Arrest: ಪ್ರಸಿದ್ಧ ಮಸೀದಿಯಲ್ಲಿ ಕೇಳಿ ಬಂತು ದೇಶದ್ರೋಹಿ ಘೋಷಣೆ! 13 ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಖಾಕಿ

"ಜಾಮಿಯಾ ಮಸೀದಿಯಲ್ಲಿ ದೇಶದ್ರೋಹ ಘೋಷಣೆ ಕೂಗಲಾಗಿದೆ. ಈ ಬಗ್ಗೆ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಸೂಚನೆಗಳು ಬಂದಿತ್ತು ಎನ್ನುವುದು ಗೊತ್ತಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಅರೆಸ್ಟ್ ಆಗಿರುವ 13 ಮಂದಿ

ಅರೆಸ್ಟ್ ಆಗಿರುವ 13 ಮಂದಿ

  • Share this:
ಜಮ್ಮು ಮತ್ತು ಕಾಶ್ಮೀರ: ಶ್ರೀನಗರದ (Srinagar) ಪ್ರಸಿದ್ಧ ಜಾಮಿಯಾ ಮಸೀದಿಯಲ್ಲಿ (Jamia Masjid) ದೇಶದ್ರೋಹಿ ಘೋಷಣೆಗಳು ಕೇಳಿ ಬಂದಿವೆ. ಶುಕ್ರವಾರದ ಪ್ರಾರ್ಥನೆ (Namaaz) ವೇಳೆ ಆಜಾದಿ (Ajaadi) ಪರ ಘೋಷಣೆಗಳು ಕೇಳಿ ಬಂದಿದ್ದವು. ಈ ಕೇಸ್‌ಗೆ (Case) ಸಂಬಂಧಿಸಿದಂತೆ ಇದೀಗ 13 ಜನರನ್ನು ಜಮ್ಮ ಮತ್ತು ಕಾಶ್ಮೀರ (Jammu and Kashmir) ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರ ಪೈಕಿ ದೇಶದ್ರೋಹಿ ಘೋಷಣೆ ಕೂಗಲು ಪ್ರಚೋದಿಸಿದ ಇಬ್ಬರು ಸೇರಿದ್ದಾರೆ ಅಂತ ಪೊಲೀಸ್ ಮೂಲಗಳು ತಿಳಿಸಿವೆ. ಶ್ರೀನಗರದ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾದ ಜಾಮಿಯಾ ಮಸೀದಿಯು ಸುಮಾರು ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿತ್ತು. ಇದೀಗ ಕಳೆದ ಒಂದು ತಿಂಗಳ ಹಿಂದಷ್ಟೇ ಪ್ರಾರ್ಥನೆಗಾಗಿ ತೆರೆಯಲಾಗಿತ್ತು.

ಆರ್ಟಿಕಲ್‌ 370 ರದ್ಧತಿ ಬಳಿಕ ಮಸೀದಿಗೆ ಬಾಗಿಲು

2019 ರ ಆಗಸ್ಟ್‌ನಲ್ಲಿ ಆರ್ಟಿಕಲ್ 370 ರದ್ದತಿಯೊಂದಿಗೆ ಪ್ರಾರಂಭವಾದ ದೀರ್ಘಾವಧಿಯ ಸ್ಥಗಿತದ ನಂತರ ನಡೆದ ಗಲಾಟೆ ವೇಳೆ ಜಾಮಿಯಾ ಮಸೀದಿ ಮುಚ್ಚಲಾಗಿತ್ತು. ಆಗ 4 ತಿಂಗಳು ಮಸೀದಿ ಕ್ಲೋಸ್ ಆಗಿತ್ತು. ಬಳಿಕ ಕೋವಿಡ್‌ ಸೋಂಕಿನ ಭೀತಿಯಿಂದಾಗಿ 2020ರ ಮಾರ್ಚ್‌ನಿಂದ ಮಸೀದಿಯನ್ನು ಮುಚ್ಚಲಾಗಿತ್ತು.

ಇತ್ತೀಚೆಗೆ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಶುಕ್ರವಾರ ಮಸೀದಿಯಲ್ಲಿ ಸುಮಾರು 24,000 ಜನರು ಸೇರಿದ್ದರು ಮತ್ತು ಇದು ಇತ್ತೀಚಿನ ದಿನಗಳಲ್ಲಿ ಅತಿದೊಡ್ಡ ಪ್ರಾರ್ಥನಾ ಸಭೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,.

ದೇಶದ್ರೋಹಿ ಘೋಷಣೆ ಹಿಂದೆ ಪಾಕಿಸ್ತಾನ ಕುಮ್ಮಕ್ಕು?

"ಪ್ರಾಥಮಿಕ ತನಿಖೆಯ ಸಮಯದಲ್ಲಿ, ಶುಕ್ರವಾರದ ಪ್ರಾರ್ಥನೆಯನ್ನು ಅಡ್ಡಿಪಡಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಸೃಷ್ಟಿಸಲು ಪ್ರಯತ್ನ ಮಾಡಲಾಗಿತ್ತು. ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಂದ ಸೂಚನೆಗಳು ಬಂದಿವೆ ಎನ್ನುವುದು ಗೊತ್ತಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧೀಕ್ಷಕ ರಾಕೇಶ್ ಬಲ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ದೇಶದ್ರೋಹಿ ಘೋಷಣೆ ಕೂಗಿದ 13 ಮಂದಿಯನ್ನು ಬಂಧಿಸಿ,  ದೇಶದ್ರೋಹ ಮತ್ತು ಕ್ರಿಮಿನಲ್ ಅತಿಕ್ರಮಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Puttur: ಜಾತ್ರೆಯಲ್ಲೂ ನಿಷೇಧದ ಕೂಗು, ಅನ್ಯಧರ್ಮೀಯ ಆಟೋಗಳಿಗಿಲ್ಲ ಇಲ್ಲಿ ಅವಕಾಶ!

ದೇಶದ್ರೋಹಿ ಘೋಷಣೆ ಕೂಗಿದ 13 ಮಂದಿ ಮೇಲೆ ಕೇಸ್

13 ಯುವಕರ ವಿರುದ್ಧ ಸೆಕ್ಷನ್ 124 ಎ (ದೇಶದ್ರೋಹ), ಮತ್ತು 447 ಮತ್ತು 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಈ ಪ್ರಕರಣದಲ್ಲಿ ಸೆಕ್ಷನ್ 120 ಬಿ ಕೂಡ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದ್ರೋಹದ ಬಗ್ಗೆ ಬಾಯ್ಬಿಟ್ಟ ಆರೋಪಿಗಳು

ದೇಶದ್ರೋಹ ಕೂಗಿದ ಪ್ರಕರಣದಲ್ಲಿ ಕೇವಲ 13 ಮಂದಿ ಅಷ್ಟೇ ಅಲ್ಲ, ಇನ್ನೂ ಬಹುತೇಕ ಮಂದಿ ಇದ್ದಾರೆ ಅಂತ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಮೊದಲು ಘೋಷಣೆಯ ಇಬ್ಬರು ಪ್ರಮುಖ ಪ್ರಚೋದಕರನ್ನು ಬಂಧಿಸಲಾಯಿತು. ಬಶರತ್ ನಬಿ ಭಟ್ ಮತ್ತು ಉಮರ್ ಮಂಜೂರ್ ಶೇಖ್ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಲಾಯಿತು.

ಇದನ್ನೂ ಓದಿ: ಶ್ರೀರಾಮ ಸೇನೆಯಿಂದ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ನಾಶ: ಭಯೋತ್ಪಾದಕರಿಗೂ, ಈ ಕಿರಾತಕರಿಗೆ ವ್ಯತ್ಯಾಸವಿಲ್ಲ ಅಂದ್ರು HDK

 ಇನ್ನಷ್ಟು ದೇಶದ್ರೋಹಿಗಳಿಗಾಗಿ ಹುಡುಕಾಟ

ವಿಚಾರಣೆ ವೇಳೆ ಅವರಿಬ್ಬರು ಜಾಮಿಯಾ ಮಸೀದಿಯ ಒಳಗೆ ಮತ್ತು ಗೇಟ್‌ನಲ್ಲಿ ಘೋಷಣೆ ಮತ್ತು ಗೂಂಡಾಗಿರಿಯಲ್ಲಿ ಭಾಗಿಯಾಗಿದ್ದ ಇನ್ನೂ ಹನ್ನೊಂದು ಆರೋಪಿಗಳ ಹೆಸರನ್ನು ಹೇಳಿದರು. ಬಳಿಕ ಅವರನ್ನೂ ಬಂಧಿಸಲಾಯಿತು. ಈ ಕೇಸ್‌ನಲ್ಲಿ ಹಲವು ಶಂಕಿತ ವ್ಯಕ್ತಿಗಳನ್ನು ಪರೀಕ್ಷಿಸಲಾಗುತ್ತಿದೆ ಮತ್ತು ಈ ಪ್ರಕರಣದಲ್ಲಿ ಅವರ ಪಾತ್ರವು ಸ್ಪಷ್ಟವಾಗಿ ಹೊರಹೊಮ್ಮಿದ ತಕ್ಷಣ ಅವರನ್ನು ಕಡ್ಡಾಯವಾಗಿ ಬಂಧಿಸಲಾಗುವುದು." ಎಂದು ಪೊಲೀಸರು ತಿಳಿಸಿದ್ದಾರೆ.
Published by:Annappa Achari
First published: