Stare at Women: ಬಸ್‌ನಲ್ಲಿ ಹುಡ್ಗೀರನ್ನ ಹಾಗೆಲ್ಲ ನೋಡ್ಬೇಡ್ರಪ್ಪಾ! ಮನೆಗಲ್ಲ, ಮಾವನ ಮನೆಗೆ ಹೋಗ್ಬೇಕಾಗುತ್ತೆ ಹುಷಾರ್!

ಬಸ್‌ಗಳಲ್ಲಿ ಸೀಟ್ ಪಕ್ಕದಲ್ಲಿ ಹುಡುಗಿಯರು ಇದ್ದರೆ ಕೆಲ ಕಿರಿಕ್ ವ್ಯಕ್ತಿಗಳ ವರಸೆಯೇ ಬದಲಾಗುತ್ತದೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸಿ ಮಹಿಳೆಯರಿಗೆ ಮುಜುಗರ ಉಂಟಾಗುವಂತೆ ಮಾಡುತ್ತಾರೆ. ಇದೀಗ ಇಂತಹ ವ್ಯಕ್ತಿಗಳಿಗೆ ತಕ್ಕ ಶಾಸ್ತಿ ಮಾಡೋದಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.

ಸಿನಿಮಾವೊಂದರ ದೃಶ್ಯ (ಸಾಂದರ್ಭಿಕ ಬಳಕೆ)

ಸಿನಿಮಾವೊಂದರ ದೃಶ್ಯ (ಸಾಂದರ್ಭಿಕ ಬಳಕೆ)

  • Share this:
ತಮಿಳುನಾಡು: ಕೆಲವರು ಸಾರ್ವಜನಿಕ ಬಸ್‌ನಲ್ಲಿ (public bus) ಹೋಗುವಾಗ ಅಕ್ಕಪಕ್ಕದಲ್ಲಿ ಕುಳಿತವರಿಗೆ ಕಿರಿಕಿರಿ ಮಾಡುತ್ತಾರೆ. ನಾವು ಯಾಕಾದ್ರೂ ಈ ಬಸ್ಸಿಗೆ ಬಂದ್ವೋ ಎನಿಸುವಂತೆ ಮಾಡುತ್ತಾರೆ. ಈ ಆಸಾಮಿ ಎಷ್ಟ್ ಹೊತ್ತಿಗೆ ಇಳಿದು ಹೋಗ್ತಾನಪ್ಪ ಅಂತ ಅನಿಸುವಂತೆ ಮಾಡುತ್ತಾರೆ. ಅದರಲ್ಲೂ ಪಕ್ಕದಲ್ಲಿ ಹುಡುಗಿಯರು (Girls) ಇದ್ದರಂತೂ ಮುಗಿದೇ ಹೋಯಿತು. ಈ ಕಿರಿಕ್ ವ್ಯಕ್ತಿಗಳ ವರಸೆಯೇ ಬದಲಾಗುತ್ತದೆ. ಸಾರ್ವಜನಿಕರ ಎದುರೇ ಅಸಭ್ಯವಾಗಿ ವರ್ತಿಸಿ ಮಹಿಳೆಯರಿಗೆ (Women) ಮುಜುಗರ ತರುವಂತೆ ಮಾಡುತ್ತಾರೆ. ಹಾಗಾದ್ರೆ ಇಂತಹ ವ್ಯಕ್ತಿಗಳಿಗೆ ತಕ್ಕ ಶಾಸ್ತಿ ಮಾಡೋದಕ್ಕೆ ತಮಿಳುನಾಡು ಸಾರಿಗೆ ಇಲಾಖೆ (Tamil Nadu Transport Department) ಮುಂದಾಗಿದೆ. ಇನ್ನು ಮುಂದೆ ತಮಿಳುನಾಡಿನ ಬಸ್‌ಗಳಲ್ಲಿ ಮಹಿಳೆಯರಿಗೆ ಕಿರಿಕಿರಿ ಮಾಡುವುದು, ಅವರನ್ನು ಗುರಾಯಿಸಿ ನೋಡುವುದು ಮಾಡಿದರೆ ಅಂಥವ್ರಿಗೆ ತಕ್ಕ ಶಾಸ್ತಿ (Punishment) ಆಗಲಿದೆ.

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ

ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ.  ಈ ಕುರಿತಂತೆ ತಮಿಳುನಾಡು ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಇದರ ಪ್ರಕಾರ ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಈ ಕಾಯ್ದೆ ಅನ್ವಯ ಇದೀಗ ಬಸ್‌ನಲ್ಲಿ ಮಹಿಳೆಯರನ್ನು ದಿಟ್ಟಿಸಿ ನೋಡುವವರನ್ನು ಬಂಧಿಸುವ ಅವಕಾಶವನ್ನು ನೀಡಿದೆ.

ಬಸ್‌ಗಳಲ್ಲಿ ಮಹಿಳೆಯರನ್ನು ಗುರಾಯಿಸಿದರೆ ಅಪರಾಧ

ಬಸ್‌ಗಳಲ್ಲಿ ಮಹಿಳೆಯರಿಗೆ ಸಹ ಪ್ರಯಾಣಿಕ ಕಿರಿಕಿರಿ ಮಾಡುವಂತಿಲ್ಲ. ಮಹಿಳೆಯರನ್ನು ನೋಡಿ ಶಿಳ್ಳೆ ಹೊಡೆಯುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು ಮತ್ತು ಮಹಿಳೆಯರ ವಿರುದ್ಧ ಲೈಂಗಿಕ ಪ್ರಲೋಭನೆಗಳಂತಹ ಕೃತ್ಯಗಳನ್ನು ಮಾಡುವುದು ಅಪರಾಧವಾಗುತ್ತದೆ. ಹೊಸ ತಿದ್ದುಪಡಿ ಕಾಯ್ದೆ ಪ್ರಕಾರ ಈ ರೀತಿಯ ಚಟುವಟಿಕೆಗಳು ತಮಿಳುನಾಡು ರಾಜ್ಯದಲ್ಲಿ ಅಪರಾಧದ ವರ್ಗಕ್ಕೆ ಸೇರುತ್ತವೆ.

ಇದನ್ನೂ ಓದಿ: Viral Invitation Card: ಇದು ಮಾತ್ರೆ ಅಲ್ಲ ಕಣ್ರೀ, ಮದುವೆ ಇನ್ವಿಟೇಷನ್ ಕಾರ್ಡ್! ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಕ್ರಿಯೇಟಿವ್ ಐಡಿಯಾ

ಮಹಿಳೆಯರಿಗೆ ಕಿರುಕುಳ ನೀಡಿದ್ರೆ ಮನೆಗಲ್ಲ, ಮಾವನ ಮನೆಗೆ ಹೋಗಬೇಕು

ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯಿದೆಯ ಅಡಿಯಲ್ಲಿ, ಬಸ್ ಕಂಡಕ್ಟರ್ ಇದರ ಮೇಲ್ವಿಚಾರಣೆ ಮಾಡಬೇಕು. ಬಸ್‌ನಲ್ಲಿ ಯಾವುದೇ ಪುರುಷ ಪ್ರಯಾಣಿಕರು ಮಹಿಳಾ ಪ್ರಯಾಣಿಕರಿಗೆ ಕಿರುಕುಳ ನೀಡಿದರೆ ಕೂಡಲೇ ಅವನನ್ನು ಇಳಿಸಬೇಕು ಅಥವಾ ಪ್ರಯಾಣದ ಮಾರ್ಗದಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದರೆ ಅವರನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಬೇಕು.

ಕಂಡೆಕ್ಟರ್‌ಗಳಿಗೂ ಇದೆ ಮಾರ್ಗಸೂಚಿ

ಇನ್ನು ಬಸ್‌ನಲ್ಲಿ ಪುರುಷ ಸಹ ಪ್ರಯಾಣಿಕರಿಗಷ್ಟೇ ಅಲ್ಲ, ಅಲ್ಲಿನ ಕಂಡೆಕ್ಟರ್‌ಗೂ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಹಿಳೆಯರ ವಿರುದ್ಧ ಅನುಚಿತವಾಗಿ ವರ್ತಿಸುವ ಕಂಡಕ್ಟರ್‌ಗಳಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯನ್ನು ಸಹ ನೀಡಲಾಗುತ್ತದೆ. ಅವರನ್ನು ಶಿಕ್ಷೆಗೆ ಗುರಿ ಪಡಿಸುವ ಅವಕಾಶ ನೀಡಲಾಗಿದೆ.

ಮಹಿಳೆಯರ ಬಗ್ಗೆ ಹಾಸ್ಯ, ಕಾಮೆಂಟ್ ಮಾಡುವಂತಿಲ್ಲ

ತಿದ್ದುಪಡಿ ಮಾಡಲಾದ ಕಾಯ್ದೆಯ ಪ್ರಕಾರ ಬಸ್ ಹತ್ತುವ ಅಥವಾ ಇಳಿಯುವ ಮಹಿಳೆಯನ್ನು ತಾನು ಸಹಾಯ ಮಾಡುತ್ತಿದ್ದೇನೆ ಎಂಬ ನೆಪದಲ್ಲಿ ಕಂಡಕ್ಟರ್ ಸ್ಪರ್ಶಿಸಿದರೆ ಶಿಕ್ಷೆಯನ್ನು ಅನುಭವಿಸುವ ಅವಕಾಶವನ್ನು ನೀಡುತ್ತದೆ. ಕಂಡಕ್ಟರ್ ಮಹಿಳಾ ಪ್ರಯಾಣಿಕರ ಮೇಲೆ ಯಾವುದೇ ಹಾಸ್ಯ ಅಥವಾ ಅನಗತ್ಯ ಕಾಮೆಂಟ್‌ ಮಾಡುವಂತಿಲ್ಲ. ಹೀಗೆ ಮಾಡಿದರೆ ಅದೂು ಕೂಡ ಅಪರಾಧವಾಗುತ್ತದೆ.

ಇದನ್ನೂ ಓದಿ: Mobile Chatting: ಚಾಟ್ ಮಾಡ್ರೋ ಚಾಟ್ ಮಾಡಿ! ಮೊಬೈಲ್ ಚಾಟಿಂಗ್‌ನಲ್ಲಿ ಕನ್ನಡಿಗರೇ ನಂಬರ್ ಒನ್!

ಬಸ್‌ನಲ್ಲಿ ದೂರು ಬರೆಯಲು ಬುಕ್ ಇರಿಸಬೇಕು

ಇನ್ನು ಕಂಡಕ್ಟರ್ ನಿರ್ವಹಿಸುವ ಕರ್ತವ್ಯಗಳ ಕೊರತೆಯ ಬಗ್ಗೆ ದೂರುಗಳನ್ನು ದಾಖಲಿಸಲು ಯಾವುದೇ ಪ್ರಯಾಣಿಕರಿಗೆ ಒದಗಿಸಲು ದೂರು ಪುಸ್ತಕವನ್ನು ಬಸ್‌ನಲ್ಲಿ ಇಡಬೇಕು. ಅಗತ್ಯವಿದ್ದಲ್ಲಿ ಈ ದೂರು ಪುಸ್ತಕವನ್ನು ಮೋಟಾರು ವಾಹನ ಪ್ರಾಧಿಕಾರ ಅಥವಾ ಪೊಲೀಸರ ಮುಂದೆ ಹಾಜರುಪಡಿಸಬೇಕು ಅಂತ ಹೊಸ ತಿದ್ದುಪಡಿ ಕಾಯ್ದೆಯಲ್ಲಿ ತಿಳಿಸಲಾಗಿದೆ.
Published by:Annappa Achari
First published: