ರೈತರ ಆತ್ಮಹತ್ಯೆಗೆ ಪ್ರಚೋದನಾತ್ಮಕ ಹೇಳಿಕೆ ನೀಡುವ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮನೆಯಿಂದಲೇ ಆತ್ಮಹತ್ಯೆ ಆರಂಭಿಸಲಿ; ರಾಮುಲು

ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ಧರಾಮಯ್ಯ ಅವರದು ಮುಗಿದ ಅಧ್ಯಾಯ. ಅವರು ಮೊದಲು‌ ಪ್ರತಿಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.

HR Ramesh | news18-kannada
Updated:August 29, 2019, 8:23 PM IST
ರೈತರ ಆತ್ಮಹತ್ಯೆಗೆ ಪ್ರಚೋದನಾತ್ಮಕ ಹೇಳಿಕೆ ನೀಡುವ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಮನೆಯಿಂದಲೇ ಆತ್ಮಹತ್ಯೆ ಆರಂಭಿಸಲಿ; ರಾಮುಲು
ಆರೋಗ್ಯ ಸಚಿವ ಶ್ರೀರಾಮುಲು
  • Share this:
ವಿಜಯಪುರ: ಯಾವುದೇ ಸ್ಥಾನಮಾನಗಳು ನಮಗೆ ಗೌರವ ತರುವುದಕ್ಕಿಂತ ಹೆಚ್ಚಾಗಿ ನಾವು ಮಾಡುವ ಕೆಲಸಗಳು ನಮ್ಮನ್ನು ಹೆಚ್ಚು ಗುರುತಿಸುವಂತೆ ಮಾಡುತ್ತವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಯಾವುದೇ ಗುರುಗಳು ತಮ್ಮ ಶಿಷ್ಯಂದಿರಿಗೆ ಒಳ್ಳೆಯದಾಗಲು ಬೇಡಿಕೆ ಇಡುವುದು ಸಾಮಾನ್ಯ. ಯಡಿಯೂರಪ್ಪ ನಮ್ಮ ಸಮಾಜಕ್ಕೆ ಒಳ್ಳೆಯದನ್ನು ಮಾಡುತ್ತಾರೆ. ನನಗೆ ಮುಂದೆ ದೊಡ್ಡ ಸ್ಥಾನ ಸಿಗಬಹುದು.  ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯಲ್ಲ ಎಂದರು.

ಬಡವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಒದಗಿಸಲಾಗುವುದು. ಈ ಹಿಂದೆ ನಾನು ಆರೋಗ್ಯ ಸಚಿವನಾಗಿ ಮಾಡಿದ ಕೆಲಸ ನೋಡಿ ಈಗ ಮತ್ತೆ ಅದೇ ಕೆಲಸ ನೀಡಿದ್ದಾರೆ ಎಂದರು. ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ನೀಡಿದ ವಿಚಾರವಾಗಿ ಮಾತನಾಡಿದ ಅವರು,  ಸಂದರ್ಭಕ್ಕನುಗುಣವಾಗಿ ಪಕ್ಷ ನಿರ್ಣಯ ಕೈಗೊಳ್ಳುತ್ತದೆ. ಅದನ್ನು ನಾವು ಯಾರು ಪ್ರಶ್ನಿಸುವಂತಿಲ್ಲ ಎಂದರು.

ಮಧ್ಯಂತರ ಚುನಾವಣೆ ಕುರಿತು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಸಿದ್ಧರಾಮಯ್ಯ ಅವರದು ಮುಗಿದ ಅಧ್ಯಾಯ. ಅವರು ಮೊದಲು‌ ಪ್ರತಿಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಇದನ್ನು ಓದಿ: ನೆರೆ ಸಂತ್ರಸ್ತರಿಗೆ ಭಿಕ್ಷೆ ಬೇಡಿ ಕೇಂದ್ರ ಸರ್ಕಾರದ ಕಣ್ಣು ತೆರೆಸುತ್ತೇನೆ : ಲಕ್ಷ್ಮೀ ಹೆಬ್ಬಾಳ್ಕರ್

ಪರಿಹಾರ ನೀಡದೆ, ಸಾಲ ಕೇಳಿ ಯಾರಾದರೂ ಬೆದರಿಸಿದರೆ ಅವರ ಹೆಸರು ಬರೆದಿಟ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಿ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರವಾಗಿ ಮಾತನಾಡಿದ ರಾಮುಲು, ಹೆಬ್ಬಾಳ್ಕರ್ ಸಂಸ್ಕಾರವಿಲ್ಲದ ರಾಜಕಾರಣಿ. ಪ್ರಚಾರಕ್ಜಾಗಿ ಹೇಳಿಕೆ ನೀಡುತ್ತಿರುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡುವ ಲಕ್ಷ್ಮೀ ಹೆಬ್ಬಾಳ್ಕರ ಅವರ ಮನೆಯಿಂದಲೇ ಮೊದಲು ಆತ್ಮಹತ್ಯೆ ಆರಂಭಿಸಲಿ ಎಂದು ತಿರುಗೇಟು ನೀಡಿದರು.

ಡಿಕೆಶಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ವಿಚಾರವಾಗಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಕಾನೂನು ವಿಚಾರವನ್ಮು ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಕಾನೂನು ತಪ್ಪಿತಸ್ಥರ  ವಿರುದ್ಧ ಕ್ರಮ‌ ಕೈಗೊಳ್ಳುತ್ತದೆ ಎಂದರು.
First published:August 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ