ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.

ಬ್ಯಾಂಕಿಂಗ್​ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ. ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ತನ್ನ ಖಾಲಿಯಿರುವ ಹುದ್ದೆಗಳಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ.

zahir | news18
Updated:January 10, 2019, 5:09 PM IST
ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ನೇರ ನೇಮಕಾತಿ: ವಾರ್ಷಿಕ ವೇತನ 52 ಲಕ್ಷ ರೂ.
ಸಾಂದರ್ಭಿಕ ಚಿತ್ರ
zahir | news18
Updated: January 10, 2019, 5:09 PM IST
ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಸ್ಪೆಷಲಿಸ್ಟ್​ ಕ್ಯಾಡರ್​ ಆಫೀಸರ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲ್ಲಿ ರೆಗ್ಯುಲರ್ ಮತ್ತು ಕಾಂಟ್ರಾಕ್ಟ್​ ಮೇರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗಾಗಿ ಜನವರಿ 30 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ  15 ಲಕ್ಷದಿಂದ 52 ಲಕ್ಷದವರೆಗೆ ವಾರ್ಷೀಕ ವೇತನ ಪ್ಯಾಕೇಜು ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ
ಈ ಹುದ್ದೆಗಳ ವಿಭಿನ್ನ ಸ್ಥಾನಗಳಿಗೆ ಆಯಾ ವಿಷಯಗಳ ಅರ್ಹತೆಯ ಮೇಲೆ ಆಯ್ಕೆ ನಡೆಯಲಿದೆ.

ಅರ್ಜಿ ಶುಲ್ಕ

ಸಾಮಾನ್ಯ ವರ್ಗಕ್ಕೆ- 600 ರೂ.
ಮೀಸಲಾತಿ ವರ್ಗಕ್ಕೆ-100 ರೂ.

ಆಯ್ಕೆ ಪ್ರಕ್ರಿಯೆ
Loading...

ಸಂದರ್ಶನದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ತಿಳುವಳಿಕೆಯ ಆಧಾರದಲ್ಲಿ ಆಯ್ಕೆ ನಡೆಯಲಿದೆ. ಈ ಇಂಟರ್​​ವ್ಯೂನಲ್ಲಿ ಒಂದೇ ರೀತಿಯಾಗಿ ಅಭ್ಯರ್ಥಿಗಳು ಯಶಸ್ವಿಯಾದರೆ, ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ರಾಸ್​ ಟೇಲರ್ ಆರ್ಭಟ: ಸಚಿನ್, ಕೊಹ್ಲಿ ದಾಖಲೆಗಳು ಧೂಳೀಪಟ..!

ಅರ್ಜಿ ಸಲ್ಲಿಸುವುದು ಹೇಗೆ
- ಸ್ಟೇಟ್ ಬ್ಯಾಂಕ್ ಅಧಿಕೃತ ವೆಬ್​ಸೈಟ್​ www.sbi.co.in.ಗೆ ಭೇಟಿ ನೀಡಿ
- ಇಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸಿ  ನೋಂದಣಿ ಮಾಡಿಕೊಳ್ಳಿ
- ಹಾಗೆಯೇ ನಿಮ್ಮ ಪಾಸ್​ಪೋರ್ಟ್​ ಸೈಜಿನ ಫೋಟೋವನ್ನು ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
-ಅಗತ್ಯವಿರುವ ವಿವರಗಳನ್ನುಅರ್ಜಿಯಲ್ಲಿ ಭರ್ತಿ ಮಾಡಿ
- ಅಪ್ಲಿಕೇಶನ್ ಶುಲ್ಕವನ್ನು ಪಾವತಿಸುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ನೇರವಾಗಿ ಅರ್ಜಿ ಸಲ್ಲಿಸಲು ಈ ಲಿಂಕ್​ ಅನ್ನು ಕ್ಲಿಕ್ ಮಾಡಿ - tps://ibpsonlhtine.ibps.in/sbisrcojan19/reg_start.php

ಇದನ್ನೂ ಓದಿ: ಆ್ಯಪಲ್​ ಏರ್​ಪೋಡ್​ಗೆ ಪ್ರಬಲ ಪೈಪೋಟಿ: ಅಗ್ಗದ ಬೆಲೆಗೆ ಮೀ ಏರ್​ಡಾಟ್ಸ್​ ಬಿಡುಗಡೆ

ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಆರಂಭ- ಜನವರಿ 9
ಅರ್ಜಿ ಸಲ್ಲಿಕೆಗೆ ಕೊನೆಯ ದಿನ- ಜನವರಿ 30

ಈ ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್​ಸೈಟ್​ www.sbi.co.in ಗೆ ಭೇಟಿ ನೀಡಿ

ಇದನ್ನೂ ಓದಿ: ಅಂದು ಕ್ಲೀನರ್​ ಆಗಿ ಕೆಲಸ ಮಾಡಿದ್ದ ವ್ಯಕ್ತಿ, ಇಂದು ವಿಶ್ವದ ನಂಬರ್-1 ಶ್ರೀಮಂತ..!

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ