SBI Recruitment: 8,904 ಕ್ಲಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್​ಬಿಐ ಕ್ಲರಿಕಲ್​ ಜೂನಿಯರ್​ ಅಸೋಸಿಯೇಟ್​ ಹುದ್ದೆಗಳಿಗಾಗಿ ಎರಡು ಹಂತದ ಪರೀಕ್ಷೆ ಮೂಲಕ ನೇಮಕ ನಡೆಯಲಿದ್ದು, ರಾಜ್ಯದಲ್ಲಿನ ಪೂರ್ವಭಾವಿ ಪರೀಕ್ಷಾ ಕೇಂದ್ರಗಳನ್ನು 9 ರಿಂದ 13 ಕ್ಕೆ ಹೆಚ್ಚಿಸಲಾಗಿದೆ. ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ ಎಂದು ಹೇಳಿದೆ.

Harshith AS | news18
Updated:April 13, 2019, 5:42 PM IST
SBI Recruitment: 8,904 ಕ್ಲಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ
  • News18
  • Last Updated: April 13, 2019, 5:42 PM IST
  • Share this:
ಬೆಂಗಳೂರು(ಏ.13): ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಖಾಲಿ ಇರುವ 8,904 ಕ್ಲರಿಕಲ್​ ಜೂನಿಯರ್​ ಅಸೋಸಿಯೇಟ್​ ಹುದ್ದೆಗಳನ್ನು  ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಏ.12ರಿಂದ ಆನ್​ಲೈನ್​ ಅರ್ಜಿ ಸಲ್ಲಿಕೆಗೆ ಅವಕಾಶವನ್ನು ಒದಗಿಸಲಾಗಿದ್ದು, ಅರ್ಜಿ ಸಲ್ಲಿಸಲು ಮೇ.3 ಕೊನೆಯ ದಿನಾಂಕವಾಗಿದೆ.

ಕರ್ನಾಟಕದಲ್ಲಿ 509 ಹುದ್ದೆಗಳ ನೇಮಕ ಪ್ರಕ್ರೀಯೆ ನಡೆಯಲಿದ್ದು, ಅರ್ಹ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿಸಲ್ಲಿಬಹುದೆಂದು ಎಸ್​ಬಿಐ ತಿಳಿಸಿದೆ.

ಅರ್ಜಿ ಸಲ್ಲಿಸುವವರು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇಂಟಿಗ್ರೇಟೆಡ್ ಡ್ಯೂಯಲ್ ಡಿಗ್ರಿ ಪಡೆದವರೂ ಅರ್ಜಿ ಸಲ್ಲಿಸ ಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: ಬಿಜೆಪಿಗೆ ಮತ ಹಾಕ್ತಿಯಾ? ಹಾಕು ಹೋಗು! ಮತದಾರರ ಪ್ರಶ್ನೆಗೆ ಕೆಂಡಾಮಂಡಲರಾದ ಸಚಿವ ತುಕಾರಾಂ..!

ಎಸ್​ಬಿಐ ಕ್ಲರಿಕಲ್​ ಜೂನಿಯರ್​ ಅಸೋಸಿಯೇಟ್​ ಹುದ್ದೆಗಳಿಗಾಗಿ ಎರಡು ಹಂತದ ಪರೀಕ್ಷಾ ನೇಮಕಾತಿ ನಡೆಯಲಿದ್ದು, ರಾಜ್ಯದಲ್ಲಿನ ಪೂರ್ವಭಾವಿ ಪರೀಕ್ಷಾ ಕೇಂದ್ರಗಳನ್ನು 9 ರಿಂದ 13 ಕ್ಕೆ ಹೆಚ್ಚಿಸಲಾಗಿದೆ. ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಡ್ಯ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗುತ್ತದೆ ಎಂದು ತಿಳಿಸಿದೆ.

ಅರ್ಜಿ ಸಲ್ಲಿಸುವ ಅರ್ಹ ವಿದ್ಯಾರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ https://www.sbi.co.in/ ಗೆ ಹೋಗಿ ಅರ್ಜಿಯನ್ನು ಮೇ 3, 2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ:ಪದವಿ, ಇಂಟಿಗ್ರೇಟೆಡ್​ ಡ್ಯೂಯಲ್​ ಡಿಗ್ರಿ ಪಡೆದಿರಬೇಕು

ವಯೋಮಿತಿ:

20ರಿಂದ 28 ವರ್ಷದ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ

ಆಯ್ಕೆಯ ವಿಧಾನ:

ಲಿಖಿತ ಹಾಗೂ ಮೌಖಿಕ ವಿಧಾನದಲ್ಲಿ ಆಯ್ಕೆ ಪ್ರಕ್ರೀಯೆ ನಡೆಯುತ್ತದೆ 
First published: April 13, 2019, 4:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading