• Home
  • »
  • News
  • »
  • national-international
  • »
  • SBI Bank Recruitment 2020: ಖಾಲಿ ಇರುವ 2 ಸಾವಿರ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

SBI Bank Recruitment 2020: ಖಾಲಿ ಇರುವ 2 ಸಾವಿರ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

SBI

SBI

State Bank Of India Recriutment 2020: ಪ್ರೊಬೆಷನರಿ ಅಧಿಕಾರಿ (ಪಿಓ) ಹುದ್ದೆಗಳಿಗೆ ಡಿಸೆಂಬರ್ 31,2020ರ ಅನ್ವಯ ಯಾವುದೇ ಪದವಿ ವಿದ್ಯಾಭ್ಯಾಸವನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

  • Share this:

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾಲಿ ಇರುವ 2000 ಪ್ರೊಬೆಷನರಿ ಅಧಿಕಾರಿ (ಪಿಓ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿ ತಿಳಿಸಿದೆ. ಅಧಿಕೃತ ವೆಬ್​ಸೈಟ್​ಗೆ ತೆರಳಿ ಆನ್‌ಲೈನ್ ಮೂಲಕ ಡಿಸೆಂಬರ್ 4,2020 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.


    ಶೈಕ್ಷಣಿಕ ವಿದ್ಯಾರ್ಹತೆ:


    ಪ್ರೊಬೆಷನರಿ ಅಧಿಕಾರಿ (ಪಿಓ) ಹುದ್ದೆಗಳಿಗೆ ಡಿಸೆಂಬರ್ 31,2020ರ ಅನ್ವಯ ಯಾವುದೇ ಪದವಿ ವಿದ್ಯಾಭ್ಯಾಸವನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.


    ವಯೋಮಿತಿ:


    ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಏಪ್ರಿಲ್ 1,2020ರ ಅನ್ವಯ ಗರಿಷ್ಟ 30 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.


    -ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ (ಪ.ಜಾ/ಪ.ಪಂ) ಅಭ್ಯರ್ಥಿಗಳಿಗೆ 15 ವರ್ಷ, ಅಂಗವಿಕಲ (ಓಬಿಸಿ) ಅಭ್ಯರ್ಥಿಗಳಿಗೆ 12 ವರ್ಷ ಮತ್ತು ಅಂಗವಿಕಲ (ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.


    ವೇತನದ ವಿವರ:


    ಎಸ್​ಬಿಐ ಹೊರಡಿಸಿರುವ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 27,620/- ರಿಂದ 42,020/-ರೂ ವೇತನವನ್ನು ನೀಡಲಾಗುವುದು. ಅದರವ ಜೊತೆಗೆ ಡಿಎ, ಎಚ್‌ಆರ್‌ಎ, ಗುತ್ತಿಗೆ ಬಾಡಿಗೆ, ಸಿಸಿಎ, ವೈದ್ಯಕೀಯ ಮತ್ತು ಇತರ ಭತ್ಯೆಗಳು ಮತ್ತು ಅಗತ್ಯತೆಗಳುನ ಸಿಗಲಿದೆ.


    ಆಯ್ಕೆ ಪ್ರಕ್ರಿಯೆ:


    ಅಭ್ಯರ್ಥಿಗಳನ್ನು ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.


    ಅರ್ಜಿ ಶುಲ್ಕ:


    -ಸಾಮಾನ್ಯ/ಆರ್ಥಿಕವಾಗಿ ಹಿಂದುಳಿದ/ ಓಬಿಸಿ ಅಭ್ಯರ್ಥಿಗಳು 750-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.


    -ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.


    ಅರ್ಜಿ ಸಲ್ಲಿಸುವುದು ಹೇಗೆ?:


    ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾ ಹೊರಡಿಸಿರುವ ಖಾಲಿ ಇರುವ ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಸೇರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಎಸ್‌ಬಿಐ ನ ಅಧಿಕೃತ ವೆಬ್‌ಸೈಟ್‌ https://sbi.co.in/web/careers ಗೆ ಭೇಟಿ ನೀಡಿ. ನಂತರ ಅಲ್ಲಿ ನೀಡಲಾಗಿರುವ ಮಾಹಿತಿಯನ್ನು ಓದಿ ಬಳಿಕ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ಅರ್ಜಿ ಸಲ್ಲಿಸಬೇಕು. ಡಿಸೆಂಬರ್ 4,2020ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.


    ಹುದ್ದೆಗಳ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Published by:Harshith AS
    First published: