀಪಾವಳಿಗೆ ಮುನ್ನವೇ ಎಸ್​ಬಿಐ, ಗ್ರಾಹಕರಿಗೆ ಸಿಹಿಸುದ್ದಿ ನೀಡಿತ್ತು. ಬ್ಯಾಂಕ್​​​ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಿತ್ತು. ವಸತಿ ಮತ್ತು ರಿಟೇಲ್ ಸೇರಿದಂತೆ ಫ್ಲೋಟಿಂಗ್​​ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡಲು ನಿರ್ಧರಿಸಿತ್ತು. ಇದೇ ಅಕ್ಟೋಬರ್​​ 1ರಿಂದಲೇ ಈ ಹೊಸ ದರ ಚಾಲ್ತಿಗೆ ಬಂದಿದೆ. ಇದರ ನಷ್ಟವನ್ನು ಸರಿದೂಗಿಸಲು ಎಸ್‌ಬಿಐ ಮನೆ ಸಾಲಗಳ ಮೇಲೆ ಪ್ರೊಸೆಸಿಂಗ್‌ ಶುಲ್ಕವನ್ನು ವಿಧಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಮನೆ ಸಾಲದ ಪ್ರೊಪೆಸಿಂಗ್​​ ಫೀಸ್​​ ಬಗ್ಗೆ ಎಸ್​ಬಿಐ ಆಂತರಿಕ ಸುತ್ತೋಲೆ ಹೊರಡಿಸಿದೆ. ಮುಂದಿನ ಅಕ್ಟೋಬರ್​​​ 15ವರೆಗೂ ಇಂದಿನ ಪ್ರೊಸೆಸಿಂಗ್‌ ಶುಲ್ಕ ಮುಂದುವರಿಯಲಿದೆ. ಬಳಿಕ ಹೊಸ ಪ್ರೊಪೆಸಿಂಗ್​​ ಫೀಸ್​​​​ ಅನ್ವಯವಾಗಲಿದೆ ಎಂದು ಹೇಳಲಾಗುತ್ತಿದೆ.

ವೈಯಕ್ತಿಕ, ಚಿಲ್ಲರೆ, ವ್ಯಾಪಾರ, ಮಧ್ಯಮ ಉದ್ಯಮ ಸೇರಿದಂತೆ ಎಲ್ಲಾ ಫ್ಲೋಟಿಂಗ್​​ ಸಾಲದ ಮೇಲಿನ ದರ ಕಡಿಮೆ ಬಗ್ಗೆ ರಿಸರ್ವ್​​ ಬ್ಯಾಂಕ್​​​ ಆಫ್​​ ಇಂಡಿಯಾ ಇತ್ತೀಚೆಗೆ ಸೆಪ್ಟೆಂಬರ್ 4ರಂದೇ ಸೂಚನೆ ಹೊರಡಿಸಿತ್ತು. ಈ ಆದೇಶದ ಮೇರೆಗೆ ಎಸ್​​ಬಿಐ ಬ್ಯಾಂಕ್​​​ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವುದಾಗಿ ಘೋಷಿಸಿತ್ತು.

ಇದನ್ನೂ ಓದಿ: State Bank of India: ಎಸ್​​ಬಿಐ ಬ್ಯಾಂಕ್​​​ ಗ್ರಾಹಕರಿಗೆ ಸಿಹಿಸುದ್ದಿ; ಇಳಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ

ಈ ಮುನ್ನ ಸರ್ಕಾರಿ ಎಸ್​ಬಿಐ ಬ್ಯಾಂಕ್​​ ತನ್ನ ಸಾಲದ ಮೂಲ ಬಡ್ಡಿ ದರದಲ್ಲಿ ಶೇ. 9.80ರಷ್ಟು ಹೆಚ್ಚಳ ಮಾಡಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಶೇ. 0.10ರಷ್ಟು ಹೆಚ್ಚಳದ ಮೂಲಕ ಶೇ. 9.80ರಷ್ಟು ಹೆಚ್ಚಳ ಮಾಡಿದೆ ಎಂದು ತಿಳಿಸಿತ್ತು. ಅದಕ್ಕೂ ಮೊದಲು ಮೂಲ ಬಡ್ಡಿ ದರ ಶೇ. 9.70 ರಷ್ಟು ಇತ್ತು.

ಎಸ್ ಬಿ ಐ ಸಾರ್ವಜನಿಕ ಕ್ಷೇತ್ರದ ಮೊದಲ ಪ್ರಮುಖ ಬ್ಯಾಂಕ್ ಇದಾಗಿದೆ. ಆರ್​​ಬಿಐ ಮೂಲ ದರ ಕಡಿಮೆ ಮಾಡಿದ ಬಳಿಕ ಎಸ್​ಬಿಐ ತನ್ನ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿತ್ತು. ವಿತ್ತೀಯ ನೀತಿಯ ಈ ಉಪಕ್ರಮವು ಮಧ್ಯ ತ್ರೈಮಾಸಿಕ ಸಮೀಕ್ಷೆಯ ಒಂದು ದಿನ ಮೊದಲೇ ಹೇಳಲಾಗಿದೆ.---------
First published:October 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ