State Bank of India: ಎಸ್​​ಬಿಐ ಬ್ಯಾಂಕ್​​​ ಗ್ರಾಹಕರಿಗೆ ಸಿಹಿಸುದ್ದಿ; ಇಳಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ

ಎಸ್ ಬಿ ಐ ಸಾರ್ವಜನಿಕ ಕ್ಷೇತ್ರದ ಮೊದಲ ಪ್ರಮುಖ ಬ್ಯಾಂಕ್ ಇದಾಗಿದೆ. ಆರ್​​ಬಿಐ ಮೂಲ ದರ ಕಡಿಮೆ ಮಾಡಿದ ಬಳಿಕ ಎಸ್​ಬಿಐ ತನ್ನ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿದೆ. 

news18
Updated:September 23, 2019, 1:23 PM IST
State Bank of India: ಎಸ್​​ಬಿಐ ಬ್ಯಾಂಕ್​​​ ಗ್ರಾಹಕರಿಗೆ ಸಿಹಿಸುದ್ದಿ; ಇಳಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ
ಸಾಂದರ್ಭಿಕ ಚಿತ್ರ
news18
Updated: September 23, 2019, 1:23 PM IST
ಬೆಂಗಳೂರು(ಸೆ.23): ದೀಪಾವಳಿಗೆ ಮುನ್ನವೇ ಸ್ಟೇಟ್​​ ಬ್ಯಾಂಕ್​​ ಆಫ್​​ ಇಂಡಿಯಾ, ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್​​ಬಿಐ ಈಗ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡಲು ಮುಂದಾಗಿದೆ.

ಎಸ್​​ಬಿಐ ಬ್ಯಾಂಕ್​​​ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡುವುದಾಗಿ ಸೋಮವಾರ ಮಹತ್ವದ ಘೋಷಣೆ ಮಾಡಿದೆ. ವಸತಿ ಮತ್ತು ರಿಟೇಲ್ ಸೇರಿದಂತೆ ಫ್ಲೋಟಿಂಗ್​​ ಸಾಲಗಳ ಮೇಲಿನ ಬಡ್ಡಿ ದರ ಕಡಿಮೆ ಮಾಡಲು ನಿರ್ಧರಿಸಿದೆ. ಮುಂದಿನ ತಿಂಗಳು ಅಕ್ಟೋಬರ್​​ 1ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ ಎನ್ನುತ್ತಿವೆ ಮೂಲಗಳು.

ವೈಯಕ್ತಿಕ, ಚಿಲ್ಲರೆ, ವ್ಯಾಪಾರ, ಮಧ್ಯಮ ಉದ್ಯಮ ಸೇರಿದಂತೆ ಎಲ್ಲಾ ಫ್ಲೋಟಿಂಗ್​​ ಸಾಲದ ಮೇಲಿನ ದರ ಕಡಿಮೆ ಬಗ್ಗೆ ರಿಸರ್ವ್​​ ಬ್ಯಾಂಕ್​​​ ಆಫ್​​ ಇಂಡಿಯಾ ಇತ್ತೀಚೆಗೆ ಸೆಪ್ಟೆಂಬರ್ 4ರಂದೇ ಸೂಚನೆ ಹೊರಡಿಸಿತ್ತು. ಈ ಆದೇಶದ ಮೇರೆಗೆ ಇದೀಗ ಎಸ್​​ಬಿಐ ಬ್ಯಾಂಕ್​​​ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡುವುದಾಗಿ ಘೋಷಿಸಿದೆ.

ಇದನ್ನೂ ಓದಿ: ಪ್ರವಾಹ ಸಂತ್ರಸ್ತರಿಗೆ 5 ಕೋಟಿ ರೂ. ನೆರವು ನೀಡಿದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ

ಈ ಮುನ್ನ ಸರ್ಕಾರಿ ಎಸ್​ಬಿಐ ಬ್ಯಾಂಕ್​​ ತನ್ನ ಸಾಲದ ಮೂಲ ಬಡ್ಡಿ ದರದಲ್ಲಿ ಶೇ. 9.80ರಷ್ಟು ಹೆಚ್ಚಳ ಮಾಡಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಬಡ್ಡಿ ದರದಲ್ಲಿ ಶೇ. 0.10ರಷ್ಟು ಹೆಚ್ಚಳದ ಮೂಲಕ ಶೇ. 9.80ರಷ್ಟು ಹೆಚ್ಚಳ ಮಾಡಿದೆ ಎಂದು ತಿಳಿಸಿತ್ತು. ಅದಕ್ಕೂ ಮೊದಲು ಮೂಲ ಬಡ್ಡಿ ದರ ಶೇ. 9.70 ರಷ್ಟು ಇತ್ತು.

ಎಸ್ ಬಿ ಐ ಸಾರ್ವಜನಿಕ ಕ್ಷೇತ್ರದ ಮೊದಲ ಪ್ರಮುಖ ಬ್ಯಾಂಕ್ ಇದಾಗಿದೆ. ಆರ್​​ಬಿಐ ಮೂಲ ದರ ಕಡಿಮೆ ಮಾಡಿದ ಬಳಿಕ ಎಸ್​ಬಿಐ ತನ್ನ ಸಾಲದ ಮೇಲಿನ ಬಡ್ಡಿ ದರ ಕಡಿಮೆ ಮಾಡಿದೆ. ವಿತ್ತೀಯ ನೀತಿಯ ಈ ಉಪಕ್ರಮವು ಮಧ್ಯ ತ್ರೈಮಾಸಿಕ ಸಮೀಕ್ಷೆಯ ಒಂದು ದಿನ ಮೊದಲೇ ಹೇಳಲಾಗಿದೆ.
----------------
Loading...

First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...