SBI ವತಿಯಿಂದ ಹಬ್ಬದ ಕೊಡುಗೆ; ಗೃಹ ಸಾಲದ ಬಡ್ಡಿದರವನ್ನು 6.7% ಕ್ಕೆ ಇಳಿಸಿದ ಸಂಸ್ಥೆ

State Bank of India Interest Rate Update: ಹಬ್ಬದ ಆಫರ್‌ಗಳ ಕೊಡುಗೆಯ ಪ್ರಕಾರವಾಗಿ ಗೃಹ ಸಾಲವು ಬಡ್ಡಿ ದರ 6.7% ನಲ್ಲಿ ಲಭ್ಯವಾಗಲಿದೆ. ಈ ಕೊಡುಗೆಯಿಂದ 75 ಲಕ್ಷ ಲೋನ್‌ಗೆ 30 ವರ್ಷಗಳ ಅವಧಿಯೊಂದಿಗೆ ರೂ 8 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಉಳಿತಾಯಕ್ಕೆ ಕಾರಣವಾಗಿರುವ 45 bps ಉಳಿತಾಯವುಂಟಾಗುತ್ತದೆ ಎಂದು ತಿಳಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  State Bank of India Home Loan (ಗೃಹ ಸಾಲ) ಬಡ್ಡಿಯನ್ನು 6.7% ಕ್ಕೆ ಇಳಿಸಿದ್ದು ಯಾವುದೇ ಲೋನ್ ಮೊತ್ತಕ್ಕೆ ಈ ಬಡ್ಡಿ ಅನ್ವಯವಾಗಲಿದೆ. ಬ್ಯಾಂಕ್, ಗೃಹ ಸಾಲವನ್ನು ಏಕರೂಪ ದರದಲ್ಲಿ ಇದೇ ಮೊದಲ ಬಾರಿಗೆ ನೀಡುತ್ತಿರುವುದಾಗಿ ಬ್ಯಾಂಕ್ ತಿಳಿಸಿದ್ದು ಹಬ್ಬದ ಸೀಸನ್‌ಗೂ ಮುಂಚಿತವಾಗಿ ಮನೆ ಖರೀದಿಸುವವರಿಗೆ ಪ್ರೋತ್ಸಾಹಿಸುವ ಗುರಿಯನ್ನು ದೇಶದ ಅತಿದೊಡ್ಡ ಬ್ಯಾಂಕ್ ಹೊಂದಿದೆ.

  ಬ್ಯಾಂಕ್ ತೆಗೆದುಕೊಂಡ ಈ ನಿರ್ಧಾರದಿಂದ ಮನೆ ಖರೀದಿಸುವವರಿಗೆ ಹೇಗೆ ಸಹಾಯವಾಗಲಿದೆ ಎಂಬುದನ್ನು SBI ವಿವರಿಸಿದ್ದು ಖರೀದಿದಾರರು ರೂ 75 ಲಕ್ಷದ ಗೃಹ ಸಾಲಕ್ಕಾಗಿ 7.15% ಬಡ್ಡಿಯನ್ನು ನೀಡಬೇಕಾಗುತ್ತದೆ. ಆದರೆ ಹಬ್ಬದ ಆಫರ್‌ಗಳ ಕೊಡುಗೆಯ ಪ್ರಕಾರವಾಗಿ ಗೃಹ ಸಾಲವು ಬಡ್ಡಿ ದರ 6.7% ನಲ್ಲಿ ಲಭ್ಯವಾಗಲಿದೆ. ಈ ಕೊಡುಗೆಯಿಂದ 75 ಲಕ್ಷ ಲೋನ್‌ಗೆ 30 ವರ್ಷಗಳ ಅವಧಿಯೊಂದಿಗೆ ರೂ 8 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಉಳಿತಾಯಕ್ಕೆ ಕಾರಣವಾಗಿರುವ 45 bps ಉಳಿತಾಯವುಂಟಾಗುತ್ತದೆ ಎಂದು ತಿಳಿಸಿದೆ.

  ನೂತನ ಕೊಡುಗೆಯಲ್ಲಿರುವ ಅಂಶವೇನು?:

  ಈ ಮೊದಲು ಗೃಹ ಸಾಲ ಬಡ್ಡಿ ದರವು ವೇತನ ಪಡೆಯುವವರಿಗೆ ಹಾಗೂ ವೇತನ ರಹಿತ ಖರೀದಿದಾರರಿಗೆ ಭಿನ್ನವಾಗಿತ್ತು. ವೇತನ ರಹಿತ ಖರೀದಿದಾರರು ವೇತನ ಪಡೆಯುವ ಖರೀದಿದಾರರಿಗಿಂತಲೂ ಹೆಚ್ಚಿನ ಬಡ್ಡಿ ದರಗಳನ್ನು ಪಾವತಿಸಬೇಕಾಗಿತ್ತು. “ಈಗ, ನಿರೀಕ್ಷಿತ ಗೃಹ ಸಾಲ ಸಾಲಗಾರರಿಗೆ ಯಾವುದೇ ಉದ್ಯೋಗ-ಸಂಬಂಧಿತ ಬಡ್ಡಿ ಪ್ರೀಮಿಯಂ ಅನ್ನು ವಿಧಿಸಲಾಗುವುದಿಲ್ಲ. ಇದರಿಂದ ವೇತನ ರಹಿತ ಖರೀದಿದಾರರು 15 bps ಹೆಚ್ಚಿನ ಬಡ್ಡಿ ಉಳಿತಾಯ ಮಾಡಬಹುದು ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

  ಸಾಮಾನ್ಯವಾಗಿ ರಿಯಾಯಿತಿ ಬಡ್ಡಿದರಗಳು ಒಂದು ನಿರ್ದಿಷ್ಟ ಮಿತಿಯಲ್ಲಿನ ಸಾಲಕ್ಕೆ ಮಾತ್ರವೇ ಅನ್ವಯವಾಗುತ್ತವೆ ಹಾಗೂ ಸಾಲಗಾರನ ವೃತ್ತಿಯನ್ನು ಆಧರಿಸಿದೆ. ಈ ಬಾರಿ, ಸಾಲದ ಮೊತ್ತ ಹಾಗೂ ಸಾಲಗಾರನ ವೃತ್ತಿಯನ್ನು ಪರಿಗಣಿಸದೆಯೇ ಆಫರ್‌ಗಳನ್ನು ಬಹುಪಾಲು ಸಾಲಗಾರರ ಎಲ್ಲಾ ವಿಭಾಗಗಳಿಗೂ ಅನ್ವಯವಾಗುವಂತೆ ರಚಿಸಿದ್ದೇವೆ ಎಂದು ಎಸ್‌ಬಿಐನ ವ್ಯವಸ್ಥಾಪಕ ನಿರ್ದೇಶಕ (Retail and Digital Banking) ಸಿಎಸ್ ಶೆಟ್ಟಿ ತಿಳಿಸಿದ್ದಾರೆ.

  ಗೃಹ ಸಾಲ ಪಡೆಯುವ ಸಾಲಗಾರರಿಗೆ ಉಂಟಾಗುವ ಪ್ರಯೋಜನವೇನು?:

  ಗೃಹ ಸಾಲ ಪಡೆಯುವ ಸಾಲಗಾರರಿಗೆ ಈ ಆಫರ್‌ನಿಂದ ಏನು ಪ್ರಯೋಜನವಿದೆ ಎಂಬುದನ್ನು ವಿವರಿಸಿದ ANAROCK ಗ್ರೂಪ್‌ನ ಅಧ್ಯಕ್ಷ ಅನುಜ್ ಪುರಿ “ ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಬಜೆಟ್ ವಸತಿ ಮೇಲೆ ಕೇಂದ್ರೀಕರಿಸುವ ಬದಲು, ಈ ಹೊಸ ಬಡ್ಡಿದರವು ಪ್ರಾಮಾಣಿಕವಾಗಿ ಪ್ರಜಾಪ್ರಭುತ್ವವಾಗಿದೆ ಏಕೆಂದರೆ ಯಾವುದೇ ಬಜೆಟ್ ಆವರ್ತನ ಶ್ರೇಣಿಯಿಂದ ಖರೀದಿದಾರರು ಪ್ರಯೋಜನ ಪಡೆಯುತ್ತಾರೆ.

  ಈ ಹೊಸ ಕೊಡುಗೆಯಿಂದ ಮಧ್ಯಮ ವರ್ಗದ ನಗರಗಳೂ ಪ್ರಯೋಜನವನ್ನು ಪಡೆದುಕೊಳ್ಳಲಿದ್ದು ಪ್ರಜಾಸತ್ತಾತ್ಮಕ ಬಡ್ಡಿದರದಿಂದಾಗಿ ಮಹಾನಗರಗಳಲ್ಲಿನ ಬೃಹತ್ ವಸತಿ ಬೇಡಿಕೆಯನ್ನು ಸಹ ಪರಿಹರಿಸುತ್ತದೆ. ಕೊಡುಗೆಯು ಸಮಯೋಚಿತವಾಗಿದ್ದು ಹಬ್ಬದ ಸಮಯದಲ್ಲಿ ಮನೆ ಖರೀದಿಸುವವರಿಗೆ ಉತ್ತಮ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ; ಮಾಡಬೇಕಿರುವುದು ಇಷ್ಟೇ!

  ಹಬ್ಬದ ಸಮಯದಲ್ಲಿ ಶೂನ್ಯ ಪ್ರೊಸೆಸಿಂಗ್ ಶುಲ್ಕಗಳು ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಮನೆ ಖರೀದಿಯನ್ನು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತದೆ. ಸಾಂಕ್ರಾಮಿಕದ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯನೂ ತಮ್ಮ ಕನಸಿನ ಮನೆಯನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ನಾವೂ ಕೈಜೋಡಿಸಿದ್ದು ನಮಗೆ ಸಾಧ್ಯವಾಗುವಷ್ಟು ಸಹಕರಿಸಲು ನಾವು ಬದ್ಧರಾಗಿರುವೆವು ಎಂದು ಶೆಟ್ಟಿ ತಿಳಿಸಿದ್ದಾರೆ.

  ಇದನ್ನೂ ಓದಿ: ಭಾರತದಲ್ಲಿ ಐಟಿ ವೃತ್ತಿಪರರಿಗೆ ಉದ್ಯೋಗವಕಾಶಗಳಲ್ಲಿ ಶೇ.400ರಷ್ಟು ಏರಿಕೆ: ಬೆಂಗಳೂರಿಗೆ ಮೊದಲ ಆದ್ಯತೆ

  ಸಾಮಾನ್ಯವಾಗಿ ಸ್ವಂತ ಮನೆ ಹೊಂದಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಹಣದುಬ್ಬರ, ಬ್ಯಾಂಕ್​ ಬಡ್ಡಿ ಮತ್ತು ಸಾಲದ ಭಯದಿಂದ ಬಹಳಷ್ಟು ಮಂದಿ ಹಿಂದೇಟು ಹಾಕುತ್ತಾರೆ. ಆದರೆ ಎಸ್​ಬಿಐ ಈಗ ಬಡ್ಡಿದರ ಇನ್ನಷ್ಟು ಕಡಿಮೆ ಮಾಡುವುದರಿಂದ, ಇಎಂಐ ಕಡಿಮೆಯಾಗಲಿದೆ ಮತ್ತು ಒಟ್ಟೂ ಸಾಲ ಮರುಪಾವತಿಯ ಮೊತ್ತವೂ ಕಡಿಮೆಯಾಗಲಿದೆ.
  Published by:Sharath Sharma Kalagaru
  First published: