ಕೋವಿಡ್ ಆತಂಕದ ನಡುವೆ ಉತ್ತರ ಪ್ರದೇಶದಲ್ಲಿ Congress Marathon; ಕಾಲ್ತುಳಿತ

ಮ್ಯಾರಥಾನ್​​ ನಲ್ಲಿ ನೂರಾರು ಯುವತಿಯರು ಮತ್ತು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಯಾರು ಕೂಡ ಮಾಸ್ಕ್​ ಧರಿಸದೇ, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು

 ಕಾಂಗ್ರೆಸ್ ಮ್ಯಾರಥಾನ್

ಕಾಂಗ್ರೆಸ್ ಮ್ಯಾರಥಾನ್

 • Share this:
  ಲಕ್ನೋ (ಜ. 4):  ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ಉತ್ತರ ಪ್ರದೇಶದಲ್ಲಿ ಮ್ಯಾರಥಾನ್ ​​(Marathon) ಆಯೋಜಿಸಲಾಗಿದೆ. ಕಾಂಗ್ರಸ್​ ಆಯೋಜಿಸಿದ್ದ ಈ ಮ್ಯಾರಥಾನ್​ ವೇಳೆ ಕಾಲ್ತುಳಿತ ಉಂಟಾಗಿದೆ. ಮಹಿಳೆಯರ ಸಬಲೀಕರಣ ಉದ್ದೇಶದಿಂದ ಲಡ್ಕಿ ಹನ್, ಲಾಡ್ ಶಕ್ತಿ ಹುನ್ (ಮಹಿಳೆಯರು ಹೋರಾಡಬಹುದು) ಎಂಬ ಧ್ಯೇಯ ವಾಕ್ಯದಿಂದ ಈ ಮ್ಯಾರಥಾನ್​ ಆಯೋಜಿಸಲಾಗಿತ್ತು. ಈ ಮ್ಯಾರಥಾನ್​​ ನಲ್ಲಿ ನೂರಾರು ಯುವತಿಯರು ಮತ್ತು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಯಾರು ಕೂಡ ಮಾಸ್ಕ್​ ಧರಿಸದೇ, ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು.

  ಮ್ಯಾರಥಾನ್​ ವೇಳೆ ಕಾಲ್ತುಳಿತ 

  ಈ ಮ್ಯಾರಥಾನ್ ನಲ್ಲಿ ಅತಿ ಹೆಚ್ಚಿನ ಸಂಖ್ಯೆ ಜನರು ಭಾಗಿಯಾಗಿದ್ದರು. ಇಡೀ ರಸ್ತೆ ಜನರಿಂದ ಕಿಕ್ಕಿರಿದು ತುಂಬಿತು. ಯಾವುದೇ ಕೋವಿಡ್​ ಆತಂಕವಿಲ್ಲದೇ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮ್ಯಾರಥಾನ್​ ಆರಂಭವಾದಾಗ ಹಿಂದಿನಿಂದ ಜನರು ಓಡಲು ಶುರು ಮಾಡಿದಾಗ ಮುಂಭಾಗದಲ್ಲಿದ್ದ ಕೆಲ ಮಹಿಳೆಯರು ಮುಗ್ಗರಿಸಿ ಬಿದ್ಧರು. ಒಂದು ರೀತಿ ಕಾಲ್ತುಳಿತದ ವಾತವಾರಣ ನಿರ್ಮಾಣವಾಯಿತು. ಅದೃಷ್ಟವಶಾತ್​ ಘಟನೆಯಲ್ಲಿ ಯಾರಿಗೂ ಯಾವುದೇ ಗಂಭೀರ ಗಾಯವಾಗಿಲ್ಲ.  ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕಿ

  ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಕಾಂಗ್ರೆಸ್ ನಾಯಕಿ, ಬರೇಲಿ ಮಾಜಿ ಮೇಯರ್ ಸುಪ್ರಿಯಾ ಅರೋನ್, ಘಟನೆ ಕುರಿತು ಮಾತನಾಡಿದ ಅವರು, ಯಾರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಸಾವಿರಾರು ಜನರು ಸಂದಣಿಯಲ್ಲಿ ವೈಷ್ಣೋದೇವಿಯ ಬಳಿಗೆ ಹೋದರು. ಇವರೆಲ್ಲಾ ಶಾಲಾಮಕ್ಕಳು. ಅವರೆಲ್ಲಾ ಸ್ವಲ್ಪ ಸಮಯದವರೆಗೆ ಹೊರಬರಲು ಬಯಸುತ್ತಾರೆ. ಘಟನೆಯಿಂದ ಯಾರಿಗಾದರೂ ಮನನೊಂದಿದ್ದರೆ, ನಾನು ಕಾಂಗ್ರೆಸ್​ ಪರವಾಗಿ ಕ್ಷಮೆಯಾಚಿಸುತ್ತೇನೆ ಎಂದರು.

  ಸೋಂಕಿಗೆ ಆಹ್ವಾನ ನೀಡುತ್ತಿರುವ ರಾಜಕೀಯ ಪಕ್ಷಗಳು

  ದೇಶದಲ್ಲಿ ಕೋವಿಡ್ ಏರಿಕೆ ನಡುವೆಯೂ ರಾಜಕೀಯ ಪಕ್ಷಗಳು ಸಮಾವೇಶ, ಮ್ಯಾರಥಾನ್​​ನಂತಹ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಅನೇಕ ಜನ ಸಾಮಾನ್ಯರು ಕಿಡಿಕಾರಿದ್ದಾರೆ. ಚುನಾವಣೆಗಳು ದೇಶದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗಲಿದೆ ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಮಾವೇಶ ನಡೆಸುತ್ತಿದ್ದಾರೆ ಎಂದಿದ್ದಾರೆ.

  ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್​​ನ ರೂಪಾಂತರಿ ಓಮೈಕ್ರಾನ ಭೀತಿ ಈಗಾಗಲೇ ಉತ್ತರ ಪ್ರದೇಶ ಮತ್ತು ಪಂಜಾಬ್​ ಚುನಾವಣೆ ಮೇಲೆ ಉಂಟಾಗಿದೆ. ಇದೇ ಹಿನ್ನಲೆ ರಾಜ್ಯಗಳಲ್ಲಿ ಚುನಾವಣಾ ವಿಚಾರ ಮಂದಗತಿಯಲ್ಲಿ ಸಾಗಿದೆ. ಕಟ್ಟುನಿಟ್ಟಾದ COVID-19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಚುನಾವಣೆಗಳನ್ನು ನಡೆಸಬೇಕೆಂದು ರಾಜಕೀಯ ಪಕ್ಷಗಳು ಬಯಸುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ.

  ಮಹಿಳೆಯರ ಓಲೈಕೆಗೆ ಮುಂದಾದ ರಾಜಕೀಯ ಪಕ್ಷಗಳು

  ಉತ್ತರಪ್ರದೇಶದಲ್ಲಿ ಜನಪ್ರಿಯತೆ ಕುಸಿದಿರುವ ಕಾಂಗ್ರೆಸ್ ಜನರ ಸೆಳೆಯಲು ಮುಂದಾಗಿದೆ, ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ದೃಷ್ಟಿಯಿಂದ ಲಿಂಗ ಸಮಾನತೆಯತ್ತ ಗಮನ ಹರಿಸುತ್ತಿದೆ. ಹತ್ರಾಸ್‌ನಲ್ಲಿ ದಲಿತ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಮತ್ತು ಉನ್ನಾವ್‌ನಲ್ಲಿನ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳನ್ನು ಚುನಾವಣಾ ಅಸ್ತ್ರವಾಗಿಸಿಕೊಂಡಿವೆ

  ಇದನ್ನು ಓದಿ: ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ; ಮುಂಬೈನಲ್ಲಿ ಪ್ರಕರಣ ಹೆಚ್ಚಾದ್ರೆ ಲಾಕ್​ಡೌನ್​​ ಸಾಧ್ಯತೆ

  ಇನ್ನು ಮ್ಯಾರಥಾನ್ ಧ್ಯೇಯವಾಗಿರುವ ಲಡ್ಕಿ ಹನ್, ಲಾಡ್ ಶಕ್ತಿ ಹುನ್ ಸ್ಲೋಗನ್ ಅನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಚುನಾವಣಾ ಸ್ಲೋಗನ್​ ಆಗಿ ಬಳಕೆ ಮಾಡಿದರು.

  ಇನ್ನು ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕೂಡ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 16 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 1,000 ಕೋಟಿ ರೂಗೂ ಹೆಚ್ಚು ಹಣವನ್ನು ವರ್ಗಾಯಿಸುವ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ್ದಾರೆ.

  ಈ ನಡುವೆ ಮಹಿಳೆಯರ ಓಲೈಕೆಯಲ್ಲಿ ಹಿಂದೆ ಬೀಳದ ಸಮಾಜವಾದಿ ಪಕ್ಷವು ಅಖಿಲೇಶ್ ಯಾದವ್ ಮತ್ತು ಅವರ ತಂದೆ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಪಕ್ಷದ ಸರ್ಕಾರಗಳ ಅವಧಿಯಲ್ಲಿ ಮಹಿಳೆಯರಿಗಾಗಿ ಕೈಗೊಂಡ ಕ್ರಮಗಳನ್ನು ಜನರ ಮುಂದೆ ಪ್ರಸ್ತುತ ಪಡಿಸಲು ಮುಂದಾಗಿದೆ.
  Published by:Seema R
  First published: