ತಿರುಪತಿಗೆ ಆಗಮಿಸಲಿರುವ ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆ; ಬಿಗಿ ಭದ್ರತೆ, ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

ಶ್ರೀಲಂಕಾ ಪ್ರಧಾನಿ ರಾಜಪಕ್ಷೆ ಅವರಿಗೆ ಈವರೆಗೆ ಇಲ್ಲದಂತಹ ಅದ್ಭುತ ಸ್ವಾಗತ ಕೋರಲು ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ಅವರ ಭದ್ರತೆಯನ್ನು ಹೆಚ್ಚಿಸಿದೆ. ಅಲ್ಲದೆ, ರೆಣಿಕುಂಟಾ ವಿಮಾನ ನಿಲ್ದಾಣದಿಂದ ತಿರುಪತಿ ಬೆಟ್ಟದ ತಪ್ಪಲಿನ ವರೆಗೆ ರಾಜಪಕ್ಷೆ ಸಾಗುವ ದಾರಿಯುದ್ದಕ್ಕೂ ಅವರನ್ನು ಸ್ವಾಗತಿಸುವ ಬ್ಯಾನರ್​ ಇಡುವ ಮೂಲಕ ಗಮನ ಸೆಳೆದಿದೆ. 

ಶ್ರೀಲಂಕಾ ಪ್ರಧಾನಿ ಮಹೀಂದ್ರಾ ರಾಜಪಕ್ಷೆ.

ಶ್ರೀಲಂಕಾ ಪ್ರಧಾನಿ ಮಹೀಂದ್ರಾ ರಾಜಪಕ್ಷೆ.

 • Share this:
  ತಿರುಪತಿ (ಫೆಬ್ರವರಿ 10); ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷೆ ಇಂದು ಸಂಜೆ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರನ ದರ್ಶಕ್ಕೆ ಆಗಮಿಸಲಿದ್ದು, ಈವರೆಗೆ ಇಲ್ಲದಷ್ಟು ಬಿಗಿ ಭದ್ರತೆ ಹಾಗೂ ಅದ್ದೂರಿ ಸ್ವಾಗತ ನೀಡಲು ಕೇಂದ್ರ ಸರ್ಕಾರ ಹಾಗೂ ಆಂಧ್ರಪ್ರದೇಶ ರಾಜ್ಯ ಸರ್ಕಾರ ನಿರ್ಧರಿಸಿದೆ.

  ತಿರುಪತಿ ವೆಂಕಟೇಶ್ವರನ ಭಕ್ತರಾಗಿರುವ ಶ್ರೀಲಂಕಾ ಪ್ರಧಾನಿ ರಾಜಪಕ್ಷೆ ಈ ಮುಂಚೆಯೂ ಅನೇಕ ಬಾರಿ ತಿರುಪತಿಗೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಅದರಂತೆ ಪ್ರಸ್ತುತ ಭಾರತದ ಪ್ರವಾಸದಲ್ಲಿರುವ ಮಹೀಂದ್ರ ರಾಜಪಕ್ಷೆ ಇಂದು ಸಂಜೆ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಆದರೆ, ಈ ಹಿಂದೆ ಯಾವಾಗಲೂ ಅವರಿಗೆ ಇಷ್ಟು ಅದ್ದೂರಿ ಸ್ವಾಗತ ಕೋರಿರಲಿಲ್ಲ.

  ರಾಜಪಕ್ಷೆ ಅವರಿಗೆ ಸ್ವಾಗತ ಕೋರಲಾಗಿರುವ ಪೋಸ್ಟರ್​.


  ಆದರೆ, ಈ ಬಾರಿ ತಿರುಪತಿ ದರ್ಶನ ಪಡೆಯಲಿರುವ ರಾಜಪಕ್ಷೆ ನೇರವಾಗಿ ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಾಹನದಲ್ಲಿ ಏಳುಮಲೆ ಬೆಟ್ಟಕ್ಕೆ ತೆರಳಲಿದ್ದಾರೆ. ಅವರ ನಿವಾಸಕ್ಕಾಗಿ ತಿರುಪತಿಯಲ್ಲಿರುವ ಸರ್ಕಾರ ಅತಿಥಿ ಬಂಗಲೆಯನ್ನು ಸಿದ್ದಪಡಿಸಲಾಗಿದೆ.

  ರಾಜಪಕ್ಷೆ ಅವರಿಗೆ ಸ್ವಾಗತ ಕೋರಲಾಗಿರುವ ಪೋಸ್ಟರ್​.


  ಆದರೆ, ಈವರೆಗೆ ಇಲ್ಲದಂತಹ ಅದ್ಭುತ ಸ್ವಾಗತ ಕೋರಲು ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರ ಅವರ ಭದ್ರತೆಯನ್ನು ಹೆಚ್ಚಿಸಿದೆ. ಅಲ್ಲದೆ, ರೆಣಿಕುಂಟಾ ವಿಮಾನ ನಿಲ್ದಾಣದಿಂದ ತಿರುಪತಿ ಬೆಟ್ಟದ ತಪ್ಪಲಿನ ವರೆಗೆ ರಾಜಪಕ್ಷೆ ಸಾಗುವ ದಾರಿಯುದ್ದಕ್ಕೂ ಅವರನ್ನು ಸ್ವಾಗತಿಸುವ ಬ್ಯಾನರ್​ ಇಡುವ ಮೂಲಕ ಗಮನ ಸೆಳೆದಿದೆ.

  ಆಂಧ್ರಪ್ರದೇಶ ಸರ್ಕಾರದ ಈ ನಡೆಗೆ ತಮಿಳುನಾಡಿನ ವಿವಿಧ ರಾಜಕೀಯ ಪಕ್ಷದ ಮುಖಂಡರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

  ಇದನ್ನೂ ಓದಿ : Pulwama Terror Attack: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪುಲ್ವಾಮಾ ದಾಳಿಗೆ ವರ್ಷ ಒಂದು; 50 ಸೈನಿಕರ ಬಲಿಗೆ ಪ್ರತೀಕಾರ ಎಂದು?
  First published: