17 ಮಂದಿ ಬಲಿಯಾಗಿದ್ದ ಬೀಜಾಪುರ್ ನಕ್ಸಲ್ ಎನ್​ಕೌಂಟರ್ ನಕಲಿ: ನ್ಯಾಯಾಂಗ ಸಮಿತಿ ವರದಿ

ಅಗರ್ವಾಲ್ ಸಮಿತಿಯ ವರದಿ ಪ್ರಕಾರ, 2012ರಲ್ಲಿ ಸರಕೆಗುಡ ಗ್ರಾಮದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪೊಲೀಸರು ತಿಳಿಸಿದ ಅಂಶಗಳು ಸುಳ್ಳು. ಆ ದಿನ ಊರಿನ ಗ್ರಾಮಸ್ಥರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರಲಿಲ್ಲ. ಅಥವಾ ಪೊಲೀಸರು ಮಾವೋವಾದಿ ನಿಗ್ರಹ ಕಾರ್ಯಾಚರಣೆಗೆ ಇಳಿದಿದ್ದಕ್ಕೆ ಯಾವುದೇ ಪುರಾವೆಗಳು ಇಲ್ಲ.

Vijayasarthy SN | news18
Updated:December 3, 2019, 11:43 AM IST
17 ಮಂದಿ ಬಲಿಯಾಗಿದ್ದ ಬೀಜಾಪುರ್ ನಕ್ಸಲ್ ಎನ್​ಕೌಂಟರ್ ನಕಲಿ: ನ್ಯಾಯಾಂಗ ಸಮಿತಿ ವರದಿ
ಪ್ರಾತಿನಿಧಿಕ ಚಿತ್ರ
  • News18
  • Last Updated: December 3, 2019, 11:43 AM IST
  • Share this:
ಛತ್ತೀಸ್​​ಗಡ(ಡಿ. 03): ಬಿಜೆಪಿ ಸರ್ಕಾರದ ಅಡಳಿತವಿದ್ದ 2012ರಲ್ಲಿ ಬೀಜಾಪುರ ಜಿಲ್ಲೆಯ ಸರಕೆಗುಡದಲ್ಲಿ 17 ಮಂದಿಯನ್ನು ಪೊಲೀಸರು ಹತ್ಯೆಗೈದಿದ್ದರು. ಎನ್​ಕೌಂಟರ್​ನಲ್ಲಿ ಮಾವೋವಾದಿಗಳನ್ನು ಸಂಹರಿಸಿದ್ಧಾಗಿ ಛತ್ತೀಸ್​ಗಡ ಪೊಲೀಸರು ಹೇಳಿಕೊಂಡಿದ್ದರು. ಆದರೆ, ನ್ಯಾಯಾಂಗ ತನಿಖೆಯಲ್ಲಿ ಬಂದ ವರದಿಯು ಬೇರೆಯೇ ಹೇಳುತ್ತಿದೆ. ಆ ವರ್ಷದ ಜೂನ್ 28ರಂದು ನಡೆದ ಎನ್​ಕೌಂಟರ್​ನಲ್ಲಿ 17 ಅಮಾಯಕ ಗ್ರಾಮಸ್ಥರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದರು. ಮಾವೋವಾದಿಗಳ ಮೇಲೆ ಎನ್​ಕೌಂಟರ್ ನಡೆಸಲಾಯಿತು ಎಂದು ಪೊಲೀಸರು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ನ್ಯಾ| ವಿಜಯ್ ಕುಮಾರ್ ಅಗರ್ವಾಲ್ ಅವರು ಸಲ್ಲಿಸಿರುವ ತನಿಖಾ ವರದಿಯಲ್ಲಿ ಬಯಲಾಗಿದೆ.

2012ರಲ್ಲಿ ನಡೆದ ಈ ಎನ್​ಕೌಂಟರ್ ಬಗ್ಗೆ ಆಗಿನ ವಿಪಕ್ಷ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿತ್ತು. ಸರಕೆಗುಡ ಗ್ರಾಮಸ್ಥರು ಮೊದಲಾದವರಿಂದ ಪ್ರತಿಭಟನೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ, ಅಂದಿನ ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ರಚಿಸಿದ ನ್ಯಾ| ವಿಜಯ್ ಕುಮಾರ್ ಅಗರ್ವಾಲ್ ಅವರ ಏಕಸದಸ್ಯ ತನಿಖಾ ಸಮಿತಿಯು ಏಳು ವರ್ಷ ಕಾಲ ನಿರಂತರವಾಗಿ ತನಿಖೆ ಮತ್ತು ವಿಚಾರಣೆ ನಡೆಸಿ ಕಳೆದ ತಿಂಗಳು, ಅಕ್ಟೋಬರ್ 17ರಂದೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಕಳೆದ ಶನಿವಾರವಷ್ಟೇ ಈ ವರದಿಯನ್ನು ನಿನ್ನೆಯಷ್ಟೇ ವಿಧಾನಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ.

ಇದನ್ನೂ ಓದಿ: ಬೈಬಲ್ ಅಥವಾ ರಾಮಾಯಣದಲ್ಲಿ ಜಿಡಿಪಿ ಇಲ್ಲ, ಭವಿಷ್ಯದಲ್ಲಿ ಅದು ಮುಖ್ಯವೂ ಆಗುವುದಿಲ್ಲ; ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಅಗರ್ವಾಲ್ ಸಮಿತಿಯ ವರದಿ ಪ್ರಕಾರ, 2012ರಲ್ಲಿ ಸರಕೆಗುಡ ಗ್ರಾಮದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಪೊಲೀಸರು ತಿಳಿಸಿದ ಅಂಶಗಳು ಸುಳ್ಳು. ಆ ದಿನ ಊರಿನ ಗ್ರಾಮಸ್ಥರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರಲಿಲ್ಲ. ಅಥವಾ ಪೊಲೀಸರು ಮಾವೋವಾದಿ ನಿಗ್ರಹ ಕಾರ್ಯಾಚರಣೆಗೆ ಇಳಿದಿದ್ದಕ್ಕೆ ಯಾವುದೇ ಪುರಾವೆಗಳು ಇಲ್ಲ. ಹಾಗೆಯೇ, ಎನ್​ಕೌಂಟರ್ ಸ್ಥಳದಲ್ಲಿ ಗನ್ ಮತ್ತು ಪೆಲೆಟ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿರುವುದರಲ್ಲೂ ಯಾವುದೇ ಸತ್ಯಾಂಶವಿಲ್ಲ ಎನ್ನಲಾಗಿದೆ.

ಬೇರೆ ಎನ್​ಕೌಂಟರ್​ಗಳತ್ತ ಅನುಮಾನದ ಹುತ್ತ:

ಈಗ ಸರಕೆಗುಡ ನಕ್ಸಲ್ ಎನ್​ಕೌಂಟರ್ ಪ್ರಕರಣ ನಕಲಿ ಎಂಬುದು ಗೊತ್ತಾಗುತ್ತಿದ್ದಂತೆಯೇ ರಾಜ್ಯದ ವಿವಿಧೆಡೆ ನಡೆದ ನಕ್ಸಲ್ ಎನ್​ಕೌಂಟರ್​ಗಳ ಬಗ್ಗೆ ಅನುಮಾನಗಳು ದಟ್ಟಗೊಳ್ಳತೊಡಗಿವೆ. ಛತ್ತೀಸ್​ಗಡ ರಾಜ್ಯದಲ್ಲಿ ಅತೀ ಹೆಚ್ಚು ನಕ್ಸಲ್ ಉಪಸ್ಥಿತಿ ಇರುವ ಬಸ್ತರ್, ದಂತೇವಾಡ ಜಿಲ್ಲೆಗಳಲ್ಲಿ ಹಲವು ನಕ್ಸಲ್ ಎನ್​ಕೌಂಟರ್ ನಡೆದಿವೆ. ಸೆ. 23ರಂದು ದಂತೇವಾಡದ ಕುತ್ರೆಮ್​ನಲ್ಲಿ ಮಾವೋವಾದಿಗಳ ವಿರುದ್ಧ ಪೊಲೀಸರು ನಡೆಸಿದ ಎನ್​ಕೌಂಟರ್ ನಕಲಿ ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಅವರೆಲ್ಲಾ ನಿಮ್ಮ ಸೋದರ ಸಂಬಂಧಿಗಳೇ?; ಅಕ್ರಮ ವಲಸಿಗರ ವಿಚಾರವಾಗಿ ರಾಹುಲ್ ಗಾಂಧಿ ಟೀಕಿಸಿದ ಅಮಿತ್ ಶಾವಕೀಲರು, ಸಾಮಾಜಿಕ ಕಾರ್ಯಕರ್ತರು ದಂತೇವಾಡದ ಕುತ್ರೆಮ್​ನಲ್ಲಿ ಎನ್​ಕೌಂಟರ್ ನಡೆದ ಸ್ಥಳದ ಗ್ರಾಮಸ್ಥರನ್ನು ವಿಚಾರಿಸಿದಾಗ ಅಲ್ಲಿ ಯಾವುದೇ ಗುಂಡಿನ ಚಕಮಕಿ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ ಎಂದು ವಕೀಲರು ಮತ್ತು ನ್ಯಾಯವಾದಿಗಳಾದ ಸೋನಿ ಸೂರಿ  ಮತ್ತು ಬೇಲಾ ಭಾಟಿಯಾ ಹೇಳಿದ್ಧಾರೆ.

ಅಂದು ಪೋದಿಯಾ ಉಯ್ಕಾ, ಲಚ್ಚು ಮಿದಾಮಿ, ಅಜಯ್ ಸೇರಿದಂತೆ ಐವರು ಗ್ರಾಮಸ್ಥರು ಸಾರಾಯಿ ಕುಡಿಯಲು ಗುಮಿಯಪಾಲ್​ನ ನಂದೀಪುರಕ್ಕೆ ಹೋಗಿರುತ್ತಾರೆ. ಅವರಲ್ಲಿ ಪೋದಿಯಾ ಉಯ್ಕಾ ಎಂಬಾತ ಸಮೀಪದ ಮನೆಯೊಂದರಲ್ಲಿ ಮಲಗಿರುತ್ತಾನೆ. ಆಗ ಅಲ್ಲಿಗೆ ಬಂದ ಪೊಲೀಸರು ಈ ಐವರು ಜನರನ್ನು ಕರೆದೊಯ್ಯುತ್ತಾರೆ. ಅವರಲ್ಲಿ ಮೂವರನ್ನು ಪೊಲೀಸರು ಗುಂಡಿಟ್ಟು ಹತ್ಯೆಗೈಯುತ್ತಾರೆ. ಈ ಘಟನೆಯಲ್ಲಿ ಬದುಕುಳಿದ ಇತರ ಇಬ್ಬರು ಗ್ರಾಮಸ್ಥರು ಸತ್ಯ ಹೇಳಲು ಸಿದ್ಧರಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರು ತಿಳಿಸಿದ್ಧಾರೆ.

ಛತ್ತೀಸ್​ಗಡದಲ್ಲಿ ಪೊಲೀಸರ ಮೇಲೆ ನಕ್ಸಲರು ದಾಳಿ ನಡೆಸುವ ಘಟನೆ ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ನಕ್ಸಲರನ್ನು ಹಿಡಿಯಲು ಸಾಧ್ಯವಾಗದೇ ಪೊಲೀಸರ ಮೂಲಕ ಈ ರೀತಿಯ ಫೇಕ್ ಎನ್​ಕೌಂಟರ್​ಗಳನ್ನು ಮಾಡಿಸಿ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸುತ್ತಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 3, 2019, 11:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading