Budget 2019: ಕೇಂದ್ರ ಸರ್ಕಾರದ ಬಜೆಟ್ ಮೇಲೆ ಸ್ಟಾರ್ಟ್ಅಪ್ಗಳ ನಿರೀಕ್ಷೆಗಳೇನು?
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2016ರಲ್ಲಿ ಸ್ಟಾರ್ಟ್ಅಪ್ ಅಭಿಯಾನವನ್ನು ಆರಂಭಿಸಿತ್ತು. ದೇಶದಲ್ಲಿ ದೊಡ್ಡ ಉದ್ಯಮಗಳ ಬದಲಾಗಿ ಸ್ಟಾರ್ಟ್ಅಪ್ಗಳನ್ನು ಪ್ರಚಾರ ಮಾಡುವ ಸಲುವಾಗಿ ಈ ಅಭಿಯಾನ ಕೈಗೊಳ್ಳಲಾಗಿತ್ತು.
ನವದೆಹಲಿ (ಜ. 29): ಪ್ರಸಕ್ತ ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಮಂಡನೆಗೆ ಮೂರೇ ದಿನಗಳು ಬಾಕಿ ಇವೆ. ಫೆಬ್ರವರಿ 1ರಂದು ತನ್ನ ಅಧಿಕಾರಾವಧಿಯ ಕೊನೆಯ ಬಜೆಟ್ ಮಂಡನೆ ಮಾಡಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬಗ್ಗೆ ನಿರೀಕ್ಷೆಗಳೂ ಸಾಕಷ್ಟಿವೆ. ಈ ಬಾರಿಯ ಲೋಕಸಭಾ ಚುನಾವಣೆಯ ಗೆಲುವಿನಲ್ಲಿ ಇದೀಗ ಮಂಡಿಸಲಿರುವ ಮಧ್ಯಂತರ ಬಜೆಟ್ ಕೂಡ ಮಹತ್ವದ ಪಾತ್ರ ವಹಿಸುವುದರಿಂದ ಕೇಂದ್ರ ಬಿಜೆಪಿ ನಾಯಕರ ಮೇಲೆ ಒತ್ತಡವೂ ಅಷ್ಟೇ ಇದೆ.
ಅಂದಹಾಗೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈ ಬಾರಿಯ ಬಜೆಟ್ ಅನ್ನು ಹಣಕಾಸು ರಾಜ್ಯ ಖಾತೆ ಸಚಿವರಾಗಿರುವ ಪಿಯೂಷ್ ಗೋಯಲ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಹಾಗೇ, ಕೇಂದ್ರ ಸರ್ಕಾರ ರೈತರಿಗೂ ಉತ್ತಮ ಪ್ಯಾಕೇಜ್ ಘೋಷಿಸುವ ಬಗ್ಗೆ ನಿರೀಕ್ಷೆಗಳಿವೆ.
ಇದನ್ನೂ ಓದಿ: Budget 2019: ನೌಕರ ವರ್ಗಕ್ಕೆ ಸಿಹಿ ಸುದ್ದಿ, ರೂ. 5 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಿಲ್ಲ
ರೈತರ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಲೇ ಇರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ಬಿಕ್ಕಟ್ಟು ಬಗೆಹರಿಸಲು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹಾಗೇ, ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಬಗ್ಗೆಯೂ ಜನರಲ್ಲಿ ಭಾರೀ ನಿರೀಕ್ಷೆಗಳಿವೆ. ಸೂಕ್ಷ್ಮ, ಸಣ್ಣ, ಮಧ್ಯಮ ಎಂಟರ್ಪ್ರೈಸಸ್ (ಎಂಎಸ್ಎಂಇ) ವಲಯಕ್ಕೆ ಈ ಬಾರಿಯೂ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯೂ ಇದೆ.ಇದನ್ನೂ ಓದಿ: Budget 2019: ಭೂ ರಹಿತ ಕೃಷಿಕರಿಗೆ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2016ರಲ್ಲಿ ಸ್ಟಾರ್ಟ್ಅಪ್ ಅಭಿಯಾನವನ್ನು ಆರಂಭಿಸಿತ್ತು. ದೇಶದಲ್ಲಿ ದೊಡ್ಡ ಉದ್ಯಮಗಳ ಬದಲಾಗಿ ಸ್ಟಾರ್ಟ್ಅಪ್ಗಳನ್ನು ಪ್ರಚಾರ ಮಾಡುವ ಸಲುವಾಗಿ ಈ ಅಭಿಯಾನ ಕೈಗೊಳ್ಳಲಾಗಿತ್ತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಅನ್ವೇಷಣೆ ನಡೆಸಲು, ಯುವಕರಿಗೆ ಉದ್ಯೋಗ ಕಲ್ಪಿಸಲು ಹಾಗೂ ಯುವಕರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಸ್ಟಾರ್ಟ್ಅಪ್ಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಸ್ಟಾರ್ಟ್ಅಪ್ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಾಗಾದರೆ, ಸ್ಟಾರ್ಟ್ಅಪ್ಗಳ ನಿರೀಕ್ಷೆಗಳೇನು? ಇಲ್ಲಿವೆ ಕೆಲವು ಮಾಹಿತಿ...ಹೊಸ ಉದ್ಯಮಗಳಲ್ಲಿ ಭಾರತೀಯರು ಹೂಡುವ ಬಂಡವಾಳದ ಮೇಲೆ ಹಾಕುವ ಏಂಜೆಲ್ ತೆರಿಗೆ ಸ್ಟಾರ್ಟ್ಅಪ್ಗಳಿಗೆ ಭಾರೀ ತಲೆನೋವು ತಂದಿಟ್ಟಿದೆ. ಹೀಗಾಗಿ, ಈ ತೆರಿಗೆಯನ್ನು ಇನ್ನಷ್ಟು ಸರಳಗೊಳಿಸಲು, ಆ ಬಗ್ಗೆ ಇನ್ನಷ್ಟು ನಿಖರತೆಯನ್ನು ತರಲು ಬಜೆಟ್ ಮುಂದಾಗಬಹುದು ಎಂಬ ನಿರೀಕ್ಷೆಯಿದೆ. ಏಂಜೆಲ್ ಟ್ಯಾಕ್ಸ್ ವಿದೇಶಿಯರಿಗೆ ಅನ್ವಯವಾಗದೆ ಭಾರತೀಯ ಹೂಡಿಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾಗಿ, ಕಳೆದ ಬಜೆಟ್ನಲ್ಲೂ ಏಂಜೆಲ್ ಟ್ಯಾಕ್ಸ್ ರದ್ದುಪಡಿಸಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು. ಈ ಬಾರಿಯಾದರೂ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಲಿದೆಯಾ ಎಂದು ನೋಡಬೇಕಿದೆ.
ಇದನ್ನೂ ಓದಿ: 2019 ಕೇಂದ್ರ ಬಜೆಟ್; ಸ್ಟಾರ್ಟ್ಅಪ್, ರೈತರು, ಸಾಮಾನ್ಯ ಜನರಿಗೆ ಬಂಪರ್ ಕೊಡುಗೆ ನಿರೀಕ್ಷೆ!
ಡಿಜಿಟಲ್ ವಹಿವಾಟನ್ನು ಹೆಚ್ಚುಗೊಳಿಸುವ ಮೂಲಕ ಸುಲಭ ಆರ್ಥಿಕ ವಿನಿಮಯಕ್ಕೆ ಅನುವು ಮಾಡಿಕೊಡುವ ಬಗ್ಗೆ ನಿರೀಕ್ಷೆಯಿದೆ. 3ರಿಂದ 5 ವರ್ಷಗಳಿಂದ ಸರ್ಕಾರಿ ನೋಂದಾಯಿತ ಸ್ಟಾರ್ಟ್ಅಪ್ಗಳಲ್ಲಿ ತೆರಿಗೆ ವಿನಾಯಿತಿ ನೀಡಬೇಕು. ಫಂಡ್ ಆಫ್ ಫಂಡ್ಸ್ಗಳಿಂದ ವಿತರಣೆ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟು ಸ್ಪಷ್ಟತೆ ನೀಡಬೇಕು. ಎಂಪ್ಲಾಯೀ ಸ್ಟಾಕ್ ಓನರ್ಶಿಪ್ ಪ್ಲಾನ್ ಮೇಲಿನ ತೆರಿಗೆ ಬಗ್ಗೆ ಸ್ಪಷ್ಟತೆ ನೀಡಬೇಕು. ಫಂಡ್ ಮ್ಯಾನೇಜರ್ಗಳ ಮೇಲೆ ಸದ್ಯಕ್ಕೆ ಶೇ. 18ರಷ್ಟು ಜಿಎಸ್ಟಿ ಇದೆ. ಈ ದರವನ್ನು ಇನ್ನಷ್ಟು ಕಡಿಮೆಗೊಳಿಸಬೇಕು. ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಹೈಬ್ರೀಡ್ ಇನ್ಸ್ಟ್ರುಮೆಂಟ್ಗಳಿಗೆ ಪ್ರತ್ಯೇಕ ಪಾಲಿಸಿಗಳನ್ನು ತರಬೇಕೆಂಬ ಒತ್ತಾಯವೂ ಕೇಂದ್ರ ಸರ್ಕಾರದ ಮುಂದಿದೆ.
ಅಂದಹಾಗೆ, ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಈ ಬಾರಿಯ ಬಜೆಟ್ ಅನ್ನು ಹಣಕಾಸು ರಾಜ್ಯ ಖಾತೆ ಸಚಿವರಾಗಿರುವ ಪಿಯೂಷ್ ಗೋಯಲ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಹಾಗೇ, ಕೇಂದ್ರ ಸರ್ಕಾರ ರೈತರಿಗೂ ಉತ್ತಮ ಪ್ಯಾಕೇಜ್ ಘೋಷಿಸುವ ಬಗ್ಗೆ ನಿರೀಕ್ಷೆಗಳಿವೆ.
ಇದನ್ನೂ ಓದಿ: Budget 2019: ನೌಕರ ವರ್ಗಕ್ಕೆ ಸಿಹಿ ಸುದ್ದಿ, ರೂ. 5 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಿಲ್ಲ
ರೈತರ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಲೇ ಇರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಕೃಷಿ ಬಿಕ್ಕಟ್ಟು ಬಗೆಹರಿಸಲು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹಾಗೇ, ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸುವ ಬಗ್ಗೆಯೂ ಜನರಲ್ಲಿ ಭಾರೀ ನಿರೀಕ್ಷೆಗಳಿವೆ. ಸೂಕ್ಷ್ಮ, ಸಣ್ಣ, ಮಧ್ಯಮ ಎಂಟರ್ಪ್ರೈಸಸ್ (ಎಂಎಸ್ಎಂಇ) ವಲಯಕ್ಕೆ ಈ ಬಾರಿಯೂ ಹೆಚ್ಚಿನ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯೂ ಇದೆ.ಇದನ್ನೂ ಓದಿ: Budget 2019: ಭೂ ರಹಿತ ಕೃಷಿಕರಿಗೆ ಮೋದಿ ಸರ್ಕಾರದಿಂದ ಬಂಪರ್ ಕೊಡುಗೆ
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 2016ರಲ್ಲಿ ಸ್ಟಾರ್ಟ್ಅಪ್ ಅಭಿಯಾನವನ್ನು ಆರಂಭಿಸಿತ್ತು. ದೇಶದಲ್ಲಿ ದೊಡ್ಡ ಉದ್ಯಮಗಳ ಬದಲಾಗಿ ಸ್ಟಾರ್ಟ್ಅಪ್ಗಳನ್ನು ಪ್ರಚಾರ ಮಾಡುವ ಸಲುವಾಗಿ ಈ ಅಭಿಯಾನ ಕೈಗೊಳ್ಳಲಾಗಿತ್ತು. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಅನ್ವೇಷಣೆ ನಡೆಸಲು, ಯುವಕರಿಗೆ ಉದ್ಯೋಗ ಕಲ್ಪಿಸಲು ಹಾಗೂ ಯುವಕರ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಸ್ಟಾರ್ಟ್ಅಪ್ಗಳಿಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ನಲ್ಲಿ ಸ್ಟಾರ್ಟ್ಅಪ್ ಕ್ಷೇತ್ರಕ್ಕೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಹಾಗಾದರೆ, ಸ್ಟಾರ್ಟ್ಅಪ್ಗಳ ನಿರೀಕ್ಷೆಗಳೇನು? ಇಲ್ಲಿವೆ ಕೆಲವು ಮಾಹಿತಿ...
Loading...