• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Star Sports: ಐಪಿಎಲ್ ಶೋನಲ್ಲಿ ಹಾಸ್ಯನಟ ಮುನಾವರ್ ಫಾರುಕಿ ಭಾಗಿ, ಸ್ಟಾರ್ ಸ್ಪೋರ್ಟ್ಸ್ ಬಹಿಷ್ಕಾರಕ್ಕೆ ಒತ್ತಡ!

Star Sports: ಐಪಿಎಲ್ ಶೋನಲ್ಲಿ ಹಾಸ್ಯನಟ ಮುನಾವರ್ ಫಾರುಕಿ ಭಾಗಿ, ಸ್ಟಾರ್ ಸ್ಪೋರ್ಟ್ಸ್ ಬಹಿಷ್ಕಾರಕ್ಕೆ ಒತ್ತಡ!

ಹಾಸ್ಯನಟ ಮುನಾವರ್ ಫರುಕಿ

ಹಾಸ್ಯನಟ ಮುನಾವರ್ ಫರುಕಿ

ಮುನಾವರ್‌ ಫಾರುಕಿ ಅವರು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮೇ 12 ರ ಐಪಿಎಲ್ ಪಂದ್ಯದ ಸ್ಟಾರ್ ಸ್ಪೋರ್ಟ್ಸ್ ನ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ.

  • News18 Kannada
  • 5-MIN READ
  • Last Updated :
  • Delhi, India
  • Share this:

ಶೋವೊಂದರಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಸ್ಟ್ಯಾಂಡ್-ಅಪ್ ಕಾಮಿಡಿಯನ್  (Stand Up Comedian) ಮುನಾವರ್ ಫಾರುಕಿ (Munawar Faruqui) ವಿರುದ್ಧ ಕೇಸ್ (Case) ದಾಖಲಾಗಿತ್ತು. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ 2021 ರಲ್ಲಿ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಯಾದ ಫಾರುಕಿ, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮೇ 12 ರ ಐಪಿಎಲ್ (IPL) ಪಂದ್ಯದ ಸ್ಟಾರ್ ಸ್ಪೋರ್ಟ್ಸ್ ನ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕೆಲ ಬಲಪಂಥೀಯ ಸಂಘಟನೆಗಳು ಮತ್ತು ಟ್ವಿಟ್ಟರ್‌ ಬಳಕೆದಾರರು ಚಾನೆಲ್ ಏಕೆ ಮುನಾವರ್‌ನನ್ನು ಕರೆಸಿದೆ ಎಂದು ಪ್ರಶ್ನಿಸಿದ್ದಾರೆ. ಅನೇಕರು ಸ್ಟಾರ್ ಸ್ಪೋರ್ಟ್ಸ್ ಇಂಡಿಯಾವನ್ನು ಬಹಿಷ್ಕರಿಸಲು ಕರೆ ನೀಡಿದ್ದಾರೆ.


ಐಪಿಎಲ್ ಶೋನಲ್ಲಿ ಮುನಾವರ್ ಫರುಕಿ
ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪದ ಮೇಲೆ ಟೀಕೆಗೊಳಗಾಗಿರುವ ಫಾರುಕಿ ಅವರು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಮೇ 12 ರ ಐಪಿಎಲ್ ಪಂದ್ಯದ ಸ್ಟಾರ್ ಸ್ಪೋರ್ಟ್ಸ್ ನ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಬಲಪಂಥೀಯ ಒಲವುಳ್ಳ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ಟಾರ್ ಸ್ಪೋರ್ಟ್ಸ್ ಇಂಡಿಯಾವನ್ನು ಬಹಿಷ್ಕರಿಸಲು ಹೇಳಿದ್ದಾರೆ.


ಹಾಸ್ಯ ನಟನ ಮೇಲೆ ಕೇಸ್
ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳ ಮೇಲೆ ಟೀಕೆಗಳನ್ನು ಮಾಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ, ಹಾಸ್ಯನಟ ಮುನಾವರ್ ಫಾರುಕಿನನ್ನು ಜನವರಿ 2021 ರಲ್ಲಿ ಬಂಧಿಸಿ ಮಧ್ಯಪ್ರದೇಶದ ಇಂದೋರ್ ಜೈಲಿನಲ್ಲಿ ಇರಿಸಲಾಯಿತು. ಎಫ್‍ಐಆರ್ ನ  ಪ್ರಕಾರ, ಈಗ ಪರಿಶೀಲನೆಯಲ್ಲಿರುವ ಟೀಕೆಗಳನ್ನು ಮಾಡಿದ ಹಾಸ್ಯ ಕಾರ್ಯಕ್ರಮವನ್ನು ಜನವರಿ 1, 2021 ರಂದು ಇಂದೋರ್ ನ 56 ಡುಕಾನ್ ಪ್ರದೇಶದ ಕೆಫೆಯಲ್ಲಿ ನಡೆಸಲಾಯಿತು.


ಕಾರ್ಯಕ್ರಮ ರದ್ದು
ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಗೌಡ್ ಅವರ ಪುತ್ರ ಏಕಲವ್ಯ ಸಿಂಗ್ ಗೌಡ್ ಅವರು ಫಾರುಕಿ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. ತಾನು ಮತ್ತು ತನ್ನ ಕೆಲವು ಸಹಚರರು ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಹಾಸ್ಯ ಮಾಡುವ ಕಾರ್ಯಕ್ರಮವನ್ನು ವೀಕ್ಷಿಸಲು ಹೋಗಿದ್ದರು. ಮತ್ತು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಸಂಘಟಕರನ್ನು ಒತ್ತಾಯಿಸಿದರು ಎಂದು ಗೌಡ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.




ಅಂದು ಬಂಧನ
ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳನ್ನು ವ್ಯವಹರಿಸುವ ಸೆಕ್ಷನ್ 295-ಎ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಫಾರುಕಿ ಮತ್ತು ಇತರರನ್ನು ಬಂಧಿಸಲಾಗಿದೆ. ಕೋವಿಡ್ -19 ಸಾಂಕ್ರಾಮಿಕದ ನಡುವೆ ಅನುಮತಿಯಿಲ್ಲದೆ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಯಿತು ಮತ್ತು ಐಪಿಸಿಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಮಧ್ಯಂತರ ಜಾಮೀನು
ಫಾರುಕಿ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್, ಸಾಮರಸ್ಯವನ್ನು ಉತ್ತೇಜಿಸುವುದು ಸಾಂವಿಧಾನಿಕ ಕರ್ತವ್ಯಗಳಲ್ಲಿ ಒಂದಾಗಿದೆ ಎಂದು ಗಮನಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಫೆಬ್ರವರಿ 5, 2021 ರಂದು ಫಾರೂಕಿಯನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿತು, ಹೈಕೋರ್ಟ್ ಆದೇಶವನ್ನು ತಡೆಹಿಡಿಯಿತು.


star sports, star sports lands in boycott controversy, comedian munawar faruqui, ipl show, munawar faruqui case, ಸ್ಟಾರ್ ಸ್ಪೋರ್ಟ್ಸ್, ಸ್ಟಾರ್ ಸ್ಪೋರ್ಟ್ಸ್ ಬಹಿಷ್ಕಾರ ವಿವಾದ, ಹಾಸ್ಯನಟ ಮುನಾವರ್ ಫರುಕಿ, ಐಪಿಎಲ್ ಶೋ, ಮುನಾವರ್ ಫರೂಕಿ ಕೇಸ್, kannada news, karnataka news,
ಹಾಸ್ಯನಟ ಮುನಾವರ್ ಫರುಕಿ


ಮಧ್ಯಪ್ರದೇಶದ ಇಂದೋರ್ ಗೆ ವರ್ಗಾವಣೆ
ಈ ವರ್ಷದ ಏಪ್ರಿಲ್ 24 ರಂದು, ಸುಪ್ರೀಂ ಕೋರ್ಟ್ ಫಾರುಕಿ ವಿರುದ್ಧದ ಎಲ್ಲಾ ಎಫ್‍ಐಆರ್‌ಗಳನ್ನು ಮಧ್ಯಪ್ರದೇಶದ ಇಂದೋರ್ ಗೆ ವರ್ಗಾಯಿಸಿತು. ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರ ಪೀಠವು ದೆಹಲಿಯಲ್ಲಿನ ಪೆಪ್ರೊಡಕ್ಷನ್ ವಾರಂಟ್‍ಗೆ ಸಂಬಂಧಿಸಿದಂತೆ ಫರುಕಿ ಅವರ ಮಧ್ಯಂತರ ರಕ್ಷಣೆಯನ್ನು ಮೂರು ವಾರಗಳವರೆಗೆ ವಿಸ್ತರಿಸಿದೆ.


ರದ್ದುಪಡಿಸುವ ಮನವಿಯ ಅರ್ಹತೆಯ ಬಗ್ಗೆ ತಾನು ಕಾಮೆಂಟ್ ಮಾಡಿಲ್ಲ ಮತ್ತು ಯಾವುದೇ ಮನವಿ ಸಲ್ಲಿಸಿದರೆ, ಅದರ ಅರ್ಹತೆಯ ಮೇಲೆ ಕಾನೂನಿನ ಪ್ರಕಾರ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.


ಇದನ್ನೂ ಓದಿ: IPL 2023: ಪ್ಲೇಆಫ್​ನಲ್ಲಿ ಆರ್​ಸಿಬಿ-ಲಕ್ನೋ ಮುಖಾಮುಖಿ? ಮಿಸ್​ ಆದ್ರೆ ಫೈನಲ್​ ಫೈಟ್​ ಫಿಕ್ಸ್ 

top videos


    ಜಾಮೀನಿನ ಮೇಲೆ ಬಿಡುಗಡೆಯಾದ ಒಂದು ವರ್ಷದ ನಂತರ, ರಾಪರ್ ಕೂಡ ಆಗಿರುವ ಫಾರುಕಿ, ನಟ ಕಂಗನಾ ರನೌತ್ ನಡೆಸಿಕೊಟ್ಟ ALTBalaji ಮತ್ತು MXಪ್ಲೇಯರ್‍ನ ರಿಯಾಲಿಟಿ ಶೋ ಲಾಕ್ ಅಪ್‍ಗೆ ಸೇರಿ ಗೆದ್ದಿದ್ದರು.

    First published: