• Home
 • »
 • News
 • »
 • national-international
 • »
 • Pathaan: ಶಾರುಖ್ ಖಾನ್ ಯಾರು ಎಂದಿದ್ದ ಅಸ್ಸಾಂ ಸಿಎಂಗೆ ಫೋನ್ ಕಾಲ್! ತಡರಾತ್ರಿ 2 ಗಂಟೆಗೆ ಮಾತಾಡಿದ್ರಂತೆ 'ಪಠಾಣ್'!

Pathaan: ಶಾರುಖ್ ಖಾನ್ ಯಾರು ಎಂದಿದ್ದ ಅಸ್ಸಾಂ ಸಿಎಂಗೆ ಫೋನ್ ಕಾಲ್! ತಡರಾತ್ರಿ 2 ಗಂಟೆಗೆ ಮಾತಾಡಿದ್ರಂತೆ 'ಪಠಾಣ್'!

ಶಾರುಖ್ ಖಾನ್, ಸಿಎಂ ಹಿಮಂತ ಬಿಸ್ವಾ

ಶಾರುಖ್ ಖಾನ್, ಸಿಎಂ ಹಿಮಂತ ಬಿಸ್ವಾ

ಬಾಲಿವುಡ್ ನಟ ಶಾರೂಖ್ ಖಾನ್​ ನನಗೆ ಕರೆ ಮಾಡಿದ್ದರು. ನಾವಿಬ್ಬರು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ಅವರು ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಈ ಬಗ್ಗೆ ನಾವು ವಿಚಾರಿಸುತ್ತೇವೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿರುವುದಾಗಿ ಹಿಮಂತ ಬಿಸ್ವಾ ಅವರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • New Delhi, India
 • Share this:

ಅಸ್ಸಾಂ: ಪಠಾಣ್ ಚಿತ್ರ (Pathaan Movie) ಬಿಡುಗಡೆಯಾಗುವ ಥಿಯೇಟರ್​ನಲ್ಲಿ ನಡೆದ ಹಿಂಸಾಚಾರ ಕುರಿತಂತೆ ಪ್ರತಿಕ್ರಿಯಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ  (Chief Minister Himanta Biswa Sarma)  ಅವರು ಶಾರೂಖ್​ ಖಾನ್ ಯಾರು ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಮುಖ್ಯಮಂತ್ರಿ ಅವರ ಈ ಹೇಳಿಕೆ ದೇಶಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಶಾರೂಖ್​ ಖಾನ್ (Shah Rukh Khan) ಅವರು ಕರೆ ಮಾಡಿದ್ದರು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಲ್ಲದೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಹಾಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದಾಗಿ ಎಸ್​​ಆರ್​ಕೆಗೆ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.


ಶಾರೂಖ್​ ಖಾನ್​ ನನಗೆ ಕರೆ ಮಾಡಿದ್ರು


ಈ ಕುರಿತಂತೆ ಟ್ವೀಟ್ ಮಾಡಿರುವ ಹಿಮಂತ ಬಿಸ್ವಾ ಶರ್ಮಾ ಅವರು, ಬಾಲಿವುಡ್ ನಟ ಶಾರೂಖ್ ಖಾನ್​ ನನಗೆ ಕರೆ ಮಾಡಿದ್ದರು. ನಾವಿಬ್ಬರು ಇಂದು ಬೆಳಗಿನ ಜಾವ 2 ಗಂಟೆಗೆ ಮಾತನಾಡಿದ್ದೇವೆ. ಅವರು ತಮ್ಮ ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ಗುವಾಹಟಿಯಲ್ಲಿ ನಡೆದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ. ಈ ಬಗ್ಗೆ ನಾವು ವಿಚಾರಿಸುತ್ತೇವೆ ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿರುವುದಾಗಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.


ಪಠಾಣ್ ಚಿತ್ರದ ಪೋಸ್ಟರ್​ ಹರಿದು ಹಾಕಿದ್ದ ಭಜರಂಗದಳ ಕಾರ್ಯಕರ್ತರು


ಶುಕ್ರವಾರ ನಗರದ ನರೇಂಗಿಯಲ್ಲಿ ಪಠಾಣ್ ಚಿತ್ರ ಪ್ರದರ್ಶನಗೊಳ್ಳಲಿದ್ದು, ಈ ಹಿನ್ನೆಲೆ ಭಜರಂಗದಳದ ಕಾರ್ಯಕರ್ತರು ಥಿಯೇಟರ್​ಗೆ ನುಗ್ಗಿ ಪೋಸ್ಟರ್​ಗಳನ್ನು ಹರಿದು, ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾಧ್ಯಮದವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ನಿನ್ನೆ ಪ್ರಶ್ನಿಸಿದ್ದರು.
ಶಾರೂಖ್​ ಖಾನ್ ಎಂದಿಗೂ ನನಗೆ ಕರೆ ಮಾಡಿಲ್ಲ ಅಂದಿದ್ದ ಸಿಎಂ


ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಿನಿಮಾ ಕುರಿತಂತೆ ಎಷ್ಟೆಲ್ಲಾ ಸಮಸ್ಯೆಯಾಗುತ್ತಿದ್ದರೂ, ಬಾಲಿವುಡ್​ನ ಅನೇಕ ಮಂದಿ ತಿಳಿಸಿದರೂ, ಶಾರೂಖ್​ ಖಾನ್ ಎಂದಿಗೂ ನನಗೆ ಕರೆ ಮಾಡಿಲ್ಲ. ಅವರು ಕರೆ ಮಾಡಿ ಮಾತನಾಡಿದ್ದರೆ ಈ ವಿಚಾರಿಸಲಬಹುದಿತ್ತು. ಆದರೆ ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದರೆ ಪ್ರಕರಣ ದಾಖಲಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.


ವಿವಾದ ಎಬ್ಬಿಸಿದ್ದ ಬೇಷರಂ ರಂಗ್ ಹಾಡು


ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಚಿತ್ರದ  ‘ಬೇಷರಂ ರಂಗ್’ ಎಂಬ ಹಾಡು ಬಿಡುಗಡೆಯಾಗುತ್ತಿದ್ದಂತೆ ಭಾರೀ ಸದ್ದು ಮಾಡಿತ್ತು. ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಹಾಗೂ ನೃತ್ಯದ ಹಾವ ಭಾವಗಳಿಂದಾಗಿ ದೊಡ್ಡ ಮಟ್ಟದ ಟೀಕೆಗೆ ಒಳಗಾಗಿತ್ತು. ಇನ್ನೂ ಅನೇಕರು ಈ ಹಾಡನ ಬಗ್ಗೆ ಅಶ್ಲೀಲ ಟೀಕೆ ಮಾಡಿದ್ದರು.
ಇದನ್ನೂ ಓದಿ: Pathaan Movie: ಯಾರದು ಶಾರುಖ್ ಖಾನ್, ನಂಗೆ ಅವ್ರ ಬಗ್ಗೆ ಏನೂ ಗೊತ್ತಿಲ್ಲ! ಅಸ್ಸಾಂ ಸಿಎಂ ವ್ಯಂಗ್ಯದ ಮಾತು


ಇದೇ ಶುಕ್ರವಾರ ಪಠಾಣ್ ಚಿತ್ರ ತೆರೆಗೆ


ಐದು ವರ್ಷಗಳ ನಂತರ ನಟ ಶಾರುಖ್‌ ಖಾನ್‌ ಪಠಾಣ್‌ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಜೊತೆಗೆ ನಟ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಇನ್ನೂ ದೃಢಪಡಿಸಿಲ್ಲ. ಈ ಚಿತ್ರವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Published by:Monika N
First published: