Starbucks Toilets: ಸಾರ್ವಜನಿಕ ಶೌಚಾಲಯಗಳನ್ನು ಮುಚ್ಚಲು ನಿರ್ಧರಿಸಿದ ಸ್ಟಾರ್‌ಬಕ್ಸ್‌! ಏನು ಕಾರಣ?

ಇನ್ನು ಮುಂದೆ ತನ್ನ ಸ್ಟೋರ್​ಗಳಲ್ಲಿರುವ ಶೌಚಾಲಯಗಳನ್ನು ಸಾರ್ವಜನಿಕರು ಬಳಸಲಾಗದಂತೆ ಮುಚ್ಚಲಿರುವುದಾಗಿ ಹೇಳಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಹೊವರ್ಡ್ ಶೂಲ್ಜ್ ಅವರು ಹೇಳಿಕೆ ನೀಡಿದ್ದಾರೆ.

ಸ್ಟಾರ್ಬಕ್ಸ್

ಸ್ಟಾರ್ಬಕ್ಸ್

  • Share this:
ಹಾಯಾಗಿ ಕುಳಿತು ಹರಟೆ, ಚರ್ಚೆಗಳ ಮೂಲಕ ಸಮಯ ಕಳೆಯುತ್ತ ಹಾಗೂ ಜೊತೆಗೆ ಅದ್ಭುತವಾದ ರುಚಿಕರ ಕಾಫಿ (Coffee) ಹೀರುವುದಕ್ಕೆ ಹೆಸರುವಾಸಿಯಾದ ಸ್ಟಾರ್ಬಕ್ಸ್ ಔಟ್ಲೆಟ್ (Starbucks Outlets) ಇನ್ನು ಮುಂದೆ ತನ್ನ ಸ್ಟೋರ್ ಗಳಲ್ಲಿರುವ ಶೌಚಾಲಯಗಳನ್ನು (Toilets) ಸಾರ್ವಜನಿಕರು ಬಳಸಲಾಗದಂತೆ ಮುಚ್ಚಲಿರುವುದಾಗಿ ಹೇಳಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಹೊವರ್ಡ್ ಶೂಲ್ಜ್ ಹೇಳಿಕೆ ನೀಡಿದ್ದಾರೆ. ಕಳೆದ ಗುರುವಾರದಂದು ನ್ಯೂಯಾರ್ಕ್ ಟೈಮ್ಸ್ ಅರ್ಪಿಸುವ ಡೀಲ್ ಬುಕ್ ಡಿಸಿ ಫೋರಮ್ ನಲ್ಲಿ ಭಾಗಿಯಾಗಿದ್ದ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು ಸುರಕ್ಷತೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗಾಗಿ ತನ್ನ ಶೌಚಾಲಯಗಳನ್ನು ಮುಚ್ಚಲಿರುವುದಾಗಿ ಅವರು ಹೇಳಿದರು ಎನ್ನಲಾಗಿದೆ. ಅಲ್ಲದೆ, ಶೂಲ್ಜ್ ಅವರು ಈ ಸಂದರ್ಭದಲ್ಲಿ ಗ್ರಾಹಕರಲ್ಲದವರ (Customers) ಸಂಖ್ಯೆಯನ್ನು ಸ್ಟೋರ್​ನಲ್ಲಿ ನಿಯಂತ್ರಿಸಲು ಸಂಸ್ಥೆ ಬಯಸುತ್ತಿರುವುದಾಗಿಯೂ ಹೇಳಿದ್ದಾರೆ.

ಸ್ಟಾರ್ಬಕ್ಸ್ ತನ್ನೆಲ್ಲ ಶೌಚಾಲಯಗಳನ್ನು ಮುಚ್ಚಲು ನಿರ್ಧಾರ
ಶೂಲ್ಜ್ ಅವರ ಪ್ರಕಾರ, ಅವರ ಸಂಸ್ಥೆಯು ತನ್ನ ಕೆಲಸಗಾರರು ಹಾಗೂ ಗ್ರಾಹಕರಿಗಾಗಿ ಹೆಚ್ಚಿನ ಕಾಳಜಿ ಹೊಂದಿರುವುದರಿಂದ ಅದನ್ನು ಗಮನದಲ್ಲಿರಿಸಿಕೊಂಡು ಸ್ಟಾರ್ಬಕ್ಸ್ ತನ್ನೆಲ್ಲ ಕಾಫಿ ಶಾಪ್ ಗಳಲ್ಲಿರುವ ಶೌಚಾಲಯಗಳನ್ನು ಮುಚ್ಚಲಿದೆ. "ನಾವು ನಮ್ಮ ಜನರ ಸುರಕ್ಷತೆಗಾಗಿ ಕಠಿಣವಾಗಬೇಕಿದೆ, ಅವರ ಸುರಕ್ಷತೆ ಮಹತ್ತರವಾಗಿರುವುದರಿಂದ ನಾವು ಈ ನಿರ್ಧಾರ ಮಾಡಿದ್ದು ಮತ್ತೆ ನಾವು ಯಾವಾಗ ಶೌಚಾಲಯಗಳನ್ನು ತೆರೆಯಲಿದ್ದೇವೆ ಎಂಬುದು ನನಗೆ ಗೊತ್ತಿಲ್ಲ" ಎಂದು ಶೂಲ್ಜ್ ಹೇಳಿದ್ದಾರೆ.

ಕೇವಲ ಬಾತ್ ರೂಮ್ ಸ್ಪಾಟ್ ಗಳಾಗಿ ಉಳಿಯಬಾರದು
ಸ್ಟಾರ್ಬಕ್ಸ್ ಅವರ ಓಪನ್ ಬಾಥ್ ರೂಮ್ ನೀತಿಯು ಮೊದಲ ಬಾರಿಗೆ 2018 ರಲ್ಲಿಅನುಷ್ಠಾನಗೊಂಡ ಬಳಿಕ ಅದಕ್ಕೆ ಸಂಬಂಧಿಸಿದಂತೆ ಶೂಲ್ಜ್ ಅವರ ಇದು ಮೊದಲ ಸಾರ್ವಜನಿಕ ಹೇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ವಾಷಿಂಗ್ಟನ್ ನಲ್ಲಿ ನಡೆದ ಅಟ್ಲಾಂಟಿಕ್ ಕೌನ್ಸಿಲ್ ನಲ್ಲಿಯೂ ಸಹ ಶೂಲ್ಜ್ ಅವರು ನಮ್ಮ ಕೇಂದ್ರಗಳು ಎಲ್ಲರಿಗೂ ಕೇವಲ ಬಾತ್ ರೂಮ್ ಸ್ಪಾಟ್ ಗಳಾಗಿ ಉಳಿಯಬಾರದು, ಆದರೂ ಜನರಿಗೆ ಸ್ಟೋರುಗಳ ರೆಸ್ಟ್ ರೂಮ್ ಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಸರಿಯಾದ ನಿರ್ಧಾರವಾಗಿದೆ ಎಂದು ನುಡಿದರು.

ಈ ಬಗ್ಗೆ ಶೂಲ್ಜ್ ಹೇಳಿದ್ದೇನು ಗೊತ್ತಾ?
ಈ ಸಂದರ್ಭದಲ್ಲಿ ಶೂಲ್ಜ್ ಅವರು, "ನಾವು ಖಂಡಿತವಾಗಿಯೂ ಒಂದು ಸಾರ್ವಜನಿಕ ಶೌಚಾಲಯವಾಗಬಯಸುವುದಿಲ್ಲ. ಆದರೂ, ಸಮಯಕ್ಕನುಗುಣವಾಗಿ ನಾವು ನೂರು ಪ್ರತಿಶತ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಲಿದ್ದು ಜನರ ಕೈಗಳಲ್ಲೇ ಕೀ ನೀಡಲಿದ್ದೇವೆ, ಏಕೆಂದರೆ ಅವರಿಗೆ ತಮ್ಮನ್ನು ಕಡಿಮೆ ಎಂದು ಪರಿಗಣಿಸಲಾಗುತ್ತಿದೆ ಎಂಬ ಭಾವನೆ ಮೂಡಬಾರದು ಏಕೆಂದರೆ ಅವರು ನಮಗೆ ತುಂಬ ಮೌಲ್ಯಯುತವಾಗಿದ್ದಾರೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Photo: ಜೋಡಿಸಿಟ್ಟ ಸ್ಟೀಲ್ ತಟ್ಟೆಗಳು ನಿಮಗೆ ಹೇಗೆ ಕಾಣಿಸುತ್ತಿವೆ? ಉದ್ಯಮಿ ಆನಂದ್ ಮಹಿಂದ್ರಾ ಹೇಳಿದ್ದೇನು ಗೊತ್ತಾ?

ಶೌಚಾಲಯ ಮುಚ್ಚಲು ಕಾರಣ ಇದೇ
ಅಷ್ಟಕ್ಕೂ ಈ ಪ್ರಸಂಗ ಬೆಳಕಿಗೆ ಬಂದದ್ದು 2018 ರಲ್ಲಿ. ಆ ಸಮಯದಲ್ಲಿ ಫಿಲಿಡೆಲ್ಫಿಯಾದ ಸ್ಟಾರ್ಬಕ್ಸ್ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ಇಬ್ಬರು ಕಪ್ಪು ಜನಾಂಗದ ವ್ಯಕ್ತಿಗಳು ಅಲ್ಲಿನ ಬಾತ್ ರೂಮ್ ಬಳಕೆಗಾಗಿ ಕೇಳಿದರು. ಆ ಸಂದರ್ಭದಲ್ಲಿ ಸ್ಟೋರಿನ ಕೆಲಸಗಾರ ಆ ಇಬ್ಬರು ಜನರು ಗ್ರಾಹಕರಲ್ಲದ ಕಾರಣ ಅವರಿಗೆ ಅನುಮತಿ ನೀಡಲು ನಿರಾಕರಿಸಿದ್ದ ಎನ್ನಲಾಗಿದೆ. ಆ ಸಂದರ್ಭದಲ್ಲಿ ಅವರಿಬ್ಬರಲ್ಲಿ ಒಬ್ಬಾತ ಅಲ್ಲಿನ ಟೇಬಲ್ ಒಂದರ ಮೇಲೆ ಏನೂ ಆರ್ಡರ್ ಮಾಡದೆ ಸುಮ್ಮನೆ ಕುಳಿತ. ಇದನ್ನು ಗಮನಿಸಿದ ಸ್ಟೋರ್ ವ್ಯವಸ್ಥಾಪಕರು ಪೊಲೀಸರನ್ನು ಕರೆಸಿದರು ಹಾಗೂ ಆತನನ್ನು ಬಂಧಿಸಲಾಯಿತು.

ಇದನ್ನೂ ಓದಿ: Viral Video: ಹೆಂಡತಿಯರು ಕೊಟ್ಟ ಗಿಫ್ಟ್​ಗೆ ಗಂಡಂದಿರು ಫಿದಾ! ಸೂಪರ್ ಆಗಿತ್ತು ಸರ್ಪೈಸ್

ತದನಂತರ ಆ ಇಬ್ಬರು ಕಪ್ಪು ಜನಾಂಗದ ವ್ಯಕ್ತಿಗಳ ವಿರುದ್ಧ ಯಾವುದೇ ಪ್ರಕರಣ ದಖಲಿಸದೆ ಬಿಡುಗಡೆಗೊಳಿಸಲಾಯಿತು ಹಾಗೂ ಈ ಘಟನೆಗೆ ಸಂಬಂಧಿಸಿದಂತೆ ಸ್ಟಾರ್ಬಕ್ಸ್ ಅಮೆರಿಕದಾದ್ಯಂತ ತನ್ನ ಎಲ್ಲ 8000 ಸ್ಟೋರ್ ಗಳನ್ನು ತನ್ನ ಉದ್ಯೋಗಿಗಳಿಗೆ ವರ್ಣ ಭೇದದ ಕುರಿತು ಸಮರ್ಪಕ ತರಬೇತಿ ನೀಡಲಾಗುವುದೆಂದು ಹೇಳಿ ಆ ಇಬ್ಬರೂ ವ್ಯಕ್ತಿಗಳಿಗೆ ಕ್ಷಮಾಪಣಾ ಪತ್ರ ಬಿಡುಗಡೆ ಮಾಡಿ ಮುಚ್ಚಿತ್ತು. ಈ ಘಟನೆ ಘಟಿಸಿ ಈಗ ನಾಲ್ಕು ವರ್ಷಗಳೇ ಕಳೆದಿದ್ದು ಇದೀಗ ಸ್ಟಾರ್ಬಕ್ಸ್ ತನ್ನ ಶೌಚಾಲಯಗಳನ್ನೇ ಮುಚ್ಚುವುದಾಗಿ ಹೇಳಿದೆ.
Published by:Ashwini Prabhu
First published: