• Home
 • »
 • News
 • »
 • national-international
 • »
 • Naked Thief: ಕಳ್ಳನ ಬೆತ್ತಲೆ ಫೋಟೋಗಳ ಫ್ಲೆಕ್ಸ್​​ ಹಾಕಿದ ಅಂಗಡಿ ಮಾಲೀಕ! ರಸವತ್ತಾದ ಸುದ್ದಿ ಇಲ್ಲಿದೆ ನೋಡಿ

Naked Thief: ಕಳ್ಳನ ಬೆತ್ತಲೆ ಫೋಟೋಗಳ ಫ್ಲೆಕ್ಸ್​​ ಹಾಕಿದ ಅಂಗಡಿ ಮಾಲೀಕ! ರಸವತ್ತಾದ ಸುದ್ದಿ ಇಲ್ಲಿದೆ ನೋಡಿ

ಕಳ್ಳನ ಫ್ಲೆಕ್ಸ್​

ಕಳ್ಳನ ಫ್ಲೆಕ್ಸ್​

ಅಂಗಡಿ ಮಾಲೀಕರು ಕಳ್ಳನನ್ನು ಹಿಡಿಯಲು ಬೆಸ್ಟ್ ಐಡಿಯಾ ಮಾಡಿದ್ದಾರೆ. ತಮ್ಮ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯ ಬೆತ್ತಲೆ ಚಿತ್ರವನ್ನು ಫ್ಲೆಕ್ಸ್ ನಲ್ಲಿ ಹಾಕಿ ಅಂಗಡಿ ಹೊರಗೆ ಹಾಕಿದ್ದಾರೆ. ಅಲ್ಲದೇ ಕ್ಯೂಆರ್ ಕೋಡ್ ಅನ್ನು ಬೋರ್ಡ್ ಮೇಲೆ ಹಾಕಿದ್ದಾರೆ.

 • News18 Kannada
 • Last Updated :
 • Thiruvananthapuram [Trivandrum], India
 • Share this:

  ಇತ್ತೀಚೆಗೆ ಕಳ್ಳತನ (Theft)  ಹೆಚ್ಚಾಗಿದೆ. ಮನೆ, ಅಪಾರ್ಟ್‍ಮೆಂಟ್, ಅಂಗಡಿಗಳು ಏನೇ ಆಗಿದ್ರು, ಎಷ್ಟೇ ಭದ್ರತೆ ಕೊಟ್ಟಿದ್ದರೂ ಕಳ್ಳತನ ಮಾಡ್ತಾರೆ. ಸಿಸಿ ಕ್ಯಾಮರಾಗಳನ್ನು ಇಟ್ಟಿದ್ರೂ ಲೆಕ್ಕಿಸದೇ, ಭಯಪಡದೇ ಕದ್ದು ಎಸ್ಕೇಪ್ ಆಗ್ತಾರೆ. ಆದ್ರೆ ಇಲ್ಲೊಬ್ಬ ಅಂಗಡಿ ಮಾಲೀಕರು ಕಳ್ಳನನ್ನು ಹಿಡಿಯಲು ಬೆಸ್ಟ್ ಐಡಿಯಾ ಮಾಡಿದ್ದಾರೆ. ತಮ್ಮ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿ ಬೆತ್ತಲೆ (Naked) ಚಿತ್ರವನ್ನು ಫ್ಲೆಕ್ಸ್ (Flex) ನಲ್ಲಿ ಹಾಕಿ ಅಂಗಡಿ ಹೊರಗೆ ಹಾಕಿದ್ದಾರೆ. ಅಲ್ಲದೇ ಕ್ಯೂಆರ್ (QR) ಕೋಡ್ (Code) ಅನ್ನು ಬೋರ್ಡ್ ಮೇಲೆ ಹಾಕಿದ್ದಾರೆ. ಕಳ್ಳನ ಗುರುತು ಇನ್ನೂ ಪತ್ತೆಯಾಗಿಲ್ಲ. ಕಳ್ಳ ತಾನಾಗೇ ಶರಣಾಗಲು ಅಂಗಡಿ ಮಾಲೀಕರು ಈ ರೀತಿ ಐಡಿಯಾ ಮಾಡಿದ್ದಾರೆ ಎನ್ನಲಾಗಿದೆ.


  ಕದ್ದು ಪರಾರಿಯಾದವನ ಬೆತ್ತಲೆ ಚಿತ್ರ!
  ಕೇರಳದ ತಿರುವಂನಂತಪುರಂನಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಕಲ್ಚರ್ ಶಾಪ್‍ನಲ್ಲಿ ಕಳ್ಳನೊಬ್ಬ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದಾನೆ. ಅದಕ್ಕೆ ಅಂಗಡಿ ಮಾಲೀಕರಾದ ರಂಜಿತ್ ಮತ್ತು ಸಂತೋಷ್ ಕಳ್ಳನನ್ನು ಹಿಡಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆತ ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ, ಹೊರಗೆ ಫ್ಲೆಕ್ಸ್ ಬೋರ್ಡ್ ಹಾಕಿದ್ದಾರೆ. ಆಫ್ಲೆಕ್ಸ್ ನಲ್ಲಿ ಕಳ್ಳನ ಬೆತ್ತಲೆ ಚಿತ್ರ ಹಾಕಿದ್ದಾರೆ. ಅಲ್ಲದೇ ಕ್ಯೂಆರ್ ಕೋಡ್ ಅನ್ನು ಬೋರ್ಡ್ ಮೇಲೆ ಹಾಕಿದ್ದಾರೆ. ಕ್ಯೂಆರ್ ಕೋಡ್ ಗೆ ಸ್ಕ್ಯಾನ್ ಮಾಡಿದ್ರೆ. ಅವನ ವಿಡಿಯೋ ಬರಲಿದೆ.


  ಕಳ್ಳ ಕದಿಯುವ ಮುನ್ನ ಮಾಡಿದ್ದೇನು?
  ಕಳ್ಳ ಕಳ್ಳತನ ಮಾಡುವ ಮೊದಲು ಅಂದ್ರೆ ಜೂನ್ 24, 25 ಮತ್ತು 26 ರಂದು ಒಳ ಉಡುಪು ಮತ್ತು ತಲೆಗೆ ಬಟ್ಟೆಯನ್ನು ಧರಿಸದೇ ಬಂದಿದ್ದಾನೆ. ಮೊದಲ ದಿನ ಅಂಗಡಿಯ ಜಾಗ ಮತ್ತು ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾನೆ. ಸಿಸಿ ಕ್ಯಾಮರಾಗಳನ್ನು ಆಫ್ ಮಾಡಿದ್ದಾನೆ. ಎರಡನೇ ದಿನ ಅಂದ್ರೆ ಜೂನ್ 25ರಂದು ಬಂದು ಕಿಟಕಿಗಳ ಕಂಬಿಗಳನ್ನು ತೆಗೆದು ಹಾಕಿ ಹೋಗಿದ್ದಾನೆ. ಮೂರನೇ ದಿನ ಅಂದ್ರೆ ಜೂನ್ 26ರಂದು ಕಳ್ಳತನ ಮಾಡಿದ್ದಾನೆ. ಅದು ಅಂಗಡಿಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಮುಟ್ಟದೇ, ಇನ್ವರ್ಟರ್ ಮತ್ತು ಯುಪಿಎಸ್ ಅನ್ನು ತೆಗೆದುಕೊಂಡು ಹೋಗಿದ್ದಾನೆ.


  ಕಳ್ಳನೇ ಬಂದು ಶರಣಾಗಲಿ ಎಂದು ಈ ಐಡಿಯಾ!
  ತಿರುವಂನಂತಪುರಂನಲ್ಲಿ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಕಲ್ಚರ್ ಶಾಪ್‍ನಲ್ಲಿ ಕಳ್ಳತನ ಮಾಡಿದ್ದಕ್ಕೆ, ಮಾಲೀಕರು ಕಳ್ಳನ ಬೆತ್ತಲೆ ಚಿತ್ರವನ್ನು ಫ್ಲೆಕ್ಸ್ ನಲ್ಲಿ ಹಾಕಿ ಬಂದು ಶರಣಾಗಲಿ ಎಂದು ಈ ರೀತಿ ಮಾಡಿದ್ದಾರಂತೆ.


  ಬೆಲೆ ಬಾಳುವ ವಸ್ತವನ್ನು ಕದ್ದಿಲ್ಲ ಯಾಕೆ?
  ಈ ಬೆತ್ತಲೆ ಕಳ್ಳ ಅಂಗಡಿಯಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಕದ್ದಿಲ್ಲ. ಬದಲಿಗೆ .ಇನ್ವರ್ಟರ್ ಮತ್ತು ಯುಪಿಎಸ್ ಅನ್ನು ಕದ್ದು ಎಸೇಪ್ ಆಗಿದ್ದಾನೆ. ಹಾಗಾದ್ರೆ ಈತ ಯುಪಿಎಸ್‍ಗಳನ್ನು ಮಾತ್ರ ಕದಿಯುವ ಕಳ್ಳನ ಎಂದು ಪೊಲೀಸರಿಗೆ ಅನುಮಾನಗಳು ಮೂಡಿವೆ. ಅಲ್ಲಿದ್ದ ಬೇರೆ ವಸ್ತುಗಳನ್ನು ಕದಿಯದೇ ಅದನ್ನು ಮಾತ್ರ ಏಕೆ ಕದ್ದಿದ್ದಾನೆ ಎಂದು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಕಳ್ಳ ಇನ್ನೂ ಸಿಕ್ಕಿಲ್ಲ


  ಇದನ್ನೂ ಓದಿ: Tortoise Theft: ಆಮೆ ಕಳ್ಳಿಯರು ಸಿಕ್ಕಿಬಿದ್ರು! ಜೋಳಿಗೆ ತುಂಬಾ ಆಮೆಗಳು


  ಏನೇ ಆಗಲಿ ಶಾಪ್ ಮಾಲೀಕರು ಮಾಡಿದ ಐಡಿಯಾ ತುಂಬಾ ಚೆನ್ನಾಗಿದೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕಳ್ಳ ತಾನಾಗಿ ಬಂದು ಶರಣಾಗಬೇಕು ಎಂದು ಈ ರೀತಿ ಮಾಡಿರುವುದು ಉತ್ತಮ ಎಂದು ಹೇಳಿದ್ದಾರೆ.

  Published by:Savitha Savitha
  First published: