Union Budget 2019 | ಮೋದಿ ನೇತೃತ್ವದ 2.0 ಸರ್ಕಾರದ ಮೊದಲ ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ಗಳ ನಿರೀಕ್ಷೆಗಳೇನು?

Union Budget 2019 - ಈ ಬಾರಿಯ ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಾಗಾದರೆ, ಸ್ಟಾರ್ಟ್​ಅಪ್​ಗಳ ನಿರೀಕ್ಷೆಗಳೇನು? ಇಲ್ಲಿವೆ ಕೆಲವು ಮಾಹಿತಿ...

HR Ramesh | news18
Updated:June 7, 2019, 3:59 PM IST
Union Budget 2019 | ಮೋದಿ ನೇತೃತ್ವದ 2.0 ಸರ್ಕಾರದ ಮೊದಲ ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ಗಳ ನಿರೀಕ್ಷೆಗಳೇನು?
ಪ್ರಧಾನಿ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
HR Ramesh | news18
Updated: June 7, 2019, 3:59 PM IST
ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಮೊದಲ ಬಜೆಟ್​ ಅಧಿವೇಶನ ಜುಲೈ 5ರಂದು ನಡೆಯಲಿದೆ. ನೂತನ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚೊಚ್ಚಲ ಬಜೆಟ್​ ಮಂಡಿಸಲಿದ್ದಾರೆ.

ಈ ಬಾರಿಯ ಬಜೆಟ್​ನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬಹುದು ಎಂಬ ನಿರೀಕ್ಷೆ ಇದೆ. ಹಾಗೇ, ಕೇಂದ್ರ ಸರ್ಕಾರ ರೈತರಿಗೂ ಉತ್ತಮ ಪ್ಯಾಕೇಜ್​ ಘೋಷಿಸುವ ಬಗ್ಗೆ ನಿರೀಕ್ಷೆಗಳಿವೆ.

ಇದನ್ನೂ ಓದಿ: Budget 2019: ನೌಕರ ವರ್ಗಕ್ಕೆ ಸಿಹಿ ಸುದ್ದಿ, ರೂ. 5 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಿಲ್ಲ

ರೈತರ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ಬಿಕ್ಕಟ್ಟು ಬಗೆಹರಿಸಲು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹಾಗೇ, ಸೂಕ್ಷ್ಮ, ಸಣ್ಣ, ಮಧ್ಯಮ ಎಂಟರ್​ಪ್ರೈಸಸ್​ (ಎಂಎಸ್​ಎಂಇ) ವಲಯಕ್ಕೆ ಈ ಬಾರಿಯೂ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Budget 2019: ಭೂ ರಹಿತ ಕೃಷಿಕರಿಗೆ ಮೋದಿ ಸರ್ಕಾರದಿಂದ ಬಂಪರ್​ ಕೊಡುಗೆ

ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ 2016ರಲ್ಲಿ ಸ್ಟಾರ್ಟ್​ಅಪ್​ ಅಭಿಯಾನವನ್ನು ಆರಂಭಿಸಿತ್ತು. ದೇಶದಲ್ಲಿ ದೊಡ್ಡ ಉದ್ಯಮಗಳ ಬದಲಾಗಿ ಸ್ಟಾರ್ಟ್​ಅಪ್​ಗಳನ್ನು ಪ್ರಚಾರ ಮಾಡುವ ಸಲುವಾಗಿ ಈ ಅಭಿಯಾನ ಕೈಗೊಳ್ಳಲಾಗಿತ್ತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಅನ್ವೇಷಣೆ ನಡೆಸಲು, ಯುವಕರಿಗೆ ಉದ್ಯೋಗ ಕಲ್ಪಿಸಲು ಹಾಗೂ ಯುವಕರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಸ್ಟಾರ್ಟ್​ಅಪ್​ಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿತ್ತು.

ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್​ನಲ್ಲಿ ಸ್ಟಾರ್ಟ್​ಅಪ್​ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಾಗಾದರೆ, ಸ್ಟಾರ್ಟ್​ಅಪ್​ಗಳ ನಿರೀಕ್ಷೆಗಳೇನು? ಇಲ್ಲಿವೆ ಕೆಲವು ಮಾಹಿತಿ.
Loading...

ಹೊಸ ಉದ್ಯಮಗಳಲ್ಲಿ ಭಾರತೀಯರು ಹೂಡುವ ಬಂಡವಾಳದ ಮೇಲೆ ಹಾಕುವ ಏಂಜೆಲ್​ ತೆರಿಗೆ ಸ್ಟಾರ್ಟ್​ಅಪ್​ಗಳಿಗೆ ಭಾರೀ ತಲೆನೋವು ತಂದಿಟ್ಟಿದೆ. ಹೀಗಾಗಿ, ಈ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸಲು, ಆ ಬಗ್ಗೆ ಇನ್ನಷ್ಟು ನಿಖರತೆಯನ್ನು ತರಲು ಬಜೆಟ್​ ಮುಂದಾಗಬಹುದು ಎಂಬ ನಿರೀಕ್ಷೆಯಿದೆ. ಏಂಜೆಲ್​ ಟ್ಯಾಕ್ಸ್​ ವಿದೇಶಿಯರಿಗೆ ಅನ್ವಯವಾಗದೆ ಭಾರತೀಯ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ, ಕಳೆದ ಬಜೆಟ್​ನಲ್ಲೂ ಏಂಜೆಲ್ ಟ್ಯಾಕ್ಸ್​ ರದ್ದುಪಡಿಸಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು. ಈ ಬಾರಿಯಾದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಲಿದೆಯಾ ಎಂದು ನೋಡಬೇಕಿದೆ.

ಡಿಜಿಟಲ್​ ವಹಿವಾಟನ್ನು ಹೆಚ್ಚುಗೊಳಿಸುವ ಮೂಲಕ ಸುಲಭ ಆರ್ಥಿಕ ವಿನಿಮಯಕ್ಕೆ ಅನುವು ಮಾಡಿಕೊಡುವ ಬಗ್ಗೆ ನಿರೀಕ್ಷೆಯಿದೆ. ಫಂಡ್​ ಆಫ್​ ಫಂಡ್ಸ್​ಗಳಿಂದ ವಿತರಣೆ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟು ಸ್ಪಷ್ಟತೆ ನೀಡಬೇಕು. ಎಂಪ್ಲಾಯೀ ಸ್ಟಾಕ್​ ಓನರ್​ಶಿಪ್​ ಪ್ಲಾನ್​ ಮೇಲಿನ ತೆರಿಗೆ ಬಗ್ಗೆ ಸ್ಪಷ್ಟತೆ ನೀಡಬೇಕು. ಫಂಡ್​ ಮ್ಯಾನೇಜರ್​ಗಳ ಮೇಲಿನ ಜಿಎಸ್​ಟಿ  ದರವನ್ನು ಇನ್ನಷ್ಟು ಕಡಿಮೆಗೊಳಿಸಬೇಕು. ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಹೈಬ್ರೀಡ್​ ಇನ್​ಸ್ಟ್ರುಮೆಂಟ್​ಗಳಿಗೆ ಪ್ರತ್ಯೇಕ ಪಾಲಿಸಿಗಳನ್ನು ತರಬೇಕೆಂಬ ಒತ್ತಾಯವೂ ಕೇಂದ್ರ ಸರ್ಕಾರದ ಮುಂದಿದೆ.

First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...