SSC Scam: ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ!

ಯಾಕೆ ಚಪ್ಪಲಿ ಎಸೆದಿದ್ದೀರಿ ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಮಹಿಳೆ ಆಕ್ರೋಶದಿಂದಲೇ ಉತ್ತರಿಸಿದ್ದಾಳೆ. ನಿಮಗೆ ಗೊತ್ತಿಲ್ಲವೇ?, ಅವನು ಎಷ್ಟೋ ಬಡವರ ಹಣವನ್ನು ಲಪಟಾಯಿಸಿದ್ದಾನೆ. ಫ್ಲಾಟ್‌ಗಳನ್ನು ಖರೀದಿಸಿದ್ದಾನೆ.

ಪಾರ್ಥ ಚಟರ್ಜಿ

ಪಾರ್ಥ ಚಟರ್ಜಿ

  • Share this:
ಕೊಲ್ಕತ್ತಾ: ಎಸ್​ಎಸ್​ಸಿ ಹಗರಣ (SSC Scam) ಪಶ್ಚಿಮ ಬಂಗಾಳದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಆಡಳಿತಾರೂಢ ಟಿಎಂಸಿ ಸರ್ಕಾರಕ್ಕೆ (TMC Govt) ತೀವ್ರ ಮುಖಭಂಗವಾಗಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಪಾರ್ಥ ಚಟರ್ಜಿ (Partha Chatterjee) ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ಸಿಎಂ ಮಮತಾ ಬ್ಯಾನರ್ಜಿ ಡ್ಯಾಮೇಜ್​ ಕಂಟ್ರೋಲ್​​ ಮಾಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಬಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಪ್ಪಲಿ ಎಸೆದ ಮಹಿಳೆಯ ಹೆಸರು ಸುಭ್ರಾ ಘಡುಯಿ ಹಾಗೂ ಆಕೆ ದಕ್ಷಿಣ 24 ಪರಗಣ ಜಿಲ್ಲೆಯ ಅಮತಾಲಾ ನಿವಾಸಿ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಯಾಕೆ ಚಪ್ಪಲಿ ಎಸೆದಿದ್ದೀರಿ?            

ಯಾಕೆ ಚಪ್ಪಲಿ ಎಸೆದಿದ್ದೀರಿ ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಮಹಿಳೆ ಆಕ್ರೋಶದಿಂದಲೇ ಉತ್ತರಿಸಿದ್ದಾಳೆ. ನಿಮಗೆ ಗೊತ್ತಿಲ್ಲವೇ?, ಅವನು ಎಷ್ಟೋ ಬಡವರ ಹಣವನ್ನು ಲಪಟಾಯಿಸಿದ್ದಾನೆ. ಫ್ಲಾಟ್‌ಗಳನ್ನು ಖರೀದಿಸಿದ್ದಾನೆ. ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ, ಅವನನ್ನು ಹವಾನಿಯಂತ್ರಿತದಲ್ಲಿ ಸಾಗಿಸಲಾಗುತ್ತಿದೆ. ಅವನ ಕುತ್ತಿಗೆಗೆ ಹಗ್ಗದಿಂದ ಎಳೆಯಬೇಕು, ಅವನ ತಲೆಗೆ ಚಪ್ಪಲಿ ಹೊಡಿದರಷ್ಟೇ ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಆಕ್ರೋಶ ಭರಿತವಾಗಿ ಮಹಿಳೆ ಪ್ರತಿಕ್ರಿಯಿಸಿದ್ದಾಳೆ.

ಎಷ್ಟೋ ಜನರ ತಟ್ಟೆಯಲ್ಲಿ ಆಹಾರವಿಲ್ಲ, ಅವರು ಉದ್ಯೋಗದ ಭರವಸೆ ನೀಡಿ ಹಣವನ್ನು ತೆಗೆದುಕೊಂಡರು. ಆ ಹಣವನ್ನು ಪೇರಿಸಲು ಫ್ಲಾಟ್‌ಗಳನ್ನು ಖರೀದಿಸಿದರು ಎಂದು ಮಹಿಳೆ ಸ್ಥಳದಲ್ಲಿ ಕೂಗಾಡಿ ಅಳಲನ್ನು ತೋಡಿಕೊಂಡರು.

ಇದನ್ನೂ ಓದಿ: SSC Scam: ಡ್ಯಾಮೇಜ್ ಕಂಟ್ರೋಲ್​​ಗೆ ಇಳಿದ ದೀದಿ; ಸಂಪುಟಕ್ಕೆ ಸರ್ಜರಿ, ಹೊಸ ಮುಖಗಳಿಗೆ ಮಣೆ

ಕೂಡಲೇ ಚಟರ್ಜಿ ಸ್ಥಳಾಂತರ

ಚಪ್ಪಲಿ ಎಸೆದ ನಂತರ, ತೃಣಮೂಲ ಕಾಂಗ್ರೆಸ್ ನಾಯಕನನ್ನು ತರಾತುರಿಯಲ್ಲಿ ಸುತ್ತುವರೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಸುತ್ತ ಬಿಗಿ ಭದ್ರತೆಯ ನಡುವೆಯೂ ಈ ಘಟನೆ ನಡೆದಿದೆ. ಆಕೆಗೆ ಸೇರಿದ ಫ್ಲಾಟ್‌ಗಳಿಂದ ಅಪಾರ ಪ್ರಮಾಣದ ನಗದು ಮತ್ತು ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ

ತೃಣಮೂಲದ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಹಾಯಕರಲ್ಲಿ ಒಬ್ಬರಾದ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಜುಲೈ 23 ರಂದು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಫ್ಲಾಟ್‌ಗಳಿಂದ ಸುಮಾರು 50 ಕೋಟಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ. ಮಾಜಿ ಸಚಿವರು ನನ್ನ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: SSC Scam: ನಂದಲ್ಲ, ನಂದಲ್ಲ, ನಂದಲ್ಲ! ಇಡಿ ಆರೋಪ ನಿರಾಕರಿಸಿದ ಸಚಿವ ಪಾರ್ಥ ಚಟರ್ಜಿ

ಈ ಪ್ರಕರಣದಲ್ಲಿ ಬಂಗಾಳದ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಚಟರ್ಜಿ ಅಧಿಕಾರಿಗಳ ವಶಪಡಿಸಿಕೊಂಡಿರುವ ಹಣ ನನ್ನದಲ್ಲ, ಸರಿಯಾದ ಸಮಯದಲ್ಲಿ ಸತ್ಯ ಹೊರಬರಲಿದೆ ಎಂದು ಹೇಳಿದ್ದರು. ಕೊಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐ, ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ಪರಿಶೀಲಿಸುತ್ತಿದೆ. ಜಾರಿ ನಿರ್ದೇಶನಾಲಯ ಹಗರಣದ ಹಣದ ಜಾಡು ಹಿಡಿಯುತ್ತಿದೆ.

ಸಂಪುಟಕ್ಕೆ ಸರ್ಜರಿ

ಪಾರ್ಥ ಚಟರ್ಜಿಯಿಂದ ತೆರವಾಗಿರುವ ಸಚಿವ ಸ್ಥಾನ ತುಂಬವ ಜೊತೆಗೆ, ಸಂಪುಟ ಪುನಾರಚನೆಗೂ ಬಂಗಾಳ ಸಿಎಂ ಮುಂದಾಗಿದ್ದಾರೆ.  ಆಗಸ್ಟ್​​ 3ರಂದು ರಾಜ್ಯ ಸಚಿವ ಸಂಪುಟ ಪುನಾರಚನೆ ನಡೆಯಲಿದ್ದು, ಸುಮಾರು 4 ರಿಂದ 5 ಹೊಸ ಮುಖಗಳನ್ನು ಪರಿಚಯಿಸಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
Published by:Kavya V
First published: